fbpx
ಆರೋಗ್ಯ

ನೀವು ಯಾವ ಕಡೆ ಮಲ್ಕೊತಿರಾ ? ಎಡಗಡೆ ಮಲ್ಕೊಳ್ಳೋ ಹಾಗಿದ್ರೆ ಇದ್ರಿಂದ ಈ 7 ಲಾಭಗಳು ಪಡ್ಕೊಬಹುದು..

ನೀವು ಯಾವ ಕಡೆ ಮಲ್ಕೊತಿರಾ ? ಎಡಗಡೆ ಮಲ್ಕೊಳ್ಳೋ ಹಾಗಿದ್ರೆ ಇದ್ರಿಂದ ಈ 7 ಲಾಭಗಳು ಪಡ್ಕೊಬಹುದು..

ಎಡಗಡೆ ಮಲಗೋದ್ರಿಂದ ಆಗುವ 7 ಪ್ರಯೋಜನಗಳು ಹೀಗಿವೆ

ದೇಹದ ರಕ್ತಪರಿಚಲನಾ ವ್ಯವಸ್ಥೆಯನ್ನು ವೃದ್ಧಿಸುತ್ತದೆ :

ಹೃದಯ ದೇಹದ ಎಡ ಭಾಗಕ್ಕಿದ್ದು ಎಡಭಾಗವು ನಿಮ್ಮ ದೇಹಕ್ಕೆ ರಕ್ತವನ್ನು ನೀಡುತ್ತದೆ. ಎಡಭಾಗದಲ್ಲಿ ಮಲಗಬೇಕಾದ ಕಾರಣ ಅರ್ಥಪೂರ್ಣವಾಗಿದೆ ಏಕೆಂದರೆ ನಿದ್ದೆ ಮಾಡುವಾಗ ನಿಮ್ಮ ಹೃದಯವು ಸರಿಯಾಗಿ ಕಾರ್ಯನಿರ್ವಹಿಸಲು ಸುಲಭವಾಗುವಂತೆ ಮಾಡುತ್ತದೆ.
ರಕ್ತಪರಿಚಲನಾ ವ್ಯವಸ್ಥೆಯು ಗುರುತ್ವ ಶಕ್ತಿಯನ್ನು ಉಪಯೋಗಿಸಲು ಸಹಾಯ ಮಾಡುತ್ತದೆ.

ಗರ್ಭಿಣಿಯರಿಗೆ ಪ್ರಯೋಜನಕಾರಿ :

ಗರ್ಭಾವಸ್ಥೆಯಲ್ಲಿ ಬಲಭಾಗದಲ್ಲಿ ಮಲಗಲು ನಿರ್ಧರಿಸಿದರೆ ಕೆಲವು ಪ್ರಯೋಜನಗಳನ್ನು ಆನಂದಿಸಬಹುದು. ಕೊನೆಯ ತ್ರೈಮಾಸಿಕದಲ್ಲಿ ಇನ್ನು ಹೆಚ್ಚಿನ ಸೌಲಭ್ಯಗಳನ್ನು ಪಡೆಯಬಹುದು.
ರಕ್ತದ ಉತ್ತಮ ಪರಿಚಲನೆ ಹೆಚ್ಚಿಸಲು ಸಹಾಯ ಮಾಡುತ್ತದೆ, ಯಕೃತ್ತನ್ನು ಅದರ ವಿವಿಧ ಕಾರ್ಯಗಳನ್ನು ಮಾಡಲು ಅನುವು ಮಾಡಿಕೊಡುವ ಮೂಲಕ ಅನಗತ್ಯ ತೂಕವು ಹೆಚ್ಚು ಹೊರೆಯಾಗದಂತೆ ಸಹಾಯ ಮಾಡುತ್ತದೆ.

