ಮುತ್ತಿಡುವಾಗ ಕಣ್ಣು ಮುಚ್ಚುವುದೇಕೆ ?
ಪರಸ್ಪರ ಬಾಯಿಂದ ಬಾಯಿಗೆ ದಂಪತಿಗಳು, ಪ್ರೇಮಿಗಳು ಮುತ್ತಿಡುವ ಸಂದರ್ಭದಲ್ಲಿ ಬಹುತೇಕವಾಗಿ ಕಣ್ಣು ಮುಚ್ಚಿಕೊಳ್ಳುತ್ತಾರೆ. ಏಕೆನ್ನುತ್ತೀರಾ ಅದಕ್ಕೆ ಕಾರಣಗಳು ಇಲ್ಲಿವೆ
1) ಇಬ್ಬರ ಭಾವನೆಗಳು ಬೇರೆಡೆ ಹೋಗಬಾರದು ಹಾಗೂ ಮಿಲನದ ಆಸಕ್ತಿ ಹೆಚ್ಚಾಗುವುದಕ್ಕೆ.
2) ಮೆದುಳು ಕಣ್ಣುಗಳನ್ನು ಮುಚ್ಚಿ ಭಾವಪರವಶತೆಯನ್ನು ಪರಿಪೂರ್ಣವಾಗಿ ಗ್ರಹಿಸಲು ಸೂಚನೆಗಳನ್ನು ನೀಡುತ್ತದೆ. ಈ ಸಂದರ್ಭದಲ್ಲಿ ತಾನಾಗಿಯೆ ಇಬ್ಬರ ಕಣ್ಣುಗಳು ಮುಚ್ಚಿಕೊಳ್ಳುತ್ತವೆ.
3) ಚುಂಬಕದ ಸಂದರ್ಭದಲ್ಲಿ ಮೆದುಲುಗಳಿಗೆ ಅನಗತ್ಯವಾದ ವಿಷಯಗಳು ಸೇರಿಕೊಳ್ಳಬಾರದು ಹಾಗೂ ಪರಿಪೂರ್ಣ ಗಮನ ಒಂದೇ ಕಡೆ ಇರಲಿ ಎಂಬುದಕ್ಕಾಗಿ.
4) ಮುತ್ತಿಡುವಾಗ ನೋಡುವ ಮತ್ತು ತುಟಿಗಳ ಸಂವೇದನೆ ಎರಡನ್ನು ಮೆದುಳು ಏಕಕಾಲದಲ್ಲಿ ನಿರ್ವಹಿಸಲು ಸಾಧ್ಯವಾಗದ ಕಾರಣ ಇಬ್ಬರ ಕಣ್ಣುಗಳು ತಾನಾಗಿಯೇ ಮುಚ್ಚಿಕೊಳ್ಳುತ್ತವೆ.
5) ಸಂಗಾತಿಯ ಸಮ್ಮಿಲನ, ಹೆಚ್ಚು ಕೂಡುಕೊಳ್ಳುವಿಕೆ ಬಯಸಲು ಆತ್ಮೀಯತೆಯ ಅನುರಾಗ ಸಾಧಿಸಲು.
6) ಶಾಶ್ವತ ಬೆಸುಗೆ, ಸುಂದರ, ಸಂತೋಷಕರ ದಾಂಪತ್ಯ ಸದಾ ಇರಲೆಂದು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
