ಮಹಿಳೆಯರಲ್ಲಿ ಕಾಣಿಸುವ ಮೇಲ್ದುಟಿಯ ಮೇಲ್ಬಾಗದ ಸಣ್ಣ ಕೂದಲುಗಳನ್ನು ತೆಗೆಯಲು 9 ಸೂತ್ರಗಳು
ಸಾಮಾನ್ಯವಾಗಿ ಮಹಿಳೆಯರ ಮೇಲ್ದುಟಿಯ ಮೇಲ್ಬಾಗದಲ್ಲಿ ಇರುವ ಸಣ್ಣ ಸಣ್ಣ ಕೂದಲುಗಳು ಎದ್ದು ಕಾಣಿಸುವುದರಿಂದ ಅವರ ಮುಖದ ಸೌಂದರ್ಯವು ಕಡಿಮೆ ಆದಂತೆ ಅನಿಸುತ್ತದೆ.ಅವರಲ್ಲಿ ಇದು ಕಿರಿ ಕಿರಿಯನ್ನು ಉಂಟುಮಾಡುತ್ತದೆ.ಈ ಸಣ್ಣ ಕೂದಲುಗಳ ಬೆಳವಣಿಗೆಗೆ ಮುಖ್ಯವಾದ ಕಾರಣವೆಂದರೆ ಪುರುಷ ಹಾರ್ಮೋನುಗಳು.ಗಂಡು ಹಾರ್ಮೋನುಗಳು ಮಹಿಳೆಯರಲ್ಲಿ ಅತಿಹೆಚ್ಚಾಗಿ ಉತ್ಪತ್ತಿಯಾದಾಗ ಮೇಲ್ದುಟಿಯ ಮೇಲ್ಬಾಗದಲ್ಲಿ ಸಣ್ಣ ಸಣ್ಣ ಕೂದಲುಗಳು ಬೆಳವಣಿಗೆಯಾಗುತ್ತವೆ.ಈ ಕೂದಲುಗಳನ್ನ ಕೆಲವರು ಬ್ಯುಟಿಪಾರ್ಲರ್ ನಲ್ಲಿ ತೇಗಿಸುತ್ತಾರೆ ಹೀಗೆ ತೇಗಿಸುವಾಗ ತುಂಬ ನೋವಾಗುತ್ತದೆಯೆಂದು ಇನ್ನು ಕೆಲವರು ಅದನ್ನು ತೆಗೆಸುವ ಸೋಜಿಗೆ ಹೋಗುವುದೇ ಇಲ್ಲ.ಆದರೆ ಇಂತಹ ಕೂದಲುಗಳನ್ನು ಈ ಕೆಳಗಿನ ಮಾರ್ಗಗಳನ್ನು ಅನುಸರಿಸುವುದರ ಮೂಲಕ ಸುಲಭವಾಗಿ ತೆಗೆಯಬಹುದು.
1 .ಹಾಲು ಮತ್ತು ಅರಿಶಿನ:
ಹಾಲು ಮತ್ತು ಅಡುಗೆ ಅರಿಶಿಣವನ್ನು ತಲಾ 1 ಟೀ ಚಮಚೆಯಷ್ಟು ತೆಗೆದುಕೊಂಡು ಎರಡನ್ನು ಮಿಶ್ರಣ ಮಾಡಿ ಮೇಲ್ದುಟಿಯ ಮೇಲ್ಬಾಗಕ್ಕೆ ಹಚ್ಚಬೇಕು. ಅದು ಒಣಗಿದ ನಂತರ ತಣ್ಣೀರಿನಿಂದ ತೊಳೆಯಬೇಕು.ಈ ಮಾರ್ಗ ಅನುಸರಿಸುವುದರ ಮೂಲಕ ಮೇಲ್ದುಟಿಯ ಮೇಲ್ಬಾಗದ ಸಣ್ಣ ಕೂದಲುಗಳನ್ನು ತೆಗೆಯಬಹುದು.
2 .ಅರಿಶಿನ ಮತ್ತು ನೀರು:
ಅರಿಶಿನ ಮತ್ತು ನೀರನ್ನು ಸಮಪ್ರಮಾಣದಲ್ಲಿ 2 ಟೀ ಚಮಚೆಯಷ್ಟು ತೆಗೆದುಕೊಂಡು ಎರಡನ್ನು ಮಿಶ್ರಣ ಮಾಡಿ ಮಿಶ್ರಣವನ್ನು ಮೇಲ್ದುಟಿಯ ಮೇಲ್ಬಾಗಕ್ಕೆ ಹಚ್ಚಿ 30 ನಿಮಿಷದವರೆಗೆ ಒಣಗಿಸಬೇಕು.ಒಣಗಿದ ನಂತರ ಚನ್ನಾಗಿ ಉಜ್ಜಬೇಕು ನಂತರ ತಣ್ಣೀರಿನಿಂದ ತೊಳೆದುಕೊಳ್ಳುವುದರ ಮೂಲಕವೂ ಸಹ ಈ ಸಣ್ಣ ಸಣ್ಣ ಕೂದಲುಗಳನ್ನು ತಗೆಯಬಹುದು.
