fbpx
ಕನ್ನಡ

“ನಮ್ಮ ಮೆಟ್ರೋ ಹಿಂದಿ ಬೇಡ ಕನ್ನಡ ಸಾಕು” ಹಿಂದಿ ಹೇರಿಕೆ ವಿರುದ್ಧ ಸಿಡಿದೆದ್ದ ಕನ್ನಡಿಗರು ಡೆಲ್ಲಿಯಲ್ಲಿ ನಡುಕ ..

ಬೆಂಗಳೂರಿನ ಮೆಟ್ರೋ ಸ್ಟೇಷನ್ ಗಳಲ್ಲಿನಫಲಕಗಲ್ಲಿ ಅತಿಯಾಗಿ ಹಿಂದಿ ಬಳಕೆ ಯಾಗುತ್ತಿರುವುದನ್ನು ಕನ್ನಡಿಗರು ತೀವ್ರವಾಗಿ ವಿರೋಧಿಸುತ್ತಿದ್ದಾರೆ.ಹಿಂದಿ ಭಾಷೆಯ ಬಳಕೆಯನ್ನು ವಿರೋದಿಶಿಸಿ ಟ್ವಿಟ್ಟರ್,ಫೇಸ್ಬುಕ್ ಗಳಂತಹ ಸಾಮಾಜಿಕ ಜಾಲತಾಣಗಳಲ್ಲಿ #nammametrohindibeda ಹಾಗು #nammametrokannadasaaku ಎಂಬಾ ಹ್ಯಾಷ್ ಟ್ಯಾಗ್ ಗಳ ಮೂಲಕ ಅಭಿಯಾನಗಳನ್ನು ಮಾಡುತ್ತಿದ್ದಾರೆ.

ಚೆನ್ನೈ,ಕೊಲ್ಕತ್ತಾ,ದೆಹಲಿ ಸೇರಿದಂಥ ಮುಂತಾದ ನಗರಗಳ ಮೆಟ್ರೋಗಳಲ್ಲಿ ಕೇವಲ ಎರಡು ಭಾಷೆಗಳನ್ನು ಬಳಸುತ್ತಿದ್ದಾರೆ(ಆಯಾ ನಗರಗಳ ಪ್ರಾದೇಶಿಕ ಭಾಷೆ ಮತ್ತು ಇಂಗ್ಲಿಷ್) ಆದರೆ ಬೆಂಗಳೂರಿನ ಮೆಟ್ರೋದಲ್ಲಿ ಮಾತ್ರ ಏಕೆ ಮೂರು ಭಾಷೆಗಳನ್ನು(ಕನ್ನಡ,ಇಂಗ್ಲಿಷ್,ಹಿಂದಿ) ಬಳಸಲಾಗುತ್ತಿದೆ.ಅನಾವಶ್ಯಕವಾಗಿ ಹಿಂದಿಗೆ ಏಕೆ ಅತಿಯಾದ ಪ್ರಾಮುಖ್ಯತೆಯನ್ನು ಕೊಡುತ್ತಿದ್ದೀರಾ ಎಂಬ ಕೂಗು ಮತ್ತೆ ಎದ್ದಿದೆ.ನಮ್ಮ ಮೆಟ್ರೋ ನಮ್ಮ ಮೆಟ್ರೋ ಹಾಗಿಯೇ ಮುಂದೆಯೂ ಉಳಿಯಬೇಕಾದರೆ ಈಗ ಅನುಸರಿಸುತ್ತಿರುವ ಹಿಂದಿಯ ಹೇರಿಕೆಯ ನೀತಿಯು ನಿಲ್ಲಬೇಕು.

ಈ ಕುರಿತು ಮಾನ್ಯ ಮುಖ್ಯಮಂತ್ರಿಗಳ ಮತ್ತು ಮೆಟ್ರೋದ ಅಧಿಕಾರಿಗಳ ಮನವೊಲಿಸಿ ಮೆಟ್ರೋದಲ್ಲಿ ಕನ್ನಡದ ಸಾರ್ವಭೌಮತ್ವವನ್ನು ಎತ್ತಿ ಇಡಿಯಬೇಕು ಎಂಬುದು ಈ ಅಭಿಯಾನದ ಉದ್ದೇಶ.

