fbpx
ಸಾಧನೆ

ಹೇಮಾ ,ರೇಖಾ , ಜಯ ಮತ್ತು ಸುಷ್ಮಾ ಎಲ್ಲರ ಮೆಚ್ಚಿನ ‘ನಿರ್ಮಾ’ ಹುಟ್ಟಿದ ಕಥೆ..

ಹೇಮಾ ,ರೇಖಾ , ಜಯ ಮತ್ತು ಸುಷ್ಮಾ ಎಲ್ಲರ ಮೆಚ್ಚಿನ ‘ನಿರ್ಮಾ’ ಹುಟ್ಟಿದ ಕಥೆ..

ಕರ್ಶನ್ಬಾಯ್ ಪಟೇಲ್ ಅವರು ಅಹಮದಾಬಾದ್ನಲ್ಲಿರುವ ಅವರ ಮನೆಯ ಹಿಂಭಾಗದಲ್ಲಿ ತಮ್ಮ ಕೆಲಸ ಮುಗಿಸಿಕೊಂಡು ಬಂದ ಮೇಲೆ ಸೋಪಿನ ಪುಡಿಯನ್ನು ತಯಾರಿಸುತ್ತಿದ್ದರು . ಕೈಯಿಂದ ಮಾಡಿದ ಉತ್ಪನ್ನವನ್ನು ಬಾಗಿಲಿನಿಂದ ಬಾಗಿಲಿಗೆ ತಾವೇ ಮಾರಾಟ ಮಾಡಿ ಬರುತ್ತಿದ್ದರು , ಮಾರಾಟವಾದ ಪ್ರತಿ ಉತ್ಪನ್ನದೊಂದಿಗೆ ಉತ್ಪನ್ನ ಇಷ್ಟವಾಗದಿದ್ದರೆ ಹಣವನ್ನು ಮರಳಿ ವಾಪಸ್ ನೀಡುವ ಗ್ಯಾರಂಟಿ ಸಹ ನೀಡುತ್ತಿದ್ದರು .
ಅದು 1969 ರ ಸಮಯ ಆಗಿನ ಅತಿ ಅಗ್ಗದ ಸೋಪಿನ ಪುಡಿಯ ಬೆಲೆ ಕೆಜಿಗೆ 13 ರೂ ಇತ್ತು , ಕರ್ಶನ್ಬಾಯಿ ಪಟೇಲ್ ಅವರ ಮಾರ್ಜಕ ಪುಡಿಯನ್ನು ರೂ. ಕೆಜಿಗೆ 3 ರೂ ಮಾರಲು ಶುರು ಮಾಡಿದರು ಇದರಿಂದ ಮಧ್ಯಮ ಮತ್ತು ಕಡಿಮೆ ಮಧ್ಯಮ ವರ್ಗದ ಕುಟುಂಬಗಳನ್ನು ಬಹಳ ಸುಲಭವಾಗಿ ತಲುಪಲು ಸಾಧ್ಯವಾಯಿತು.

ನಿರ್ಮಾ ಕರ್ಶನ್ಬಾಯ್ ಪಟೇಲ್ ಪಟೇಲ್ ರ ಪುಟ್ಟ ಮಗಳು ಕಾರ್ ಆಕ್ಸಿಡೆಂಟ್ ಒಂದರಲ್ಲಿ ತೀರಿಕೊಂಡಿದ್ದಳು.ಅದೇ ಹೆಸರನ್ನು ತಮ್ಮ ಕಂಪನಿಗೆ ಇಟ್ಟಿದ್ದರು .

ಡಿಟರ್ಜೆಂಟ್ ಉತ್ಪಾದನೆಯ ಪ್ರಕ್ರಿಯೆ ಹೆಚ್ಚಿನ ಸಂಖ್ಯೆಯ ಜನರಿಗೆ ಉದ್ಯೋಗಾವಕಾಶ ನೀಡಿತು. ಮಾರುಕಟ್ಟೆಯಲ್ಲಿ ಸ್ಥಾನ ಪಡೆದುಕೊಳ್ಳಲು ವೆಚ್ಚ ಕಡಿತ ತಂತ್ರಗಳ ಮೇಲೆ ನಿಗಮವು ಗಮನಹರಿಸಿತು. ಗುಣಮಟ್ಟದ ಉತ್ಪನ್ನಗಳನ್ನು ಕಡಿಮೆ ಬೆಲೆಯಲ್ಲಿ ಒದಗಿಸುವುದಕ್ಕಾಗಿ ಯಾವಾಗಲೂ ಶ್ರಮಿಸ ತೊಡಗಿತು ಹೀಗಾಗಿ ಗ್ರಾಹಕರ ಉತ್ತಮ ಸಂಬಂಧವನ್ನು ಸಹ ಪಡೆಯಲು ಮುಂದಾಯಿತು.

