fbpx
ಸಣ್ಣ ಕಥೆ

ಜಗತ್ತನ್ನೇ ಗೆಲ್ಬೇಕು ಅನ್ಕೊಂಡಿದ್ದ ಅಲೆಗ್ಸಾಂಡರ್ ಗೆ ಅವ್ನ ಆ ಚಿಕ್ಕ ಆಸೆ ತಿರಿಸ್ಕೊಳ್ಳೋಕ್ಕೆ ಆಗ್ಲಿಲ್ವಂತೆ ! ಇಂತದ್ದು ಓದಿದಾಗಲೇ ಅನ್ಸೋದು ಜೀವನ ಏನು ? ಅಂತ

ಚಿಕ್ಕ ಆಸೆಯೂ ಈಡೇರದಿದ್ದರೆ  ಚಕ್ರವರ್ತಿ ಏಕಾಗಬೇಕು.

ಈ ಅಪರೂಪದ ಘಟನೆಯನ್ನು ಕೇಳಿದ್ದೀರಾ ? ಅಲೆಗ್ಸಾಂಡರ್ ಚಕ್ರವರ್ತಿ ವಿಶ್ವವನ್ನೇ ಗೆಲ್ಲಿಸಬೇಕು ಎನ್ನುವ ಉದ್ದೇಶದಿಂದ ಒಂದೊಂದೇ ದೇಶಗಳನ್ನು ಗೆಲ್ಲುತ್ತಾ ಹೊರಟಿದ್ದ. ಒಮ್ಮೆ ಆತ ಹೋಗುತ್ತಿದ್ದ ರಸ್ತೆಯ ಬದಿಯಲ್ಲಿ ನದಿಯೊಂದು ಹರಿಯುತ್ತಿತ್ತು. ನದಿಯ ದಡದಲ್ಲಿ ಒಬ್ಬ ಸಂತ ಬಿಸಿಲಿಗೆ ಮೈಯೊಡ್ಡಿ ಕುಳಿತಿದ್ದ. ಯಾವ ಚಿಂತೆಯೂ ಇಲ್ಲದೆ ನಿರಾತಂಕವಾಗಿ ಕುಳಿತಿದ್ದ. ಸಂತನನ್ನು ಕಂಡ ಅಲೆಗ್ಸಾಂಡರ್ ಆಕರ್ಷಿತನಾದ.

ಆತ ತನ್ನ ಆನೆಯಿಂದ ಕೆಳಗಿಳಿದು ಸಂತನ ಬಳಿ ಬಂದ, ಚಕ್ರವರ್ತಿ ಪೋಷಾಕು ಧರಿಸಿದ್ದ ಅಲೆಗ್ಸಾಂಡರನನ್ನು ಸಂತ ಒಮ್ಮೆ ತಲೆಯೆತ್ತಿ ನೋಡಿದ,ನಂತರ ತನ್ನ ಪಾಡಿಗೆ ತಾನು ಕುಳಿತ.ಅಲೆಗ್ಸಾಂಡರಗೆ ಆಶ್ಚರ್ಯವಾಯಿತು. ಬಹುಶಃ ತಾನು ಯಾರೆಂಬುದೇ ಸಂತನಿಗೆ ಗೊತ್ತಿಲ್ಲವೆಂದು ಕೊಂಡ.ಅಲೆಗ್ಸಾಂಡರ್ , “ನಾನು ಅಲೆಗ್ಸಾಂಡರ್ ಚಕ್ರವರ್ತಿ! ಇಡೀ ಜಗತ್ತನ್ನೇ ಗೆಲ್ಲಲು ದಂಡಯಾತ್ರೆ ಹೊರಟಿದ್ದೇನೆ. ನೀವು ಇಲ್ಲಿ ಕುಳಿತು ಏನು ಮಾಡುತ್ತಿದ್ದೀರಿ ?” ಎಂದು ಕೇಳಿದ. ಆಗ ಸಂತ, ‘ನಾನು  ಏನು ಮಾಡುತ್ತಿಲ್ಲ .ನದಿ ಹರಿಯುತ್ತಿದೆ. ತಂಗಾಳಿ ಬೀಸುತ್ತಿದೆ.ಸೂರ್ಯನ ಬಿಸಿಲು ಮೈಮೇಲೆ ಬೀಳುತ್ತಿದೆ.

