ನೀವು ಯಾವ ಶೈಲಿಯಲ್ಲಿ ಪೆನ್ನನ್ನು ನಿಮ್ಮ ಕೈ ಬೆರಳುಗಳ ಮದ್ಯೆ ಹಿಡಿದು ಬರೆಯುತ್ತೀರ ? ನಿಮಗೆ ಗೊತ್ತಾ ಅದು ನಿಮ್ಮ ಅದೆಷ್ಟೋ,ಅನೇಕ ವ್ಯಕ್ತಿತ್ವವನ್ನು ತಿಳಿಸುತ್ತದೆ.
ನೋಡಿ ಅವುಗಳ ಶೈಲಿ ಮತ್ತು ಭಂಗಿ ಯಾವ ಯಾವ ಅರ್ಥವನ್ನು ತಿಳಿಸುತ್ತದೆ ಎಂದು.
ನೀವು ಸಾಮಾನ್ಯವಾಗಿ ನೋಡಿರಬಹುದು ಜನಗಳು ವಿವಿಧ ಶೈಲಿಯಲ್ಲಿ ಪೆನ್ನು,ಪೆನ್ಸಿಲನ್ನು ಕೈಯಲ್ಲಿ ಹಿಡಿದುಕೊಂಡು ಬರೆಯುತ್ತಿರುತ್ತಾರೆ.ಮಕ್ಕಳು ಕೂಡ ಅವರ ಬಣ್ಣ ಬಣ್ಣದ ಪೆನ್ಸಿಲಗಳನ್ನು ವಿವಿಧ ಭಂಗಿಯಲ್ಲಿ ಹಿಡಿದುಕೊಂಡಿರುತ್ತಾರೆ. ಮನೋವಿಜ್ಞಾನಿಗಳು ಹೇಳುತ್ತಾರೆ, ನೀವು ಯಾವ ರೀತಿಯಲ್ಲಿ ಪೆನನ್ನು ಹಿಡಿದು ಕೊಳ್ಳುತ್ತೀರೋ ಅದು ನಿಮ್ಮ ವ್ಯಕ್ತಿತ್ವದ ಬಗ್ಗೆ ಅದೆಷ್ಟೋ ವಿಷಯಗಳನ್ನು ತಿಳಿಸುತ್ತದೆಯಂತೆ.
ನಿಮ್ಮ ಪೆನ್ನು ಹಿಡಿಯುವ ಶೈಲಿ ನಿಮ್ಮ ವಿಶಿಷ್ಟ ಲಕ್ಷಣಗಳನ್ನು ಕುರಿತು ಏನು ಹೇಳುತ್ತದೆ ? ಇದನ್ನು ನೀವು ನಿಮ್ಮ ಸ್ನೇಹಿತರು,ಹೇಗೆ ಹಿಡಿದುಕೊಳ್ಳುತ್ತಾರೆ ಎಂದು ನೋಡಿ , ಅವರ ವ್ಯಕ್ತಿತ್ವವನ್ನು ಸಹ ತಿಳಿದುಕೊಳ್ಳಬಹುದು.
ಅಷ್ಟೇ ಅಲ್ಲ,ಬೇರೆ ತರಹದ ವ್ಯಕ್ತಿತ್ವಗಳ ಸೂಚಕಗಳಿಗೂ ಸಹ ಇದು ಸಂಬಂಧಿಸಿದೆ.ಕೈ ಬೆರಳುಗಳ ವಿವಿಧ ಭಂಗಿಗಳು ಇರುವ ಚಿತ್ರಗಳನ್ನು ನೋಡುತ್ತಾ ಹೋದರೆ ನಿಮಗೆ ಗೊತ್ತಾಗುತ್ತೆ.ನಿಮ್ಮ ಮೊಟ್ಟ ಮೊದಲ ಹಿಡಿತವೂ ನಿಮ್ಮ ಸುಪ್ತ ( ಒಳ ಮನಸ್ಸಿನ) ಮಾನಸಿಕ ಅತೀಂದ್ರಿಯವನ್ನೂ ಸಹ ತಿಳಿಸುತ್ತದೆ.
1.ಹೆಬ್ಬೆರಳು ತೋರು ಬೆರಳನ್ನು ಸುತ್ತುವರೆದಿದ್ದರೆ…
ನೀವು ಹಗಲು ಗನಸನ್ನು ಕಾಣುವವರಾಗಿರುತ್ತೀರಿ, ತುಂಬಾ ಅಧಿಕವಾದ ನೀರೀಕ್ಷೆಯನ್ನು ಜೀವನದಲ್ಲಿ ಹೊಂದಿರುತ್ತೀರಿ. ನಿಮ್ಮ ಸುತ್ತಲೂ ಇರುವ ಜನಗಳನ್ನು ಸಂತೋಷವಾಗಿ ಮತ್ತು ಸುರಕ್ಷಿತವಾಗಿ ಇರಬೇಕೆಂದು ಭಯಸುತ್ತೀರಿ,ಇದರ ಜೊತೆಗೆ ನೀವು ಆಗಾಗ್ಗೆ ಗಾಢವಾದ ಯೋಚನೆಯನ್ನು ಸಹ ಮಾಡುತ್ತೀರಾ.
2.ಪೆನ್ನನ್ನು ತೋರು ಬೆರಳು ಮತ್ತು ಮದ್ಯ ಬೆರಳಿನಲ್ಲಿ ಹಿಡಿಯುವವರಾಗಿದ್ದರೆ…
ನೀವು ಎಲ್ಲರ ಜೊತೆ ಬೆರೆಯುವ ಮನಸುಳ್ಳವರು,ಜೀವನದಲ್ಲಿ ನಾಟಕೀಯ ವ್ಯಕ್ತಿತ್ವ ಹೊಂದಿರುವವರನ್ನು ಇಷ್ಟ ಪಡುವುದಿಲ್ಲ ಮತ್ತು ಯಾರನ್ನಾದರೂ ಸರಿ ತಪ್ಪು ಮಾಡಿದರೆ ಅತೀ ಬೇಗನೇ ಕ್ಷಮಿಸಿಬಿಡುತ್ತೀರಿ.
3.ಪೆನ್ನನ್ನು ಹೆಬ್ಬೆರಳು ಮತ್ತು ತೋರು ಬೆರಳಿನಲ್ಲಿ ಹಿಡಿಯುವವರಾಗಿದ್ದರೆ…
ನೀವು ನಿಮ್ಮ ಪ್ರಾಮಾಣಿಕತೆಗೆ ಹೆಮ್ಮೆ ಪಡುತ್ತೀರ, ಸದಾಕಾಲ ಶಾಶ್ವತವಾಗಿ ಕುತೂಹಲದಿಂದ ಕೂಡಿರುತ್ತೀರಾ.ನೀವೇನಾದರೂ ಪ್ರೀತಿ ಮಾಡುತ್ತಿದ್ದರೆ ನಿಮ್ಮ ಭಾವನೆಗಳನ್ನು ಹಿಡಿದಿಟ್ಟುಕೊಳ್ಳುವ ಮನಸಿದ್ದು ಇದರ ಜೊತೆಗೆ ನಾಚಿಕೆ ಸ್ವಭಾವದವರು ಕೂಡ ಹೌದು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
