ಅಂದು ತಿನ್ನಲು ಅನ್ನವಿಲ್ಲದೆ , ರೈಲ್ವೆ ಪ್ಲಾಟ್ಫಾರ್ಮ್ ಮೇಲೆ ಮಲಗುತ್ತಿದ್ದವನು ,1500 ಕೋಟಿ ರೂಪಾಯಿ ಬೆಲೆ ಬಾಳುವ ಕಂಪನಿ ಕಟ್ಟಿದ ಕಥೆ..
ಕೈಯಲ್ಲಿ ಒಂದು ರೂಪಾಯಿ ಇರಲಿಲ್ಲ , ನಕ್ಷತ್ರ ನೋಡುತ್ತಾ ಮುಂಬೈ ರೈಲ್ವೆ ಪ್ಲಾಟ್ಫಾರ್ಮ್ ಮಲಗಿರುತ್ತಿದ್ದ , ಹೊಟ್ಟೆ ಹಸಿವು ತಾಳಲಾರದೆ ಬೇರೆಯವರು ಕುಡಿದು ಬಿಸಾಡಿದ ಬಾಟಲ್ ನ ನೀರು ಕುಡಿದು ಮಲಗುತ್ತಿದ್ದ ಇದಕ್ಕಿಂತ ಮೊದಲು ತನ್ನ ತಂದೆ, ಅಣ್ಣನ ಸಾವೇ ಇಲ್ಲಕ್ಕಿಂತ ದೊಡ್ಡ ದುಃಖವನ್ನು ಕೊಟ್ಟಿತ್ತು.
ಪಶ್ಚಿಮ ಬಂಗಾಳದ ದುರ್ಗಾಪುರದ ಈ ಹುಡುಗ ಸುದೀಪ್ ದತ್ತ ಎದೆಯಲ್ಲಿ ದೊಡ್ಡ ನೋವನ್ನು ಬಚ್ಚಿಟ್ಟುಕೊಂಡಿದ್ದ . 1971 ರ ಯುದ್ಧದಲ್ಲಿ ಅವರ ತಂದೆ ಗುಂಡಿನ ಹೊಡೆತಕ್ಕೆ ಸಿಕ್ಕಿ ಪಾರ್ಶ್ವವಾಯುವಿಗೆ ತುತ್ತಾದರು , ತಂದೆಯ ಅಸ್ವಸ್ಥತೆಯನ್ನು ಗುಣಪಡಿಸಲು ಹಣವಿಲ್ಲದಿರುವುದರಿಂದ ಅವರ ಇದ್ದ ಅಣ್ಣನೊಬ್ಬ ನಿಧನನಾದರು ಈ ಆಘಾತವನ್ನು ಸಹಿಸಲಾರದೆ ಅವರ ತಂದೆ ಮೂರು ತಿಂಗಳ ನಂತರ ನಿಧನರಾದರು , ತಾಯಿ ಅವರು ಹೊಂದಿದ್ದ ಏಕೈಕ ಭಾವನಾತ್ಮಕ ಬೆಂಬಲವಾಗಿದ್ದರು ಆಗಾಗ ಖಾಯಿಲೆ ಬೀಳುತ್ತಿದ್ದ ತಾಯಿ ಜೀವನದ ದೊಡ್ಡ ಜವಾಬ್ದಾರಿಯಾಗಿ ಉಳಿದರು.
ಅಂತೂ ಇಂತೂ ಮುಂಬೈ ಮಹಾನಗರಿಯಲ್ಲಿ ಹದಿನೈದು ರೂಪಾಯಿ ನೀಡುವ ಕೆಲಸ ಒಂದು ಸಿಕ್ಕಿ ಬಿಡ್ತು ! ನಂತ್ರ ಒಂದು ರೂಮ್ ಬಾಡಿಗೆ ಪಡೆದನು ತನ್ನ ಪುಟ್ಟ ಸಂಬಳದಲ್ಲಿ ಇಪ್ಪತ್ತು ಮಂದಿ ಒಟ್ಟಿಗೆ ಮಲಗುವ ಕೊಠಡಿಯನ್ನು ಬಾಡಿಗೆಗೆ ಪಡೆದು ವಾಸ ಮಾಡಲು ಶುರು ಮಾಡಿದನು , ಮಲಗಿದಾಗ ಒಬ್ಬ ಅಲ್ಲಾಡಿದರು ಇನ್ನೊಬ್ಬ ಎದ್ದು ಕೂರಬೇಕೆನ್ನುವಷ್ಟು ಸಣ್ಣ ಕೊಠಡಿ ಅದು.
ದಿನವೂ 40 ಕಿ.ಮೀ ನಡೆದು ಹೋಗುತ್ತಿದ್ದರು ಯಾಕೆಂದರೆ ತನ್ನ ಸಂಬಳವನ್ನು ಉಳಿಸಿ ತಾಯಿಗೆ ಕಳಿಸಬೇಕೆಂಬ ಉದ್ದೇಶವಾಗಿತ್ತು .