ಹಿತವಾದ ಅನುಭವ ನೀಡುತ್ತಿದೆ. ಅದನ್ನು ಅನುಭವಿಸುತ್ತಿದ್ದೇನೆ ಎಂದ. ಅಲೆಗ್ಸಾಂಡರ್ ನಾನು ಇಷ್ಟೆಲ್ಲಾ ಗಳಿಸಿದ್ದರೂ, ಒಂದು ದಿನವೂ ನಿಮ್ಮ ಹಾಗೆ ನಿಶ್ಚಿಂತೆಯಾಗಿ ಕುಳಿತು ನದೀ ತೀರದಲ್ಲಿ, ಬೀಸುವ ಗಾಳಿ,ಬೆಚ್ಚನೆಯ ಬಿಸಿಲು, ಇದಾವುದನ್ನು ಅನುಭವಿಸಿಲ್ಲ ಇವನ್ನೆಲ್ಲಾ ಅನುಭವಿಸುವ ಭಾಗ್ಯ ನನಗೆ ಯಾವಾಗ ಲಭಿಸುತ್ತದೋ ? ಎಂದು ನಿಟ್ಟುಸಿರು ಬಿಟ್ಟ.

ಸಂತರು ಜೋರಾಗಿ ನಕ್ಕರು ‘ ನಾನೊಬ್ಬ ಚಕ್ರವರ್ತಿ ಎಂದು ಹೇಳಿಕೊಳ್ಳುತ್ತೀರಿ! ಇಲ್ಲಿ  ಕುಳಿತುಕೊಳ್ಳುವ, ಇವನ್ನೆಲ್ಲಾ ಅನುಭವಿಸುವ ಭಾಗ್ಯ ಯಾವಾಗ ಲಭಿಸುತ್ತದೋ ಎಂದು ನಿಟ್ಟುಸಿರು ಬಿಡುತ್ತೀರಿ. ನಿಮ್ಮ ಮಾತನ್ನು ಕೇಳಿದರೆ ಆಶ್ಚರ್ಯವಾಗುತ್ತದೆ. ಆದಕ್ಕೇಕೆ ಚಿಂತಿಸಬೇಕು ? ಈಗಲೇ ಬನ್ನಿ ನನ್ನೊಂದಿಗೆ ಕುಳಿತುಕೊಳ್ಳಿ, ಎಂದರು. ಅಲೆಗ್ಸಾಂಡರ್ “ ಅದೀಗಲೇ ಸಾಧ್ಯವಿಲ್ಲ, ನಾನು ಇನ್ನೂ ಒಂದು ದೇಶವನ್ನು ಗೆಲ್ಲಬೇಕಿದೆ. ಅದನ್ನು ಗೆದ್ದ ನಂತರ ಇಲ್ಲಿಗೆ ಹಿಂತಿರುಗಿ ಬರುತ್ತೇನೆ.ನಿಮ್ಮೊಂದಿಗೆ ಕುಳಿತು ಆನಂದ ಅನುಭವಿಸುತ್ತೇನೆ” ಎಂದ.

