ಅಮೃತಬಳ್ಳಿಯ ಉಪಯೋಗಗಳು:
ಅಮೃತಬಳ್ಳಿಯು ನಮ್ಮ ಮನೆಯಂಗಳದಲ್ಲಿ ಸುಲಭವಾಗಿ ಬೆಳೆಸಬಹುದಾದ ಔಷಧೀಯ ಬಳ್ಳಿ.ಇದರ ಕಾಂಡ, ಎಲೆ, ಬೇರು ಎಲ್ಲವೂ ಔಷಧೀಯ ಗುಣಗಳನ್ನು ಹೊಂದಿದೆ. ಅಮೃತ ಬಳ್ಳಿಯು ಕಹಿ, ಒಗರು ರಸಗಳನ್ನು ಒಳಗೊಂಡಿರುತ್ತದೆ.ಈ ಬಳ್ಳಿಯನ್ನು ಮನೆಯ ಎದುರು ಚಪ್ಪರದಂತೆ ಹಬ್ಬಿಸಬಹುದು.ಇದನ್ನು ಎಲ್ಲಾ ಪ್ರದೇಶದಲ್ಲಿ ಬೆಳೆಸಬಹುದು. ನೀರು ಮತ್ತು ಕೊಟ್ಟಿಗೆ ಗೊಬ್ಬರ ಅವಶ್ಯಕ.
ಜ್ವರ ಮತ್ತು ಮಧುಮೇಹಕ್ಕೆ ರಾಮಬಾಣ:
ಎಲ್ಲಾ ಬಗೆಯ ಜ್ವರಗಳಲ್ಲಿಯೂ ಅಮೃತಬಳ್ಳಿಯು ಉತ್ತಮ ಔಷಧಿಯಾಗಿದೆ. ಮಧುಮೇಹ ರೋಗಕ್ಕೂ ಸಹ ಔಷಧಿಯಾಗಿ ಬಳಸುತ್ತಾರೆ. ಅದರ ಚಿಗರು ಕಾಂಡವನ್ನು ಜಜ್ಜಿ , ಹಿಸುಕಿ ರಸ ತೆಗೆದು 2 ಚಮಚೆ ರಸವನ್ನು ಜೇನು ತುಪ್ಪದೊಂದಿಗೆ ಬೆರೆಸಿ ದಿನಕ್ಕ್ಕೆ ಮೂರು ಬಾರಿ ಆಹಾರ ಸೇವನೆಯ ಮುಂಚೆ ಕುಡಿಯಬೇಕು.
ಎದೆ ನೋವು:
ಅಮೃತಬಳ್ಳಿಯ ಚೂರನ್ನು ಅರ್ಧ ಟೀ ಚಮಚದಷ್ಟೇ ಒಂದೆರಡು ಮೆಣಸು ಕಾಳಿನ ಪುಡಿ ಸೇರಿಸಿಬೆಚ್ಚಗಿನ ನೀರಿನಲ್ಲಿ ಕಲಕಿ ದಿನಕ್ಕೆ ಎರಡು ವೇಳೆ ಸೇವಿಸುವುದರಿಂದ ಎದೆ ನೋವು ಕಡಿಮೆಯಾಗುತ್ತದೆ.
ಬಾಣಂತಿಯರು ಅಮೃತಬಳ್ಳಿ ಹಾಗೂ ಶುಂಠಿಯಿಂದ ತಯಾರಿಸಿದ ಕಷಾಯವನ್ನು ಸೇವಿಸುವುದರಿಂದ ಸ್ತನ್ಯ(ಎದೆಹಾಲು) ಶುದ್ಧಿಯಾಗುವುದು.
ವಾಂತಿಯಾಗುತ್ತಿದ್ದರೆ 10 – 20 ಗ್ರಾಂ ಅಮತ ಬಳ್ಳಿ ಕಷಾಯದ ಜತೆ 2 ಚಮಚ ಜೇನುತುಪ್ಪವನ್ನು ಸೇರಿಸಿ ಸೇವಿಸಿ ವಾಂತಿಯಾಗುವುದು ಕೆಡಿಮೆ ಯಾಗುತ್ತದೆ.
