fbpx
ಸಾಧನೆ

ಮದುವೆಗೆ ಒಪ್ಲಿಲ್ಲ ಅಂದ್ರೆ ಮನೆ ಬಿಟ್ಟು ಓಡೋಗೋ ಈ ಕಾಲದಲ್ಲಿ 2.5ಕೋಟಿ ವಹಿವಾಟಿನ ವ್ಯವಹಾರ ಸ್ಥಾಪನೆ ಮಾಡಿ ಮದುವೆ ಆದವರ ಕಥೆ..

ಮದುವೆಗೆ ಒಪ್ಲಿಲ್ಲ ಅಂದ್ರೆ ಮನೆ ಬಿಟ್ಟು ಓಡೋಗೋ  ಈ ಕಾಲದಲ್ಲಿ 2.5ಕೋಟಿ ವಹಿವಾಟಿನ ವ್ಯವಹಾರ ಸ್ಥಾಪನೆ ಮಾಡಿ ಮದುವೆ ಆದವರ ಕಥೆ..

ನಿರಾಕರಣೆಯ ಸಮಾಜದ ಮುಂದೆ 2.5ಕೋಟಿ ವಹಿವಾಟಿನ ವ್ಯವಹಾರ ಸ್ಥಾಪಿಸಿದ ಪ್ರೇಮಿಗಳು

ಪ್ರೀತಿ ಎನ್ನುವುದು ಒಂದು ಶ್ರೇಷ್ಠವಾದ ಒಂದು ಶಕ್ತಿ.ಇಬ್ಬರು ವ್ಯಕ್ತಿಗಳ ನಡುವಿನ ಸಾಮರಸ್ಯವು ಊಹೆಗು ಮೀರಿದ ಮತ್ತು ಯಾರೂ ಸಹ ನಿರೀಕ್ಷೆ ಮಾಡದ ಕೆಲಸಕಾರ್ಯಗಳನ್ನು ಕಾರ್ಯಗತಗೊಳಿಸುತ್ತದೆ ಎಂಬುದಕ್ಕೆ ಈ ಕಥೆಯು ಒಂದು ಜೀವಂತ ಉದಾಹರಣೆಯಾಗಿದೆ.ತಾವು ಮದುವೆಯಾಗುವುದಕ್ಕೆ ತಮ್ಮ ಪೋಷಕರನ್ನು ಒಪ್ಪಿಸಲು ಯಾವರೀತಿ ಕಷ್ಟಪಟ್ಟರು, ಅದೇ ರೀತಿಯಲ್ಲಿ ಛಲದಿಂದ ಕೆಲಸ ಮಾಡಿ ಈಗ 2.5ಕೋಟಿ ವಹಿವಾಟು ನಡೆಸುವ ವ್ಯವಹಾರಗಳನ್ನು ಸ್ಥಾಪಿಸಿದರು ಎಂದು ಹೇಳುವ ಕಥೆಯಾಗಿದೆ.

ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ಮಾನವ್ ಶೀತಲ್ ಮತ್ತು ನೀತಿ ಅಗರವಾಲ್ ಎಂಬುವವರು ಸಮರ್ಪಣಾ ಮನೋಭಾವ, ನಂಬಿಕೆ,ಬದ್ಧತೆಗಳಿಂದ ತಮ್ಮ ಜೀವನದಲ್ಲಿ ಯಾವ ಮೈಲಿಗಲ್ಲಾನ್ನಾದರೂ ಸ್ಥಾಪಿಸಬಹುದು ನಂಬಿಕೆಯನ್ನು ಹೊಂದಿದ್ದರು.ಮಾನವ್ ಶೀತಲ್ 9ನೇ ತರಗತಿಯಲ್ಲಿ ಮತ್ತು ನೀತಿ ಅಗರವಾಲ್ ರವರು 7ನೇ ತರಗತಿಯಲ್ಲಿ ವ್ಯಾಸಂಗಮಾಡುತ್ತಿದ್ದರು ಆಗ ಶೀತಲ್ ಅವರು ನೀತಿಯವರ ಮೇಲೆ ಆಕರ್ಷಿತರಾಗುತ್ತಾರೆ.ಪರಿಚಯ ಸ್ನೇಹವಾಗುತ್ತದೆ.ಈ ಸ್ನೇಹವು ಅಂತಿಮವಾಗಿ ಪ್ರೀತಿಯಾಗಿ ವಿಕಾಸನಗೊಳ್ಳುತ್ತದೆ.

