fbpx
ದೇವರು

ದುರ್ಯೋಧನ ಮೇಣದ ಅರಮನೆಯಲ್ಲಿ ಪಾಂಡವರನ್ನು ಕೊಲ್ಲಲು ಸ್ಕೆಚ್ ಹಾಕಿದ ಕಥೆ..

ದುರ್ಯೋಧನನ ಮೋಸದಿಂದ  ಪಾಂಡವರಿಗೆ   ವನವಾಸ.

ಭೀಮನು ಗದಾಯುದ್ಧದಲ್ಲಿ ವಿಶೇಷತೆಯನ್ನು ಪಡೆದುಕೊಳ್ಳಲು ಬಲರಾಮನಲ್ಲಿಗೆ ಹೋದನು.ದ್ವಾರಕೆಯಲ್ಲಿ ವಿಶಿಷ್ಟ ರೀತಿಯಲ್ಲಿ ಗದಾಯುದ್ದವನ್ನು ಅಭ್ಯಾಸ ಮಾಡಿದನು.ಖಡ್ಗಯುದ್ದ, ರಥಯುದ್ಧಗಳಲ್ಲಿಯೂ ಪರಿಣಿತಿ ಸಾಧಿಸಿದನು. ಸಹದೇವನು ಬೃಹಸ್ಪತಿಯಲ್ಲಿ ನೀತಿಶಾಸ್ತ್ರವನ್ನು ತಿಳಿದರೆ,ನಕುಲನು ಧನುರ್ವಿದ್ಯೆಯನ್ನು ಕಲಿತು,ಚಿತ್ರಯೋಧಿ ಎಂದು ಹೆಸರು ಪಡೆದನು.

ಧರ್ಮರಾಜನ ಆಡಳಿತ ಆರಂಭವಾದಾಗ ಕುರು ರಾಜ್ಯದ ಸೀಮೆ ವಿಸ್ತಾರಗೊಂಡು ಯುವನ ಗಾಂಧಾರ,ಪಾಂಚಾಲ ಮುಂತಾದ ಅನೇಕ ರಾಜ್ಯಗಳ ಭಾಗಗಳು ಆಡಳಿತದಲ್ಲಿ ಸೇರಿದವು. ರಾಜಭಂಡಾರವು ಸಮೃದ್ಧವಾಯಿತು.

ಪ್ರತಿದಿನವೂ ಸಹ ಪಾಂಡವರ ಪ್ರಸಿದ್ದಿ ಹೆಚ್ಚುತ್ತಿದ್ದಂತೆ ಕೌರವನ ಅಸೂಯೆ ಸಹ ಬಲಗೊಂಡಿತು. ಆದರೆ ಭೀಷ್ಮ, ದ್ರೋಣ, ವಿಧುರ, ಮುಂತಾದವರು ದೃತರಾಷ್ಟ್ರ, ಗಾಂಧಾರಿ ಸಹ ಸಂತಸದಿಂದ ಇದ್ದರು. ಆದುದರಿಂದ ಕೌರವರಿಗೆ ಏನೂ ಮಾಡದಂತಹ ಸ್ಥಿತಿ ಉಂಟಾಯಿತು.  ಪಾಂಡುವಿನ ಮಕ್ಕಳು, ಕೀರ್ತಿಯು ದೃತರಾಷ್ಟ್ರನಿಗೆ ಸಹ ಮತ್ಸರಕ್ಕೆ ಕಾರಣವಾಯಿತು.ಅವನು ಪಾಂಡವರ ಬಗ್ಗೆ ಚಿಂತಿಸಿತ್ತಿರುವಾಗ   ದುರ್ಯೋಧನನು ಬಂದು ತನಗೆ ಅವಮಾನವಾಗಿದೆ ಎಂದು ವಿವರಿಸಿದನು.

