fbpx
ಸಾಧನೆ

ಒಬ್ಬ ಮಧ್ಯಮ ಕುಟುಂಬದ ಹುಡುಗಿ 500 ಕೋಟಿ ರೂಪಾಯಿ ಬೆಲೆ ಬಾಳೋ ಕಂಪನಿ ಕಟ್ಟಿದ ಕಥೆ ..

ಒಬ್ಬ ಮಧ್ಯಮ ಕುಟುಂಬದ ಹುಡುಗಿ 500 ಕೋಟಿ ರೂಪಾಯಿ ಬೆಲೆ ಬಾಳೋ ಕಂಪನಿ ಕಟ್ಟಿದ ಕಥೆ ..

23 ವರ್ಷ ವಯಸ್ಸಿನಲ್ಲೇ ಜೀವನದಲ್ಲಿ ಮುಂದಿನ ಮೈಲಿಗಲ್ಲಿನ ಬಗ್ಗೆ ಯೋಜನೆಗೆ ತೊಡಗಿದಾಗ ಯಾವುದೇ ದೊಡ್ಡ ಪದವಿ ಇರಲಿಲ್ಲ ಅಥವಾ ಭಾರೀ ಹಣಕಾಸಿನ ಬೆಂಬಲದೊಂದಿಗೆ ಮುಂದೆ ಹೆಜ್ಜೆ ಇಟ್ಟಿಲ್ಲ ಆದರೆ ಈಗ ತನ್ನ ಸಹೋದರನೊಂದಿಗೆ 500 ಕೋಟಿ ರೂಪಾಯಿ ವಹಿವಾಟಿನ ಉದ್ಯಮ ನಿರ್ಮಿಸಿದ್ದಾರೆ.

ಆಕೆಯ ಹೆಸರು ನಿಧಿ ಗುಪ್ತ , ಸೌರಶಕ್ತಿ ಉದ್ಯಮದಲ್ಲಿ ಕೆಲಸ ಮಾಡುತ್ತಾಳೆ ಮತ್ತು ಹೆಚ್ಚಿನ ಹಣ ಕಳೆದುಕೊಂಡು ಹಣದ ಮೌಲ್ಯವನ್ನು ತಿಳಿದುಕೊಂಡ ನಂತರ ತನ್ನ ಸಹೋದರ ಜೊತೆಯಲ್ಲಿ 2011 ರಲ್ಲಿ ರೂ ಪವರ್ ಎಕ್ಸ್ಪರ್ಟ್ ಎಂಬ ಕಂಪನಿಯನ್ನು ರೂ. 1,37,000 ಹೂಡಿ ಪ್ರಾರಂಭಿಸಿದರು.

ಆದಾಯ ತೆರಿಗೆಯನ್ನು ಉಳಿಸಲು ಅಥವಾ ತೆರಿಗೆ ಪ್ರಯೋಜನಗಳನ್ನು ಗಳಿಸುವ ಸಲುವಾಗಿ ಸೌರ ಯೋಜನೆಯಲ್ಲಿ ಬಂಡವಾಳ ಹೂಡಲು ಬಯಸುವ ಗ್ರಾಹಕರು ಸಾಮಾನ್ಯವಾಗಿ ತೆರಿಗೆ ವಿನಾಯಿತಿ ಪಡೆಯುತ್ತಾರಂತೆ ಅಂತಹ ಕೆಲವು ಗ್ರಾಹಕರು ಈ ಪ್ರಾಜೆಕ್ಟ್ ಗೆ ಹೂಡಿಕೆ ಮಾಡಿದ್ದರಂತೆ , ಒಂದು ಯೋಜನೆಯಲ್ಲಿ 10 ಹೂಡಿಕೆದಾರರು ಇರುತ್ತಾರಂತೆ , ಭೂಮಿಯನ್ನು ಖರೀದಿ ಮಾಡಿ ಭೂಮಿಯನ್ನು ಸಮಾನವಾಗಿ ವಿತರಿಸುವ ಕಾರ್ಯ ನಡೆಯುತ್ತದೆಯಂತೆ.
ಗ್ರಾಹಕನು ಯೋಜನೆಯಲ್ಲಿ ಹೂಡಿಕೆ ಮಾಡಿದರೆ 1 ಮೆಗಾವ್ಯಾಟ್ ಗೆ ಆರು ಕೋಟಿ ರೂಪಾಯಿ ವೆಚ್ಚ ತಗುಲುತ್ತದೆಯಂತೆ , ನಾಲ್ಕು ವರ್ಷಗಳಲ್ಲಿ ಹೂಡಿಕೆಯನ್ನು ಹಿಂದೆ ನೀಡುವ ಭರವಸೆ ನೀಡುತ್ತಾರಂತೆ , 25 ವರ್ಷಗಳಲ್ಲಿ ವಿದ್ಯುತ್ ಉತ್ಪಾದನೆಯಿಂದ ಆಗುವ ಲಾಭಗಳ ಸಂಪೂರ್ಣ ಲಾಭಗಳ ಮತ್ತು ಅದು ತೆರೆಗೆ ರಹಿತ ಹಣವನ್ನು ಹಿಂದೆ ನೀಡುವ ಬಗ್ಗೆ ಗ್ರಾಹಕರಲ್ಲಿ ಮನವೊಲಿಕೆ ಮಾಡಿಕೊಡಲಾಗುತ್ತದೆ ಯಂತೆ ಇದೆ ಇವರ ವ್ಯವಹಾರದ ಮೂಲ ಮಂತ್ರವಂತೆ .

