fbpx
ದೇವರು

ರಾಘವೇಂದ್ರ ಸ್ವಾಮಿಗಳ ಮಠ ಮತ್ತು ಮದುವೆಗಳಲ್ಲಿ ಹೆಚ್ಚಾಗಿ ಕಾಣಿಸೋ ಮಂತ್ರಾಕ್ಷತೆ ಬಗ್ಗೆ ಕೆಲವರಿಗೆ ಗೊತ್ತಿರೋ ವಿಷಯಗಳು ಇವು..

ಮಂತ್ರಾಕ್ಷತೆ ಮಹಿಮೆ..!


ಧಾರ್ಮಿಕ ವಿಧಿವಿಧಾನಗಳಲ್ಲಿ ಬಳಸಲ್ಪಡುವ ಮಂತ್ರಾಕ್ಷತೆಗೆ ವಿಶಿಷ್ಟ ಅರ್ಥವಿದೆ. ಶ್ರೇಯಸ್ಸು ಆಶೀರ್ವಾದದ ಪ್ರತೀಕ ಈ ಮಂತ್ರಾಕ್ಷತೆ ಎನ್ನಲಾಗುವುದು.
ಗುರು ರಾಘವೇಂದ್ರ ದೇವಾಲಯದಲ್ಲಿ ಮಂತ್ರಾಕ್ಷತೆ ಅರಿವಿಗೆ ಬರುತ್ತದೆ. ಅದೇ ರೀತಿ ಹಲವಾರು ಸ್ಥಳಗಳಲ್ಲಿ ಮಂತ್ರಾಕ್ಷತೆಯನ್ನು ಬಳಸಲಾಗುತ್ತದೆ. ಆದರೆ ಇದರ ಒಳರ್ಥ ಮಾತ್ರಿಂದಿನ ಯುವಪೀಳಿಗೆಗೆ ತಿಳಿದಿಲ್ಲ.


ಗುರು ಶಿಷ್ಯರ ಬಾಂಧವ್ಯದ ಸಂಕೇತವೂ ಆಗಿರುವ ಮಂತ್ರಾಕ್ಷತೆ ಮಠಕ್ಕೆ ಬರುವ ಶಿಷ್ಯರು ಗುರುಗಳಿಂದ ಆರ್ಶೀರ್ವಚನ, ಆಶೀರ್ವಾದ ಪಡೆದು ಮಂತ್ರಾಕ್ಷತೆಯೊಂದಿಗೆ ತೆರಳುವುದರಿಂದ ಬರಿಗೈಯಲ್ಲಿ ಹೋಗುವುದಿಲ್ಲ ಎಂಬ ವಾಡಿಕೆ ಇದೆ. ಬರುವಾಗ ಫಲ ತಾಂಬೂಲವನ್ನು ತರುವ ಶಿಷ್ಯರು ಮಠದ ಗುರುಗಳಿಂದ ಮಂತ್ರಾಕ್ಷತೆ ಪಡೆದುಕೊಳ್ಳುವುದು ಸಂಪ್ರದಾಯ.


ಮೂಲತಃ ಮಂತ್ರಾಕ್ಷತೆ ಎಂಬ ಪದ ಮಂತ್ರ ಮತ್ತು ಅಕ್ಷತೆ ಎಂಬ ಎರಡು ಪದಗಳಿಂದ ಮೂಡಿರುವಂತಹದ್ದು. ಅಕ್ಷತೆವೆಂದರೆ ಅಖಂಡವೆಂದರ್ಥ. ತುಂಡು ಇಲ್ಲದೆ ಇರುವ ಪರಿಪೂರ್ಣದ ಸಂಕೇತ. ಮನುಷ್ಯನಿಗೆ ಜೀವನದಲ್ಲಿ ಪರಿಪೂರ್ಣತೆ ಬೇಕು.

