fbpx
ಸಾಧನೆ

ದುಡ್ಡಿಲ್ಲದೆ ತನ್ನ ಕಿಡ್ನಿ ಮಾರಬೇಕೆಂದುಕೊಂಡಿದ್ದವನು ಕಂಪನಿ ಕಟ್ಟಿದ ಇನ್ನೊಬ್ಬ ತನ್ನ ಗಾಯವನ್ನೇ ಬಂಡವಾಳ ಮಾಡಿಕೊಂಡ ಇದು ಸೋತು ಗೆದ್ದವರ ಕಥೆಗಳು

ಸೋತರು ಜೀವನದಲ್ಲಿ ಗೆದ್ದ  ಸಾಧನೆಯ ಕಥೆ.

ಕಳೆದ ತಿಂಗಳಷ್ಟೇ ಎಸ್. ಎಸ್.ಎಸ್.ಎಲ್ .ಸಿ. ,ಪಿಯುಸಿ , ಫಲಿತಾಂಶ ಬಂದಿದೆ. ಹೆಚ್ವ್ಹು ಅಂಕ ಪಡೆದವರೇನೋ ವಿಜ್ಞಾನ ವಿಭಾಗ,ಇಂಜಿನಿಯರಿಂಗ್, ಮೆಡಿಕಲ್, ಎಂದು ದೊಡ್ಡ ದೊಡ್ಡ ಕಾಲೇಜು ಸೇರಿರುತ್ತಾರೆ. ಇತ್ತ ಕಡಿಮೆ ಅಂಕ ಪಡೆದವರು,ಅನುತ್ತೀರ್ಣರಾದವರು  ಜೀವನವೇ ಮುಗಿಯಿತು,ಹಾಳಾಯಿತಲ್ಲ ಎಂದು ತಲೆ ಮೇಲೆ ಕೈ ಹೊತ್ತು  ಕುಳಿತಿರುತ್ತಾರೆ. ಆದರೆ ಕೆಲವು ದಿನಗಳಿಂದ ಅಂತರ್ಜಾಲದಲ್ಲಿ ಒಂದು ಸುದ್ದಿ ಹರಿದಾಡುತ್ತಿತ್ತು . ಅದೆಷ್ಟು ಜನ ಗಮನಿಸಿದರೋ ಇಲ್ಲವೋ , ಗೊತ್ತಿಲ್ಲ.

ದೆಹಲಿ ನಿವಾಸಿ 26 ವರ್ಷದ ವೈಭವ ಝಾ. ತಾನು ಪಿಯುಸಿ ಯಲ್ಲಿ ಅನುತ್ತೀರ್ಣನಾಗಿದ್ದು ಮನೆಯವರು ಅಕ್ಕಪಕ್ಕದವರ ಟೀಕೆಗೆ ಗುರಿಯಾಗಿದ್ದು, ಕೊನೆಗೆ ತನ್ನ  ಸ್ವಂತ ದಾರಿಯಲ್ಲಿ ತಾನು ನೆಡೆದು ಯಶಸ್ಸು ಸಾಧಿಸಿದ್ದ ಬಗ್ಗೆ ಅವರು ಬರೆದಿದ್ದರು.ಅದಕ್ಕೆ ಹಲವು ಜನ ತಮ್ಮ ಅನುಭವವನ್ನೂ ಸೇರಿಸಿದ್ದರು.  ಪರೀಕ್ಷೆಯಲ್ಲಿ ಅನುತ್ತೀರ್ಣರಾದವರು ಜೀವನದಲ್ಲಿ ಯಶಸ್ಸು ಪಡೆಯಬಹುದು ಎಂದು ತಿಳಿಸಿದ್ದಾರೆ.

ವೈಭವ ಝಾ ಸಹ ಇಂಜಿನಿಯರಿಂಗ್ ಮಾಡಬೇಕು ಎಂದು ಬಯಸಿದ್ದರಂತೆ.ಆದರೆ ಪಿಯುಸಿ ಫಲಿತಾಂಶ ಬಂದ ಬಳಿಕ ಅವರ ಅಂಕಪಟ್ಟಿ ನೋಡಿದ ಪೋಷಕರು,ಸಂಬಂಧಿಕರೆಲ್ಲರೂ “ನೀನು ಇಷ್ಟು ಮಾಡಿದ್ದು ಸಾಕು,ಮುಂದೇನೂ ಮಾಡಬೇಡ” ಎಂದರಂತೆ.ಅಲ್ಲಿಂದ ವೈಭವ  ಝಾ ಕೆಲವು ದಿನಗಳ ವರೆಗೆ  ಖಿನ್ನತೆಗೂ ಸಹ  ಒಳಗಾಗಿದ್ದರಂತೆ .

“ ಆದರೆ ಬೇರೆಯವರ ಮಾತೇ ನನಗೆ ಸ್ಪೂರ್ತಿಯಾಗಿ, ಟೀಕೆಗಳೇ  ನನ್ನಲ್ಲಿ  ಆಡಗಿ  ಶಕ್ತಿಯ ಕಿಡಿಯಾಗಿ, ಬೈಗುಳವೇ ಆಶೀರ್ವಾದವಾಗಿ, ನಾನು ಇಂದು  ವಿನ್ಯಾಸ ಹಾಗೂ ಜಾಹಿರಾತು(designing and advertisement) ಕಂಪೆನಿಯನ್ನೂ ಸ್ಥಾಪಿಸಿದ್ದೇನೆ. ಈಗ ಯಾರು ಏನು ಅನ್ನುತಿಲ್ಲ.ಬರೀ ಹೊಗಳಿಕೆಯ ಮಾತುಗಳು ಕೇಳಿ ಬರುತ್ತಿವೆ.