ಅವರ ಪೋಷಕರು ಸಾಮಾನ್ಯ ಮಧ್ಯಮ ವರ್ಗದ ಜನರಾಗಿದ್ದರು, ತಾಯಿ ಒಬ್ಬ ಗೃಹಿಣಿ ಮತ್ತು ತಂದೆ ಸರ್ಕಾರಿ ಉದ್ಯೋಗಿ.ಮಕ್ಕಳ ಬಗ್ಗೆ ಅವರ ಆಲೋಚನೆಗಳು ಯಾವಾಗಲೂ ಆಧುನಿಕವಾಗಿತ್ತು. ತಮ್ಮ ಮಕ್ಕಳು ತಮ್ಮ ಕನಸುಗಳನ್ನು ಮುಂದುವರಿಸಲು ಯಾವಾಗಲೂ ಪ್ರೇರೇಪಿಸಿ ಪ್ರೋತ್ಸಾಹಿಸಿದರು.
ಹೆಚ್ಚಿನ ಉದ್ಯಮಿಗಳು ತಮ್ಮ ತಂದೆಯ ಅಥವಾ ಗಂಡನ ವ್ಯವಹಾರದಲ್ಲಿ ಕೆಲಸ ಮಾಡುತ್ತಿದ್ದಾರೆ. ಸಿದ್ಧಪಡಿಸಿದ ಎಲ್ಲವನ್ನೂ ಅವರಿಗೆ ನೀಡಲಾಗುತ್ತದೆ ಆದರೆ ನಿಧಿಯ ಬದುಕು ಹಾಗಿರಲಿಲ್ಲ .

2011-12ನೇ ಸಾಲಿನಲ್ಲಿ ಕಂಪನಿಯ ವಹಿವಾಟು 2 ಕೋಟಿ ರೂ.ಗಳಾಗಿದ್ದು, 2013 ರಲ್ಲಿ ಅದು 70 ಕೋಟಿ ರೂ.ಗೆ ಏರಿತ್ತು .ಆನಂತ್ರದ ವರ್ಷ ವಹಿವಾಟು 500 ಕೋಟಿ ರೂ ದಾಟಿತ್ತು . ಮುಂದಿನ ಆರ್ಥಿಕ ವರ್ಷದ ವೇಳೆಗೆ 1,000 ಕೋಟಿ ರೂ.ಗಳಿಸುವ ಗುರಿ ಕಂಪನಿ ಹೊಂದಿದೆ .
ಸಕಾರಾತ್ಮಕತೆ ಮತ್ತು ಕಠಿಣ ಶ್ರಮ ಜೀವನವನ್ನೇ ಬದಲಿಸುತ್ತದೆ ಎಂಬುದಕ್ಕೆ ಇದು ಒಂದು ಉದಾಹರಣೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top