ಆಷಾಢ ಮಾಸದ ಬಗ್ಗೆ ಇರುವ ನಂಬಿಕೆಗಳು
ನಮ್ಮ ಜೀವನದಲ್ಲಿ ಮತ್ತೊಮ್ಮೆ ಬರುತ್ತಿದೆ.ಈ ಮಾಸಬಂದರೆ ಸಾಕು ಜನಸಾಮಾನ್ಯರನ್ನು ಹಿಡಿದು ದೊಡ್ಡ ದೊಡ್ಡ ಶ್ರೀಮಂತ ವರ್ಗದ ಜನರೂ ಸಹ ಒಳ್ಳೆಯ ಶುಭ ಸಮಾರಂಭಗಳನ್ನು ಮಾಡಲು ಹಿಂದೇಟು ಹಾಕುತ್ತಾರೆ.ಏಕೆಂದರೆ ಇದು ಸಾದರಣವಾದ ಮಾಸವಲ್ಲ ಉಳಿದ ಎಲ್ಲ ಮಾಸಗಳಿಗಿಂತ ಭಿನ್ನವಾದದು ಅದು ಏನೆಂಬುದನ್ನು ಈ ಲೇಖನದಲ್ಲಿ ಓದಿ ತಿಳಿದುಕೊಳ್ಳಿ.
ಪ್ರತಿವರ್ಷವೂ ಆಷಾಢ ಮಾಸವು ಪ್ರಾರಂಭವಾದ ನಂತರ ನಿರಂತ್ರವಾಗಿ ನಡೆಯುತ್ತಿದ್ದ ಮದುವೆ ಮಾತುಕತೆ, ಮದುವೆ,ಗೃಹ ಪ್ರವೇಶ,ಉಪನಯನ, ವಾಹನ ಮತ್ತು ಜಮೀನು ಖರೀದಿ ,ಹೊಸ ವ್ಯಾಪಾರ ಪ್ರಾರಂಭ ಮುಂತಾದ ಕಾರ್ಯಗಳೆಲ್ಲ ತಾತ್ಕಾಲಿಕವಾಗಿ ಒಂದು ತಿಂಗಳ ಮಟ್ಟಿಗೆ ನಿಲ್ಲುತ್ತವೆ.ಯಾವುದೇ ಶಾಸ್ತ್ರ ಪುರಾಣ ಗಳಲ್ಲಿ ಆಷಾಢ ಮಾಸವು ಅಶುಭವಾದುದ್ದು ಎಂದು ಹೇಳಿಲ್ಲ.ಆದರೂ ಕೆಲವರು ಆಷಾಢ ಮಾಸವು ಅಶುಭ,ಕೆಟ್ಟದ್ದು ಎಂಥೆಲ್ಲಾ ಹೇಳುತ್ತಾರೆ.
ಇದಕ್ಕೆ ಮುಖ್ಯ ಕಾರಣವೆಂದರೆ ನೂರಾರು ವರ್ಷಗಳ ಹಿಂದೆ ಆಷಾಢ ಮಾಸದಲ್ಲಿ(ಜೂನ್-ಜುಲೈ)ಮಳೆಯ ಆರ್ಭಟ ಜೋರಾಗಿರುತ್ತಿತ್ತು ಈ ರೀತಿಯ ವಿಪರೀತ ಮಳೆ ಹಾಗೂ ಗಾಳಿಯಿಂದಾಗಿ ಜನ ಜೀವನ ಅಸ್ತವ್ಯಸ್ತಗೊಂಡು ಸಂಚಾರಕ್ಕೆ ಅಡೆತಡೆ ಉಂಟು ಮಾಡುತ್ತಿತ್ತು ಈ ಕಾರಣಕ್ಕೆ ಮೇಲಿನ ಎಲ್ಲ ಕೆಲಸಗಳು ತಾತ್ಕಾಲಿಕವಾಗಿ ಸ್ಥಗಿತಗೊಳ್ಳುತ್ತಿದ್ದವು.
ಮತ್ತೊಂದು ಕಾರಣ ಕೊಡಬೇಕೆಂದರೆ ಅದು ವ್ಯವಸಾಯ. ಸಾಮಾನ್ಯವಾಗಿ ಆಷಾಢ ಮಾಸದಲ್ಲಿ ಮಳೆಯು ಬರುತ್ತಿದ್ದರಿಂದ ಆಗಿನ ಕಾಲದ ಮೂಲ ವೃತ್ತಿಯಾಗಿದ್ಫಾ ವ್ಯವಾಸಾಯದಲ್ಲಿ ಜನರು ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಿದ್ದರು.ಹೆಚ್ಚಿನ ಸಮಯವನ್ನು ಹೊಲ ಗದ್ದೆ ಗಳಲ್ಲಿಯೇ ಕಳೆಯುತ್ತಿದ್ದರು ಈ ಕಾರಣಕ್ಕೆ ಬೇರೆ ವ್ಯವಹಾರಗಳನ್ನು ಮಾಡಲು ಅವರಿಗೆ ಸಮಯವೇ ಸಿಗುತ್ತಿರಲಿಲ್ಲ.ಆಷಾಢ ಮಾಸದಲ್ಲಿ ಶುಭಕಾರ್ಯಗಲ್ಲನ್ನು ಮಾಡಲು ಅನುಕೂಲಗಳು ಇಲ್ಲದಿರುವುದರಿಂದ ಆ ಮಾಸದಲ್ಲಿ ತಾತ್ಕಾಲಿಕವಾಗಿ ನಿಷೇಧಿಸುತ್ತಿದ್ದರು.ಯಾವುದೇ ಶಾಸ್ತ್ರ ಪುರಾಣ ಗಳಲ್ಲಿ ಆಷಾಢ ಮಾಸವು ಅಶುಭವಾದುದ್ದು ಎಂದು ಹೇಳಿಲ್ಲ.
ಈ ಮಾಸದ ಮಹತ್ವ.
*ಪ್ರಥಮ ಏಕಾದಶಿಯ ವ್ರತ ಬರುವುದು ಆಷಾಡದಲ್ಲಿ.
*ಸುಮಂಗಲಿಯರು ದೀರ್ಘಕಾಲದ ಮಾಂಗಲ್ಯ ಪ್ರಾಪ್ತಿಗಾಗಿ ಆಷಾಢ ಅಮಾವಾಸ್ಯೆಯಂದು.
*ಭೀಮೇಶ್ವರನ ವ್ರತವನ್ನು ಭಕ್ತಿಯಿಂದ ಆಚರಿಸುತ್ತಾರೆ.
*ಇನ್ನೊಂದು ವಿಶೇಷವೆಂದರೆ ಮೈಸೂರಿನ ತಾಯಿ ಚಾಮುಂಡೇಶ್ವರಿ ದೇವಿಯು ಜನ್ಮದಿನ.ಬರುವುದು ಈ ಮಾಸದಲ್ಲೇ
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
