fbpx
ದೇವರು

ನಿಮ್ಮ ಮನೆಯಲ್ಲಿ ಆರೋಗ್ಯ ,ಸಂಪತ್ತು ಸದಾಕಾಲ ನೆಲೆಸಬೇಕು ಅಂದರೆ ಏನು ಮಾಡಬೇಕು ?

ನಿಮ್ಮ ಮನೆಯಲ್ಲಿ ಆರೋಗ್ಯ ,ಸಂಪತ್ತು ಸದಾಕಾಲ ನೆಲೆಸಬೇಕು ಅಂದರೆ ಏನು ಮಾಡಬೇಕು ?

ಪ್ರತಿಯೊಬ್ಬರಿಗೂ ಆಸೆ ಇರತ್ತೆ ನಾವು ಶ್ರೀಮಂತರಾಗಬೇಕು,ನಮ್ಮ ಮನೆಯಲ್ಲಿ ಯಾವಾಗಲೂ ದುಡ್ಡು ಇರಬೇಕು,ಹಣದ ಕೊರತೆ ಎಂದಿಗೂ ಬರಬಾರದು, ಸುಖ, ಶಾಂತಿ, ಸಮೃದ್ಧಿಯಾಗಿ  ನೆಲೆಸಬೇಕು ಅಂತ ಮನೆಯಲ್ಲಿರುವವರೆಲ್ಲರಿಗೂ  ಆಸೆ ಇದ್ದೇ ಇರುತ್ತೆ.ಅದಕ್ಕೆ ನಾವು ಏನು ಮಾಡಬೇಕು .

ಲಕ್ಷ್ಮೀ, ಸರಸ್ವತಿ, ದುರ್ಗಿ ಈ ಮೂರು ದೇವತೆಗಳು ಯಾವಾಗಲೂ ನಿಮ್ಮ ಮನೆಯಲ್ಲಿ ನೆಲೆಸಬೇಕು ಅಂದರೆ ಇದೊಂದು ಕೆಲಸವನ್ನು ದಿನನಿತ್ಯ ತಪ್ಪದೇ ಮಾಡಿದರೆ ಸಾಕು.ಆಗ ಲಕ್ಷ್ಮೀ, ಸರಸ್ವತಿ, ದುರ್ಗಿ  ದೇವಿಯರು ನಿಮ್ಮ ಮನೆಯಲ್ಲಿ ಕಾಲು ಮುರಿದುಕೊಂಡು ನಿಂತಿರುತ್ತಾರೆ ಅಂತ ಧರ್ಮ ಶಾಸ್ತ್ರ ಹೇಳುತ್ತದೆ.

ಅದಕ್ಕೆ ಹಿಂದಿನ ಕಾಲದಲ್ಲಿ ನಮ್ಮ ಪೂರ್ವಿಕರು ಸೂರ್ಯೋದಯಕ್ಕೆ ಮುಂಚೆನೇ ಎಲ್ಲರೂ ಎದ್ದು ಬಿಡುತ್ತಿದ್ದರು. ಯಾರು ಕೂಡ ಮಲಗ್ತಾಯಿರಲಿಲ್ಲ. ಆದರೆ ಈಗಿನ ಕಾಲ ಹಾಗಲ್ಲ ಅವರಿಗೆ ಸಮಯಕ್ಕೆ ಅನುಸಾರವಾಗಿ ನಿದ್ರೆ ಮಾಡ್ತಾರೆ. ಎಲ್ಲರೂ ಸಾಮಾನ್ಯವಾಗಿ ಸೂರ್ಯ ಉದಯಿಸಿದ ನಂತರವೇ ಹಾಸಿಗೆಯಿಂದ ಮೇಲೆ ಎದ್ದೆಳ್ತಾರೆ ಆದರೆ ಹಾಗೆ ಮಾಡಬೇಡಿ ಅಷ್ಟ ದರಿದ್ರಗಳು  ನಿಮ್ಮ ಮನೆಗೆ ಬರತ್ತೆ.

