ಮಾಟ ಮಂತ್ರ , ವಾಮಾಚಾರ ,ದುಷ್ಟ ಗ್ರಹ ಪೀಡೆಗಳಿಗೆ ಪರಿಹಾರ ಮಾಡ್ಕೊಳ್ಳಿ ..
ಮಾಟ ಮಂತ್ರಕ್ಕೆ ಪರಿಹಾರ.
ನಾವು ಚೆನ್ನಾಗಿ ಇದ್ದರೆ ನೋಡೋಕೆ ಸಹಿಸದೇ ಇರುವವರು,ನಮ್ಮ ಜೊತೆಗೇ ಇದ್ದು ನಮ್ಮನ್ನು ಹಾಳು ಮಾಡಲು ಪ್ರಯತ್ನಿಸುತ್ತಾರೆ. ಹಾಗೆಯೇ ನಮ್ಮ ಏಳಿಗೆಯನ್ನು ಸಹಿಸದೇ ಇರುವವರು ಕೂಡ ನಮಗೆ ಈ ಮಾಟ,ಮಂತ್ರ,ತಂತ್ರ ಯಂತ್ರ ಪ್ರಯೋಗಗಳಿಂದ ನಮ್ಮನ್ನು ಹಾಳು ಮಾಡಲು ಅನೇಕ ರೀತಿಯಲ್ಲಿ ಪ್ರಯತ್ನಿಸುತ್ತಾರೆ.
• ಅದರಲ್ಲೂ ಕಲಿಯುಗದಲ್ಲಿ ಯಾರನ್ನೂ ನಂಬುವುದು ಕಷ್ಟ ಸ್ವಂತ ಅಣ್ಣ- ತಮ್ಮ,ನೆಂಟರಿಷ್ಟರನ್ನು ಸಹ ನಂಬಲಾಗುವುದಿಲ್ಲ.
• ಹೀಗೆ ಯಾರೋ ನಮಗೆ ಮಾಟ ಮಂತ್ರ ಮಾಡಿಸಿದ ತಕ್ಷಣ ನಮಗೆ ಏನು ಆಗುವುದಿಲ್ಲ,ನಮ್ಮ ಗ್ರಹ ಗತಿಗಳು ಸರಿಯಾಗಿ ಇಲ್ಲದೇ ಹೋದಲ್ಲಿ ಅವುಗಳ ಪರಿಣಾಮ ನಮ್ಮ ಮೇಲೆ ಆಗುತ್ತದೆ.
ಅದರಲ್ಲೂ ಮುಖ್ಯವಾಗಿ ರಾಹು -ಕೇತು ದೆಸೆ ನಡೆಯುತ್ತಿದ್ದರೆ.ಇದು ಅತ್ಯಂತ ಕೆಟ್ಟ ಸಮಯವಾಗಿದ್ದು.ಈ ಸಮಯದಲ್ಲಿ ಯಾರು ಏನೇ ಮಾಡಿದರೂ ಬೇಗನೇ ನಮಗೆ ತಟ್ಟುತ್ತೆ. ನಮ್ಮ ಶತ್ರುಗಳಿಗೆ ಇದು ಒಳ್ಳೆಯ ಸಮಯವಾಗಿದ್ದು. ಅವರಿಗೆ ಸಾರ್ಥಕವಾಗುತ್ತದೆ ಅವರು ಏನೇ ಮಾಡಿದರೂ ನಮ್ಮ ಮೇಲೆ ಬೇಗ ಪ್ರಯೋಗ ಆಗುತ್ತೆ. ಈ ಮಾಟ ಮಂತ್ರದ ಪ್ರಯೋಗಗಳು ಬೇಗೆನೇ ನಮ್ಮ ಮೇಲೆ ದುಷ್ಪರಿಣಾಮಗಳನ್ನು ಉಂಟು ಮಾಡುತ್ತವೆ.
