ಶನಿವಾರ, ೨೪ ಜೂನ್ ೨೦೧೭
ಸೂರ್ಯೋದಯ : ೦೫:೨೮
ಸೂರ್ಯಾಸ್ತ : ೧೯:೧೮
ಶಕ ಸಂವತ : ೧೯೩೯ ಹೇವಿಲಂಬಿ
ಅಮಂತ ತಿಂಗಳು : ಜ್ಯೇಷ್ಠ
ಪಕ್ಷ : ಕೃಷ್ಣ ಪಕ್ಷ
ತಿಥಿ : ಅಮಾವಾಸ್ಯೆ
ಬಿಟ್ಟುಹೋದ ತಿಥಿ : ಪಾಡ್ಯ
ನಕ್ಷತ್ರ : ಆರಿದ್ರ
ಯೋಗ : ವೃದ್ಧಿ
ಅಮೃತಕಾಲ : ೧೭:೦೯ – ೧೮:೩೪
ರಾಹು ಕಾಲ: ೦೮:೫೬ – ೧೦:೩೯
ಗುಳಿಕ ಕಾಲ: ೦೫:೨೮ – ೦೭:೧೨
ಯಮಗಂಡ: ೧೪:೦೭ – ೧೫:೫೦
ಮೇಷ (Mesha)
ವ್ಯಾಪಾರ ವ್ಯವಹಾರದಲ್ಲಿ ವಂಚನೆಗೆ ಅವಕಾಶ ತೋರಿಬರಲಿದೆ. ಜಾಗ್ರತೆ ವಹಿಸಿರಿ. ನಿರುದ್ಯೋಗಿಗಳು ಹೆಚ್ಚಿನ ಪ್ರಯತ್ನಬಲದಿಂದ ಮುಂದುವರಿಯ ಬೇಕಾಗುತ್ತದೆ. ಜಾಗ್ರತೆ ವಹಿಸಿರಿ.
ವೃಷಭ (Vrushabh)
ಹಳೇ ಮಿತ್ರರ ಭೇಟಿ ಸಂತಸ ತಂದೀತು. ವ್ಯಾಪಾರ, ವ್ಯವಹಾರಗಳಲ್ಲಿ ತುಸುಮಟ್ಟಿನ ಹೂಡಿಕೆಯು ಲಾಭಕರವಾಗಲಿದೆ. ಮಾನಸಿಕವಾಗಿ ಹೊಂದಾಣಿಕೆ, ಸಹನೆ, ಕೋಪತಾಪಗಳನ್ನು ನಿಯಂತ್ರಿಸಿಕೊಳ್ಳುವುದು ಅಗತ್ಯವಿದೆ.
ಮಿಥುನ (Mithuna)
ವ್ಯಾಪಾರ, ವ್ಯವಹಾರಗಳು ಉತ್ತಮ ಅಭಿವೃದ್ಧಿಯನ್ನು ತೋರಿಸಿದರೂ ನೀವು ಯಾರನ್ನೂ ನಂಬಂದಂತಹ ಪರಿಸ್ಥಿತಿ ತೋರಿಬರಲಿದೆ. ಜಾಗ್ರತೆ ವಹಿಸಿರಿ. ಆರ್ಥಿಕವಾಗಿ ಜಾಗ್ರತೆ ವಹಿಸುವುದು ಉತ್ತಮ.
ಕರ್ಕ (Karka)
ಮಕ್ಕಳಿಂದ, ಹೆಂಡತಿಯಿಂದ ಸಂತಸದ ವಾತಾವರಣ. ನಿಮ್ಮ ಮನೋಕಾಮನೆಗಳನ್ನು ಚಾಲನೆಗೆ ತನ್ನಿರಿ. ಮಕ್ಕಳ ಅಭ್ಯಾಸದ ಬಗ್ಗೆ ಇನ್ನೂ ಹೆಚ್ಚಿನ ಗಮನ ಹರಿಸಿರಿ. ದೂರ ಸಂಚಾರದಲ್ಲಿ ನಿಮ್ಮ ಕಾರ್ಯಸಿದ್ಧಿಯಾಗಲಿದೆ.
ಸಿಂಹ (Simha)
ಗುರುಕೃಪೆ ಉತ್ತಮವಿರುವುದರಿಂದ ಎಲ್ಲಾ ಬಗೆಯ ವಾದ-ವಿವಾದಗಳಿಂದ, ಭಿನ್ನಾಭಿಪ್ರಾಯ, ಕೋಪ-ತಾಪಗಳನ್ನು ಎದುರಿಸಿ ಮುನ್ನಡೆ ಯುವುದು ನಿಮ್ಮ ಕರ್ತವ್ಯ. ನವ ದಂಪತಿಗಳಿಗೆ ಸದ್ಯದಲ್ಲೇ ಸಂತಾನ ಭಾಗ್ಯವಿದೆ.
