ನಿವೇಶನದ ರಚನೆ ಮತ್ತು ಫಲ ಭಾಗ-2
1.ನಿವೇಶನ ಪೂರ್ವದಲ್ಲಿ ತಗ್ಗಾಗಿದ್ದರೆ ಒಳ್ಳೆಯ ಆರೋಗ್ಯ, ಧನಲಾಭ.
2.ಈಶಾನ್ಯ ಎತ್ತರವಿರುವ ನಿವೇಶನ ದಲ್ಲಿ ಮಹಾ ಕ್ಲೇಶಕಾರಕವಾಗಿರುತ್ತದೆ.
ಮಕ್ಕಳ ಶಿಕ್ಷಣ ಕುಂಠಿತವಾಗುತ್ತದೆ.
3.ಆಗ್ನೇಯ ಎತ್ತರವಿದ್ದು ಈಶಾನ್ಯ ಇಳಿಜಾರಿದ್ದರೆ ಧನಾಭಿವೃದ್ಧಿ, ಹೆಣ್ಣು ಮಕ್ಕಳಿಗೆ ಶುಭಕರ.
4. ನೈರುತ್ಯದಲ್ಲಿ ಇಳಿಜಾರಿರುವ ನಿವೇಶನದಲ್ಲಿ ಧನಹಾನಿ, ಮಹಾಭಯದಾಯಕ, ರೋಗಪ್ರದವಾಗಿರುತ್ತದೆ.
5. ನೈರುತ್ಯ ಎತ್ತರವಿದ್ದ ನಿವೇಶನ ಶುಭಕರ.
6. ವಾಯುವ್ಯದಲ್ಲಿ ಇಳಿಜಾರಿದ್ದರೆ ಧನ ನಾಶ, ಕಳ್ಳರ ಕಾಟಗಳು, ಮೃತ್ಯಕಾರಕವಾಗುತ್ತದೆ.
7.ವಾಯುವ್ಯ ಆಗ್ನೇಯಕ್ಕಿಂತ ಎತ್ತರವಿದ್ದರೆ ಉತ್ತಮ ಫಲ, ವ್ಯಾಪಾರದಲ್ಲಿ ಲಾಭ.
8.ಈಶಾನ್ಯ ಭಾಗ ಪೂರ ಗೋಡೆಯಿಂದ ಮುಚ್ಚಿದರೆ ಆರ್ಥಿಕ ಮುಗ್ಗಟ್ಟು, ಆರೋಗ್ಯದಲ್ಲಿ ಯಜಮಾನನಿಗೆ ತೊಂದರೆಗಳು.
9. ನಿವೇಶನದ ಈಶಾನ್ಯ ಭಾಗದಲ್ಲಿ ಯಾವುದೇ ಹಳೆಯ ವಸ್ತುಗಳು ಇಡಬಾರದು.
10. ನಿವೇಶನದ ಮದ್ಯಭಾಗ ಇಳಿಜಾರಾಗಿರಬಾರದು.
11. ನಿವೇಶನದ ಮಧ್ಯಭಾಗ ಎತ್ತರವಿದ್ದು ಸುತ್ತಲೂ ತಗ್ಗಾಗಿದ್ದರೆ ಧನ ಧಾನ್ಯದಿಂದ ಸುಖದಿಂದ ಕೂಡಿರುತ್ತದೆ.
12. ಪೂರ್ವ ಮತ್ತು ಉತ್ತರ ದಿಕ್ಕು ಮಿಕ್ಕ ದಿಕ್ಕುಗಳಿಗಿಂತ ಇಳಿಜಾರಾಗಿದ್ದರೆ ನಿವೇಶನವು ಆರ್ಥಿವಾಗಿಯೂ ಮತ್ತು ಅರೋಗ್ಯಕರವಾಗಿಯೂ ಒಳ್ಳೆಯದು.
ಎನ್.ಶರತ್ ಶಾಸ್ತ್ರಿ
ಶೈವಾಗಮ,ಜ್ಯೋತಿಷ್ಯ ಪ್ರವೀಣ
ಚಾಮುಂಡೇಶ್ವರಿ ದೇವಸ್ಥಾನ ಸುಣ್ಣದಕೇರಿ. ಮೈಸೂರು
9845371416
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