ಹೀಗಿರುವಾಗ ಎರಡು ವರ್ಷದ ನಂತ್ರ ತಾನು ಕೆಲಸ ಮಾಡುತ್ತಿದ್ದ ಫ್ಯಾಕ್ಟರಿ ಮುಚ್ಚುವ ಹಂತಕ್ಕೆ ಬಂದು ತಲುಪಿತ್ತು , ಅಲ್ಲಿಗೆ ಸುದೀಪ್ ನ ಅದೃಷ್ಟದ ಬಾಗಿಲು ತೆರೆದಿತ್ತು , ತನ್ನ ಸ್ನೇಹಿತರ ಬಳಿ ಹಣವನ್ನು ಸಾಲವಾಗಿ ಪಡೆದು ತನ್ನ ಉಳಿತಾಯದ ಹಣವನ್ನು ಸೇರಿಸಿ 16000 ರೂಪಾಯಿಗೆ ಫ್ಯಾಕ್ಟರಿ ಯನ್ನು ಕೊಂಡುಕೊಂಡನು .
ಅಷ್ಟೇ ಆಗಿದ್ದರೆ ಪರವಾಗಿಲ್ಲ ತನ್ನನ್ನು ನಂಬಿಕೊಂಡಿದ್ದ ಏಳು ಕಾರ್ಮಿಕರ ಕುಟುಂಬದ ಜವಾಬ್ದಾರಿಯು ಸಹ ಸುದೀಪ್ ಮೇಲೆ ಇತ್ತು , ಆಗ ಸುದೀಪ್ ಗೆ ಕೇವಲ 19 ವರ್ಷ , ಅಲ್ಯೂಮಿನಿಯಂ ಪ್ಯಾಕೇಜಿಂಗ್ ಉದ್ಯಮದಲ್ಲಿ ಆಗಲೇ ಜಿಂದಾಲ್ ಅಲ್ಯೂಮಿನಿಯಂನಂತಹ ಕೆಲವೇ ದೊಡ್ಡ ನಿಗಮಗಳು ತಮ್ಮ ದೃಢವಾದ ಆರ್ಥಿಕ ಸಾಮರ್ಥ್ಯದಿಂದ ಲಾಭವನ್ನು ಗಳಿಸಬಲ್ಲವಾಗಿದ್ದವು.
FMCG , ಸನ್ ಫಾರ್ಮಾ, ಸಿಪ್ಲಾ, ನೆಸ್ಲೆ ಮತ್ತು ಇತರ ಔಷಧ ದೈತ್ಯರಿಂದ ಸಣ್ಣ ಆರ್ಡರ್ ಗಳನ್ನ ಪಡೆಯಲು ಶುರು ಮಾಡಿದರು.
ಉತ್ಪನ್ನದ ಶ್ರೇಣಿಯನ್ನು ಸುಧಾರಿಸಲು ಮತ್ತು ಅವರ ಗ್ರಾಹಕರೊಂದಿಗೆ ಬಲವಾದ ಬಂಧವನ್ನು ನಿರ್ವಹಿಸಲು ತಮ್ಮ ಸಂಶೋಧನೆ ಮತ್ತು ಅಭಿವೃದ್ಧಿ ಮುಂದುವರಿಸಿದರು. ಭಾರತೀಯ ಅಲ್ಯೂಮಿನಿಯಂ ಕಂಪೆನಿ ಲಿಮಿಟೆಡ್ಗೆ ವಿತರಕರಾದರು 1998 ಮತ್ತು 2000 ರ ನಡುವೆ ಎರಡು ವರ್ಷಗಳಲ್ಲಿ ಅವರು 20 ಘಟಕಗಳನ್ನು ಸ್ಥಾಪಿಸಿದರು! ಅವರ ಸಾಧನೆಯನ್ನು ಗುರುತಿಸಿ ಜನರು ‘ಪ್ಯಾಕೇಜಿಂಗ್ ಉದ್ಯಮದ ನಾರಾಯಣ್ ಮೂರ್ತಿ’ ಎಂದೇ ಕರೆಯುತ್ತಾರೆ .
ಇಂದು 1500 ಕೋಟಿ ಒಡೆಯ ಈ ಸುದೀಪ್ .
ಅಂದು ಜಾಗವಿಲ್ಲದೆ ಪ್ಲಾಟ್ಫಾರ್ಮ್ ಮೇಲೆ ಮಲಗಿದ್ದವನು ಇಂದು ಮುಂಬೈನ ಪ್ರತಿಷ್ಠಿತ ಬಡಾವಣೆಯಲ್ಲಿ ಬಂಗಲೆಯಲ್ಲಿ ಜೀವನ ನಡೆಸುತ್ತಾನೆ , ಒಳ್ಳೆ ಒಳ್ಳೆ ಐಷರಾಮಿ ಕಾರುಗಳಲ್ಲಿ ಓಡಾಡುತ್ತಾನೆ , ಯಾರಿಗೆ ಎಷ್ಟು ಮಾನಸಿಕ ಹಾಗು ಬೌದ್ಧಿಕ ಶಕ್ತಿ ಇದೆಯೋ ಸಮಯ ಬಂದಾಗ ಮಾತ್ರ ತಿಳಿಯುತ್ತದೆ ಎನ್ನುವುದು ಅದಕ್ಕೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