ದೇಹದಿಂದ ಕಲ್ಮಶಗಳನ್ನು ಮತ್ತು ಜೀವಾಣುಗಳನ್ನು ತೆಗೆದುಹಾಕುತ್ತದೆ:

ದೇಹದಿಂದ ಕಲ್ಮಶಗಳನ್ನು ಮತ್ತು ಜೀವಾಣುಗಳನ್ನು ತೆಗೆದುಹಾಕುತ್ತದೆ , ಎಡಭಾಗದಲ್ಲಿ ಮಲಗಿದರೆ ನೀವು ಹಲವು ಪ್ರಯೋಜನ ಪಡೆಯುತ್ತೀರಿ ,ದೇಹದಿಂದ ಜೀವಾಣು ತೆಗೆದುಹಾಕುವಿಕೆಯನ್ನು ವೇಗಗೊಳಿಸಲು ಮತ್ತು ಸುಗಮಗೊಳಿಸಲು ಸಹಾಯ ಮಾಡುತ್ತದೆ.
ಪ್ರೊಟೀನ್ಗಳ ಹೀರುವಿಕೆಗೂ ಸಹಾಯ ಮಾಡುತ್ತದೆ.

ಯಕೃತ್ತು ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ

ಯಕೃತ್ತು ನಿಮ್ಮ ದೇಹದ ಬಲಭಾಗದಲ್ಲಿದೆ ನೀವು ಬಲಭಾಗದಲ್ಲಿ ಗಂಟೆಗಳ ಕಾಲ ಮಲಗಿದ್ದರೆ ಯಕೃತ್ತು ಅಥವಾ ಲಿವರ್ ತನ್ನ ಕೆಲಸಗಳನ್ನು ಸರಿಯಾಗಿ ನಿರ್ವಹಿಸಲು ಸಾಧ್ಯವಾಗುವುದಿಲ್ಲ ,ಆದ್ದರಿಂದ ಎಡ ಭಾಗದಲ್ಲಿ ಮಲಗಿದರೆ ಸರಾಗವಾಗಿ ಆಹಾರ ಪದಾರ್ಥಗಳು , ವಿಷಾಣುಗಳು ಚಲಿಸಲು ಸಹಾಯವಾಗುತ್ತದೆ.

ಹೊಟ್ಟೆಯ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ: 

ಹೊಟ್ಟೆಯ ಸ್ಪ್ಲೀನ್ ಉತ್ತಮವಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ.
ಗುರುತ್ವ ಶಕ್ತಿಯು ಗುಲ್ಮಕ್ಕೆ ರಕ್ತದ ಹರಿವನ್ನು ಹೆಚ್ಚಿಸುತ್ತದೆ ಮತ್ತು ಅದೇ ಸಮಯದಲ್ಲಿ ಕಲ್ಮಶಗಳನ್ನು ಶೋಧಿಸಲು ಅನುವು ಮಾಡಿಕೊಡುತ್ತದೆ.

ಅಸಿಡಿಟಿಯ ಅಪಾಯವನ್ನು ತಪ್ಪಿಸುತ್ತದೆ :

ಎಡ ಭಾಗಕ್ಕೆ ಮಲಗಿದಾಗ ಹೊಟ್ಟೆಯಲ್ಲಿ ಕಂಡುಬರುವ ಆಸಿಡ್ ಅಂಶಗಳು ಅನ್ನನಾಳಕ್ಕೆ ಹರಿಯುವುದಿಲ್ಲ , ಇದರಿಂದ ಎದೆ ಉರಿ ಹಾಗು ವಾಂತಿಯಂತ ಗ್ಯಾಸ್ಟ್ರಿಕ್ ಸಮಸ್ಯೆಗಳು ಹತ್ತಿರವೂ ಸುಳಿಯುವುದಿಲ್ಲ.

ಕರುಳಿನ ಚಲನೆಯನ್ನು ವೃದ್ಧಿಸುತ್ತದೆ :

ಕರುಳಿನ ಚಲನೆಯನ್ನು ವೃದ್ಧಿಸಿ ಕಷ್ಮಲಗಳನ್ನು ದೇಹದಿಂದ ಹೊರಗೆ ಹಾಕಲು ಸಹಾಯ ಮಾಡುತ್ತದೆ ಅಷ್ಟೇ ಅಲ್ಲದೆ ಮೂತ್ರ ಕಟ್ಟುವ ಸಮಸ್ಯೆ ಸಹ ದೂರವಾಗುತ್ತದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top