ದ್ರುಪದನೊಂದಿಗೆ ತಾನು ಸೊತ್ತಿದ್ದು , ಅರ್ಜುನನು ಗೆದ್ದಿದ್ದು ಅವರಿಗೆ ದುಃಖ ಉಂಟು ಮಾಡಿತ್ತು. ದೃತರಾಷ್ಟ್ರ ರಾಜನು ಅವನ ಮಗನಾಗಿ ತಾನೇ ಯುವರಾಜನಾಗಬೇಕೆಂಬ ಹಂಬಲವೂ ಸಹ ಸೇರಿಕೊಂಡಿತು. ಅದಕ್ಕಾಗಿ ಪಾಂಡವರ ನಾಶದ ಬಗೆಗೆ ಉಪಾಯವನ್ನು ದೃತರಾಷ್ಟ್ರನಿಗೆ ಸೂಚಿಸಿದನು.

ಅಪ್ಪಾ ಪಾಂಡವರನ್ನು ಮೊದಲು ಹಸ್ತಿನಾವತಿಯಿಂದ ದೂರ ಕಳಿಸಬೇಕು.ಆದುದರಿಂದ ಸದ್ಯ ಅವರನ್ನು ವಾರಣಾವತಕ್ಕೆ ಕಳಿಸಿಕೊಡು ಎಂದು ಸಲಹೆ ನೀಡಿದನು.

ದೃತರಾಷ್ಟ್ರನು ಧರ್ಮರಾಯನನ್ನು ಕರೆದು  “ಮಗು,ನಿನಗೆ ಬಹಳ ಶ್ರಮವಾಗುತ್ತಿದೆ .ವಿಶ್ರಾಂತಿಯು ಇಲ್ಲವಾಗಿದೆ.ನಿಮಗೆಲ್ಲರಿಗೂ ಸ್ವಲ್ಪ ಕಾಲದವರೆಗೆ ಮನರಂಜನೆಯ ಅವಶ್ಯಕತೆ ಇದೆ.ಆದುದರಿಂದ ನೀವು ಸ್ವಲ್ಪ ಸಮಯ ವಾರಣಾವತಕ್ಕೆ ಹೋಗಿ ಬನ್ನಿರಿ. ಅಲ್ಲಿ ಪಶುಪತಿಯ ಉತ್ಸವ ನಡೆಯುತ್ತಿದೆ.ಲಕ್ಷಾಂತರ ಜನರು ಸೇರಿ ಆನಂದ ಪಡುತ್ತಾರೆ. ನೀವು ಸಹ ಹೋಗಿ ಸಂತಸ ಪಟ್ಟು ಬನ್ನಿರಿ.” ಎಂದನು.

ಯುಧಿಷ್ಠಿರನಿಗೆ ಏನೋ ಮೋಸವಿದೆ  ಎಂದು ಅನಿಸಿದರೂ ಹಾಗೆಯೇ ಆಗಲಿ.ಎಂದು ವಾರಣಾವತಕ್ಕೆ ಹೋಗಲು ತಯಾರಿ ನೆಡೆಸಿದನು.ದುರ್ಯೋಧನನು ಪುರೋಚನ ಎಂಬ ಶಿಲ್ಪಿಯನ್ನು ಕರೆಸಿ “ ನೀನೀಗಲೆ ವಾರಣಾವತಕ್ಕೆ ಹೋಗಿ ಅಲ್ಲಿ ಅರಗು ,ಮೇಣ , ಮುಂತಾದುವುಗಳಿಂದ ಒಂದು ಅರಮನೆಯನ್ನು ಕಟ್ಟು.ಪಾಂಡವರು ಅಲ್ಲಿಗೆ ಬಂದಾಗ ಅವರು ಅಲ್ಲಿಯೇ ಇರುವಂತೆ ಮಾಡು.ಅವರು ಮಲಗಿರುವಾಗ ಬೆಂಕಿ ಹಚ್ಚಿ ಬಿಡು ಎಂದು ಅವನಿಗೆ ಬಹಳ ಹಣದಾಸೆ ತೋರಿಸಿದನು.ಅವನು ವಾರಣಾವತದಲ್ಲಿ ಅರಗಿನ ಮನೆಯನ್ನು ನಿರ್ಮಿಸಿ ಕಾಯುತ್ತಿದ್ದನು.

