fbpx
ಭವಿಷ್ಯ

ಪುಣ್ಯ ಕ್ಷೇತ್ರಗಳ ನದಿಯಲ್ಲಿ ಸ್ನಾನ ಮಾಡೋಕೆ ಹೋಗಿ ಈ ಕೆಲಸಗಳನ್ನ ಮಾಡಿದ್ರೆ ಪಾಪ , ಶಾಪ ಎಲ್ಲಾ ಸುತ್ಕೊತಾವೆ ಹುಷಾರು..

ನದೀ ತೀರಕ್ಕೆ ಹೋದಾಗ ಏನೇನನ್ನು ಮಾಡಬಾರದು.

ನದೀ ತೀರಕ್ಕೆ ನಾವೆಲ್ಲರೂ ಸಾಮಾನ್ಯವಾಗಿ ಶಕ್ತಿ ಪೀಠದ ದೇವಸ್ಥಾನಕ್ಕೆ ಹೋದಾಗ ಸ್ನಾನ ಮಾಡುವುದಕ್ಕೆ ಹೋಗುತ್ತೇವೆ.ಯಾಕೆಂದರೆ ಅಂತಹ ಪವಿತ್ರ ಮತ್ತು ಪುಣ್ಯ ನದಿಯಲ್ಲಿ ಸ್ನಾನ ಮಾಡಿದರೆ ನಮ್ಮ ಎಷ್ಟೋ ಜನ್ಮಗಳ ಶಾಪದಿಂದ ಮುಕ್ತರಾಗುತ್ತೇವೆ  ನಮಗೆ ಜೀವನದಲ್ಲಿ  ಒಳ್ಳೆಯದಾಗುತ್ತೆ ಎನ್ನುವ ನಂಬಿಕೆ ಅನಾದಿ ಕಾಲದಿಂದಲೂ ಬಂದಿರುವಂತದ್ದು.ಈಗ ಪವಿತ್ರ ,ಪುಣ್ಯ ನದಿಗಳು ಅಂಥ ಹೇಳುವ ಗಂಗಾ,ತುಂಗಾ ನದಿಗಳು ಸಂಪೂರ್ಣವಾಗಿ ಕಲುಷಿತಗೊಳ್ಳುತ್ತಿವೆ . ಯಾಕೆ ? ಇದಕ್ಕೆ ಏನು ಕಾರಣ?  ಹೇಗೆ ಕಲುಷಿತಗೊಳ್ಳುತ್ತಿವೆ ?ಎಂದು ನಿಮಗೆ ಗೊತ್ತೇ ? ನದೀ ತೀರಕ್ಕೆ ಹೋದಾಗ  ನೀವು ಏನು ಮಾಡಬೇಕು ? ಏನು ಮಾಡಬಾರದು ಎಂದು ತಿಳಿದುಕೊಳ್ಳಿ.ಇಲ್ಲವಾದರೆ ನೀವು ಅದೆಷ್ಟೋ  ಪಾಪಗಳಿಂದ ಮುಕ್ತರಾಗಬೇಕು ಎಂದು ಹೋದವರು ಪಾಪಗಳನ್ನು  ಹೊತ್ತುಕೊಂಡು ಬರಬೇಕಾಗುತ್ತದೆ.

ಯಾವುದೇ ಕಾರಣಕ್ಕೂ ನದೀ ತೀರದಲ್ಲಿ ಇಲ್ಲಿ ಹೇಳುವ ಕೆಲಸವನ್ನು ಮಾಡಬಾರದು.

ಒಂದು ವೇಳೆ ಮಾಡಿದರೆ ದೈವ ಶಾಪ,ಪಿತೃ ಶಾಪ,ಗುರು ಶಾಪಕ್ಕೆ ಮತ್ತು ಎಲ್ಲಾ ರೀತಿಯ ಶಾಪಗಳಿಗೆ ಒಳಗಾಗುತ್ತೀರ.