ಕನ್ಯಾರಾಶಿ (Kanya)
ದಾಯಾದಿಗಳಿಂದ ಕಿರಿಕಿರಿ ತೋರಿಬಂದರೂ ನಿಮ್ಮ ಕರ್ತವ್ಯ ನಿಷ್ಠೆ ಕ್ರಿಯಾಶೀಲತೆ, ಪ್ರಯತ್ನಶೀಲತೆ ನಿಮ್ಮನ್ನು ಅಭಿವೃದ್ಧಿ ಪಥಕ್ಕೆ ಒಯ್ಯಲಿದೆ. ಅನಿರೀಕ್ಷಿತ ಧನಾಗಮನ ನಿಮ್ಮ ಕಾರ್ಯಸಿದ್ಧಿಗೆ ಅನುಕೂಲವಾಗಲಿದೆ.
ತುಲಾ (Tula)
ಸದ್ಯದಲ್ಲೇ ಅಭಿವೃದ್ಧಿ ಗೋಚರಕ್ಕೆ ಬರುವ ಕಾರಣ ನೀವು ಬಂದ ಅವಕಾಶಗಳನ್ನು ಧೈರ್ಯದಿಂದ ಪಡೆಯ ತಕ್ಕದ್ದು. ಆರ್ಥಿಕವಾಗಿ ಹೆಚ್ಚಿನ ಗಮನ ಹರಿಸಿರಿ. ಕಿರು ಸಂಚಾರ ಭಾಗ್ಯ ಕಂಡು ಬರಲಿದೆ.
ವೃಶ್ಚಿಕ (Vrushchika)
ವಿದ್ಯಾರ್ಥಿಗಳಿಗೆ ನಿರುದ್ಯೋಗಿಗಳಿಗೆ, ಯೋಗ್ಯ ವಯಸ್ಕರಿಗೆ ನಿಮ್ಮ ಕಾರ್ಯಸಾಧನೆಗೆ ಉತ್ತಮವಾದ ಅವಕಾಶಗಳಿರುತ್ತವೆ. ಮನೆಯಲ್ಲಿ ಶುಭ ಮಂಗಲ ಕಾರ್ಯ. ವೃತ್ತಿರಂಗದಲ್ಲಿ ಹಿರಿಯ ಅಧಿಕಾರಿಗಳಿಗೆ ಮುನ್ನಡೆ ಇದೆ.
ಧನು ರಾಶಿ (Dhanu)
ಹನಿಮ್ಮ ಕರ್ತವ್ಯನಿಷ್ಠೆ ಪ್ರಯತ್ನಶೀಲತೆ ಆತ್ಮವಿಶ್ವಾಸ ನಿಮಗೆ ನಿಶ್ಚಿತ ರೂಪದಲ್ಲಿ ಫಲ ನೀಡಲಿದೆ. ಆದರೂ ಹಣಕಾಸಿನ ಬಗ್ಗೆ ಜಾಗ್ರತೆ ವಹಿಸಿರಿ. ಮನೆಯಲ್ಲಿ ಶ್ರೀ ದೇವತಾ ಅನುಗ್ರಹಕ್ಕಾಗಿ ದಿನನಿತ್ಯ ಪ್ರಾರ್ಥಿಸುವುದು ಅಗತ್ಯ.
ಮಕರ (Makara)
ನಿದೂರ ಸಂಚಾರದಲ್ಲಿ ಅಡೆತಡೆಗಳು ಆಗಾಗ ತೋರಿಬಂದರೂ ನಿಮ್ಮ ಪ್ರಯತ್ನಬಲ ಕಾರ್ಯಶೀಲತೆಗೆ ನಿಶ್ಚಿತ ರೂಪದಲ್ಲಿ ಸದ್ಯದಲ್ಲೇ ಫಲ ಸಿಗಲಿದೆ. ಉದರ, ಬೆನ್ನು, ಆಹಾರದ ಬಗ್ಗೆ ಜಾಗ್ರತೆ ವಹಿಸುವುದು ಅಗತ್ಯವಿದೆ.
ಕುಂಭರಾಶಿ (Kumbha)
ಸಾಂಸಾರಿಕವಾಗಿ ಉತ್ತಮ ಅಭಿವೃದ್ಧಿ ತೋರಿಬಂದರೂ ವೈಯಕ್ತಿಕವಾಗಿ ನಿಮ್ಮ ಸಹಕಾರ, ಹೊಂದಾಣಿಕೆ ಅತೀ ಅಗತ್ಯವಿದೆ. ದೂರ ಸಂಚಾರದಲ್ಲಿ ಕಾರ್ಯಸಿದ್ಧಿಯಾದರೂ ಜಾಗ್ರತೆ ವಹಿಸುವ ಪ್ರಸಂಗ ತೋರಿಬಂದೀತು.
ಮೀನರಾಶಿ (Meena)
ಯೋಗ್ಯ ವಯಸ್ಕರ ವಿವಾಹ ಪ್ರಸ್ತಾವಗಳು ಕಂಕಣಬಲವನ್ನು ತಂದುಕೊಟ್ಟಾವು. ದಾಯಾದಿಗಳ ಬಗ್ಗೆ ಹೆಚ್ಚಿನ ವಿಶ್ವಾಸವನ್ನು ಇಟ್ಟುಕೊಳ್ಳದಿರಿ. ಕುಲದೇವರ ಸೇವಾಭಾಗ್ಯದಿಂದ ನಿಮಗೆ ಸಮಾಧಾನ ಸಿಗಲಿದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