ಅವರಿಬ್ಬರೂ ಜೊತೆಜೊತೆಯಲ್ಲಿ ಬೆಳೆದರು ಹಾಗು ತಮ್ಮ ಉಳಿದ ಜೀವನದ ಭಾಗವನ್ನು ಜೊತೆಯಲ್ಲಿಯೇ ಕಳಿಯಬೇಕೆಂದು ಎಂದು ತೀರ್ಮಾನಿಸಿಕೊಂಡರು.ಜೀವನದಲ್ಲಿ ನಾವು ಅಂದುಕೊಂಡಂತೆ ಏನೂ ಆಗುವುದಿಲ್ಲ ಎಂಬಂತೆ ಇವರೂ ಸಹ ಮದುವೆಯಾಗುವಷ್ಟರಲ್ಲಿ ಅನೇಕ ಸಮಸ್ಯೆ ಹಾಗು ಸವಾಲುಗಳನ್ನು ಎದುರಿಸಬೇಕಾಯಿತು.ಅವರ ಪರಸ್ಪರ ಪ್ರಯತ್ನದಿಂದಾಗಿ ಅವರು ಜೀವನ ಸಂಗಾತಿಗಳಾಗಿದ್ದಲ್ಲದೆ ವ್ಯವಹಾರದಲ್ಲೂ ಸಹ ಪಾಲುದಾರರಾಗಿ ವಾರ್ಷಿಕ ಸುಮಾರು ಎರಡೂವರೆ ಕೋಟಿಗಳಷ್ಟು ವಹಿವಾಟು ನಡೆಸುವ ಒಂದು ಉದ್ಯಮಕ್ಕೆ ಜನ್ಮ ಕೊಟ್ಟರು.

ಮಾನವ್ ಅವರು ಬಿ.ಕಾಂ ಮತ್ತು ನೀತಿ ಅವರು ಫ್ಯಾಷನ್ ಡೆಸೈನಿಂಗ್ ಕೋರ್ಸ್ ಗಳನ್ನೂ ಮುಗಿಸಿದ್ದರು.ವ್ಯಾಸಂಗದ ನಂತರ ಅವರು ಹಲವಾರು ಅರೆಕಾಲಿಕ ಕೆಲಸಗಳನ್ನು ಮಾಡಿ ಸಣ್ಣ ಪ್ರಮಾಣದಲ್ಲಿಯೇ ಹಣವನ್ನು ಉಳಿಸುತ್ತಾ ಬಂದರು.ಅವರು ಮಾಡುತ್ತಿರು ಕೆಲಸ ಯಾವ ಗುಣದ್ದೇ ಆಗಿರಲಿ ಅವರು ಅವರ ಸಂಪೂರ್ಣ ಪ್ರಯತ್ನದಿಂದ ಮಾಡುತ್ತಿದ್ದರು.ಇವರು ಜೊತೆಯಲ್ಲಿಯೇ ಮಾರುಕಟ್ಟೆ ಸಂಶೋಧನೆ ಮಾಡಿದರು,ಮಕ್ಕಳಿಗೆ ಮನೆಯಲ್ಲಿ ಪಾಠಗಳನ್ನು ಹೇಳಿಕೊಡುತ್ತಿದ್ದರು.ಮುಂದೆ ಮಾನವ್ ಅವರು ಒಂದು ಕ್ಲಬ್ ನಲ್ಲಿ DJ ಆಗಿ ಕೆಲಸ ಮಾಡಿದರು ಮತ್ತ್ತೊಂದು ಕಡೆ ನೀತಿ ಯವರು ಪ್ಯಾಷನ್ ಡೆಸೈನಿಂಗ್ ನಲ್ಲಿಯೇ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು.