ಆರೋಗ್ಯ, ರೂಪ, ಆಯುಷ್ಯವಿರಬೇಕು ಆಗಲೇ ಪೂರ್ಣ, ಯಾವುದನ್ನು ಮನನ ಮಾಡುವುದರಿಂದ ನಮ್ಮನ್ನು ರಕ್ಷಿಸುತ್ತದೋ ಅದು ಮಂತ್ರ. ಶಿಷ್ಯ ಅಥವಾ ಭಕ್ತನ ಕ್ಷೇಮಕ್ಕಾಗಿ ಶ್ರೇಯಸ್ಸಿಗಾಗಿ ಗುರು ಮನಸ್ಸಿನಲ್ಲೇ ಮನನ ಮಾಡಿ ಅನುಗ್ರಹಿಸುವುದನ್ನು ಮಂತ್ರ ಎನ್ನಲಾಗುತ್ತದೆ. ಹೀಗಾಗಿ ಇವೆರಡರಿಂದ ಶ್ರೇಯಸ್ಸು ಲಭ್ಯ.


ಮಂತ್ರಾಕ್ಷತೆಯ ಫಲದ ಬಗ್ಗೆ ಹೇಳಬೇಕೆಂದರೆ ನಮ್ಮಲ್ಲಿ ಭಾವ ಎಷ್ಟಿದೆಯೋ, ಅಷ್ಟು ಫಲ ನೀಡುತ್ತದೆ. ಈ ಮಂತ್ರಾಕ್ಷತೆಯನ್ನು ನೆಚ್ಚಿದವರಿಗೆ ಸೋಲಿಲ್ಲವೆಂದು ಹೇಳಲಾಗುತ್ತದೆ. ಗುರು ಪ್ರೀಯ ಪ್ರತೀಕವಾದ ಮಂತ್ರಾಕ್ಷತೆ ನಮ್ಮ ಸಂಪ್ರದಾಯದಲ್ಲಿ ವಿಶಿಷ್ಟ ಸ್ಥಾನ ಗಳಿಸಿದೆ.
ಇತರ ಅರ್ಥ ವ್ಯಾಪ್ತಿ ತಿಳಿದ ನಾವು ಇದನ್ನು ಬದುಕಿನ ಅವಿಭಾಜ್ಯವೆನಿಸುವುದು ಭಾವ ಇರಲಿ, ಭಕ್ತಿ ಇರಲಿ ಜೀವನದಲ್ಲಿ ಇದಕ್ಕೆ ಔಷಧಿ ಎಂದರೆ ಮಂತ್ರಾಕ್ಷತೆ ಒಂದೇ.

ಬದುಕಿನ ಎಲ್ಲಾ ಕ್ಲೇಶಗಳು ಮತ್ತು ಪ್ರಶ್ನೆಗಳಿಗೆ ಉತ್ತರಿಸುತ್ತಾ ಭಾವಸಾಗರವನ್ನು ಮಂತ್ರಾಕ್ಷತೆ ದಾಟಿಸುತ್ತದೆ. ಮಂತ್ರಾಕ್ಷತೆ ಎಂದಿಗೂ ನಿಮ್ಮ ಶಿರದ ಮೇಲಿರಲಿ. ಮದುವೆ ಇನ್ನಿತರ ಶುಭ ಸಮಾರಂಭಗಳಲ್ಲಿ ಹಾರೈಕೆಯ ಸಂಕೇತವಾಗಿಯೂ ಮಂತ್ರಾಕ್ಷತೆಯನ್ನು ಹಿರಿಯರು ಹಾಕುತ್ತಾರೆ. ಅವರಿಗಾಗಿ ದೇವರಲ್ಲಿ ಪ್ರಾರ್ಥಿಸಿ ಹಾಕುವ ಮಂತ್ರಾಕ್ಷತೆಗೆ ವಿಶಿಷ್ಟ ಸ್ಥಾನವಿದೆ. ಎಲ್ಲರ ಬಳಿತಿಗಾಗಿ ದೇವರ ಮೊರೆ ಹೋಗುವುದು ವಿಶೇಷ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top