ಮಹಾರಾಜ ದೃತರಾಷ್ಟ್ರನ ಆದೇಶದಂತೆ ಪಾಂಡವರು ವಾರಣಾವತಕ್ಕೆ ಹೊರಟಾಗ ತಾಯಿ ಕುಂತಿ ಸಹ ಬಂದಳು.ವಿಧುರನಿಗೆ ಮೋಸದ ಬಗ್ಗೆ ಸುಳಿವು ಸಿಕ್ಕಿತ್ತು. ಆಪ್ತ ಸೇವಕನನ್ನು ಕಳಿಸುವುದಾಗಿ ಹೇಳಿ ಸದಾ ಎಚ್ಚರದಿಂದ ಇರುವಂತೆ ಸಲಹೆ ನೀಡಿದನು.ಸೇವಕನನ್ನು ಬೇಕಾದಾಗ ಬಳಸಿಕೊಳ್ಳಿರಿ ಎಂದು ಸೂಚಿಸಿದರು.

ಪುರೋಚನನು ದುರ್ಯೋಧನನ ಅಪೇಕ್ಷೆಯಂತೆ ಅರಗಿನ ಮನೆಯನ್ನು ನಿರ್ಮಿಸಿ ಪಾಂಡವರು ಬಂದಾಗ ಸಂಭ್ರಮದಿಂದಲೇ ಸ್ವಾಗತಿಸಿದನು.  ಯುಧಿಷ್ಠಿರನಿಗೆ ತಾವು ಬರುವುದಕ್ಕಿಂತ ಮೊದಲೇ ಅರಮನೆ ನಿರ್ಮಾಣವಾಗಿದೆ ಎಂದು ತಿಳಿದಾಗ ಸಂಶಯವೂ ಬಲಗೊಂಡಿತು . ದುರ್ಯೋಧನನು  ಉರಿಯುವ ವಸ್ತುಗಳಿಂದ ಮನೆ ನಿರ್ಮಿಸಿ ನಮ್ಮನ್ನು ಸಾಯಿಸಲು ಉಪಾಯ ಮಾಡಿದ್ದಾನೆಂದು ಅರಿತನು.ಆದರೆ ಅದನ್ನು ಯಾರಿಗೂ ತಿಳಿಸಲಿಲ್ಲ,ಸಂಶಯ ತೋರಗೊಡಲಿಲ್ಲ.

ವಿದುರನು ಕಲಿಸಿದ ಸೇವಕನು ಬಂದು ಅರಗಿನ ಮನೆಯಿಂದ ಒಂದು ಸುರಂಗವನ್ನು ತೋಡಿದನು. ಅನಂತರ ಈ ದಾರಿಯಿಂದ ಹೋದರೆ ನದೀ ತೀರಕ್ಕೆ ಮುಟ್ಟುವುದೆಂದು ತಿಳಿಸಿದನು.ಪುರೋಚನನಿಗೆ ಸಹ ತಿಳಿಯಲಾರದಂತೆ ಈ ವ್ಯವಸ್ಥೆ ಮಾಡಿದನು.ವಾರಣಾವತದಲ್ಲಿ ಪಾಂಡವರು ಉತ್ಸವದಲ್ಲಿ ಪಾಲ್ಗೊಂಡರು .ಒಂದು ಸಲ ಕುಂತಿಯು ಸುಮಂಗಲಿಯರಿಗೆ ಭೋಜನ ಕೂಟವನ್ನು ಏರ್ಪಡಿಸಿದಳು. ಅನ್ನದಾನ ಮಾಡಿದಳು. ಆ ರಾತ್ರಿ ಒಬ್ಬಳು ಬೇಡತಿ ಐದು ಜನ ಮಕ್ಕಳೊಂದಿಗೆ ಬಂದು ಆ ಮನೆಯ ಜಗುಲಿಯ ಮೇಲೆ ಮಲಗಿದಳು. ಮದ್ಯ ರಾತ್ರಿಯಲ್ಲಿ ಅರಮನೆ ಹೊತ್ತಿ ಉರಿಯಲಾರಂಭಿಸಿದಾಗ. ಪಾಂಡವರು ಕುಂತಿ ಸಹಿತ ಸುರಂಗದಿಂದ ಪಾರಾದರು,ಬೇಡತಿಯು ಮಕ್ಕಳು ಸಹಿತವಾಗಿ ಸುಟ್ಟು ಹೋದಳು.

