fbpx
ಭವಿಷ್ಯ

ಗರ್ಭಿಣಿ ಸ್ತ್ರೀಯರು ಈ 8 ವಸ್ತುಗಳನ್ನು ತಮ್ಮ ಕೋಣೆಯಲ್ಲಿ ಇಟ್ಟುಕೊಂಡರೆ ತಾಯಿ ಮತ್ತು ಮಕ್ಕಳಿಗೆ ತುಂಬಾ ಒಳ್ಳೇದು ಅನ್ನುತ್ತೆ ವಾಸ್ತು ಶಾಸ್ತ್ರ..

ಗರ್ಭಿಣಿ ಸ್ತ್ರೀಯರು ಈ 8  ವಸ್ತುಗಳನ್ನು ತಮ್ಮ ಕೋಣೆಯಲ್ಲಿ ಇಟ್ಟುಕೊಂಡರೆ  ತಮ್ಮ ತಾಯ್ತನ ಮತ್ತು ಮಗು ಇಬ್ಬರು ಸಂತೋಷದಿಂದ ಇರುತ್ತಾರೆ ಎಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ.

ನೀವು ನಿಮ್ಮ ಮಗುವನ್ನು ಸಂತೋಷದಿಂದ ಬರಮಾಡಿಕೊಳ್ಳಲು ಕಾಯುತ್ತಿರುವಿರೇ ? ಹಾಗಾದರೆ ವಾಸ್ತು ಶಾಸ್ತ್ರದಲ್ಲಿ ಅದಕ್ಕೆಂದೇ ಕೆಲವು ವಸ್ತುಗಳನ್ನು ನಿಮ್ಮ ಬಳಿ ಇಟ್ಟುಕ್ಕೊಳ್ಳಿ ಎಂದು ಹೇಳಿದ್ದಾರೆ.ಈ ಕೆಲವು ವಸ್ತ್ರಗಳನ್ನು ನೀವು ವಾಸಿಸುವ ಕೋಣೆಯಲ್ಲಿ ಸಹ ಇಟ್ಟುಕೊಳ್ಳಬಹುದು.ಆಗ ಅವು ನಿಮ್ಮ ಸುತ್ತ ಮುತ್ತಲೂ ಇರುವ ನಕಾರಾತ್ಮಕ ಶಕ್ತಿಯನ್ನು ಹೊರದೂಡಿ,ವಾಸ್ತು ದೋಷವನ್ನು ನಿವಾರಿಸಿ ಹಾಗೆ ಒಳ್ಳೆಯ ಅದೃಷ್ಟವನ್ನು ಸಹ ತಂದುಕೊಡುತ್ತವೆ.

ಹಾಗಾದರೆ ಇನ್ನೇಕೆ ತಡ,ಆರೋಗ್ಯಕರ ಗರ್ಭಾವಸ್ಥೆ ಮತ್ತು ಸಂತೋಷವಾಗಿರುವ ಮಗು ಇವೆರಡನ್ನು ಹೊಂದಲು ಎಲ್ಲಾ  ಸ್ತ್ರೀಯರು  ಹಾಗೂ ಅವರ ಕುಟುಂಬದವರ ಬಯಕೆಯೂ ಸಹ  ಆಗಿರುತ್ತದೆ.ಆದ್ದರಿಂದ ಇವುಗಳನ್ನು ನಿಮ್ಮ ಬಳಿ ಇಟ್ಟುಕೊಳ್ಳುವುದರಿಂದ  ಯಾವುದೇ ತೊಂದರೆಯಿಲ್ಲ. ಇಡೀ ವಿಶ್ವವೇ ನಿಮಗೆ ತಂದುಕೊಡುವಷ್ಟು ಸಂತೋಷ ವನ್ನು ಮತ್ತು ಉತ್ತಮ ಅದೃಷ್ಟವನ್ನು  ಈ ವಸ್ತುಗಳು ತಂದುಕೊಡ್ಡುತ್ತವೆ.