• ಯಾರು ಧನಿಷ್ಠ ನಕ್ಷತ್ರದಲ್ಲಿ ಹುಟ್ಟಿರುತ್ತಾರೋ ಮುಖ್ಯವಾಗಿ ಅವರಿಗೆ ಈ ಮಾಟ ಮಂತ್ರಗಳು ತಮ್ಮ ಜೀವನದಲ್ಲಿ 30 ನೇ ವಯಸ್ಸು ಪೂರೈಸುವವರೆಗೂ ಬಿಡದೇ ಒಂದಾದರ ನಂತರ ಇನ್ನೊಂದು ಕಷ್ಟವನ್ನು ಎದುರಿಸಬೇಕಾಗುತ್ತದೆ.ಇವುಗಳನ್ನು ಮಾಡಿಸುವುದು ಬೇರೆ ಯಾರು ಅಲ್ಲ ಮುಖ್ಯವಾಗಿ ನಿಮ್ಮ ಒಳ ಸಂಬಂಧ ಇರುವವರೇ ಅಂದರೆ ನಿಮ್ಮ ಸಂಬಂದಿಕರು.
ಇವುಗಳಿಂದ ಮುಕ್ತಿ ಹೊಂದುವುದು ಹೇಗೆ ? ಪರಿಹಾರ ಏನು?
• ಯಾರಿಗಾದರೂ ತಮ್ಮ ಜಾತಕದಲ್ಲಿ ರಾಹು-ಕೇತು ದೆಸೆ ನಡೆಯುತ್ತಿದ್ದರೆ ಎಂದು ತಿಳಿದರೆ ಅವರು ಪ್ರತಿ ಬುಧುವಾರದ ದಿನ ಶ್ರೀ ನರಸಿಂಹಸ್ವಾಮಿಯ ದೇವಸ್ಥಾನಕ್ಕೆ ಹೋಗಿ ದೇವರ ದರ್ಶನ ಮಾಡಿ,ಪೂಜೆ ಮಾಡಿಸಿ ಮತ್ತು ನರಸಿಂಹಸ್ವಾಮಿಯ ಮಂತ್ರವನ್ನು ಜಪ ಮಾಡಿ.ನಿಮಗೆ ಮಂತ್ರಗಳು ಅಷ್ಟಾಗಿ ಗೊತ್ತಿಲ್ಲ ಎಂದರೆ ಸರಳವಾಗಿ “ಓಂ ನಾರಸಿಂಹಾಯ ನಮಃ”ಎಂದು 11,48,ಅಥವಾ 108 ಬಾರಿ ನಿಮ್ಮ ಸಮಯಕ್ಕೆ ಅನುಸಾರವಾಗಿ ಜಪಿಸಿರಿ.
• ‘ಸ್ಕಂದ ಷಷ್ಠಿ’ ಕವಚವನ್ನು ಪಾರಾಯಣ ಮಾಡಿ .ನಿಮ್ಮ ಮನೆಯಲ್ಲಿ ಸ್ಕಂದ ಷಷ್ಠಿಯನ್ನು ಹೇಳಿ ಇದು ಮನೆಯಲ್ಲಿರುವ ನಕಾರಾತ್ಮಕ ಮತ್ತು ಋಣಾತ್ಮಕ ಶಕ್ತಿಯನ್ನು ಹೊರದಬ್ಬಿ ಧನಾತ್ಮಕ ಶಕ್ತಿಯನ್ನು ಮನೆಯಲ್ಲಿ ತುಂಬುತ್ತದೆ.
• ಪ್ರಾಣಾಯಾಮ ವನ್ನು ಪ್ರತಿದಿನ ಬಿಡುವು ಮಾಡಿಕೊಂಡು ಮಾಡುವುದರಿಂದ ನಿಮ್ಮ ದೇಹದಲ್ಲಿರುವ ನಕಾರಾತ್ಮಕ ಶಕ್ತಿಯನ್ನು ಧನಾತ್ಮಕ ಶಕ್ತಿಯನ್ನಾಗಿ ಪರಿವರ್ತನೆ ಮಾಡುತ್ತದೆ.
• ನಿಮಗೆ ಆರೋಗ್ಯ ಸಮಸ್ಯೆಗಳು ಮತ್ತು ಅನೇಕ ತೊಂದರೆಗಳನ್ನು ನಿಮ್ಮ ಜೀವನದಲ್ಲಿ ಅನುಭವಿಸುತ್ತಿದ್ದರೆ. ನೀವು ಹತ್ತಿರದಲ್ಲಿರುವ ಜ್ಯೋತಿಷಿಗಳ ಬಳಿ ನಿಮ್ಮ ಜನ್ಮ ಕುಂಡಲಿ ಅಥವಾ ಜಾತಕವನ್ನು ತೆಗೆದುಕೊಂಡು ಹೋಗಿ ತೋರಿಸಿ ಯಾವ ದೆಸೆ ನಡೆಯುತ್ತಿದೆ ಎಂದು ಮೊದಲು ತಿಳಿದುಕೊಳ್ಳಿ.
• ನಂತರ ಯಾರು? ಯಾವ ರೀತಿಯ ಮಾಟ ಮಂತ್ರದ ಪ್ರಯೋಗ ? ಯಾವಾಗ ? ಎಲ್ಲಿ ?ಹೇಗೆ ಮಾಡಿಸಿದ್ದಾರೆ ? ಎಂದು ಸರಿಯಾಗಿ ತಿಳಿದು ಅದನ್ನು ತೆಗೆಸಿ ಹಾಕಿ.ನಿಮಗೆ ಮನೆಗೆ ದಿಗ್ಬಂದನ ಹಾಕಿಸಿಕೊಳ್ಳಿ.
• ನಿಮ್ಮ ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳಿ, ಬೆಳ್ಳಗ್ಗೆ ಮತ್ತು ಸಂಜೆ ದೇವರ ಪೂಜೆ,ದೇವರ ಕೋಣೆಯಲ್ಲಿ ದೀಪ ಹಚ್ಚುವುದನ್ನು ಮರೆಯಬೇಡಿ.
• ನಿಮ್ಮ ಮನೆಗೆ ಹಸುವಿನ ಗಂಜಲ ಅಂದರೆ ಗೋ ಮೂತ್ರವನ್ನು ಸಿಂಪಡಿಸಿ.ಇದು ದುಷ್ಟ ಶಕ್ತಿಗಳನ್ನು ಹೊರದೂಡುತ್ತವೆ.
• ನಿಮ್ಮ ಮನೆಯಲ್ಲಿ ನಾಯಿ ಮತ್ತು ಬೆಕ್ಕನ್ನು ಸಾಕಿ ಅವು ಮನೆಯ ಯಜಮಾನನನ್ನು ದುಷ್ಟ ಶಕ್ತಿಗಳಿಂದ ರಕ್ಷಿಸುತ್ತವೆ.ನಾಯಿಗಳು ದುಷ್ಟ ಶಕ್ತಿಗಳು ಮನೆಯೊಳಗೆ ಪ್ರವೇಶ ಮಾಡುವುದನ್ನು ತಡೆಯುತ್ತವೆ.ನಾಯಿ ಬೆಕ್ಕುಗಳ ಕಣ್ಣಿಗೆ ದುಷ್ಟ ಶಕ್ತಿಗಳು ಗೋಚರವಾಗುತ್ತವೆ ಆದ್ದರಿಂದ ಅವು ನಮಗೆ ಎಚ್ಚರಿಕೆ ಕೊಡುತ್ತವೆ.
• ಇನ್ನೂ ಕೊನೆಯದಾಗಿ ನಿಮ್ಮ ಮನೆಯಲ್ಲಿ ಪ್ರತಿ ಕೋಣೆಯಲ್ಲೂ ಒಂದು ಸಣ್ಣ ಲೋಟದಲ್ಲಿ ಒಂದು ಮೂಲೆಯಲ್ಲಿ ಉಪ್ಪನ್ನು ತುಂಬಿ ಇಡಿ ಇದು ನಕಾರಾತ್ಮಕ ಶಕ್ತಿಯನ್ನು ಹೀರಿಕೊಂಡು ಧನಾತ್ಮಕ ಶಕ್ತಿಯನ್ನು ಹರಡಲು ಸಹಾಯ ಮಾಡುತ್ತದೆ.ಅದರಲ್ಲೂ ಸ್ನಾನದ ಕೋಣೆ ಮತ್ತು ಶೌಚಾಲಯದ ಕೊನೆಯಲ್ಲಿ ಮರೆಯದೇ ಇಡೀ.ಈ ಉಪ್ಪನ್ನು ವಾರಕ್ಕೊಮ್ಮೆ ಇಲ್ಲದಿದ್ದರೆ ಪ್ರತಿ ಅಮಾವಾಸ್ಯೆ ಪೌರ್ಣಮಿಯಂದು ಬದಲಾಯಿಸುತ್ತಾ ಬನ್ನಿ.ಹೀಗೆ ಮಾಡುತ್ತಿದ್ದರೆ ದುಷ್ಟ ಶಕ್ತಿಗಳ ಕಾಟ ಕಾಲ ಕ್ರಮೇಣ ಕಡಿಮೆಯಾಗುತ್ತದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