ಈ ಹಿಂದೆ ಕನ್ನಡಿಗರ ಈ ಅಭಿಯಾನಕ್ಕೆ ಸಂಸದ ಪ್ರತಾಪ್ ಸಿಂಹರವರು ಕನ್ನಡಿಗರ ಈ ಅಭಿಯಾನಕ್ಕೆ ಬೆಂಬಲ ನೀಡಿದ್ದರು.ಬೆಂಗಳೂರಿನ ಮೆಟ್ರೋ ನಿಲ್ದಾಣ, ನಾಮಫಲಕಗಳಲ್ಲಿ ಕೇವಲ ಇಂಗ್ಲೀಷ್ ಅಥವಾ ಹಿಂದಿ ಭಾಷೆ ಮಾತ್ರ ಬಳಕೆ ಮಾಡಿದ್ದರೆ ಅಂತಹ ಫೋಟೊ ತೆಗೆದು ನನಗೆ ಇಮೇಲ್ ಕಳುಹಿಸಿ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದರು. ಇದಾದ ಬಳಿಕ, ಹಿಂದಿ ಹೇರಿಕೆ ಪ್ರಮಾಣ ತಗ್ಗಿತ್ತು ಆದರೆ ಅದು ಈಗ ಮತ್ತೆ ಚಿಗುರುಕೊಂಡಿದೆ.


ತ್ರಿಭಾಷಾ ಸೂತ್ರವನ್ನು ಕೇಂದ್ರ ಸರ್ಕಾರ ಅಳವಡಿಸಿಕೊಂಡಿದೆ.ಆದರೆ ಕರ್ನಾಟಕದಲ್ಲಿ ಈ ತ್ರಿಭಾಷಾ ನೀತಿ ಜಾರಿಯಾಗಿಲ್ಲ. ಅಥವಾ ಹೀಗೆ ಮಾಡಿ ಎಂದು ರಾಜ್ಯ ಸರ್ಕಾರದಿಂದ ಮೆಟ್ರೋಗೆ ಸೂಚನೆ ಹೋಗಿಲ್ಲ. ಏಕಪಕ್ಷೀಯವಾಗಿ ಮೆಟ್ರೋ ಆಡಳಿತ ಮಂಡಳಿಯವರು ಇಂತಹುದೊಂದು ನಿರ್ಧಾರ ಕೈಗೊಂಡಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಆರೋಪಿಸಲಾಗಿದೆ.
ಮೆಟ್ರೋದ ಉಸ್ತುವಾರಿ ಹೊಣೆಯನ್ನು ಹೊತ್ತಿರುವ ಬಿ.ಎಂ.ಆರ್.ಸಿ.ಎಲ್ ಸಂಸ್ಥೆಯವರು ಬಿಡುಗಡೆ ಮಾಡಿರುವ 2016/17 ವಾರ್ಷಿಕ ವರದಿಯು ಸಹ ಕೇವಲ ಹಿಂದಿ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಇದ್ದು ಇಲ್ಲಿ ಕನ್ನಡವನ್ನುಸಂಪೂರ್ಣವಾಗಿ ಕಡೆಗಣಿಸಲಾಗಿದೆ.

ತಕಾರಿದ್ದಾರೆ ಕೋರ್ಟ್ ಗೆ ಹೋಗಿ:

ಮೆಟ್ರೋದಲ್ಲಿ ಹಿಂದಿಯ ಹೇರಿಕೆಯನ್ನು ವಿರೋಧಿಸಿ ನಗರದ ಒಬ್ಬ ಉದ್ಯೋಗಿ ಬಿ.ಎಂ.ಆರ್.ಸಿ.ಎಲ್ ರವರಿಗೆ ಇಮೇಲ್ ಮೂಲಕ ಕೇಳಿದ ಪ್ರಶ್ನೆಗೆ ಬಿ.ಎಂ.ಆರ್.ಸಿ.ಎಲ್ ರವರು ದರ್ಪವಾಗಿ “ದೇಶದ ಒಕ್ಕೊಟದ ದ್ರಿಷ್ಟಿಯನ್ನು ಆದರಿಸಿ ಮೆಟ್ರೋದಲ್ಲಿ ಹಿಂದಿಯನ್ನು ಬಳಸಲಾಗಿದೆ ಇದರ ಕುರುತು ನಿಮ್ಮದೇನಾದರೂ ತಕರಾರು ಇದ್ದಾರೆ ಕೋರ್ಟ್ ಗೆ ಹೋಗಿ”ಎಂದು ಉತ್ತರ ಕೊಟ್ಟಿದೆ.

