ಪ್ರೀತಿಯ ಯೋಗ ಗುರುವಾಗಿರುವ ಹನುಮಂತನಿಗೆ ಗೌರವ.
ಇಂದು ಹನುಮಂತನ ಯೋಗ ಸಾಧನೆಯ ಬಗ್ಗೆ ತಿಳಿಯೋಣವೇ ?…
“ವೀರ ಆಸನ ಅಥವಾ ಹನುಮಾನ್ ಆಸನ,ನಮ್ಮ ಪ್ರತಿದಿನದ ಯೋಗಾಭ್ಯಾಸಕ್ಕೆ ಗುರುವಿನ ಅವಶ್ಯಕತೆ ಇದೆ. ಕಲಿಯುಗದ ದೈವ , ಚೀರಂಜೀವಿ , ವಾಯು ಪುತ್ರನಾದ ಹನುಮಂತರನ್ನು ಶಿಕ್ಷಕರನ್ನಾಗಿ ಘೋಷಿಸಿತು. “ ಬಲಗಾಲು ಮುಂದೆ ಮಾಡಿ,ಎಡಗಾಲು ಹಿಂದೆ ಇರಿಸಿ,ಕೈಗಳನ್ನು ಹೊರಗೆ ತಂದು ಮುಂದಕ್ಕೆ ಚಾಚಿ ದೃಷ್ಟಿಯನ್ನು ಕೇಂದ್ರೀಕರಿಸಿದರೆ ನಿಮ್ಮನ್ನು ಭಯದಿಂದ ಮುಕ್ತರನ್ನಾಗಿಸಿ ಎಚ್ಚರಿಕೆಯಿಂದ ಇರುವಂತೆ ಮಾಡುತ್ತದೆ.ವೃದ್ದರು ಈ ಆಸನವನ್ನು ಅಭ್ಯಾಸ ಮಾಡುವುದಕ್ಕೆ ಇಷ್ಟ ಪಡುತ್ತಾರೆ. ಹನುಮಂತನ ಯವ್ವನ ಮತ್ತು ಶಕ್ತಿ ನಮಗೂ ಸಹ ಬರಲಿ ಎಂದು ಈ ಆಸನವನ್ನು ಮಾಡುತ್ತಾರೆ.
ಹನುಮಂತ ಅಂದರೆ ಮಾರುತಿ (ಬಾಲ್ಯದಲ್ಲಿ ಮಾರುತಿ ಎಂದು ಕರೆಯುತ್ತಿದ್ದರು) ಬಾಲ್ಯದ ದಿನಗಳ ಮಾರುತಿಯ ಕಥೆಗಳು ಮಕ್ಕಳನ್ನು ಹರ್ಷಚಿತ್ತರಾಗುವಂತೆ ಮಾಡುತ್ತವೆ.ಮಕ್ಕಳು ಆ ಕಥೆಗಳನ್ನೂ , ವಿಷಯಗಳನ್ನು ನೆನಪಿಸಿಕೊಂಡು ಪದೇ ಪದೇ ನಗುವಂತೆ ಮಾಡುತ್ತವೆ. ಮಕ್ಕಳೂ ಸಹ ಹಾಗೆಯೇ ಅದೇ ಕೆಲಸಗಳನ್ನು ಮಾಡುತ್ತಾ ಹಾಸ್ಯ ಮಾಡಿ ನಗುತ್ತಾರೆ.
