fbpx
ದೇವರು

ರಾಮನಿಗಿಂತ ಮುಂಚೆ ರಾವಣನನ್ನ ಒಬ್ಬ ವೀರ ಸೋಲಿಸಿದ್ದ ಅವನ ಬಗ್ಗೆ ಗೊತ್ತಾ ನಿಮಗೆ ?

ರಾವಣ ಮತ್ತು ವಾಲಿಯ ನಡುವೆ ಯುದ್ದ.

ರಾವಣನ ಅಹಂಕಾರವು  ಕರ್ತಾವೀರ್ಯನಿಂದ ಅವಮಾನವನ್ನು ಹೊಂದಿದಾಗಲೂ ಕಡಿಮೆ ಆಗಲಿಲ್ಲ.ಅವನು ಕಿಷ್ಕಿಂದೆಯ ಅಧಿಪತಿಯಾದ ವಾಲಿಯೊಡನೆ ಯುದ್ದವನ್ನು ಬಯಸಿದನು.ಸೈನ್ಯವನ್ನೆಲ್ಲ ಬಿಟ್ಟು ವಾಲಿಯೊಂದಿಗೆ ದ್ವಂದ್ವ ಯುದ್ದವನ್ನು ಮಾತ್ರ ಬಯಸಿ ಸೂರ್ಯೋದಯಕ್ಕೂ ಮೊದಲೇ ಕಿಷ್ಕಿಂದೆಯನ್ನು ಸೇರಿದನು. ಲಂಕೇಶ್ವರನು ವಾಲಿಯ ಮಂತ್ರಿ ಕಾರನನ್ನು ನಿಮ್ಮೊಡೆಯ ಎಲ್ಲಿದ್ದಾನೆಂದು ಕೇಳಿದನು.

ಅವನು ನೀನು ಯಾರೆಂದು ವಿಚಾರಿಸಿದಾಗ ನಾನು ಮೂರು ಲೋಕದಲ್ಲಿಯೇ ಜಯ ಸಂಪಾದಿಸಿದ ರಾವಣನು ನಾನು.ನಿಮ್ಮ ಒಡೆಯನೊಡನೆ ದ್ವಂದ್ವ ಯುದ್ದವನ್ನು ಬಯಸಿ ಬಂದ್ದಿದ್ದೇನೆ ಎಂದು ತಿಳಿಸಿದನು.ಮಂತ್ರಿಯು ಈ ಸಮಯದಲ್ಲಿ ವಾಲಿಯು ಸಮುದ್ರ ಸ್ನಾನ ಮಾಡಿ ಸಮುದ್ರ ತೀರದಲ್ಲಿ ಧ್ಯಾನದಲ್ಲಿದ್ದಾನೆ. ಈ ರೀತಿಯಲ್ಲಿ ರಾವಣನು ವಾಲಿಯು ಇರುವ ಸ್ಥಳವನ್ನು ತಿಳಿದು ಸಮೀಪಕ್ಕೆ ಬಂದನು.

ಹಿಂದಿನಿಂದ ಬಂದು ಧ್ಯಾನದಲ್ಲಿರುವ ವಾಲಿಯನ್ನು ಇಪ್ಪತ್ತು ತೋಳುಗಳಿಂದ ಬಿಗಿದು ಹಿಡಿದನು.ತನಗೆ ಜಯವು ನಿಶ್ಚಯವಾಗಿದೆಯೆಂದು ತಿಳಿದಿದ್ದನು. ಆದರೆ ವಾಲಿಯು ರಾವಣನ ತೋಳುಗಳನ್ನು ತನ್ನ ಕಂಕುಳದಲ್ಲಿಯೇ ಬಿಗಿಯಾಗಿ ಹಿಡಿದು ತನ್ನ ಬಾಲದಿಂದ ರಾವಣನನ್ನು ಬಿಗಿದು ಕಟ್ಟಿದನು.ಗರುಡನು ಹಾವನ್ನು ಜಿಗಿದು ಹಿಡಿಯುವಂತೆಯೇ ಸಮುದ್ರಕ್ಕೆ ಜಿಗಿದನು.ರಾವಣನನ್ನು ಸಮುದ್ರದಲ್ಲಿ ಅದ್ದಿದನು.

