fbpx
ದೇವರು

ಸೂರ್ಯನಿಗೆ ಆರ್ಗ್ಯ ಅಂದರೆ ನೀರನ್ನು ಸಮರ್ಪಿಸುವಾಗ ಈ ಮಂತ್ರವನ್ನು ಪಠಿಸಿದರೆ ಜೀವನದಲ್ಲಿ ಯಶಸ್ಸು ಸಿಗುತ್ತದೆ.

ಸೂರ್ಯ ದೇವನಿಗೆ ಆರ್ಗ್ಯ ಅಂದರೆ ನೀರನ್ನು ಸಮರ್ಪಿಸುವಾಗ ಈ ಮಂತ್ರವನ್ನು ಪಠಿಸಬೇಕು.ಇದು ನಿಮ್ಮ ಜೀವನದ ಪ್ರತಿ ಹೆಜ್ಜೆಯಲ್ಲಿ ಯಶಸ್ಸನ್ನು ತಂದುಕೊಡುತ್ತದೆ.

ಪುರಾಣದಲ್ಲಿ ಸೂರ್ಯ ದೇವನನ್ನು ಕಶ್ಯಪ ಮಹರ್ಷಿಗಳು ಮತ್ತು ಅದಿತಿ ದೇವಿಯ ಮಗ ಎಂದು ತಿಳಿಸಿದ್ದಾರೆ.ಆದುದರಿಂದಲೇ ಸೂರ್ಯನಿಗೆ ‘ಆದಿತ್ಯ’ ಎಂಬ ಹೆಸರು ಅವರ ಅಮ್ಮನ ಹೆಸರಿನಿಂದ ಬಂದಿದೆ. ಸೂರ್ಯ ದೇವನನ್ನು ಪೂಜಿಸುವುದರಿಂದ ಸೂರ್ಯ ದೇವನು ತನ್ನ ಭಕ್ತರಿಗೆ ವಿಪರೀತ ಐಶ್ವರ್ಯ, ಅಧಿಕಾರ,ಗೌರವ,ದೀರ್ಘಾಯುಷ್ಯವನ್ನು ಮತ್ತು ಯಶಸ್ಸನ್ನು ಕರುಣಿಸುತ್ತಾನೆ ಎಂದು  ಕೂಡ ಹೇಳಲಾಗಿದೆ.

ಸೂರ್ಯ ಉದಯಿಸುವ ಸಮಯದಲ್ಲಿ  ಸೂರ್ಯನನ್ನು ಪೂಜಿಸಿ ಅರ್ಗ್ಯವನ್ನು ಅರ್ಪಿಸುವುದು  ಒಂದು ಶ್ರೇಷ್ಠ  ಮಾರ್ಗವಾಗಿದೆ.  ಇತ್ತೀಚಿನ ಕಾಲದವರು  ಇದನ್ನು ಒಂದು ತಂತ್ರಕ್ಕೆ ಹೋಲಿಸದರೆ, ವೇದಗಳಲ್ಲಿ ಹೇಳಿರುವ ಪ್ರಕಾರ ಇದರಿಂದ ಆಗುವ ಲಾಭಗಳು ಬಹು ವಿಧಗಳಲ್ಲಿವೆ.

ಎಲ್ಲಾ ಧರ್ಮದ ಜನರು ಕೂಡ ಈ ಮಂತ್ರದಲ್ಲಿ  ಶಕ್ತಿ ಇದೆ ಎಂದು ನಂಬಿ ಪಠಿಸುತ್ತಾರೆ.ನಂಬಿಕೆಯೂ ತರ್ಕ ಮತ್ತು ವೈಜ್ಞಾನಿಕ ಅಂಶಗಳನ್ನು ಹೊಂದಿದ್ದು ಕೆಲವು ಆಯ್ದ ಮಂತ್ರದ ಸಾಲುಗಳನ್ನು ಪಠಿಸುವುದರಿಂದ ಕನಿಷ್ಠ ಶಕ್ತಿಯನ್ನು ಉತ್ಪತ್ತಿ ಮಾಡಿ ನಮ್ಮ ಮೇಲೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಧನಾತ್ಮಕ  ಪರಿಣಾಮವನ್ನು ಉಂಟುಮಾಡುತ್ತದೆ.

ವೇದಗಳ ಪ್ರಕಾರ ಸೂರ್ಯದೇವನನ್ನು ಪೂಜಿಸುವಾಗ ಈ ಮಂತ್ರವನ್ನು ನಿರ್ದಿಷ್ಟವಾಗಿ ಪಠಿಸಬೇಕು.ಗಾಯಿತ್ರಿ ಮಂತ್ರವೇ ಒಂದು ಅದ್ಭುತ .

