ಮಹಿಳೆಯರಲ್ಲಿ ಬಂಜೆತನದ ನಿವಾರಣೆಗೆ ಮನೆಮದ್ದು
ಆಧುನಿಕ ಜಗತ್ತಿನ ಜೀವನಶೈಲಿಯಲ್ಲಿ ಮಹಿಳೆಯರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಅದರಲ್ಲಿ ಬಂಜೆತನ ಎಂಬುದು ಸಹಾ ಒಂದು ಪ್ರಮುಖವಾದ ಸಮಸ್ಯೆಯಾಗಿದೆ.ಮಹಿಳೆಯರಲ್ಲಿ ಬಂಜೆತನಕ್ಕೆ ಪ್ರಮುಖವಾದ ಕಾರಣಗಳೆಂದರೆ ಅವು
1.ಅತಿಯಾದ ಮದ್ಯಪಾನ ಮತ್ತು ಅತಿಯಾದ ಧೂಮಪಾನ
2.ವಯಸ್ಸಾಗಿರುವಿಕೆ
3.ಸ್ಥೂಲಕಾಯತೆ(ಅತಿಯಾದ ಬೊಜ್ಜು )
4.ವಿಪರೀತವಾದ ಒತ್ತಡ
5.ಅನಿಯಮಿತ ಮತ್ತು ನೋವಿನ ಋತುಚಕ್ರ
6.ಕಳಪೆ ಆಹಾರ
7.ತೀವ್ರ ದೈಹಿಕ ತರಬೇತಿ
ಮಹಿಳೆಯರಲ್ಲಿ ಬಂಜೆತನವನ್ನು ಸುಮಾರು ಮಾರ್ಗಗಳ ಮೂಲಕ ನಿವಾರಣೆ ಮಾಡಿಕೊಳ್ಳಬಹುದು ಅವುಗಳಲ್ಲಿ ಆಯುರ್ವೇದ,ವೈದ್ಯರ ಚಿಕೆತ್ಸೆ,ಮನೆಮದ್ದು,ಮುಂತಾದವುಗಳು ಇವೆ.
ಮಹಿಳೆಯರಲ್ಲಿ ಬಂಜೆತನವನ್ನು ನಿವಾರಣೆ ಮಾಡಲು ಇರುವ ಕೆಲವು ಮನೆ ಮದ್ದುಗಳು ಈ ಕೆಳಗಿನಂತಿವೆ:
1).ಅಶ್ವಗಂಧ:
ಒಂದು ಟೇಬಲ್ ಚಮಚೆಯಷ್ಟು ಅಶ್ವಗಂಧವನ್ನು ಬೆಚ್ಚಗಿನ ಬಿಸಿನೀರಿನಲ್ಲಿ ಬೆರೆಸಿ ದಿನಕ್ಕೆ ಎರಡು ಬಾರಿ ಕುಡಿಯುವುದರಿಂದ ಒತ್ತಡ ಕಡಿಮೆಯಾಗುತ್ತದೆ ಹಾಗು ಮಹಿಳೆಯರಲ್ಲಿ ಫಲವತ್ತತೆ ಹೆಚ್ಚಿಸುತ್ತದೆ.
2).ದಾಳಿಂಬೆ:
ನುಣ್ಣಗೆ ಪುಡಿಮಾಡಿದ ದಾಳಿಂಬೆ ಹಣ್ಣಿನ ಬೀಜ ಮತ್ತು ಸಿಪ್ಪೆಯನ್ನು ಮಿಶ್ರಣ ಮಾಡಿ ಗಾಳಿ ಆಡದ ಡಬ್ಬಿಯಲ್ಲಿ ಶೇಖರಣೆ ಮಾಡಿಕೊಂಡು.ದಿನಕ್ಕೆ ಮೂರು ಬಾರಿ ಈ ಮಿಶ್ರಣವನ್ನು ಬಿಸಿನೀರಿನೊಂದಿಗೆ ಒಂದು ವಾರದ ಮಟ್ಟಿಗೆ ಸೇವಿಸುವುದರ ಮೂಲಕ ಮಹಿಳೆಯರು ಬಂಜೆತಕ್ಕೆ ಪರಿಹಾರ ಕಂಡು ಕೊಳ್ಳಬಹುದು.
3).ದಾಲ್ಚಿನ್ನಿ:
ದಾಲ್ಚಿನ್ನಿಯ ಪುಡಿಯನ್ನು ಬೆಚ್ಚಗೆಯ ನೀರಿನಲ್ಲಿ ಕಲಸಿ ದಿನಕ್ಕೆ ಒಂದು ಬಾರಿ ಒಂದೆರಡು ತಿಂಗಳುಗಳ ಕಾಲ ಸೇವಿಸುವುದರಿಂದ ಮಹಿಳೆಯರು ಬಂಜೆತಕ್ಕೆ ಪರಿಹಾರ ಕಂಡುಕೊಳ್ಳಬಹುದು.