ಮಾರುತಿಯು ತನ್ನ ಬಾಲ್ಯದ ದಿನಗಳಲ್ಲಿ ಕಾಡಿನಲ್ಲಿರುವ ಋಷಿಗಳಿಗೆ ಅನೇಕ ರೀತಿಯಲ್ಲಿ ಉಪದ್ರವ ನೀಡುತ್ತಿದ್ದ , ಋಷಿಗಳ ಗಡ್ಡದ ಕೂದಲನ್ನು ಹಿಡಿದು ಎಳೆಯುವುದು,ಯಜ್ಞಗಳನ್ನು ನಂದಿಸುವುದು,ಋಷಿಗಳನ್ನು ಹಿಡಿದು ಮರಕ್ಕೆ ಕಟ್ಟಿ ಹಾಕುವುದು, ಸಿಂಹಗಳನ್ನು ಕರೆ ತಂದು ಋಷಿಗಳ ಗುಡಿಸಿಲಿನೊಳಗೆ ನುಗ್ಗಿಸುವುದು ಹೀಗೆ ಇನ್ನೂ ಅನೇಕ ರೀತಿಯ ಚೇಷ್ಟೆಯನ್ನು ಮಾರುತಿ ಮಾಡುತ್ತಿದ್ದ.
ಈ ಕಾರಣದಿಂದಾಗಿಯೇ ಮಾರುತಿಯು ಋಷಿಗಳಿಂದ ಶಾಪಕ್ಕೊಳಗಾದನು. ನಿನ್ನ ಶಕ್ತಿ , ಸಾಮರ್ಥ್ಯ ಮತ್ತು ಧೈರ್ಯ ಏನೆಂಬುದು ನಿನಗೆ ಮರೆತು ಹೋಗಲಿ.ಅದು ಅವಶ್ಯಕತೆ ಇರುವಾಗ ಮಾತ್ರ ನಿನ್ನ ನೆನಪಿಗೆ ಬರಲಿ ಎಂದು ಶಾಪ ಕೊಟ್ಟರು.ಆದ್ದರಿಂದಲೇ ಹನುಮಂತನು ಪ್ರೌಢಾವಸ್ಥೆಗೆ ಬಂದ ನಂತರವೇ ಹೂವುಗಳ ರೀತಿಯಲ್ಲಿ ಅರಳಿದ. ತನ್ನ ಶಕ್ತಿಯಿಂದ ಎಲ್ಲರೂ ಚಿರಪರಿಚಿತರಾಗಿ ಎಲ್ಲಾ ಜನರು ಅವನನ್ನು ಪ್ರೀತಿಸಲು ಆರಂಭಿಸಿದರು, ಹನುಮಂತನು ಎಲ್ಲರಿಗೂ ಪ್ರೀತಿ ಪಾತ್ರರಾದನು. ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರ ವರೆಗೂ ಸಹ ಇವನನ್ನು ಇಷ್ಟ ಪಟ್ಟರು.
ವಯಸ್ಕರು ಇವನ ದೈತ್ಯ ದೇಹಕ್ಕಾಗಿ ಇಷ್ಟ ಪಟ್ಟರೆ, ಕುಸ್ತಿ ಪಟುಗಳು ಹನುಮಂತ ನಂತಹ ಶಕ್ತಿ ಮತ್ತು ವೇಗ ನಮಗೂ ಬರಲಿ ಎಂದು ಭಕ್ತಿಯಿಂದ,ನಮ್ರತೆಯಿಂದ ವಿವಿಧ ಪುಷ್ಪಗಳಿಂದ ಅಲಂಕರಿಸಿ ಪೂಜಿಸುತ್ತಿದ್ದರು. ಯೋಗಾಭ್ಯಾಸ ಮಾಡುವ ಯೋಗಿಗಳು ಸಹ ಹನುಮಂತನ ಮನಸ್ಸಿನಲ್ಲಿರುವ ಜಯ,ಶ್ರದ್ಧೆ ಮತ್ತು ವಿವಿಧ ಅಂಗಗಳ ತೀಕ್ಷ್ಣ ಗ್ರಹಿಕೆ ನಮಗೂ ಬರಲಿ ಎಂದು ಪೂಜಿಸುತ್ತಾರೆ, ಭಕ್ತರು ತಮ್ಮ ಕೊನೆಯಿಲ್ಲದ ಭಕ್ತಿಯಿಂದ ಹನುಮಂತನನ್ನು ಪೂಜಿಸುತ್ತಾರೆ.ಕೆಲಸಗಾರರು, ಕೂಲಿ ಕಾರ್ಮಿಕರು ಸಹ ಹನುಮಂತನನ್ನು ಪೂಜಿಸುತ್ತಾರೆ. ಹನುಮಂತರ ಕಠಿಣ ಪರಿಶ್ರಮ, ಕೆಲಸದಲ್ಲಿ ಯಶಸ್ಸು, ಅವರ ಬುದ್ದಿವಂತಿಕೆ,ದಣಿವರಿಯದ ಪ್ರಯತ್ನಗಳು ಜನಗಳನ್ನು ಪ್ರೇರೇಪಿಸುತ್ತಿದ್ದವು,ಆದ್ದರಿಂದ ಎಲ್ಲರೂ ಸಹ ಪೂಜಿಸುತ್ತಿದ್ದರು.