ಮಲ,ಮೂತ್ರ ವಿಸರ್ಜನೆ ಮಾಡಬಾರದು.ನದೀ ತೀರದಲ್ಲಿ ಮಲ ಮೂತ್ರ ವಿಸರ್ಜನೆಯನ್ನು ಮಾಡಬಾರದು .ಇದು ತುಂಬಾ ,ತುಂಬಾ ದೊಡ್ಡ ಪಾಪ .

ಯಾವುದೇ ಕಾರಣಕ್ಕೂ ತೀರ್ಥ ಕ್ಷೇತ್ರಗಳಿಗೆ,ದೈವ ಸಾನಿದ್ಯಕ್ಕೆ ಸ್ನಾನ ಮಾಡಲು ಹೋದಾಗ ಸಾಬೂನು, ಶಾಂಪೂ ಮತ್ತು ಸೀಗೇಕಾಯಿಯಾಗಲಿ ಬಳಸಬಾರದು ಯಾಕೆಂದರೆ ನದಿಯ ನೀರು ಕಲುಷಿತಗೊಳ್ಳುತ್ತದೆ. ನದಿಯ ನೀರು ಪವಿತ್ರ,ಪುಣ್ಯವಾದುದು ಎಂದು ಎಷ್ಟೋ ಜನರು ಕುಡಿಯುತ್ತಾರೆ.ಅಂತಹ ನೀರನ್ನು ನೀವು ಇವುಗಳನ್ನೆಲ್ಲಾ ಉಪಯೋಗಿಸಿ ಕಲುಷಿತಗೊಳಿಸಿದರೆ  ಅಂತಹ ನೀರನ್ನು ಬೇರೆಯವರು ಕುಡಿದರೆ ನಿವು ಮಹಾ ಪಾಪ ಮಾಡಿದಂತೆ ಆಗುತ್ತದೆ.

ನೀವು ಧರಿಸುವ ವಸ್ತ್ರಗಳನ್ನು ತೇಲಿಬಿಡುವುದು ಮಹಾಪಾಪ. ಕೆಲವರು ತಾವು ಮೈ ಮೇಲೆ ಹಾಕಿಕೊಂಡಿರುವ ಬಟ್ಟೆಯನ್ನು ನದಿಯಲ್ಲಿ ತೇಲಿ ಬಿಡುತ್ತಾರೆ ,ಹಾಗೆ ತೇಲಿಬಿಡುವ ಅಥವಾ ನದಿಯ ದಡದಲ್ಲೇ ಎಸೆದು ಬಿಟ್ಟು ಬರುವುದು ಕೂಡ ಮಹಾ ಪಾಪ.ಕೆಲವರು ಬಟ್ಟೆ ಒದ್ದೆಯಾಗಿದೆ ಹೋದರೆ ಹೋಗಲಿ ಯಾರು ಮನೆ ತನಕ ಇವುಗಳನ್ನು ತೆಗೆದುಕೊಂಡು ಹೋಗುತ್ತಾರೆ ಎಂದು ಅಲ್ಲಿಯೇ ಬಿಟ್ಟು ಹೋಗಿ ಬಿಡುತ್ತಾರೆ.ಹಾಗೆ ಮಾಡಿದರು ಸಹ ಮಹಾ ಪಾಪ ಮಾಡಿದಂತೆಯೇ ಆಗುತ್ತದೆ.

ಇಂತಹ ಕೆಲಸಗಳನ್ನು ಎಂದಿಗೂ ಮಾಡಬೇಡಿ ಯಾಕೆಂದರೆ ಹಿಂದಿನ ಕಾಲದಲ್ಲಿ ಮತ್ತು ನಮ್ಮ ಧರ್ಮ ಗ್ರಂಥ ಶಾಸ್ತ್ರ ಪುರಾಣಗಳಲ್ಲಿ ನದಿಗಳು ಪವಿತ್ರ ಎಂದೇ ಹೇಳಲಾಗಿದೆ.ಅಂತಹ ಪವಿತ್ರ ನದಿಯನ್ನು ನೀವು ಹೀಗೆ ಕಲುಷಿತಗೊಳಿಸಿದರೆ ಪ್ರಕೃತಿ ಮಾಲಿನ್ಯ ಆಗತ್ತೆ,ನದಿ ಕೆಡುತ್ತದೆ,ನದಿಯ ಹರಿವು  ಕೂಡ ಕೆಡುತ್ತದೆ.ಇದರಿಂದ ಅದೆಷ್ಟೋ ಜನ್ಮ ಜನ್ಮಾಂತರದ ಶಾಪಗಳು ನಮ್ಮಗೆ ತಟ್ಟುತ್ತವೆ.