ಅನಂತರ ಉದ್ಯಾನವನದ ಒಂದು ಮೂಲೆಗೆ ಜಿಗಿದನು.ನಡುಗುತ್ತಿರುವ ರಾವಣನನ್ನು ವಾಲಿಯು ಕೆಳಗೆ ಬಿಟ್ಟು ತಾನು ನಿಶ್ಚಿಂತೆಯಿಂದ ಅಂತಃಪುರಕ್ಕೆ ಹೋಗಿ ಭೋಜನ ಮಾಡಿ ಬಂದನು.

ತನ್ನೆಲ್ಲ ಪರಿವಾರದವರೊಡನೆ ರಾವಣನು ಬಿದ್ದಿರುವ ಸ್ಥಳಕ್ಕೆ ಬಂದು ಆಕಾಶದಿಂದ ಬಿದ್ದ ಕಾರಣ ಮೂರ್ಛೆ ಹೊಂದಿದ ರಾವಣನನ್ನು ತೋರಿಸಿದನು.ರಾಕ್ಷಸರ ಒಡೆಯ ಲಂಕೇಶ್ವರನೇ, ಇದೇನು ನಿನ್ನ ಸ್ಥಿತಿ.ಮೂರು ಲೋಕದಲ್ಲಿಯೇ ಹೆಸರು ಪಡೆದ ಅನೇಕರನ್ನು ಜಯಿಸಿದ ನೀನು ಈಗ ಏಕೆ ಬಳಲಿರುವೆ ? ನೀನು ಮೊದಲು ನನಗೆ ತಿಳಿಸಿದ್ದರೆ  ನಿನಗೆ ಅನೇಕ ಬಾರಿ ಸಹಾಯ ಮಾಡುತ್ತಿದ್ದೆನು. ಎಂದು ಮೂದಲಿಸಿದಾಗ ಅವನ ಅಪಹಾಸ್ಯದಿಂದ ಅವಮಾನಿತನಾಗಿ ವೀರನೇ, ಲೋಕದಲ್ಲಿ ನಿನ್ನ ಪರಾಕ್ರಮದಿಂದ ಅರಿವು ನನಗಾಯಿತು.ಇಂದು ನಾನು ನಿನ್ನಿಂದ ಪರಾಜಿತನಾದೆನು. ನನ್ನನ್ನು ಕ್ಷಮಿಸು ಎಂದು ವಿನೀತನಾಗಿ ಕೇಳಿದನು.

ವಾಲಿಯು ಉದಾರನಾದ್ದರಿಂದ ರಾವಣನನ್ನು ಮನ್ನಿಸಿ ಅರಮನೆಗೆ ಕರೆದೊಯ್ದು ಅವನ ಸ್ನೇಹವನ್ನು ಬೆಳೆಸುವುದರೊಂದಿಗೆ ಒಂದು ತಿಂಗಳವರೆಗೆ ಸಂತೋಷದಿಂದ ಇದ್ದನು.ಅನಂತರ ಲಂಕೆಗೆ ರಾವಣನು ಮರಳಿದನು. ಆದರೆ ರಾವಣನಿಗೆ ಬಹಳ ನಿರಾಸೆಯಾಗಿತ್ತು.ರಾವಣನು ವಾಲಿಯ ಎದುರಿಗೆ ಏನೂ ಮಾಡಲಾರದೇ ಹೋದುದದಿಂದ ರಾವಣನಿಗೆ ಯುದ್ಧ ಉತ್ಸಾಹ ಕಡಿಮೆಯಾಗಬೇಕಾಗಿತ್ತು. ಆದರೆ ವಾಲಿಯಿಂದ ಅವಮಾನಿತನಾದರೂ ರಾವಣನು ಕೆಲವು  ದಿನಗಳವರೆಗೆ ಆ ಘಟನೆಯ ಪ್ರಭಾವದಿಂದಾಗಿ ಸುಮ್ಮನಿದ್ದನು.ಆದರೆ ಕೆಲವೇ ಸಮಯದಲ್ಲಿ ರಾವಣನು ಪಾತಾಳದ ಒಡೆಯನಾದ ಬಲಿ ಚಕ್ರವರ್ತಿಯನ್ನು ಗೆಲ್ಲಲ್ಲು ಬಯಸಿದನು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top