4).ಚಾಸ್ಟ್ರಿಬೆರಿ:
ಪುಡಿಮಾಡಿದ ಚಾಸ್ಟ್ರಿಬೆರಿಯ ಬೀಜದ ಪುಡಿಯನ್ನು ಒಂದು ಚಮಚದಷ್ಟು ತೆಗೆದುಕೊಂಡು ಕುದಿಯುತ್ತಿರುವ ನೀರಿನೊಂದಿಗೆ ಮಿಶ್ರಣ ಮಾಡಿಕೊಂಡು ಕಲಸಿ ಹತ್ತು ನಿಮಿಷಗಳಕಾಲ ಕುದಿಸಿ ನಂತರ ಅದನ್ನು ಆರಿಸಿ ದಿನಕ್ಕೆ ಎರಡು ಬಾರಿ ಈ ರೀತಿ ಸೇವಿಸಿದರೆ ಮಹಿಳೆಯರು ಬಂಜೆತಕ್ಕೆ ಪರಿಹಾರ ಕಂಡುಕೊಳ್ಳಬಹುದು.
5).ವಿಟಮಿನ್ ‘ಡಿ’:
ಆಹಾರದಲ್ಲಿ ವಿಟಮಿನ್ ‘ಡಿ’ ಹೆಚ್ಚಾಗಿರುವ ಪದಾರ್ತಗಳನ್ನು ಸೇವಿಸಬೇಕು ಉದಾ:ಮೊಟ್ಟೆ,ಮಾಂಸ,ಗಿಣ್ಣು,ಇತ್ಯಾದಿ
ಮುಂಜಾನೆ ಸೂರ್ಯನ ಕಿರಣದಲ್ಲಿ ಸುಮಾರು ಅರ್ಧ ಗಂಟೆಯಷ್ಟು ಕಾಲ ವ್ಯಾಯಾಮ ಮಾಡಿ ಬಂಜೆತನಕ್ಕೆ ಪರಿಹಾರ ಕಂಡುಕೊಳ್ಳಬಹುದು.
6).ಆಲದಮರದ ಬೇರು:
ಆಲದಮರದ ಎಳೆಯ ಬೇರನ್ನು ಕೆಲವು ದಿನಗಳ ಕಾಲ ಸುಡು ಬಿಸಿಲಿನಲ್ಲಿ ಒಣಗಿಸಿ.ಒಣಗಿದ ಬೇರನ್ನು ನುಣ್ಣಗೆ ಪುಡಿಮಾಡಿ ಗಾಳಿ ಆಡದ ಡಬ್ಬಿಯಲ್ಲಿ ಶೇಖರಣೆ ಮಾಡಿಟ್ಟುಕ್ಕೊಂಡು ಹಾಲಿನ ಜೊತೆ ದಿನಕ್ಕೆ ಎರಡು ಬಾರಿ ಆಲದ ಮರದ ಬೇರಿನ ಪುಡಿಯನ್ನು ಬೆರೆಸಿ ಕುಡಿದರೆ ಮಹಿಳೆಯರು ಬಂಜೆತಕ್ಕೆ ಪರಿಹಾರ ಕಂಡುಕೊಳ್ಳಬಹುದು.
7).ಖರ್ಜೂರ:
ಖರ್ಜೂರದಲ್ಲಿ ಹಲವಾರು ರೀತಿಯ ಪೋಷಕಾಂಶಗಳು ಇವೆ. ಇದರಲ್ಲಿ ಕಬ್ಬಿಣ, ವಿಟಮಿನ್ ಬಿ, ಎ ಮತ್ತು ಇ ಇದೆ. ಇದು ಗರ್ಭಧಾರಣೆಗೆ ಬೇಕಾಗಿರುವ ಕೆಲವೊಂದು ಪ್ರಮುಖ ಪೋಷಕಾಂಶಗಳನ್ನು ಒದಗಿಸುತ್ತದೆ. ದಿನವು 3-6 ಖರ್ಜೂರಗಳನ್ನು ಸೇವಿಸಿ.
8).ಗೋಧಿ ಹುಲ್ಲಿನ ರಸ.
ಕರುಳನ್ನು ಆವಾಗಾವಾಗ ಸ್ವಚ್ಛ ಮಾಡುತ್ತಾ ಇರಬೇಕು. ಇದಕ್ಕಾಗಿ ಗೋಧಿ ಹುಲ್ಲಿನ ರಸವನ್ನು ಕುಡಿಯಿರಿ.ಇದು ತುಂಬಾ ಪರಿಣಾಮಕಾರಿ
ಈ ಮೇಲೆ ಕೊಟ್ಟಿರುವ ಸಲಹೆಗಳನ್ನು ನಿಮ್ಮ ಫಲವತ್ತತೆಯನ್ನು ಹೆಚ್ಚಿಸಿಕೊಳ್ಳಲು ವೈದ್ಯರ ಸಲಹೆಗಳನ್ನು ಪಡೆದು ಅನುಸರಿಸಿ ಪ್ರಯೋಜನ ಪಡೆದುಕೊಳ್ಳಿ .
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