3 .ಮೊಟ್ಟೆಯ ಬಿಳಿ,ಸಕ್ಕರೆ ಮತ್ತು ಮುಸುಕಿನ ಜೋಳದ ಹಿಟ್ಟು(corn flour):
1 ಮೊಟ್ಟೆಯ ಬಿಳಿಭಾಗದೊಂದಿದೆ ಸಕ್ಕರೆ ಹಾಗು ಜೋಳದ ಹಿಟ್ಟನ್ನು ಸಮಪ್ರಮಾಣದಲ್ಲಿ ತಲಾ 1 ಟೀ ಚಮಚೆಯಷ್ಟು ತೆಗೆದುಕೊಂಡು ಮೂರನ್ನು ಅಂಟಿನ ರೂಪಕ್ಕೆ ಬರುವ ವರೆಗೂ ಮಿಶ್ರಣ ಮಾಡಬೇಕು.ನಂತರ ಆ ಅಂಟಿನ ಮಿಶ್ರಣವನ್ನು ಮೇಲ್ದುಟಿಯ ಮೇಲ್ಭಾಗಕ್ಕೆ ಹಚ್ಚಬೇಕು ಹಾಗು ಹಚ್ಚಿದನಂತರ ಅದನ್ನು ಅರ್ಧ ಘಂಟೆ ಒಣಗಿಸಬೇಕು ತದನಂತರ ಸಿಪ್ಪೆಯ ರೂಪಕ್ಕೆ ಬಂದಮೇಲೆ ಮೇಲ್ದುಟಿಯ ಮೇಲ್ಭಾಗವನ್ನು ತಣ್ಣೀರಿನಿಂದ ತೊಳೆದುಕೊಳ್ಳಬೇಕು.ಹೀಗೆ ಮಾಡುವುದರ ಮೂಲಕ ಮೇಲ್ದುಟಿಯ ಮೇಲ್ಭಗದ ಸಣ್ಣ ಕೂದಲುಗಳನ್ನು ತೆಗೆಯಬೇಕು
4.ಬೀಟ್ರೂಟ್ ಅಥವಾ ಕ್ಯಾರೆಟ್:
ಹಸಿ ಬೀಟ್ರೂಟ್ ಅಥವಾ ಕ್ಯಾರೆಟ್ ನ ರಸದ ಜೊತೆ ಹಸಿ ತಾಜಾ ಹಾಲನ್ನು ಮಿಶ್ರಣ ಮಾಡಿ ಮೇಲ್ತುಟಿಯ ಮೇಲ್ಭಾಗಕ್ಕೆ ಉಜ್ಜುವುದರಮೂಲಕವೂ ಸಹ ಮೇಲ್ದುಟಿಯ ಮೇಲ್ಭಾಗದ ಸಣ್ಣ ಸಣ್ಣ ಕೂದಲುಗಳನ್ನು ಕ್ರಮೇಣ ತೆಗೆಯಬಹುದು.
5.ಸಕ್ಕರೆ ಮತ್ತು ನಿಂಬೆ:
ಸಕ್ಕರೆ ಮತ್ತು ನಿಂಬೆ ಹಣ್ಣಿನ ರಸವನ್ನು ಸಮ ಪ್ರಮಾಣದಲ್ಲಿ ತಲಾ ಒಂದು ಟೀ ಚಮಚೆಯಷ್ಟು ತೆಗೆದುಕೊಂಡು ಚನ್ನಾಗಿ ಮಿಶ್ರಣ ಮಾಡಿ.ನಂತರ ಮಿಶ್ರಣವನ್ನು ನಿಧಾನವಾಗಿ ಹಚ್ಚಿ ಇಪ್ಪತ್ತು ನಿಮಿಷವರೆಗೆ ಒಣಗಿಸಿ ನಂತರ ತಣ್ಣೀರಿನಿಂದ ತೊಳೆದುಕೊಳ್ಳಿ.ಹೀಗೆ ಎರಡರಿಂದ ಮೂರು ಬಾರಿ ಮಾಡಿದರೆ ಕ್ರಮೇಣವಾಗಿ ಅನಾವಶ್ಯಕ ಕೂದಲುಗಳು ನಾಶವಾಗುತ್ತವೆ.
