ಸೋಮವಾರ, ೧೯ ಜೂನ್ ೨೦೧೭
ಸೂರ್ಯೋದಯ : ೦೫:೨೭
ಸೂರ್ಯಾಸ್ತ : ೧೯:೧೭
ಶಕ ಸಂವತ : ೧೯೩೯ ಹೇವಿಲಂಬಿ
ಅಮಂತ ತಿಂಗಳು : ಜ್ಯೇಷ್ಠ
ಪಕ್ಷ : ಕೃಷ್ಣ ಪಕ್ಷ
ತಿಥಿ : ದಶಮೀ
ನಕ್ಷತ್ರ : ರೇವತಿ
ಯೋಗ : ಶೋಭಾನ
ಅಮೃತಕಾಲ : ೧೫:೦೯ – ೧೬:೪೧
ರಾಹು ಕಾಲ: ೦೭:೧೧ – ೦೮:೫೫
ಗುಳಿಕ ಕಾಲ: ೧೪:೦೬ – ೧೫:೪೯
ಯಮಗಂಡ: ೧೦:೩೮ – ೧೨:೨೨
ಮೇಷ (Mesha)
ಕಾರ್ಯಕ್ಷೇತ್ರದಲ್ಲಿ ನಿಮ್ಮ ಪ್ರಯತ್ನಬಲ ಜಾರಿಯಲ್ಲಿರಲಿ. ಸಾಂಸಾರಿಕವಾಗಿ ಹೊಂದಾಣಿಕೆ ಇರಲಿ. ಆಗಾಗ ದೇವತಾ ದರ್ಶನ ಭಾಗ್ಯವಿದೆ. ಅಧಿಕಾರಿ ವರ್ಗದವರಿಗೆ ಮುಂಭಡ್ತಿ ತಂದೀತು. ದಿನಾಂತ್ಯ ಕಿರು ಸಂಚಾರ.
ವೃಷಭ (Vrushabh)
ನಿರೀಕ್ಷಿತ ಕಾರ್ಯಸಾಧನೆ ಸಮಾಧಾನ ತರಲಿದೆ. ಆರೋಗ್ಯ ಭಾಗ್ಯ ಸುಧಾರಿಸಲಿದೆ. ನಿರುದ್ಯೋಗಿಗಳು ತಾತ್ಕಾಲಿಕ ಉದ್ಯೋಗ ಲಾಭ ಪಡೆಯಲಿದ್ದಾರೆ. ಆಗಾಗ ಸಂಚಾರ ದೇಹಾಯಾಸಕ್ಕೆ ಕಾರಣವಾದೀತು.
ಮಿಥುನ (Mithuna)
ಆರ್ಥಿಕವಾಗಿ ಉನ್ನತಿ ತೋರಿ ಬಂದರೂ ಖರ್ಚುವೆಚ್ಚಗಳಲ್ಲಿ ಮಿತಿ ಇರಲಿ. ನವದಂಪತಿಗಳು ಶುಭ ಸಮಾಚಾರವನ್ನು ಕೇಳಲಿದ್ದಾರೆ. ವಾಹನ ಸಂಚಾರದಲ್ಲಿ ಹೆಚ್ಚಿನ ಜಾಗ್ರತೆ ವಹಿಸುವುದು ಉತ್ತಮ.
ಕರ್ಕ (Karka)
ಯಾಂತ್ರಿಕ ಕೆಲಸದವರಿಗೆ ಕಾರ್ಮಿಕ ವರ್ಗಕ್ಕೆ ಉತ್ತಮ ಭವಿಷ್ಯವಿದೆ. ವಾಹನ ಖರೀದಿ ಯಂತ್ರ ಖರೀದಿಗಳಿಗೆ ಸಕಾಲ. ರಾಜಕೀಯ ವರ್ಗದವರಿಗೆ ಶುಭವಾರ್ತೆ. ನ್ಯಾಯಾಲಯದ ಕಾರ್ಯದಲ್ಲಿ ಜಯ ನಿಮ್ಮದು.
ಸಿಂಹ (Simha)
ಸಾಂಸಾರಿಕವಾಗಿ ತುಸು ನೆಮ್ಮದಿ ತೋರಿ ಬಂದೀತು. ಹಣ ಸಂಪಾದನೆಗೆ ಅನುಕೂಲವಾದರೂ ಖರ್ಚು ವೆಚ್ಚಗಳಲ್ಲಿ ಮಿತಿ ಇರಲಿ. ಋಣಾತ್ಮಕ ಚಿಂತನೆಗೆ ಗುರಿಯಾಗದಿರಿ. ಸಂಚಾರದಲ್ಲಿ ತುಸು ಜಾಗ್ರತೆ ಮಾಡಿರಿ.
