fbpx
ಆರೋಗ್ಯ

ಬೆಡ್ ಪಕ್ಕದಲ್ಲಿ ನಿಂಬೆ ಹಣ್ಣು ಇಟ್ಕೊಂಡು ಮಲಗಿ ಆಮೇಲೆ ನೋಡಿ ಇದ್ರಿಂದ ಆಗೋ ಉಪಯೋಗ..

ಬೆಡ್ ಪಕ್ಕದಲ್ಲಿ ನಿಂಬೆ ಹಣ್ಣು ಇಟ್ಕೊಂಡು ಮಲಗಿ ಆಮೇಲೆ ನೋಡಿ ಇದ್ರಿಂದ ಆಗೋ ಉಪಯೋಗ..

ನಿಂಬೆ ಹಣ್ಣನ್ನು ನಮ್ಮ ದಿನನಿತ್ಯ ಅಡುಗೆಯಲ್ಲಿ ಹೆಚ್ಚಾಗಿ ಬಳಸುತ್ತೇವೆ, ಇದರ ಆರೋಗ್ಯಕರ ಗುಣಗಳ ಬಗ್ಗೆ ಅಲ್ಪ ಸ್ವಲ್ಪ ತಿಳುವಳಿಕೆಯೂ ನಮ್ಮಲ್ಲಿ ಇದೆ. ಬಸ್ಸಿನಲ್ಲಿ ಹೋಗುವಾಗ ವಾಂತಿ ಬರದಿರಲೆಂದು ನಿಂಬೆ ಹಣ್ಣನ್ನು ಬ್ಯಾಗ್ ನಲ್ಲಿ ಹಾಕಿ ಕೊಂಡೊಯ್ಯುತ್ತೇವೆ.
ತುಂಬಾ ಸುಸ್ತಾಗ ಒಂದು ನಿಂಬೆ ಜ್ಯೂಸ್ ಕುಡಿದರೆ ರಿಫ್ರೆಶ್ ಆಗುವುದೆಂದೂ ನಮಗೆ ಗೊತ್ತು, ಬಿಸಿ ನೀರಿನಲ್ಲಿ ಹಾಕಿ ಕುಡಿದರೆ ತೆಳ್ಳಗಿನ ಮೈ ಮಾಟ ಪಡೆಯಬಹುದೆಂದೂ ಗೊತ್ತು. ಆದರೆ ಆ ಗುಣಗಳಲ್ಲದೆ ಮಧುಮೇಹ, ಕ್ಯಾನ್ಸರ್, ಕರುಳಿನ ಸಮಸ್ಯೆಯಂತಹಾ ದೊಡ್ಡ-ದೊಡ್ಡ ಕಾಯಿಲೆಯನ್ನು ಬರದಂತೆ ತಪ್ಪಿಸುವ ಗುಣ ನಿಂಬೆ ಹಣ್ಣಿಗಿದೆ. ಇದಲ್ಲದೆ ಇನ್ನೂ ಹಲವಾರು ಗುಣಗಳು ನಿಂಬೆ ಹಣ್ಣಿನಲ್ಲಿದೆ

ನಿಂಬೆ ಹಣ್ಣಿನ ತುಂಡನ್ನು ರಾತ್ರಿ ಮಲಗುವಾಗ ಬೆಡ್’ನ ಪಕ್ಕದಲ್ಲಿಟ್ಟು ಮಲಗುದರಿಂದ ಬಹಳಷ್ಟು ಆರೋಗ್ಯಕರ ಲಾಭವನ್ನು ಪಡೆಯಬಹುದು.

ಒತ್ತಡ ನಿವಾರಣೆ

ಕೆಲಸ-ಕಾರ್ಯ ಮುಗಿಸಿಕೊಂಡು ನಾವು ರಾತ್ರಿ ಮಲಗುವಾಗ ನಾವು ತುಂಬಾ
ಸುಸ್ತಾಗಿರುತ್ತೇವೆ, ಕೆಲಸ ಕಾರ್ಯದ ಒತ್ತಡ ಕೂಡ ನಮ್ಮನ್ನು ಆವರಿಸಿರುತ್ತೆ. ಈ ವೇಳೆ ನಿಂಬೆ ಹಣ್ಣಿನ ತುಂಡನ್ನು ಬೆಡ್’ನ ಪಕ್ಕದಲ್ಲಿಟ್ಟು ಮಲಗುದರಿಂದ ಅದರ ಪರಿಮಳ ನಮ್ಮ ನರ ಮತ್ತು ಭಾವನೆಗಳನ್ನು ಶಮನಗೊಳಿಸಿ ಎಲ್ಲ ಒತ್ತಡಗಳನ್ನು ನಿವಾರಿಸುತ್ತೆ.