ಸಂತರು ನೀವೊಬ್ಬ ಹುಚ್ಚರಂತೆ ಕಾಣುತ್ತೀರಿ ! ಇಲ್ಲಿ ನದೀ ತೀರದಲ್ಲಿ ತಂಗಾಳಿಯಲ್ಲಿ ಕುಳಿತು ಮುಂಜಾವಿನ ಬೆಚ್ಚನೆಯ ಬಿಸಿಲನ್ನು ಆನಂದಿಸಬೇಕು ಎನ್ನುತ್ತೀರಿ. ಆದರೆ ಇನ್ನೂ ಒಂದು ದೇಶವನ್ನು ಗೆದ್ದು ಅನಂತರ ಹಿಂತಿರುಗಿ ಬರುತ್ತೇನೆ.ಎಂದು  ಹೇಳುತ್ತೀರಿ. ನಾನು ಒಂದು ದೇಶವನ್ನು ಗೆದ್ದಿಲ್ಲ. ಆದರೂ ಆನಂದದಿಂದ ಇಲ್ಲಿದ್ದೇನೆ.ನಿಮ್ಮ ಯಾತ್ರೆಯನ್ನು ನಿಲ್ಲಿಸಿ ಎಂದು ನಾನು ಹೇಳುತ್ತಿಲ್ಲ. ಅದಕ್ಕೊಂದು ಸಣ್ಣ ರಜೆ ಘೋಷಿಸಿ. ನಿಮ್ಮ ಸೈನಿಕರಿಗೆ ಹಿಂದೆ ನಿಲ್ಲಲ್ಲು ಹೇಳಿ. ನನ್ನ ಪಕ್ಕದಲ್ಲಿ ಬಂದು ಕುಳಿತುಕೊಳ್ಳಿ ಆನಂದವನ್ನು ಅನುಭವಿಸಿ,ಎಂದು ಆಹ್ವಾನಿಸಿದರು.

ಅಲೆಗ್ಸಾಂಡರ್ ತಲೆ ಅಲ್ಲಾಡಿಸಿ ತನ್ನ ಸೈನ್ಯದೊಂದಿಗೆ  ಹೊರಟೇ ಹೋದ. ಆದರೆ ಆತ ಅಲ್ಲಿಗೆ ಹಿಂತಿರುಗಿ, ಎಂದೂ ಬರಲೇ ಇಲ್ಲ. ಎಕೆಂದರೆ ಮುಂದಿನ ಯುದ್ಧದಲ್ಲಿ ಆತ ಸಾವನ್ನಪ್ಪಿದ. ಆತನ ಆಸೆ ಹಾಗೆಯೇ ಉಳಿದು ಹೋಯಿತು.ನಮಗೆಲ್ಲರಿಗೂ ಮಹತ್ವಾಕಾಂಕ್ಷೇ ಇರಬೇಕು. ಏನೋ  ದೊಡ್ಡದನ್ನು ಸಾಧಿಸಬೇಕೆನ್ನುವ  ಗುರಿಯೂ ಇರಬೇಕು, ಆದರೆ  ನದಿ ತೀರದಲ್ಲಿ ಕುಳಿತು ತಂಗಾಳಿಯಲ್ಲಿ ಸೂರ್ಯನ ಬೆಚ್ಚನೆಯ  ಬಿಸಿಲನ್ನು ಅನುಭವಿಸಬೇಕು ಎನ್ನುವ ಚಿಕ್ಕ ಆಸೆಯೂ ಈಡೇರಿಸಿಕೊಳ್ಳಲು ಸಾಧ್ಯವಾಗದ  ಅಲೆಗ್ಸಾಂಡರ್  ಚಕ್ರವರ್ತಿ ನಾವಾಗಬೇಕೇ ? ನಮ್ಮ ಕಾರ್ಯ ಬಾಹುಳ್ಯದ ಮದ್ಯ ಸ್ವಲ್ಪ ಸಮಯಾವಕಾಶವನ್ನು ಮಾಡಿಕೊಳ್ಳಬೇಕು.ಒಂದು ಸಣ್ಣ ರಜೆ ತೆಗೆದುಕೊಳ್ಳಬೇಕು. ಆಗ ನಮ್ಮ ಆಸೆಯೂ ಈಡೇರುತ್ತದೆ.ಮುಂದಿನ ಯಾತ್ರೆಗೆ ಬೇಕಾದ ಹುರುಪೂ ಸಿಗುತ್ತದೆ, ಅಲ್ಲವೇ ?.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top