ಕನ್ಯಾರಾಶಿ (Kanya)
ಆಗಾಗ ದಾಯಾದಿಗಳ ಉಪಟಳ ಕಿರಿಕಿರಿ ತಂದೀತು. ಹಾಗೂ ನ್ಯಾಯಾಲಯದ ದರ್ಶನ ಭಾಗ್ಯ ಕರುಣಿಸಬಹುದು. ಜಾಗ್ರತೆ ವಹಿಸಿರಿ. ಆರ್ಥಿಕವಾಗಿ ಉನ್ನತಿ ತೋರಿ ಬಂದರೂ ವಂಚನೆಗೆ ಅವಕಾಶವಿದೆ.
ತುಲಾ (Tula)
ದೂರ ಸಂಚಾರದಲ್ಲಿ ಕಾರ್ಯಸಿದ್ಧಿ ಇದೆ. ನ್ಯಾಯಾಲಯದ ಕೆಲಸಗಳು ವಿಳಂಬವಾದರೂ ನಿಮ್ಮ ಪರವಾಗಿ ತೀರ್ಮಾನ ಸಿಗಲಿದೆ. ಹಳೆಯ ವಸ್ತುಗಳ ಕ್ರಯವಿಕ್ರಯಗಳು ಲಾಭಕರವಾಗಲಿವೆ. ದಿನಾಂತ್ಯ ಶುಭವಿದೆ.
ವೃಶ್ಚಿಕ (Vrushchika)
ದೇಹಾರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸಿರಿ. ಯೋಗ್ಯ ವಯಸ್ಕರು ವೈವಾಹಿಕ ಸಂಪನ್ನರಾದಾರು. ವಿದ್ಯಾರ್ಥಿಗಳಿಗೆ ಅಡೆತಡೆಗಳು ತೋರಿ ಬಂದರೂ ವಿದ್ಯಾಭ್ಯಾಸಕ್ಕೆ ಸಕಾಲ. ದಿನಾಂತ್ಯ ಶುಭವಾರ್ತೆ.
ಧನು ರಾಶಿ (Dhanu)
ಸಾಂಸಾರಿಕವಾಗಿ ಸೂಕ್ತ ಸಲಹೆಗಳಿಗೆ ಸ್ಪಂದಿಸಿರಿ. ವ್ಯಾಪಾರ, ವ್ಯವಹಾರಗಳು ಲಾಭಕರವಲ್ಲದಿದ್ದರೂ ನಷ್ಟ ತರಲಾರದು. ಸದ್ಯದ ಮಟ್ಟಿಗೆ ತಾಳ್ಮೆ ಸಮಾಧಾನದಿಂದ ಮುಂದುವರಿಯುವುದು ಆಗತ್ಯ.
ಮಕರ (Makara)
ವೃತ್ತಿ ಕ್ಷೇತ್ರದಲ್ಲಿ ಅಡೆತಡೆಗಳಿದ್ದರೂ ಮುನ್ನಡೆ ಇದ್ದೇ ಇರುತ್ತದೆ. ಸಂತಾನ ಭಾಗ್ಯದಲ್ಲಿ ಸಮಸ್ಯೆ ತಂದೀತು. ಗುರು ಹಿರಿಯರ ಅನುಗ್ರಹದಿಂದ ಮುನ್ನಡೆಗೆ ಸಾಧಕವಾಗಲಿದೆ.
ಕುಂಭರಾಶಿ (Kumbha)
ಸಾಂಸಾರಿಕವಾಗಿ ಅಭಿವೃದ್ಧಿ ತೋರಿ ಬಂದರೂ ಕೌಟುಂಬಿಕವಾಗಿ ಕಿರಿಕಿರಿ ತಪ್ಪದು. ವೃತ್ತಿ ಕ್ಷೇತ್ರದಲ್ಲಿ ಆಗಾಗ ವಾದ ವಿವಾದಗಳು ಉದ್ವೇಗ ಕಂಡು ಬರಲಿವೆ. ಅನಿರೀಕ್ಷಿತ ದೂರ ಸಂಚಾರ ಯೋಗವಿದೆ.
ಮೀನರಾಶಿ (Meena)
ಸಾಂಸಾರಿಕ ವೈಷಮ್ಯಕ್ಕೆ ಕಾರಣ ರಾಗದಿರಿ. ನಿರುದ್ಯೋಗಿಗಳಿಗೆ ವಿದ್ಯಾರ್ಥಿ ಗಳಿಗೆ, ಯೋಗ್ಯ ವಯಸ್ಕರಿಗೆ ಅಚ್ಚರಿಯ ವಾರ್ತೆ ಇದೆ. ಹೋಟೆಲು ಉದ್ಯಮದವರಿಗೆ ಅನುಕೂಲವಾಗಲಿದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