ಈ ಇಬ್ಬರು ಸೇರಿ ಉಳಿತಾಯ ಮಾಡಿದ್ದ 25000 ರೂ.ಗಳಷ್ಟು ಹಣವನ್ನು ಹೂಡಿ ಅವರ ಗೆಳೆಯನ ಗ್ಯಾರೇಜ್ ನಲ್ಲಿ ಒಂದು ಕೊರಿಯೆರ್ ವ್ಯವಹಾರವನ್ನು ಸ್ಥಾಪಿಸಿದರು.ನಂತರ ಮಾನವ್ ರವರು ಅವರ ಗೆಳೆಯನಿಂದ ಹಣವನ್ನು ತೆಗೆದುಕೊಂಡು ಅದನ್ನು ವಾಣಿಜ್ಯಮಯವಾಗಿ ಬದಲಾಯಿಸಿದರು.ನಂತರ ಅವರು ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಹೂಡಿಕೆ ಮಾಡಲು ಪ್ರಾರಂಭಿಸಿದರು. ನಂತರ ಅವರು 9.5 ಲಕ್ಷಕ್ಕೆ ಒಂದು ಕಟ್ಟಡವನ್ನು ಖರೀದಿ ಮಾಡಿದರು ಅದರಲ್ಲಿ ಎಂದಿನಂತೆ ಕೊರಿಯೆರ್ ವ್ಯವಹಾರದ ಜೊತೆ ಜೊತೆಯಲ್ಲಿ ಒಂದು ಸೈಬರ್ ಅಂಗಡಿಯನ್ನ ಕೇವಲ ಎರಡು ಕಂಪ್ಯೂಟರ್ಗಳ ಸಹಾಯದಿಂದ ಪ್ರಾರಂಭಿಸಿದರು.

2005ರಲ್ಲಿ ಇವರು ಜ್ಯುಸ್ ಅಂಗಡಯೊಂದನ್ನು ಪ್ರಾರಂಭಿಸಿದರು ಅದಕ್ಕೆ ಅವರು ‘ಜ್ಯುಸ್ ಲಾಂಜ್’ ಎಂದು ಕರೆದರು. ಅದರಲ್ಲಿ ಅವರು ವಾರ್ಷಿಕವಾಗಿ ಸುಮಾರು ಮೂವತ್ತು ಲಕ್ಷ ವಹಿವಾಟಿನ ಲಾಭ ಬಂದಿತು.ಜ್ಯುಸ್ ಅಂಗಡಿಯನ್ನು ಸ್ಥಾಪಿಸಿದ ಎರಡು ವರ್ಷಗಳ ನಂತರ ನೀತಿಯ ತಂದೆಯು ಮಾನವ್ ಜೊತೆ ಮದುವೆ ಮಾಡಿಕೊಳ್ಳಲು ಒಪ್ಪಿದರು.2007ರಲ್ಲಿ ಈ ಇಬ್ಬರು ಮದುವೆ ಮಾಡಿಕೊಂಡು ಬಾಳ ಸಂಗಾತಿಗಳಾದರು.

ಮದುವೆ ಮಾಡಿಕೊಂಡು ಎರಡು ದಶಕಗಳು ಕಳೆದ ನಂತರ ಅವರ ಜ್ಯುಸ್ ವ್ಯವಹಾರವು ತುಂಬ ದೊಡ್ಡದಾಗಿ ಬೆಳೆದು ನಿಂತು ಇಂದು ‘ಜ್ಯುಸ್ ಲಾಂಜ್’ ದೇಶದೆಲ್ಲೆಡೆ ಸುಮಾರು ಐವತ್ತಕ್ಕೊ ಶಾಖೆಗಳನ್ನು ಹೊಂದಿದೆ.

ಈ ಇಬ್ಬರು ಪ್ರೇಮಿಗಳ ಜೀವನ ಕಥೆಯು ದೇಶದ ಅನೇಕ ಯುವಕ ಯುವತಿಯರಿಗೆ ಸ್ಪೂರ್ತಿದಾಯಕವಾಗಿದೆ.ಪ್ರೀತಿಯ ವಿಷಯದಲ್ಲಿ ಪೋಷಕರು ಒಪ್ಪದಿದ್ದಾಗ ಅವರನ್ನು ಎದುರು ಮಾಡಿಕೊಂಡು ಮದುವೆ ಮಾಡಿಕೊಳ್ಳುವ ಬದಲು ಜೀವನದಲ್ಲಿ ಏನನ್ನಾದರೂ ಸಾಧನೆ ಮಾಡಿ ಅವರೇ ಒಪ್ಪುವ ಹಾಗೆ ಮಾಡಬೇಕು ಎಂದು ಹೇಳುತ್ತದೆ.ಜೀವನದಲ್ಲಿ ಅಸಾಧ್ಯ ಎನ್ನುವುದು ಯಾವುದು ಇಲ್ಲ ಕಠಿಣ ಶ್ರಮ ಮತ್ತು ಬದ್ಧತೆ ಇಂದ ಕೆಲಸ ಮಾಡಿದರೆ ಏನನ್ನಾದರೂ ನಾವು ಸಾಧಿಸಬಹುದು ಎಂದು ತಿಳಿಸಿಕೊಡುತ್ತದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top