ಆದ್ದರಿಂದ ನೀವು ಈಗ ಗರ್ಭಿಣಿಯಾಗಿದ್ದರೆ ಅಥವಾ ಇನ್ನೂ ಮುಂದಕ್ಕೆ ಮಗುವನ್ನು ಬಯಸುತ್ತಿರುವವರು ಯಾರಾಗಿದ್ದರೂ ಸರಿ ನಿಮ್ಮ ಸ್ನೇಹಿತೆ, ಅಥವಾ ನಿಮ್ಮ ಕುಟುಂಬದಲ್ಲಿ ಯಾರಾದರೂ ಇದ್ದರೆ  ವಾಸ್ತು ಶಾಸ್ತ್ರದಲ್ಲಿ ಹೇಳಿರುವ ಈ ಸರಳವಾದ  ವಾಸ್ತು ಸಲಹೆಯನ್ನು ಪಾಲಿಸಲು ಹೇಳಿ.ಇವು ಅವರಿಗೆ ಪ್ರಯೋಜನಕಾರಿಯಾಗಿವೆ.ಆ ವಸ್ತುಗಳು ಯಾವುವೆಂದು ಇಲ್ಲಿವೆ ನೋಡಿ…

ಗರ್ಭಿಣಿ ಸ್ತ್ರೀಯರಿಗೆ ಮಂಗಳಕಾರಿ ವಸ್ತುಗಳು.

1.ಹಳದಿ ಆಕ್ಕಿ ಅಥವಾ ಅಕ್ಷತೆ.

ಅಕ್ಷತೆಯು  ಹಿಂದೂ ಸಂಪ್ರದಾಯದಲ್ಲಿ ಅತೀ ಹೆಚ್ಚಿನ ಮಹತ್ವವನ್ನು ಹೊಂದಿದೆ. ಅಕ್ಷತೆಯನ್ನು  ನಿಮ್ಮ ಕೋಣೆಯಲ್ಲಿ ಇಟ್ಟುಕೊಳ್ಳುವುದರಿಂದ  ಅದು ನಕಾರಾತ್ಮಕ ಶಕ್ತಿಯನ್ನು ಹೊರದೂಡುತ್ತವೆ. ಆದ್ದರಿಂದ ಅಕ್ಷತೆಯನ್ನು  ಮಂಗಳಕರವೆಂದು ಹೇಳಲಾಗಿದೆ.

2.ಗುಲಾಬಿ ಬಣ್ಣದ  ಚಿತ್ರವಿರುವ ಫೋಟೋ ಅಥವಾ  ಪ್ರದರ್ಶನಕ್ಕಿಡುವ ವಸ್ತು.

ಗುಲಾಬಿ ಬಣ್ಣವು ಸಂತೋಷ ಮತ್ತು ಉತ್ಸಾಹದ  ಸಂಕೇತವಾಗಿದೆ. ಗರ್ಭಿಣಿ ಸ್ತ್ರೀಯರು ಗುಲಾಬಿ ಬಣ್ಣದ ಚಿತ್ರವಿರುವ  ಒಂದು ಫೋಟೋ ಅಥವಾ ಪ್ರದರ್ಶನಕ್ಕಿಡುವ  ಒಂದು ವಸ್ತುವನ್ನು ಕೋಣೆಯಲ್ಲಿ ಇಟ್ಟುಕೊಳ್ಳುವುದು ಒಳ್ಳೆಯದು.

3.ಮಂಗಳಕರ ಚಿತ್ರ:- ಮಾತೇ ಯಶೋಧ ಮತ್ತು ಕಂದ.

ಮಾತೇ ಯಶೋಧೆ ಮತ್ತು ಯಶೋದೆಯ ಮಗ ಕೃಷ್ಣನು ಜೊತೆಗಿರುವ ಚಿತ್ರದ ಒಂದು ಫೋಟೋವನ್ನು ನಿಮ್ಮ ಕೋಣೆಯಲ್ಲಿ ನೇತುಹಾಕಿ.ನೀವು ಬೆಳ್ಳಗ್ಗೆ  ನಿದ್ರೆಯಿಂದ ಎದ್ದು ಬಲ ಭಾಗಕ್ಕೆ ನೋಡುತ್ತೀರಲ್ಲವೇ ಆ ದಿಕ್ಕಿನಲ್ಲಿ ಫೋಟೋವನ್ನು ನಿಮ್ಮ ಕಣ್ಣಿಗೆ ಕಾಣಿಸುವಂತೆ ಇಟ್ಟುಕೊಳ್ಳಿ.

4.ವಾಸ್ತು ದೇವನ ಚಿತ್ರವಿರುವ ಫೋಟೋ.

