ಈ ಮಂತ್ರವನ್ನು ಹೇಳಿಕೊಂಡರೆ ಸಂಪತ್ತು,ಸಮೃದ್ಧಿ,ಬುದ್ಧಿಶಕ್ತಿ ಹೆಚ್ಚುವುದು ಶತಸಿದ್ದ.
“ಮನಯೇವ ಮನುಷ್ಯಾಣಾಂ, ಕಾರಣಯೇ ಬಂಧನ,ಮೋಕ್ಷಾಯಃ” ಎಂದಿವೆ ಸ್ಮೃತಿ ವಾಕ್ಯಗಳು.ಅಂದರೆ ಬಂಧನದಿಂದ ಬಿಡಿಸಿಕೊಳ್ಳುವುದಕ್ಕೆ ಹಾಗೂ ಮೋಕ್ಷ ಪಡೆಯುವುದಕ್ಕೆ ಮನಸ್ಸೇ ಮುಖ್ಯ ಕಾರಣವಾಗುತ್ತದೆ. ಸಂಪತ್ತು,ಬುದ್ಧಿವಂತಿಕೆ ಹೆಚ್ಚಾಗಬೇಕೆಂದರೆ ಮನಸ್ಸು ನಿರ್ಮಲವಾಗಿರುವುದು ಅತೀ ಮುಖ್ಯವಾಗುತ್ತದೆ.
ಅಂತೆಯೇ ಮನಸ್ಸನ್ನು ನಿರ್ಮಲವಾಗಿ ಇಟ್ಟುಕ್ಕೊಳ್ಳಲು ಸಹಕಾರಿಯಾಗುವಂತೆ ಸನಾತನ ಧರ್ಮದಲ್ಲಿ ಋಷಿ ಮುನಿಗಳು ಹಲವು ಮಂತ್ರಗಳನ್ನು ಕೊಟ್ಟಿದ್ದಾರೆ.
ಮನಸ್ಸನ್ನು ನಿಗ್ರಹಿಸಿ ಬುದ್ಧಿವಂತಿಕೆ ಹೆಚ್ಚಿಸಿಕೊಳ್ಳುವುದಕ್ಕೆ ಬ್ರಹ್ಮರ್ಷಿ ವಿಶ್ವಾಮಿತ್ರರು ಗಾಯಿತ್ರಿ ಮಂತ್ರವನ್ನು ರಚಿಸಿದ್ದಾರೆ.ಇಪ್ಪತ್ನಾಲ್ಕು ಅಕ್ಷರಗಳ ಒಂದು ಛಂದಸ್ಸಿನ ಈ ಗಾಯಿತ್ರಿ ಮಂತ್ರಕ್ಕೆ ಒಂದು ಸಮನಾದ ಮಂತ್ರ ವೇದದಲ್ಲಿಯೇ ಮತ್ತೊಂದಿಲ್ಲ ಎನ್ನುತ್ತಾರೆ ಋಷಿಗಳು.
“ಬ್ರಹ್ಮ ದೇವರು ಮೂರು ವೇದದ ಸಾರವನ್ನು ಗಾಯಿತ್ರಿ ಮಂತ್ರದ ಮೂರು ಚರಣಗಳಲ್ಲಿ ತುಂಬಿಸಿಕೊಟ್ಟಿರುವರು” ,ಗಾಯಿತ್ರಿಯಿಂದ ಸರ್ವ ರೀತಿಯ ಸಿದ್ದಿ ಪ್ರಾಪ್ತಿಯಾಗುತ್ತದೆ .
ಎಲ್ಲಾ ಮಂತ್ರ, ಪೂಜೆ, ಪುನಸ್ಕಾರಾಗಳಿಗಿಂತಲೂ ಅತೀ ಎತ್ತರದಲ್ಲಿ ರಾರಾಜಿಸುವುದು ಗಾಯಿತ್ರಿ ಮಹಾಮಂತ್ರ .ಗಾಯಿತ್ರಿ ಮಂತ್ರವು ಮಹಾಮಂತ್ರ ಎನಿಸಿಕೊಂಡಿದೆ.
ಅರ್ಥ ವೇದದಲ್ಲಿ ಗಾಯಿತ್ರಿ ಮಂತ್ರವನ್ನು ಶಕ್ತಿ,ಧನ,ಸಂಪತ್ತು ಮತ್ತು ಬ್ರಹ್ಮ ತೇಜಸ್ಸನ್ನು ನೀಡುವ ಮಹಾಮಾತೆ ಎಂದು ಉಲ್ಲೇಖಿಸಿದ್ದಾರೆ.
ಇನ್ನೂ ಮಹಾಭಾರತವನ್ನು ರಚಿಸಿದ ವ್ಯಾಸ ಮಹರ್ಷಿಗಳೂ ಸಹ ಗಾಯಿತ್ರಿ ಮಂತ್ರವನ್ನು ಕೊಂಡಾಡಿದ್ದಾರೆ.ಗಾಯಿತ್ರಿಯನ್ನು ಪಕ್ವಾನ್ನ (ಮೃಷ್ಟಾನ್ನ) ಕ್ಕೆ ಹೋಲಿಕೆ ಮಾಡಿದ್ದಾರೆ.
ಗಾಯಿತ್ರಿಯು ಲೋಕಕ್ಕೆ ತಾಯಿ.ಪರಬ್ರಹ್ಮ ಸ್ವರೂಪ ಉಳ್ಳವಳು.ಶ್ರೇಷ್ಠ ಸಂಪತ್ತನ್ನು ಕೊಡುವವಳು,ಜಪಿಸಲು ಯೋಗ್ಯಳು,ಬ್ರಹ್ಮ ತೇಜಸ್ಸನ್ನು ಹೆಚ್ಚಿಸುವವಳು ಆಗಿದ್ದಾಳೆ.
ಗಾಯಿತ್ರಿ ಮಂತ್ರವು “ಓಂ ಭೂ ಭೂರ್ವ ಸ್ವಹ, ತತ್ಸ ವಿತುರ್ವರೇಣ್ಯಂ, ಭರ್ಗೋ ದೇವಸ್ಯ ಧೀಮಹಿ ಧೀಯೋ ಯೋನಃ ಪ್ರಚೋದಯಾತ್”.ಇದೇ ಗಾಯಿತ್ರಿ ಮಂತ್ರ.
ಈ ಗಾಯಿತ್ರಿ ಮಂತ್ರವನ್ನು ಜಪಿಸುವುದರಿಂದ ಏಕಾಗ್ರತೆ ಹೆಚ್ಚಲ್ಲಿದ್ದು,ಮನಸ್ಸನ್ನು ನಿಯಂತ್ರಿಸಿ ಇಷ್ಟಾರ್ಥಗಳನ್ನು ಸಿದ್ಧಿಸುವ ಮನೋಬಲ ಸಿದ್ಧಿಸುತ್ತದೆ. ಈ ಮೂಲಕ ಸಂಪತ್ತು ಬುದ್ದಿ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು.
ಸಂಪತ್ತಿನ ವೃದ್ಧಿಗಾಗಿ ಜಪಿಸಬೇಕಿರುವ ಮತ್ತೊಂದು ಮಂತ್ರವೆಂದರೆ ಅದು ವಿಷ್ಣುವಿನ ಮಂತ್ರ. ಶ್ರೀ ಮಹಾ ವಿಷ್ಣು ಸಂಪತ್ತಿನ ಅಧಿದೇವತೆ ಲಕ್ಷ್ಮೀ ದೇವಿಯ ಪತಿ.
ಲಕ್ಷ್ಮೀ ಪತಿಯ ಮಂತ್ರ “ ಓಂ ನಾರಾಯಣಾಯ ವಿದ್ಮಹೇ ವಾಸುದೇವಾಯ ಧೀಮಹಿ, ತನ್ನೋ ವಿಷ್ಣು ಪ್ರಚೋದಯಾತ್” .ಈ ಮಂತ್ರವನ್ನು ಜಪಿಸಿದರೆ ಸಂಪತ್ತು ವೃದ್ಧಿಸುತ್ತದೆ ಎಂಬ ನಂಬಿಕೆ ಇದೆ.
“ಓಂ ಮಹಾಲಕ್ಷ್ಮೀಐಚ ವಿದ್ಮಹೇ ವಿಷ್ಣು ಪತ್ನೀಚ ಧೀಮಹಿ ತನ್ನೋ ಲಕ್ಷ್ಮೀ ಪ್ರಚೋದಯಾತ್” ಎಂಬುದೂ ಸಹ ಲಕ್ಷ್ಮಿಯನ್ನು ಒಲಿಸಿಕೊಳ್ಳಲು ಇರುವ ಮಂತ್ರವಾಗಿದ್ದು.ಈ ಮಂತ್ರವನ್ನು ಜಪಿಸಿದರೂ ಸಹ ಸಂಪತ್ತು,ಸಂವೃದ್ಧಿ ಹೆಚ್ಚಲಿದೆ ಎಂಬ ದೃಢವಾದ ನಂಬಿಕೆ ಇದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