1980 ರ ದಶಕದಲ್ಲಿ ಸರ್ಫ್ ಡಿಟರ್ಜೆಂಟ್ ಕಂಪನಿಯನ್ನು ಹಿಂದಿಕ್ಕಿತ್ತು , ನಿರ್ಮಾ ಯಶಸ್ವಿಯಾಗಿ ಸೋಪ್ಸ್ ಮತ್ತು ಡಿಟರ್ಜೆಂಟ್ಗಳ ಪ್ರೀಮಿಯಂ ವಿಭಾಗದಲ್ಲಿ ಪ್ರವೇಶಿಸಿತು. ಎರಡನೇ ಅತಿದೊಡ್ಡ ಸೋಪ್ ಕಂಪನಿಯಾಗಿ ಭಾರತದಲ್ಲಿ ಹೆಸರುವಾಸಿಯಾಯಿತು.

ರೀಟೇಲರ್ ಮಾರಾಟಗಾರರು ಸೇಲ್ಸ್ ಮ್ಯಾನ್ ಗಳಿಗೆ ಸೋಪ್ ಮತ್ತು ಪುಡಿಗಳನ್ನು ಕೊಟ್ಟು ಮಾರಾಟ ಮಾಡಿಬರಲು ಹೇಳುತ್ತಿದ್ದರು ಆದರೆ ಎಷ್ಟೋ ಜನರು ಹಣ ಕೊಡದೆ ಮತ್ತು ಇನ್ನು ಕೆಲವರು ಅರ್ಧ ಹಣವನ್ನು ಕೊಟ್ಟು ಪಡೆದು ಮತ್ತೆ ಹಣವನ್ನು ಮರಳಿಸದೆ ಕಳುಹಿಸುತ್ತಿದ್ದರು ಇದರಿಂದ ಕಂಪನಿ ನಡೆಸಲು ಬಹಳ ಕಷ್ಟವಾಗಿ ಹೋಗಿತ್ತು
ಈ ಕಾರಣದಿಂದ ಕರ್ಶನ್ಬಾಯ್ ರವರು ಒಂದು ಮಹತ್ತರ ನಿರ್ಧಾರವನ್ನು ಮಾಡಿದರು ಅದೇನೆಂದರೆ ಮಾಧ್ಯಮಗಳಲ್ಲಿ ಪ್ರಚಾರ ಮಾಡುವುದು .

ನಿಮಗೆ ನೆನಪಿರಬೇಕಲ್ಲವೇ ” ವಾಷಿಂಗ್ ಪೌಡರ್ ನಿರ್ಮಾ ಹಾಲಿನಂಥ ಬಿಳುಪು ನಿರ್ಮಾ ದಿಂದ ಬಂತು ಬಣ್ಣದ ಬಟ್ಟೆಗೆ ಪಳ ಪಳ ಮೇರುಪು ಬಂತು ಎಲ್ಲರ ಮೆಚ್ಚಿನ ನಿರ್ಮಾ ”

ಇದ್ದೊಂದೇ ಅಲ್ಲ “ಹೇಮಾ ,ರೇಖಾ , ಜಯ ಮತ್ತು ಸುಷ್ಮಾ ಎಲ್ಲರ ಮೆಚ್ಚಿನ ನಿರ್ಮಾ ”

ಹೀಗೆ ರೇಡಿಯೋ , ಟಿ .ವಿ ಎಲ್ಲಾ ಕಡೆ ನಿರ್ಮಾ ಹಾಡು ಮನೆಮನೆಗೂ ಪರಿಚಿತವಾಗಿತ್ತು .

ಹೀಗೆ ಗ್ರಾಹಕರಿಗೆ ಬೇಕಾದ ಉತ್ತಮ ಗುಣ ಮಟ್ಟದ ಉತ್ಪನ್ನಗಳನ್ನು ನೀಡಲು ನಿರ್ಮಾ ಇತ್ತ ಹೆಜ್ಜೆ ಮತ್ತು ಜಾಹಿರಾತನ್ನು ಬಳಸಿಕೊಂಡ ರೀತಿ ಬಹಳ ವಿನೂತನವಾದದ್ದು .

ಹೀಗೆ ಒಬ್ಬ ಸಾಮಾನ್ಯ ಸೇಲ್ಸ್ ಮ್ಯಾನ್ ನಿರ್ಮಾ ಕಂಪನಿ ಸ್ಥಾಪನೆ ಮಾಡಿದ

ಈ ಕಥೆ ನಿಮಗೂ ಇಷ್ಟವಾದರೆ ನಮ್ಮ ಪುಟ

FB.COM/ARALIKATTEZ.COM ಲೈಕ್ ಮಾಡೋಕೆ ಮರೆಯಬೇಡಿ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top