ವೇದಗಳ ಪ್ರಕಾರ ಸೂರ್ಯ ದೇವನನ್ನು ಪೂಜಿಸುವ ಬಗೆ..

1.ಅಗ್ನಿ ಪುರಾಣದ ಪ್ರಕಾರ.

ಗಾಯಿತ್ರಿ ಮಂತ್ರವನ್ನು ಉಚ್ಚಾರಣೆ ಮಾಡುವುದು,ಸೂರ್ಯ ಉದಯಿಸುವಾಗ  ಸೂರ್ಯ ದೇವನನ್ನು ಪೂಜಿಸುವುದು ಎರಡು ಹೆಚ್ಚು ಲಾಭದಾಯಕವಾಗಿದ್ದು.  ಇದು ನಿಮಗೆ ಉತ್ತಮ  ಅದೃಷ್ಟವನ್ನು ದಯಪಾಲಿಸುತ್ತದೆ.

2.ರಿಗ್ವೇದದ ಪ್ರಕಾರ.

ಸೂರ್ಯನಿಗೆ (ಆರ್ಗ್ಯವನ್ನು) ನೀರನ್ನು ಸಮರ್ಪಿಸಿ, ಗಾಯಿತ್ರಿ ಮಂತ್ರವನ್ನು ಪಠಿಸುವುದು ಒಬ್ಬ ವ್ಯಕ್ತಿಯ ಜೀವನದಲ್ಲಿ ಇರುವ  ನೋವು,ದುಃಖಗಳನ್ನು ಹೊರತೆಳ್ಳಿ ಮಾನಸಿಕ ಶಾಂತಿಯನ್ನು  ಕರುಣಿಸಿ ಹೆಚ್ಚಿಸುತ್ತದೆ.

3.ಯಜುರ್ವೇದದ ಪ್ರಕಾರ.

ಸೂರ್ಯನು ಭೂಮಿಯ ಮೇಲಿರುವ  ಎಲ್ಲ ಜೀವಿಗಳ ಆಧಾರವಾಗಿದ್ದು.ಈ ಭೂಮಿಯ ಮೇಲೆ ಮನುಷ್ಯರು ಸದಾಕಾಲ ಚಟುವಟಿಕೆಯಿಂದ  ಕೂಡಿದ್ದಾರೆ ಎಂದರೆ  ಅದಕ್ಕೆ ಸೂರ್ಯನೇ ಸಾಕ್ಷಿ. ಪ್ರತಿದಿನ  ಬೆಳ್ಳಗ್ಗೆ ಸೂರ್ಯನಿಗೆ ಪ್ರಾರ್ಥನೆ ಸಲ್ಲಿಸುವುದು  ಅ ವ್ಯಕ್ತಿಯ ಗೌರವ ಮತ್ತು ಧನ ಸಂಪಾದನೆಯನ್ನು ಹೆಚ್ಚಿಸುತ್ತದೆ.

4.ಗಾಯಿತ್ರಿ ಮಂತ್ರದ ಅರ್ಥ.

ನಾವು ದೇವರ  ದ್ಯಾನ ಮಾಡುತ್ತಾ ಇದರ ಜೊತೆಗೆ ಪ್ರತೀದಿನ ಗಾಯಿತ್ರಿ ಮಂತ್ರವನ್ನು ಪಠಿಸುವುದರಿಂದ ಆಧ್ಯಾತ್ಮಿಕ ಉತ್ಸಾಹ ಹೆಚ್ಚುತ್ತದೆ. ಈ ಗಾಯಿತ್ರಿ ಮಂತ್ರದ ಆರಾಧನೆಯು  ಸರ್ವೋತ್ತಮವಾದುದು.ಯಾರು ಇದನ್ನು ಭಕ್ತಿ ಭಾವದಿಂದ ಪಠಿಸುತ್ತಾರೋ ಅವರು ದೈಹಿಕ ಮತ್ತು ಸ್ವರ್ಗೀಯ ಗೋಳಗಳ ವಾತಾವರಣದಲ್ಲಿ ಬದುಕನ್ನು ಜೀವಿಸುತ್ತಾರೆ.

ಈ ಅತ್ಯಂತ ಶಕ್ತಿಯುತವಾದ ದೇವರ ಮಂತ್ರವು  ಪ್ರಬುದ್ಧವಾದುದು  ಎಂಬುದು ನಮ್ಮ ಬುದ್ದಿ ಶಕ್ತಿಗೆ ಅರಿವನ್ನು ಮೂಡಿಸುತ್ತದೆ.ಇದು ಸರ್ವೋಚ್ಚ  ಸತ್ಯ ಎಂದು ನಮಗೂ ಕೂಡ ಅರಿವಾಗುತ್ತದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top