ಅಲ್ಲಿ ಬರುವ ಲಕ್ಷಾಂತರ,ಕೋಟ್ಯಾಂತರ ಭಕ್ತರು ತಮ್ಮ ಕೋರಿಕೆಯನ್ನು ಈಡೇರಿಸಲೆಂದು ಬರುತ್ತಾರೆ  ಶಕ್ತಿ ಪೀಠಕ್ಕೆ  ಬರುತ್ತಾರೆ.ಹೀಗೆಲ್ಲಾ ಮಾಡಿದರೆ ದೈವ ಅಥವಾ ಆ ಶಕ್ತಿ ಪೀಠದಲ್ಲಿರುವ ದೇವರ  ಶಾಪಕ್ಕೆ ಒಳಗಾಗುತ್ತೀರ.

ಇವುಗಳನ್ನು ಓದಿದಮೇಲೆ ಅಥವಾ ತಿಳಿದ ಮೇಲೆ ಇಷ್ಟು ದಿನಾ ತಿಳಿದೇ ಈ ಎಲ್ಲಾ ಕೆಲಸಗಳನ್ನು ನೀವು ಮಾಡಿದ್ದರೆ ಇನ್ನು ಮುಂದೆಯಾದರೂ ಮಾಡಬೇಡಿ.

ತುಂಗಾ ನದಿಯ ನೀರು ಅಂದರೆ ತುಂಗಾ ಪಾನ ಶ್ರೇಷ್ಠ ಎಂದು ಹೇಳಿದ್ದಾರೆ  ಅಂತಹ ತುಂಗಾ ನದಿಯು ಇಂದು ಮಲಿನ ಗೊಂಡಿದೆ ಕಾರ್ಖಾನೆಗಳಿಂದ ಹೊರ ಬರುವ ಅನೇಕ ರಾಸಾಯನಿಕ ಕಲ್ಮಶಗಳು ಕೂಡ ನದಿಯನ್ನು ಸೇರಿ ಕಲುಷಿತಗೊಂಡಿದೆ. ನೀರಿನ ಮಾಲಿನ್ಯ ಉಂಟಾಗಿದೆ.

ಹೀಗೆ ಯಾವ ಯಾವ ನದಿಗಳಿವೆ ಎಂದರೆ ಎಲ್ಲೆಲ್ಲಿ ಜನರು ಸ್ನಾನ ಮಾಡಲು ಹೋಗುತ್ತಾರೆ ಎಂದರೆ ಉದಾಹರಣೆಗೆ ಧರ್ಮಸ್ಥಳದಲ್ಲಿರುವ ನೇತ್ರಾವತಿ ನದಿ.

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಹರಿಯುವ ಕುಮಾರದ್ವಾರ ನದಿ.

ಉಕ್ಕಡಗಾತ್ರಿಯಲ್ಲಿ ಹರಿಯುವ ತುಂಗಭದ್ರಾ ನದಿ.  ಪರಮ ಪಾವನ ಪುಣ್ಯ ನದೀ ಎಂದೇ  ಪ್ರಸಿದ್ಧವಾಗಿರುವ ಉತ್ತರಭಾರತದಲ್ಲಿ ಹರಿಯುವ ಗಂಗಾ ನದಿ ಹೀಗೆ ಇನ್ನೂ ಅನೇಕ ನದಿಗಳಿವೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top