ಹೊಟ್ಟೆ ನೋವಿಗೆ ಇಲ್ಲಿದೆ ಸಿಂಪಲ್ ಮನೆಮದ್ದು
ಕ್ರಿಮಿಗಳಿಂದ ಕೂಡಿದ ಆಹಾರ ಹೊಟ್ಟೆ ಸೇರಿದರೆ, ಅಜೀರ್ಣ ಸಮಸ್ಯೆ, ಆಹಾರ ವಿಷವಾಗುವುದು, ಆಹಾರದ ಅಲರ್ಜಿ, ಅಲ್ಸರ್, ಮಲಬದ್ಧತೆ, ಹೊಟ್ಟೆಯ ವೈರಸ್, ಗ್ಯಾಸ್ ಹರ್ನಿಯಾ, ಹೀಗೆ ಮುಂತಾದ ಹಲವಾರು ಸಮಸ್ಯೆಗಳಿರಬಹುದು, ಹಾಗಂತ ಸಮಸ್ಯೆ ಚಿಕ್ಕದೆಂದು ಉದಾಸೀನ ಮಾಡುವಂತಿಲ್ಲ
ಅಪ್ಪಿತಪ್ಪಿಯೂ ಹೊಟ್ಟೆ ನೋವನ್ನು ನಿರ್ಲಕ್ಷಿಸಬೇಡಿ ದಯವಿಟ್ಟು ಗಮನಿಸಿ
ಶುಂಠಿ
ಶುಂಠಿಯಲ್ಲಿ ಉರಿಯೂತ ಶಮನಕಾರಿ ಗುಣ ಮತ್ತು ಇತರ ಆರೋಗ್ಯಕಾರಿ ಲಾಭಗಳಿವೆ. ಇದು ಜೀರ್ಣಕ್ರಿಯೆ ಸರಾಗವಾಗಿಸಿ ಹೊಟ್ಟೆ ನೋವು ಕಡಿಮೆ ಮಾಡುತ್ತದೆ. ಒಣಗಿದ ಶುಂಠಿಗಿಂತ ಹಸಿ ಶುಂಠಿ ಹೆಚ್ಚು ಪರಿಣಾಮಕಾರಿ.ಇದಕ್ಕಾಗಿ ಹಸಿಶುಂಠಿಯ ಒಂದಿಂಚಿನ ತುಂಡನ್ನು ಜಜ್ಜಿ ಹಾಲಿಲ್ಲದ ಟೀ ಜೊತೆ ಕುದಿಸಿ ಸೋಸಿ ಬಿಸಿಯಾಗಿರುವಂತೆಯೇ ಸೇವಿಸುವುದರಿಂದ ಹೊಟ್ಟೆನೋವು ಕೂಡಲೇ ಕಡಿಮೆಯಾಗುತ್ತದೆ. ಜೊತೆಗೆ ಹುಳಿತೇಗು, ವಾಕರಿಕೆ ಮತ್ತು ವಾಂತಿಯನ್ನೂ ನಿಲ್ಲಿಸುತ್ತದೆ. ಉತ್ತಮ ಪರಿಣಾಮಕ್ಕಾಗಿ ಕೊಂಚ ಜೇನನ್ನೂ ಸೇರಿಸಬಹುದು.
ಲಿಂಬೆ ಹಣ್ಣು ಮತ್ತು ಅಡುಗೆ ಸೋಡ
ಒಂದು ಲೋಟ ನೀರಿಗೆ ಒಂದು ಲಿಂಬೆ ಹಣ್ಣಿನ ರಸ ಹಿಂಡಿ, ಅರ್ಧ ಟೀ ಚಮಚ ಅಡಿಗೆ ಸೋಡ ಸೇರಿಸಿ, ದಿನಕ್ಕೆ ಒಂದು ಗ್ಲಾಸ್ ಸೇವಿಸಿದರೆ ಹೊಟ್ಟೆನೋವಿನ ಸಮಸ್ಯೆಯೊಂದಿಗೆ, ಅಜೀರ್ಣದ ಸಮಸ್ಯೆಯೂ ನಿವಾರಣೆಯಾಗುವುದು.
ಉಗುರುಬೆಚ್ಚನೆಯ ನೀರು , ಉಪ್ಪು
ಒಂದು ವೇಳೆ ಹೊಟ್ಟೆಯುಬ್ಬರಿಸಿ ಹೊಟ್ಟೆನೋವಾಗುತ್ತಿದ್ದರೆ, ಒಂದು ಲೋಟ ಉಗುರುಬೆಚ್ಚನೆಯ ಬಿಸಿನೀರಿಗೆ ಒಂದು ಚಿಕ್ಕ ಚಮಚ(ತೀವ್ರವಾಗಿದ್ದರೆ ಎರಡು ಚಮಚ) ಅಡುಗೆ ಉಪ್ಪು ಹಾಕಿ ಕದಡಿ ಕುಡಿಯಿರಿ. ಬೆಳ್ಳಂ ