ಗುರುವಾರ, ೨೨ ಜೂನ್ ೨೦೧೭
ಸೂರ್ಯೋದಯ : ೦೫:೨೮
ಸೂರ್ಯಾಸ್ತ : ೧೯:೧೭
ಶಕ ಸಂವತ : ೧೯೩೯ ಹೇವಿಲಂಬಿ
ಅಮಂತ ತಿಂಗಳು : ಜ್ಯೇಷ್ಠ
ಪಕ್ಷ : ಕೃಷ್ಣ ಪಕ್ಷ
ತಿಥಿ : ತ್ರಯೋದಶೀ
ನಕ್ಷತ್ರ : ಕೃತ್ತಿಕ
ಯೋಗ : ಧೃತಿ
ಅಮೃತಕಾಲ : ೦೮:೩೭ – ೧೦:೦೩
ರಾಹು ಕಾಲ: ೧೪:೦೬ – ೧೫:೫೦
ಗುಳಿಕ ಕಾಲ: ೦೮:೫೫ – ೧೦:೩೯
ಯಮಗಂಡ: ೦೫:೨೮ – ೦೭:೧೨
ಮೇಷ (Mesha)
ಮಾತು ಕೊಡುವುದನ್ನು ನಿಯಂತ್ರಿಸಿ. ಈಗಾಗಲೇ ಇರುವ ಜವಾಬ್ದಾರಿಗಳನ್ನು ಸೂಕ್ತವಾಗಿ ನಿರ್ವಹಿಸಿ.
ವೃಷಭ (Vrushabh)
ದಣಿವು ಹಾಗೂ ನಿರ್ಜಲೀಕರಣಗಳಿಂದ ದೇಹ ಬಳಲಬಹುದು. ಒಂದು ದಿನದ ಮಟ್ಟಿಗೆ ವಿಶ್ರಾಂತಿ ಕಡ್ಡಾಯ.
ಮಿಥುನ (Mithuna)
ಸಾಲ ಕೊಡಲು ಬರುವ ಮಂದಿಯನ್ನು, ಕೇಳಲು ಬರುವ ಮಂದಿಯನ್ನು ನೀವಿಂದು ನಿರ್ಲಕ್ಷಿಸಲೇಬೇಕು.
ಕರ್ಕ (Karka)
ಮಕ್ಕಳು ಒಳಿತುಗಳನ್ನು ಸಂಪಾದಿಸಿ ಕೊಡುತ್ತಾರೆ. ನೀವು ಕೂಡ ಅವರನ್ನು ಉತ್ಸಾಹದಿಂದ ಹುರುಪುಗೊಳಿಸಿದರೆ ಉತ್ತಮ.
ಸಿಂಹ (Simha)
ಕೆಲಸದ ಸ್ಥಳದಲ್ಲಿ ತೊಂದರೆ ಕೊಡಲೆಂದೇ ಇರುವ ಜನರು ಕೀಟಲೆ ಮಾಡುತ್ತಾರೆ. ಸ್ಥೈರ್ಯದಿಂದಲೇ ಇದ್ದು ಗೆಲ್ಲಿ.
ಕನ್ಯಾರಾಶಿ (Kanya)
ಹೊಸದೊಂದನ್ನು ನಿರ್ವಿುಸಲು ನಿಮಗಿರುವ ಕಾತರ ಸ್ವಾಗತಾರ್ಹ. ಆದರೆ ಬಂಧುಗಳಿಂದ ವಿಘ್ನ ಎದುರಾಗಬಹುದು.
ತುಲಾ (Tula)
ಸ್ವಜನರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಬೇಡಿ. ತುಪ್ಪ ಬಿಸಿಯಾಗಿ ಇದ್ದರೆ ಆರಿಸಿ ಸೇವಿಸಿ. ಅದರಿಂದ ಒಳ್ಳೆಯದಾಗಲಿದೆ.
ವೃಶ್ಚಿಕ (Vrushchika)
ಹಳೆಯ ತಪ್ಪುಗಳನ್ನೇ ಮತ್ತೆ ಮತ್ತೆ ಮಾಡಿ ಮುಖಭಂಗಕ್ಕೆ ಒಳಗಾಗದಿರಿ. ಬಾಳಸಂಗಾತಿಯ ಬೆಂಬಲದಿಂದ ಗೆಲುವಿದೆ.
ಧನು ರಾಶಿ (Dhanu)
ಹಲವಾರು ವ್ಯಕ್ತಿಗಳು ನಿಮ್ಮ ಬಳಿ ಸಹಾಯ ಕೇಳಲು ಬಂದಾರು. ಆದರೆ ನಿಮ್ಮ ಶಕ್ತಿಯ ಅರಿವು ನಿಮಗೆ ಇದ್ದೇ ಇರಲಿ.
ಮಕರ (Makara)
ನಿಮ್ಮನ್ನು ಅವಮಾನಿಸಲು ಮುಂದಾಗುವವರ ಜತೆಗೆ ಸ್ನೇಹ ಬೇಡ. ಮುಗುಳ್ನಗುವಿನ ನೆರವಿನಿಂದ ಅವರನ್ನು ದೂರವಿಡಿ.
ಕುಂಭರಾಶಿ (Kumbha)
ದಿಢೀರಾದ ಶ್ರೀಮಂತಿಕೆಗಾಗಿ ಕಾರ್ಯದಲ್ಲಿ ಪ್ರವೃತ್ತರಾದರೆ ತಪ್ಪಲ್ಲ. ಆದರೆ ವಿವೇಕದೊಂದಿಗೆ ಮುನ್ನುಗ್ಗಿದರೆ ಶುಭ.
ಮೀನರಾಶಿ (Meena)
ಮನಸ್ಸನ್ನು ಹದ್ದುಬಸ್ತಿನಲ್ಲಿಡಿ. ಅಲ್ಪರ ಮಾತು ಬಾಣದಂತೆ ಬಂದು ಚುಚ್ಚಿದರೂ ಕಾರ್ಯದಿಂದ ಹಿಂದೆ ಸರಿಯದಿರಿ. ಲಾಭವಿದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