“ರಾಮನು ಹನುಮನನ್ನು ಕೇಳಿದ,ನೀನು ನನ್ನನ್ನು ಹೇಗೆ ನೋಡುತ್ತೀಯ” ಎಂದು. ಹನುಮಂತನು ಹೇಳುತ್ತಾನೆ “ ನನ್ನನ್ನೇ ನಾನು ನೋಡಿಕೊಂಡಾಗ ನಾನು ನಿಮ್ಮ ನಿಷ್ಠಾವಂತ ಸೇವಕ (ದಾಸ) .ನಾನು ನನ್ನ ಆತ್ಮವನ್ನು ನೋಡಿಕೊಂಡಾಗ ನನಗೆ ತಿಳಿಯುತ್ತದೆ ನಾನು ನಿಮ್ಮ ಶಾಶ್ವತ ಬೆಳಕು ಎಂದು ,ನಾನು ಸತ್ಯವನ್ನು ನೋಡಿದಾಗ ನೀವು ಮತ್ತು ನಾನು ಇಬ್ಬರೂ ದೇವರೇ ,ನಾವಿಬ್ಬರೂ ಒಂದೇ” ಎಂದನು.
ಇದಕ್ಕೆ ಉತ್ತರ ಹನುಮಂತನು ಬಹಿರಂಗಪಡಿಸಿರುವುದು ಹೀಗೆ ಹನುಮಂತನಿಗೆ ಅಧ್ಯಾತ್ಮಿಕತೆಯ ಪ್ರಯಾಣ ದ್ವೈತ ಮತ್ತು ಅದ್ವೈತದಿಂದ ಆರಂಭವಾಯಿತು. ಆರಂಭದಲ್ಲಿ ಅನ್ವೇಷಕನು ಎರಡು ಪ್ರಕಾರದ ಮನಸ್ಸನ್ನು ಹೊಂದಿರುತ್ತಾನೆ.ಅವನೇ ದೇವರು ಅಥವಾ ಅವನು ದೇವರ ಸೇವಕ,ಸ್ನೇಹಿತ ಅಥವಾ ಮಗು ಎಂದು ಅರ್ಥ ಮಾಡಿಕೊಳ್ಳುತ್ತಾನೆ.
ಹನುಮಂತನು ತನ್ನನ್ನು ತಾನೇ ದೇವರ ಸೇವಕ ಅಂದುಕೊಡಿದ್ದ. ನಂತರ ಅನ್ವೇಷಕನು ವಿಶಿಷ್ಟಾದ್ವೈತ ಮನಸ್ಸನ್ನು ಭಾವಿಸುತ್ತಾ (ನಾನು ನೀನೇ). ಆಗ ನಾನು ಸಹ ದೇವರ ಅಂಶವೇ ಎಂದು ಭಾವಿಸುತ್ತೇನೆ.ಈ ಭಕ್ತಿಯಿಂದ ಹನುಮಂತನಿಗೆ ಅರಿವಾಗುತ್ತದೆ ದೇವರು ಮತ್ತು ಅವನು ಸತತವಾಗಿ ಜೊತೆ ಜೊತೆಗೆ ಒಂದಾಗಿ ಇರುತ್ತಾರೆ.