ದುಡ್ಡಿಲ್ಲದೆ ತನ್ನ ಕಿಡ್ನಿ ಮಾರಬೇಕೆಂದುಕೊಂಡಿದ್ದವನು ತನ್ನ ಸ್ವಂತ ಕಂಪನಿ ಮಾಡಿದ .

ಇಂದು ನಾನು ಇಂಜಿನಿಯರ್ ಆಗಿದ್ದರೆ  ಸಂಭಳಕ್ಕೆ ಕೈ ಯೊಡ್ಡಬೇಕಾಗಿತ್ತು, ಆದರೆ ಇಂದು ನಾನೇ ಹಲವರಿಗೆ ಸಂಬಳ ನೀಡುತ್ತಿದ್ದೇನೆ” ಎನ್ನುತ್ತಾರೆ ಝಾ. ಒಂದು ಸೋಲಿಗೆ ಹಿಂದೆ ಸರಿಯಬಾರದು.ಏಕೆಂದರೆ ಸೋತಾಗಲೇ ಗೆಲುವಿನ ರುಚಿ ತಿಳಿಯುವುದು ಎನ್ನುವ ಝಾ ಮಾತು ನಮಗೆಲ್ಲರಿಗೂ ಆದರ್ಶವಾಗಿದೆ.

ಮತ್ತೆ ಮತ್ತೆ ಪ್ರಯತ್ನಿಸು.

ಹಾಲಿವುಡ್ ನಿರ್ಮಾಪಕ ಜಾರ್ಜ್ ಮಿಲ್ಲರ್,1979 ರಲ್ಲಿ ತನ್ನ ಮ್ಯಾಡ್ ಮ್ಯಾಕ್ಸ್ ಚಿತ್ರದ ನಾಯಕ ನಟನಿಗಾಗಿ  ಪರದೆಯ ಪರೀಕ್ಷೆಗಾಗಿ (screen test) ಆಹ್ವಾನಿಸಿದ್ದ. ಅದರಲ್ಲಿ ಆಸ್ಟ್ರೇಲಿಯಾದ ನಟ ಮಿಲ್ ಗಿಬ್ಬನ್ ಕೂಡ ಒಬ್ಬ.

ಪರದೆಯ ಪರೀಕ್ಷೆ ಹಿಂದಿನ ರಾತ್ರಿ ಗಿಬ್ಸನ್ ಬೀದಿಯಲ್ಲಿ ನೆಡೆದುಕೊಂಡು ಬರುತ್ತಿದ್ದಾಗ .ಯಾರೋ ಮೂರು ಜನ ಕುಡುಕರು ಅವನನ್ನು ಅಟ್ಟಿಸಿಕೊಂಡು ಹೊಡೆದಿದ್ದರು.ಮಾರನೆಯ ದಿನ  ಪರದೆಯ ಪರೀಕ್ಷೆಯ ಹೊತ್ತಿಗೆ ಅವನ ಮುಖ ಹೊಡೆತದಿಂದಾಗಿ ಊದಿಕೊಂಡು ವಿಕಾರವಾಗಿತ್ತು.

ಇನ್ನೂ ಪರದೆಯ ಪರೀಕ್ಷೆಯಲ್ಲಿ ನಾನು ಉತ್ತೀರ್ಣನಾಗುವುದಿಲ್ಲ , ಹೋದರು ಪ್ರಯೋಜನವಿಲ್ಲ ಎಂದು ಯೋಚಿಸಿದವನು,ಬಳಿಕ ಸ್ವಲ್ಪ ಸಮಯದ ನಂತರ ಹೇಗೂ ಉತ್ತೀರ್ಣನಾಗುವುದಿಲ್ಲ ಪರದೆಯ ಪರೀಕ್ಷೆಗೆ ಒಂದು ಬಾರಿ ಹೋಗಿ  ಬರೋಣ ಎಂದುಕೊಂಡ. ಪರದೆಯ ಪರೀಕ್ಷೆಗೆ ಹೋದ.

ಜಾರ್ಜ್ ಮಿಲ್ಲರ್ ತನ್ನ ಚಿತ್ರಕ್ಕೆ ಮುಖದಲ್ಲಿ ಗಾಯವಾಗಿ ವಿಕಾರವಾಗಿರುವವರನ್ನು ಹುಡುಕುತ್ತಿದ್ದ. ಗಿಬ್ಸನ್ ಮುಖದಲ್ಲಿ ಗಾಯವಾಗಿರುವುದನ್ನು ನೋಡಿ ತನ್ನ ಚಿತ್ರಕ್ಕೆ ಅವನನ್ನೇ ನಾಯಕನನ್ನಾಗಿ ಆಯ್ಕೆ ಮಾಡಿದ ನಂತರ ಆ ಚಿತ್ರ ಶ್ರೇಷ್ಠ ಚಿತ್ರವಾಗಿ ಗಿಬ್ಸನ್ ಗೆ ದೊಡ್ಡ ಹೆಸರು ತಂದುಕೊಟ್ಟಿತು.

“ನಾಚಿಕೆ,ಭಯ,ಹಿಂಜರಿಕೆಯಿಂದ ಸಿಕ್ಕಿರುವ ಅವಕಾಶಗಳನ್ನು ಉಪಯೋಗಿಸದೇ ಜೀವನದಲ್ಲಿ ಸೋಲುವವರೇ ಹೆಚ್ಚು. ಬಂದ ಅವಕಾಶವನ್ನು ತಪ್ಪಿಸಿಕೊಳ್ಳದೆ, ಒಮ್ಮೆ ಪ್ರಯತ್ನಿಸೋಣ ಎಂದು ಮುನ್ನುಗುತ್ತಿದ್ದರೆ ಗೆಲುವೂ ಸಂಪಾದಿಸಬಹುದು”.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top