ಸುಖ ನಿದ್ರೆ

ಕೆಲವರು ಬೆಡ್ ರೂಮಿನಲ್ಲಿ ಮಲಗುವಾಗ ಅವರಿಗೆ ನಿದ್ರೇನೇ ಬರಲ್ಲ. ನಿದ್ರಾಹೀನತೆಯಿಂದ ಅವರು ಬಳಲುತ್ತಾರೆ. ಇಂಥ ಸಂದರ್ಭದಲ್ಲಿ ನಿಂಬೆ ಹಣ್ಣಿನ ತುಂಡು ಮೆದುಳಿಗೆ ವಿಶ್ರಾಂತಿ ನೀಡುವ ಮೂಲಕ ಸುಖ ನಿದ್ರೆಯನ್ನು ತರಿಸುತ್ತದೆ.

ಉಸಿರಾಟದ ಸಮಸ್ಯೆ

ಉಸಿರಾಟದ ಸಮಸ್ಯೆಗೆ ಶೀತ ಅಥವಾ ತೀವ್ರ ಅಲರ್ಜಿಯಿಂದ ಬಳಲುವವರು ಕೊನೆಯಲ್ಲಿ ಮಲಗುವ ವೇಳೆ ಉಸಿರುಕಟ್ಟಿದಂತಾಗುತ್ತದೆ.
ಜೊತೆಗೆ ಸೈನೆಸ್ಸ್ ಸಮಸ್ಯೆಯಿಂದ ಬಳಲುವವರಿಗೂ ಈ ನಿಂಬೆ ಹಣ್ಣಿನ ತುಂಡು ಬಹಳ ಉಪಕಾರಿ.
ನಿಂಬೆಯಲ್ಲಿ ಔಷಧೀಯ ಗುಣವಿರುದರಿಂದ ತಾಜಾ ಗಾಳಿಯೊಂದಿಗೆ ನಿಂಬೆ ಹಣ್ಣಿನ ಪರಿಮಳವು ನೇರವಾಗಿ ಮೂಗಿಗೆ ಹೋಗಿ ಕಟ್ಟಿದ ಉಸಿರಾಟವನ್ನು ಉಪಶಮನಗೊಳಿಸುತ್ತೆ.

ಕೀಟ ನಿವಾರಕ

ಮಲಗುವ ಕೊನೆಯಲ್ಲಿ ಸೊಳ್ಳೆ ಸೇರಿದಂತೆ ಇನ್ನಿತರ ಕ್ರಿಮಿ ಕೀಟಗಳಿಂದ ದಿನನಿತ್ಯ ಕಿರಿಕಿರಿ ಅನುಭವಿಸುವವರಿಗೆ ನಿಂಬೆ ಹಣ್ಣಿನ ತುಂಡು ಬಹುಪಕಾರಿ. ನಿಂಬೆ ಹಣ್ಣಿನ ಪರಿಮಳಕ್ಕೆ ಸೊಳ್ಳೆ, ಕ್ರಿಮಿಕೀಟಗಳು ಬರುದಿಲ್ಲ.

ಉಲ್ಲಾಸ ನೀಡುತ್ತೆ  


ಬೆಳಗ್ಗೆ ಹೆಚ್ಚು ಶಕ್ತಿ ಜೊತೆ ಉಲ್ಲಾಸ ನೀಡುತ್ತೆ ಕೊನೆಯಲ್ಲಿ ನಿಂಬೆ ಹಣ್ಣಿನ ತುಂಡು ಇಡುದರಿಂದ ಅದರ ಪರಿಮಳವು ಬೆಳಗ್ಗೆ ಏಳುವಾಗ ನಮ್ಮನ್ನು ಹೆಚ್ಚು ಶಕ್ತಿಯುತರನ್ನಾಗಿಸುವ ಜೊತೆಗೆ ಉಲ್ಲಾಸಭರಿತರನ್ನಾಗಿಸುತ್ತೆ. ಅಂತ ಶಕ್ತಿ ನಿಂಬೆಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top