ಕೊನೆಯದಾಗಿ ಅನ್ವೇಷಕನು ಮನಸ್ಸಿನಲ್ಲಿರುವ ಅಹಂ ಅನ್ನು ನಿರಾಕರಿಸುತ್ತಾನೆ ಕೊನೆಯ ಹಂತದಲ್ಲಿ ಅರಿವಾಗುತ್ತದೆ.ನಾನು ಭ್ರಮೆಯಲ್ಲಿದ್ದೇನೆ, ಎಲ್ಲರೂ ಬ್ರಾಹ್ಮಣರೇ, ಶುದ್ದ ಪ್ರಜ್ಞೆ ಉಳ್ಳವರೇ.ಆಗ ದೇವರು ಮತ್ತು ನನ್ನಲ್ಲಿ ಯಾವುದೇ ಅಂತರ ಇರುವುದಿಲ್ಲ ಹಾಗೆ ಅದ್ವೈತ ಹಂತವನ್ನು ತಲುಪುತ್ತಾನೆ. ಎಲ್ಲಿಯೂ ದೇವರಿಗೆ ಯಾವ ಆಕಾರವು ಇಲ್ಲ ಎಂದು ಅರಿವಾಗುತ್ತದೆ .ದೇವರ ರೂಪ ನಿಮ್ಮ ನಿರ್ಲ್ಯಕ್ಷದಿಂದ ಕಾಣಿಸುತ್ತದೆ. ಈ ಲೋಕವು ನೋಡುವವರ ಕಣ್ಣಿನಲ್ಲಿದೆ.ಮನಸ್ಸು ಕರಗಿದಾಗ ಲೋಕವು ಸಹ ಕರಗಿ ಹೋಗುತ್ತದೆ.
ಹನುಮಂತನನ್ನು ಎಲ್ಲರೂ ಆರಾಧಿಸುತ್ತಾರೆ ಯಾಕೆಂದರೆ ಅವನ ದ್ವೈತ ಸಿದ್ಧಾಂತವನ್ನು, ವಿಶಿಷ್ಟಾದ್ವೈತ ಮತ್ತು ಆದ್ವೈತ ಪರಿಸ್ಥಿತಿಗಳಿಗೆ ಅನುಗುಣವಾಗಿ ಯಾವುದನ್ನು ಬೇಕಾದರೂ ಹನುಮಂತನು ಹೆಮ್ಮೆಯಿಂದ ಪ್ರದರ್ಶಿಸುತ್ತಾರೆ.
ಹನುಮಂತನು ಅವನ ಸಾಧನೆಗಳಿಗೆ ಮಾತ್ರ ಶ್ಲಾಘನೆಯನ್ನು ಗಳಿಸಿಲ್ಲ . ರಾಮನು ಏನು ಹೇಳಿದರು ನಾನು ಬಹಳ ಖುಷಿಯಾಗಿದ್ದೇನೆ,ಅವರ ಮಗನಂತೆ ನಾನು ನಮ್ರತೆಯಿಂದ ತಲೆ ತಗ್ಗಿಸುತ್ತೇನೆ. ಈ ಸಮುದ್ರವನ್ನು ದಾಟಿ ಲಂಕೆಗೆ ಬೆಂಕಿ ಇಡುವುದು ,ಇದೆಲ್ಲ ಹೇಗೆ ಸಾಧ್ಯವಾಯಿತು ನಿನಗೆ ಎಂದು ಶ್ರೀ ರಾಮನು ಕೇಳಿದಾಗ , ಅದಕ್ಕೆ ಹನುಮಂತನು ಹೀಗೆ ಉತ್ತರಿಸಿದ “ರಾಮನ ಹೆಸರು,ದಯೆ,ಭಕ್ತಿಯಿಂದ ಮಾತ್ರ ಎಲ್ಲವೂ ಸಾಧ್ಯವಾಯಿತು”ಎಂದ. ಹನುಮಂತನ ಜನಪ್ರಿಯತೆ ಎಷ್ಟು ಬಗೆಯಲ್ಲಿ ನಮಗೆ ಕಾಣಸಿಗುತ್ತದೆ ಎಂದರೆ , ಶ್ರೀ ರಾಮ,ಲಕ್ಷ್ಮಣ,ಸೀತಾ ಮಾತೆಯ ಮುಂದೆ ಮೊಣಕಾಲೂರಿ ಎರಡೂ ಕೈ ಜೇಡಿಸಿ ನಮಸ್ಕರಿಸುವುದು , ಅಕಾಶ ಮಾರ್ಗದಲ್ಲಿ ಹಾರಿ ಇಡೀ ಸಂಜೀವಿನಿ ಪರ್ವತವನ್ನೇ ತನ್ನ ಒಂದೇ ಒಂದು ಕೈಯಲ್ಲಿ ಎತ್ತಿಕೊಂಡು ಬಂದದ್ದು, ಕಾಲುಗಳನ್ನು ಮಡಿಚಿ ಕುಳಿತು ದ್ಯಾನ ಮಾಡುವುದು.
ಐದು ಮುಖದ ಹನುಮಂತನು ಎಲ್ಲಾ ಐದು ದಿಕ್ಕುಗಳಿಂದ ಬರುವ ದುಷ್ಟ ಶಕ್ತಿಗಳನ್ನು ನಾಶಪಡಿಸುತ್ತಾನೆ ಎನ್ನುವ ನಂಬಿಕೆ ಇದೆ. ಹನುಮಾನ್ ಈ ಪದದ ಅರ್ಥ “ಹನು ಎಂದರೆ ದವಡೆ , ಮಾನ್ ಎಂದರೆ ಮುರಿದ ಅಥವಾ ಪ್ರಮುಖ ಎಂದರ್ಥ” .ಹನು ಎಂದರೆ ಕೊಲ್ಲುವುದು ಸಹ , ಮಾನ್ ಎಂದರೆ ಹೆಮ್ಮೆಯ. ಆದ್ದರಿಂದ ಹನುಮಾನ್ ಎಂದರೆ ಪ್ರಖ್ಯಾತ ಅಥವಾ ಮುರಿದು ಹೋಗಿರುವ ದವಡೆ. ಅಹಂಕಾರ ಮತ್ತು ಗರ್ವವನ್ನು ನಾಶ ಪಡಿಸುತ್ತಾರೆ ಎಂದರ್ಥ. ದೈಹಿಕವಾಗಿ ಹನುಮಂತನ ಗದ್ದವು ಸೂರ್ಯನನ್ನು ಹಣ್ಣೆಂದು ನುಂಗಿದಾಗ ಇಂದ್ರನು ತನ್ನ ಹನುಮಂತನ ಗದ್ದಕ್ಕೆ ಹೊಡೆದ ಆಗ ಅವನ ಗದ್ದವು ಮುರಿದು ಹೋಯಿತು ಸೂರ್ಯನು ಕೂಡ ಬಾಯಿಂದ ಹೊರಗೆ ಬಂದನು. ಹನುಮಂತನ ದೊಡ್ಡ ಸಾಧನೆ ಎಂದರೆ ಆಧ್ಯಾತ್ಮಿಕತೆ,ಹನುಮನಲ್ಲಿ ನಾನು ಎನ್ನುವ ಅಹಂ ಇರಲಿಲ್ಲ ಆದ್ದರಿಂದಲೇ ಅವನು ಉತ್ತಮ ಕರ್ಮ, ಭಕ್ತಿ, ಜ್ಞಾನ ಯೋಗಿ ಎಂದು ಅನಿಸಿಕೊಂಡ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