ವಾಸ್ತು ದೋಷವು ಒಬ್ಬ ಗರ್ಭಿಣಿ ಸ್ತ್ರೀ ಮೇಲೆ ತನ್ನ ಪರಿಣಾಮವನ್ನು ಬೀರುತ್ತದೆ. ಆ ರೀತಿಯ ಪರಿಸ್ಥಿತಿ ಇದ್ದಲ್ಲಿ ವಾಸ್ತು ದೇವನ  ಚಿತ್ರವಿರುವ  ಒಂದು ಫೋಟೋವನ್ನು ನಿಮ್ಮ ಮನೆ ಅಥವಾ ಕೋಣೆಯಲ್ಲಿ ನೇತು ಹಾಕಿ ಅದು  ವಾಸ್ತು ದೋಷದಿಂದ ಉಂಟಾಗುವ ಕೆಟ್ಟ ಪರಿಣಾಮಗಳನ್ನು ನಾಶಗೊಳಿಸುತ್ತದೆ.

5.ಹಿತ್ತಾಳೆಯ  ಲೋಹವಿರುವ ಒಂದು ವಸ್ತು.

ವಾಸ್ತುವಿನ ಪ್ರಕಾರ  ಹಿತ್ತಾಳೆಯ ಲೋಹವಿರುವ ಒಂದು ವಸ್ತುವನ್ನು ಇಡಿ .ಅದು ನಾಕಾರಾತ್ಮಕ ತರಂಗಾಂತರಗಳನ್ನು ಹೀರಿಕೊಳ್ಳುತ್ತದೆ ಎಂದು ಹೇಳಲಾಗಿದೆ.ಅದನ್ನು ನಿಮಗೆ ಉಪಯೋಗವಾಗುವ  ಯಾವುದೇ ರೀತಿಯಲ್ಲಾದರೂ ಇಟ್ಟುಕೊಳ್ಳಬಹುದು.ಇದು ನಿಮ್ಮ ಕೋಣೆಯಲ್ಲಿ ಧನಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ.

6.ನವಿಲುಗರಿಯ ರೆಕ್ಕೆಗಳು.

ಇದು ಕೃಷ್ಣನಿಗೆ ಸಂಬಂಧಪಟ್ಟ ವಸ್ತುವಾಗಿದ್ದು.ಇದನ್ನು ನೀವು ನಿಮ್ಮ ಮನೆಯಲ್ಲಿರುವ ಪೂಜಾ ಕೋಣೆ ಅಥವಾ ಮಲಗುವ ಕೋಣೆಯಲ್ಲಿ ಇಟ್ಟುಕೊಂಡರೆ ಒಳ್ಳೆಯದು.ಹಾಗೆ ನವಿಲು ಗರಿಯು ಅದೃಷ್ಟದ ಸಂಕೇತವೂ ಆಗಿದೆ.

7.ಬಿಳಿಯ ಚಿತ್ರ ಅಥವಾ ಪ್ರದರ್ಶನಕ್ಕಿಡುವ ವಸ್ತು.

ಬಿಳಿ ಬಣ್ಣವು ಶಾಂತಿ ಮತ್ತು ಉತ್ತಮ ಆರೋಗ್ಯದ ಸಂಕೇತವಾಗಿದ್ದು. ಗುಲಾಬಿ ಬಣ್ಣದ ಜೊತೆ,ಇದನ್ನು ಕೂಡ ಪ್ರದರ್ಶನಕ್ಕೆ ಇಟ್ಟರೆ ಉತ್ತಮ.

8.ತಾಜಾ ಹೂವುಗಳು ಮತ್ತು ಹಚ್ಚ ಹಸಿರಾದ ಗಿಡಗಳು.

ತಾಜಾ ಹೂವುಗಳು ಅಥವಾ ಹಚ್ಚ ಹಸಿರಾದ ಗಿಡಗಳನ್ನು ಮನೆಯಲ್ಲಿ ಬೆಳೆಸಿ ಅದರಲ್ಲಿ  ಯಾವುದಾದರೂ ಕೊಳೆತು ಹೋಗಿದ್ದರೆ , ಮುರಿದು ಹೋಗಿದ್ದರೆ  ಅಥವಾ ಒಣಗಿ ಹೋಗಿದ್ದರೆ ಅದನ್ನು ತೆಗೆದು ಹೊರಗೆ ಹಾಕಿ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top