ಹಿಂದಿ ಹೇರಿಕೆ ಸರಿಯಲ್ಲ:

ಹಿಂದಿಯು ಭಾರತದ ರಾಷ್ಟ್ರ ಭಾಷೆಯಲ್ಲ.ಭಾರತಕ್ಕೆ ಯಾವುದೇ ರಾಷ್ತ್ರೀಯ ಭಾಷೆಯು ಇಲ್ಲ. ಹಿಂದಿಯು ಕೇಂದ್ರ ಸರ್ಕಾರದ ಆಡಳಿತ ಭಾಷೆಯಷ್ಟೇ.ದೇಶದ ಇನ್ನುಳಿದ ಪ್ರಾದೇಶಿಕ ಭಾಷೆಗಳಲ್ಲಿ ಒಂದಾದ ಹಿಂದಿಗೆ ಯಾವುದೇ ವಿಶೇಷ ಸ್ಥಾನಮಾನಗಳನ್ನು ಕೊಡಬಾರದು ಹಾಗೆ ಕೊಡುವುದು ಸರಿಯಲ್ಲ. ದೇಶದ ಇನ್ನುಳಿದ ಪ್ರಾದೇಶಿಕ ಭಾಷೆಗಳಿಗೆ ಇರದ ಪ್ರಾಮುಖ್ಯೆತೆಯನ್ನು ಹಿಂದಿಗೆ ಏಕೆ ಕೊಡಬೇಕು.ಈಗ ಹಿಂದಿಯನ್ನು ಬಳಕೆಯನ್ನು ಸಹಿಸುಕೊಂಡರೆ ಮುಂದೆ ಒಂದು ದಿನ ಉಳಿದ ಪ್ರಾದೇಶಿಕ ಭಾಷೆಗಳಾದ ತಮಿಳು,ತೆಲುಗು,ಮರಾಠಿ, ಭಾಷೆಗಳನ್ನು ಸಹಾ ಕನ್ನಡಿಗರು ಸಹಿಸಿಕೊಳ್ಳುವ ಪರಿಸ್ಥಿತಿ ಬರುತ್ತದೆ.


ಹಿಂದಿಯನ್ನುಬಲವಂತವಾಗಿ ಹೇರ ಹೊರಟಿರುವ ಮೆಟ್ರೋ ಸಂಸ್ಥೆಯು 1971ಕ್ಕೆ ಮೊದಲು ಉರ್ದುವನ್ನು ಬಲವಂತವಾಗಿ ಹೇರಹೊರಟಿದ್ದ ಪಾಕಿಸ್ತಾನ ಸರಕಾರದ ತದ್ರೂಪದಂತೆ ವರ್ತಿಸಲು ಹೊರಟಿದೆ. ಹೀಗಾಗಿ ನಾಡಿನ ಭವಿಷ್ಯವನ್ನು ನಿರ್ಧರಿಸುವುದು ಕೇಂದ್ರ ಮತ್ತು ರಾಜ್ಯ ಸರಕಾರಗಳ ಕೈಯಲ್ಲಿದೆ. ಎಲ್ಲ ಭಾಷೆಗಳಂತೆ ಒಂದು ಪ್ರಾದೇಶಿಕ ಭಾಷೆಯಾದ ಹಿಂದಿಗೆ ಕರ್ನಾಟಕದಲ್ಲಿ ಯಾವುದೇ ವಿಶೇಷ ಸ್ಥಾನಮಾನಗಳನ್ನೂ ಕೊಡಬಾರದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top