ಅಮೃತ ಬಳ್ಳಿ ಹಾಗೂ ತ್ರಿಫಲಾ ಪುಡಿ ಸೇರಿಸಿ ಕಷಾಯ ತಯಾರಿಸಿ. ಅದಕ್ಕೆ ಜೇನುತುಪ್ಪ ಬೆರೆಸಿ ನಿಯಮಿತವಾಗಿ ಸೇವಿಸಿದರೆ ಕಣ್ಣಿನ ದಷ್ಠಿ ಹೆಚ್ಚುತ್ತದೆ.
ಅಮೃತ ಬಳ್ಳಿ ಪುಡಿಗೆ ಶುಂಠಿ ಪುಡಿ ಮತ್ತು ಹಾಲು ಸೇರಿಸಿ ಸೇವಿಸಿದರೆ ಬಿಕ್ಕಳಿಕೆ ನಿಲ್ಲುತ್ತದೆ.
ಅಮೃತಬಳ್ಳಿ, ನೆಗ್ಗಿಲು, ಅಶ್ವಗಂಧ, ನೆಲ್ಲಿ, ಶುಂಠಿಗಳನ್ನು ಸಮಪ್ರಮಾಣದಲ್ಲಿ ನಯವಾಗಿ ಪುಡಿಯನ್ನು 10ಗ್ರಾಂನಷ್ಟು ಶುದ್ಧ ನೀರು ಹಾಕಿ ಕಷಾಯ ಮಾಡಿ ಒಂದು ಭಾರಿಗೆ ಒಂದು ಟೀ ಚಮಚದಷ್ಟು ಕುಡಿಯುದರಿಂದ ಮುತ್ರಕೋಶದಲ್ಲಿರುವ ಕಲ್ಲುಗಳು ಕ್ರಮೇಣವಾಗಿ ಕರಗುತ್ತದೆ.
ಅಮೃತಬಳ್ಳಿಯ ಹಸಿಸೊಪ್ಪಿನ ರಸವನ್ನು 2 ಟೀ ಚಮಚದಷ್ಟು ಸ್ವಲ್ಪ ಓಂಪುಡಿ ಸೇರಿಸಿ ಮಜ್ಜಿಗೆಯಲ್ಲಿ ಕದಡಿ ಕುಡಿಯುವುದರಿಂದ ಹೊಟ್ಟೆ ಉರಿಯು ಕಡಿಮೆಯಾಗುತ್ತದೆ.
ಬೊಜ್ಜು ಮತ್ತು ಕೊಬ್ಬು ಕಡಿಮೆ ಆಗಲು ಇದು ಪರಿಣಾಮಕಾರಿ ಔಷಧಿ. ಅಮೃತಬಳ್ಳಿ, ನೆಗ್ಗಿಲು, ಅಶ್ವಗಂಧ, ನೆಲ್ಲಿ, ಶುಂಠಿಗಳನ್ನು ಸಮಪ್ರಮಾಣದಲ್ಲಿ ನಯವಾಗಿ ಪುಡಿಯನ್ನು 10ಗ್ರಾಂನಷ್ಟು ಶುದ್ಧ ನೀರು ಹಾಕಿ ಮಾಡಿದ ಕಷಾಯಕ್ಕೆ ಒಂದು ಗುಲಗಂಜಿಯಷ್ಟು ಲೋಹ ಭಸ್ಮವನ್ನು ಮತ್ತು ಟೀ ಚಮಚ ಜೇನು ತುಪ್ಪವನ್ನು ಕೂಡಿಸಿ ಸೇವಿಸುವುದು. ಸುಮಾರು 40 ದಿನ ಇದನ್ನು ಸೇವಿಸಬೇಕು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
