ತಾಂಬೂಲದ ಎಲೆ, ಅಡಿಕೆ ,ಸುಣ್ಣ ಆರೋಗ್ಯ ಕಾಪಾಡೋಕೆ ಒಳ್ಳೇದು ಅಂತ ಗೊತ್ತು ಆದ್ರೆ ಒಳ್ಳೆ ಕಾಮೋತ್ತೇಜಕ ಅಂತ ಎಷ್ಟು ಜನಕ್ಕೆ ಗೊತ್ತು ?
ತಾಂಬೂಲ… ಆರೋಗ್ಯ ಗುಟ್ಟೇನು..?
ಹಳ್ಳಿಗಳಲ್ಲಿ ಊಟದ ನಂತರ ತಾಂಬೂಲ ಸೇವನೆ ಸಾಮಾನ್ಯ, ಹಳ್ಳಿಗರಿಗೆ ಅದರ ಲಾಭವೂ ಗೊತ್ತಿದೆ, ಊಟದ ನಂತರ ತಾಂಬೂಲ ಸೇವನೆಯಿಂದ ಜೀರ್ಣಕ್ರೀಯೆ ಸುಲಭವಾದರೆ, ಹಲ್ಲುಗಳು ಗಟ್ಟಿಯಾಗುತ್ತವೆ ಎನ್ನುವುದು ಹಳ್ಳಿಗಳಲ್ಲಿ ಪ್ರತಿಯೊಬ್ಬರಿಗೂ ತಿಳಿದಿರುವ ಸಾಮಾನ್ಯ ಸಂಗತಿ. ಇಷ್ಟೇ ಅಲ್ಲ ತಾಂಬೂಲ ಸೇವನೆಯಿಂದ ನಿಮಗೆ ಗೊತ್ತಿರದ ಅನೇಕ ಲಾಭಗಳೂ ಇವೆ.
ಮಧುಮೇಹ ರೋಗವುಳ್ಳವರಿಗೆ ತಾಂಬೂಲ ಸೇವನೆ ಒಂದು ಪಥ್ಯ ಅಭ್ಯಾಸ. ದಿನದಲ್ಲಿ ಎರಡು ಅಥವಾ ಮೂರು ಸಲ, ಊಟವಾದ ನಂತರ ತಾಂಬೂಲ ಸೇವಿಸುವುದು ಹಿತಕರ ಹಾಗೂ ಆರೋಗ್ಯದಾಯಕ.
ಬಾಯಾರಿಕೆ ಹಾಗೂ ಬಾಯಿಂದ ದುರ್ಗಂಧ, ವಾಸನೆ ಇವು ಸಾಮಾನ್ಯ. ಈ ತೊಂದರೆಗಳ ನಿವಾರಣೆಗೆ ತಾಂಬೂಲ ಸೇವನೆ ಉತ್ತಮ ಉಪಚಾರ ಎನ್ನಲಾಗಿದೆ.
ತಾಂಬೂಲ ಸೇವನೆಯನ್ನು ಯಾವಾಗಲೂ ಊಟದ ನಂತರ ಮಾಡಬೇಕು. ಎಲೆ, ಅಡಿಕೆ, ಸುಣ್ಣಗಳನ್ನು ಚೆನ್ನಾಗಿ ಅಗಿದ ಮೇಲೆ ಸುಗಂಧ ದ್ರವ್ಯಗಳಾದ ಲವಂಗ, ಜಕಾಯಿ, ಗಂಧ ಮೆಣಸು, ಏಲಕ್ಕಿ, ನಾಗಕೇಸರಿ ಮುಂತಾದ ದ್ರವಗಳನ್ನು ಜತೆಗೆ ಸೇರಿಸಿಕೊಂಡು, ತಾಂಬೂಲವನ್ನು ಚೆನ್ನಾಗಿ ಅಗಿಯಬೇಕು. ಇದು ಬಾಯಿಯ ರುಚಿಯನ್ನು ಹೆಚ್ಚು ಮಾಡುವುದೇ ಅಲ್ಲದೆ ಮನಸ್ಸಿಗೆ ಆಹ್ಲಾದವನ್ನು ನೀಡುತ್ತದೆ. ಸಮೋತ್ತೇಜಕವಾಗಿದ್ದು, ಯೌವನವನ್ನು ಕಾಪಾಡುತ್ತದೆ.
ತಾಂಬೂಲ ಸೇವನೆಯಿಂದ ಆರೋಗ್ಯ ವೃದ್ಧಿಗೊಳ್ಳುತ್ತದೆ. ತಾಂಬೂಲವು ಬಾಯಿಗೆ ನಿರ್ಮಲತೆ ಮತ್ತು ಪರಿಮಳ ಕೊಟ್ಟು ಮುಖದಲ್ಲಿ ಕಾಂತಿ ಮತ್ತು ಪ್ರಸನ್ನತೆಯನ್ನುಂಟುಮಾಡುತ್ತದೆ.
ದವಡೆ ಹಲ್ಲು, ವಸಡುಗಳಿಗೆ ಬಲ, ನಾಲಿಗೆಗೆ ರುಚಿ ಕೊಡುತ್ತದೆ. ಸ್ವರವನ್ನು ಸ್ವಚ್ಛಗೊಳಿಸಿ, ಮಲಬದ್ಧತೆ ನಿವಾರಿಸುತ್ತದೆ.
ಬಾಯಿ ಮತ್ತು ಗಂಟಲುಗಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿ ನೆಗಡಿ, ಗಂಟಲು ನೋವು ಮುಂತಾದ ರೋಗಗಳು ಉಂಟಾಗದಂತೆ ತಡೆಯುತ್ತದೆ.
ಜೀರ್ಣಾಂಗಗಳನ್ನು ಉದ್ದೀಪನಗೊಳಿಸಿ ಅಗ್ನಿಮಾಂದ್ಯ, ಅಜೀರ್ಣ ರೋಗಗಳನ್ನು ನಿವಾರಿಸುತ್ತದೆ.
ಗರದಿಕ್ಷ ಗುಲ್ಮ ಮುಂತಾದ ರೋಗಗಳಿಗೆ ಒಳ್ಳೆಯದು.
ಪ್ರತಿದಿನ ತಾಂಬೂಲ ಸೇವನೆ ಮಾಡುವುದರಿಂದ ಶರೀರದ ಉಷ್ಣತೆ ಸಮತೋಲನದಲ್ಲಿದ್ದು, ಮುಖ ಮತ್ತು ಚರ್ಮದ ಕಾಂತಿ ಹೆಚ್ಚಾಗುತ್ತದೆ. ಮನಸ್ಸು ಪ್ರಸನ್ನಗೊಳ್ಳುತ್ತದೆ, ಬುದ್ಧಿ ಚುರುಕಾಗುತ್ತದೆ.
ಮುಪ್ಪು ಮುಂದೂಡಲ್ಪಟ್ಟು ಯೌವನ ದೀರ್ಘಕಾಲ ರಕ್ಷಿಸಲ್ಪಡುತ್ತದೆ.
ಇವೆಲ್ಲಕ್ಕಿಂತ ಮೇಲಾಗಿ ಸ್ತ್ರೀ-ಪುರುಷರಿಬ್ಬರಿಗೂ ತಾಂಬೂಲ ಉತ್ತಮ ಕಾಮೋತ್ತೇಜಕವಾಗಿದ್ದು, ಮುದ ನೀಡುತ್ತದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