ಪುರುಜನರಿಗೆ ಪಾಂಡವರೇ ಸತ್ತರೆಂಬ ಭ್ರಮೆ ಉಂಟಾಯಿತು.ಅರಮನೆಯಲ್ಲಿದ್ದ ಪುರೋಚನ ಸಹ ಸತ್ತಿದನು.ಆದರೆ ಈ ರೀತಿ ತಮ್ಮನ್ನು ಸಾಯಿಸಲು ಪ್ರಯತ್ನ ಮಾಡಿದ್ದನ್ನು ಗಮನಿಸಿದ ಪಾಂಡವರು ತಾವು ಹಸ್ತಿನಾವತಿಗೆ ಮರಳುವುದು ಬೇಡವೆಂದು ನಿರ್ಧರಿಸಿದರು.ಕೌರವರು ಬಹಳ ಸಂತಸದಿಂದ ಉಳಿದರು. ಹಸ್ತಿನಾವತಿಯ ಜನರು ದುಃಖಿತರಾದರು.ದೃತರಾಷ್ಟ್ರನು ಸಹ ದುಃಖವನ್ನು ತೋರ್ಪಡಿಸಿದನು.ವಿದುರ ಮಾತ್ರ ಸುಮ್ಮನಿದ್ದನು.

ಸುರಂಗದ ಮೂಲಕ ಹೊರಗೆ ಬಂದ ಪಾಂಡವರು ನದಿಯನ್ನು ದಾಟಿದಾಗ ಆಯಾಸಗೊಂಡಿದ್ದರು.ಭೀಮನಿಗೆ ದುರ್ಯೋಧನನ ಕಪಟದ ಬಗ್ಗೆ ಸಿಟ್ಟು ಬಂದಿತ್ತು.ಅವನ ದೂತರು ಎಲ್ಲೆಲ್ಲಿ ಇದ್ದರೋ ಏನೋ ? ಎಂದು ಬೇಗನೆ ದೂರ ಸಾಗಬೇಕೆಂದು ಎಲ್ಲರನ್ನೂ ಹೊತ್ತುಕೊಂಡು ಬೇಗ ಬೇಗ ನೆಡೆದನು. ದೊಡ್ಡ ಅರಣ್ಯವನ್ನು ಪ್ರವೇಶಿಸಿದಾಗ ಉಳಿದವರಿಗೆ ಸಹ ಎಚ್ಚರವಾಯಿತು.ಆಗ ಒಂದು ಸರೋವರದಿಂದ ನೀರು ತಂದು  ಬಾಯಾರಿಕೆ ದೂರ ಪಡಿಸಿಕೊಂಡರು.ಪಾಂಡವರ ವನವಾಸವು ಆರಂಭವಾಯಿತು.ಎಲೆಗಳ ದೊಣ್ಣೆಯಿಂದ ನೀರನ್ನು ಕುಡಿದರು. ರಾಜಮಾತೆ ಕುಂತಿಯು ಅನಾಥಳಾಗಿದ್ದಳು. ರಾಜಕುಮಾರರು ಕಾಡು ಪಾಲಾಗಿದ್ದರು.ಭೀಮನಿಗೆ ಅಸಾಧ್ಯವಾದ ಸಿಟ್ಟು ಬಂದು ಹಲ್ಲು ಕಡಿದನು.

ಹೀಗೆ ಪಾಂಡವರ ವನವಾಸವು ಅರಣ್ಯದಲ್ಲಿ ಆರಂಭವಾಯಿತು.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top