6.ಜೇನು ಮತ್ತು ಅರಿಶಿನ:
ಜೇನು ಮತ್ತು ಅರಿಶಿನವನ್ನು ಸಮ ಪ್ರಮಾಣದಲ್ಲಿ ಒಂದು ಟೀ ಚಮಚೆಯಷ್ಟು ತೆಗೆದುಕ್ಕೊಂಡು ಎರಡನ್ನು ಮಿಶ್ರಣ ಮಾಡಿ ತುಟಿಯ ಮೇಲ್ಭಾಗಕ್ಕೆ
ನಿಧಾನಕ್ಕೆ ಹಚ್ಚುವುದರ ಮೂಲಕ ಕ್ರಮೇಣ ಕೂದಲುಗಳನ್ನು ಕಡಿಮೆ ಮಾಡಿಕೊಳ್ಳಬಹುದು.
7.ಆಲೂಗೆಡ್ಡೆಯ ರಸ:
ರಾತ್ರಿ ಮಲಗುವ ಮುನ್ನ ಒಂದು ಟೀ ಚಮಚೆಯಷ್ಟು ಆಲೂಗೆಡ್ಡೆಯ ರಸವನ್ನು ಮೇಲ್ದುಟಿಯ ಮೇಲ್ಭಾಗಕ್ಕೆ ಹಚ್ಚಿಕ್ಕೊಂಡು ಬೆಳಿಗ್ಗೆ ಎದ್ದ ನಂತರ ಸ್ವಲ್ಪ ಪ್ರಮಾಣದ ಬೆಚ್ಚಗಿನ ನೀರಿಂದ ತೊಳೆದುಕೊಳ್ಳುವುದರ ಮಾಲಕ ಕ್ರಮೇಣ ಮೇಲ್ದುಟಿಯ ಮೇಲ್ಭಾಗದ ಸಣ್ಣ ಸಣ್ಣ ಕೂದಲುಗಳನ್ನು ತೆಗೆಯಬಹುದು
8.ಅರಿಶಿನ ಮತ್ತು ಮೊಟ್ಟೆಯ ಬಿಳಿ:
ಅರಿಶಿನ ಮತ್ತು ಮೊಟ್ಟೆಯ ಬಿಳಿಯ ಭಾಗವನ್ನು ಒಂದೇ ಪ್ರಮಾಣದಲ್ಲಿ ಮಿಶ್ರಣ ಮಾಡಿ ಮೇಲ್ದುಟಿಯ ಮೇಲ್ಭಾಗಕ್ಕೆ ಹಚ್ಚಬೇಕು.ಅದು ಒಣಗುವವರೆಗೂ ಬಿಟ್ಟು ನಂತರ ಸದು ಸಿಪ್ಪೆ ರೂಪಕ್ಕೆ ಬಂದಮೇಲೆ ತಣ್ಣೀರಿನಿಂದ ತೊಳೆಯಬೇಕು.ಹೀಗೆ ಎರಡು ಮೂರು ಭಾರಿ ಮಾಡಿದರೆ ಮೇಲ್ದುಟಿಯ ಮೆಲ್ಭಾಗದ ಸಣ್ಣ ಸಣ್ಣ ಕೂದಲುಗಳ್ಳನ್ನು ತೆಗೆಯಬಹುದು.
9.ಜೇನು ಮತ್ತು ನಿಂಬೆ ರಸ:
ಒಂದು ಬಟ್ಟಲಿನಲ್ಲಿ ಒಂದು ಚಮಚೆಯಷ್ಟು ಜೇನು ಮತ್ತು ಎರಡು ಚಮಚೆಯಷ್ಟು ನಿಂಬೆ ರಸವನ್ನು ತೆಗೆದುಕ್ಕೊಂಡು ಅದನ್ನು ಚನ್ನಾಗಿ ಮಿಶ್ರಣ ಮಾಡಿ ನಂತರ ಅದನ್ನು ಮೇಲ್ದುಟಿಯ ಮೇಲ್ಭಾಗಕ್ಕೆ ಹಚ್ಚಿ ನಂತರ ಸುಮಾರು ಇಪ್ಪತ್ತು ನಿಮಿಷದವರೆಗೆ ಒಣಗಿಸಿ ನಂತರ ತಣ್ಣೀರಿನಿಂದ ತೊಳೆದು ಕೊಳ್ಳುವುದರ ಮೂಲಕ ಮೇಲ್ದುಟಿಯ ಮೇಲ್ಭಾಗದ ಸಣ್ಣ ಸಣ್ಣ ಕೂದಲುಗಳನ್ನು ತೆಗೆಯಬಹುದು.
ಅನಾವಶ್ಯಕವಾದ ಕೂದಲುಗಳನ್ನು ತೆಗೆಯಲು ರಾಸಾಯನಿಕ ಔಷಧಿಗಳ ಮೊರೆ ಹೋಗುವಬದಲು ನೈಸರ್ಗಿಕ ಮಾರ್ಗಗಳನ್ನು ಅನುಸರಿಸಿದರೆ ಆರೋಗ್ಯ ಮತ್ತು ತ್ವಚೆ ಎರಡಕ್ಕೂ ಬಹಳ ಒಳ್ಳೆಯದು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