ಮನೆಯಲ್ಲಿರುವ ಪ್ರತಿಯೊಬ್ಬ ಸದಸ್ಯರು ಸೂರ್ಯೋದಯಕ್ಕೆ ಮುಂಚೆ ಎದ್ದು ಸ್ನಾನಾದಿ ನಿತ್ಯ ಕರ್ಮಗಳನ್ನು ಮುಗಿಸಿ,ಅದರಲ್ಲೂ ಪ್ರತಿಯೊಬ್ಬ ಗೃಹಿಣಿ,ಸ್ತ್ರೀ, ಈ ಕೆಲಸವನ್ನು ಮಾಡಬೇಕು.

ಮನೆಯಲ್ಲಿರುವ ಸ್ತ್ರೀಯರು ಬೆಳ್ಳಗ್ಗೆ ಸೂರ್ಯೋದಯಕ್ಕೆ ಮುಂಚಿತವಾಗಿಯೇ ಎದ್ದು ಸ್ನಾನಮಾಡಿ,

ರೇಷ್ಮೆ ಸೀರೆಯನ್ನು ಉಟ್ಟುಕೊಂಡು,

ಮನೆಯ ಮುಖ್ಯ ಬಾಗಿಲ  ಎದುರಿಗೆ ಹೊರಗಡೆ ರಂಗೋಲಿ ಪುಡಿಯಿಂದ   ರಂಗೋಲಿಯನ್ನು ಹಾಕಿ,

ತುಳಸಿಯ ಗಿಡಕ್ಕೆ ದೀಪವನ್ನು ಹಚ್ಚಿಟು, ಪೂಜೆ ಮತ್ತು ನಮಸ್ಕಾರವನ್ನು ಸಲ್ಲಿಸಿ,

ಮನೆ ದೇವರಿಗೆ ಮೂರು ಇಂಚಿನ ಎರಡು ದೀಪಗಳನ್ನು ಇಡಬೇಕು,

ಅದರೊಳಗೆ ಶುದ್ದ ಹಸುವಿನ ತುಪ್ಪವನ್ನು ಹಾಕಿ ದೀಪ ಬೆಳಗಿಸಬೇಕು.

ಇನ್ನೊಂದು ಮುಖ್ಯವಾದ ವಿಷಯ ಅಂದರೆ ದೀಪವನ್ನು ಬೆಂಕಿ ಕಡ್ಡಿಯಿಂದ ಹಚ್ಚಬೇಡಿ. ಅದರ ಬದಲಾಗಿ ಉದುಬತ್ತಿಯಿಂದ ಹಚ್ಚಿರಿ.

ಪ್ರತಿನಿತ್ಯ ಮನೆಯಲ್ಲಿ ಹೀಗೆ ಮಾಡ್ತಾ ಬಂದ್ರೆ 108 ದಿನಗಳಲ್ಲಿ ಒಂದು ಅದ್ಭುತ ನೆಡೆಯುತ್ತೆ.

ಅಂದರೆ ಏನೋ ಮನೆಯಲ್ಲಿ ಒಂದು ಶುಭಕಾರ್ಯ,ಅಥವಾ ಆ ಮನೆಯಲ್ಲಿ ವಾಸಿಸುವವರಿಗೆ  ಏನೋ ಒಂದು  ಒಳ್ಳೆಯದಾಗುತ್ತೆ.

ದಾರಿದ್ಯ ದೋಷ,ಅನಾರೋಗ್ಯ ದೋಷ, ಸಂಪಾದನೆ ದೋಷ, ಕುಟುಂಬ ದೋಷ ,ಯಾವುದು ನಿಮ್ಮ ಮನೆಯ ಹತ್ತಿರ ಸುಳಿಯುವುದಿಲ್ಲ.

ಸದಾಕಾಲ ಸುಖವಾಗಿ ಸಮೃದ್ಧಿಯನ್ನು ಹೊಂದಿ ಸುಖ ಸಂತೋಷದಿಂದ ಜೀವನ ಮಾಡ್ತೀರ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top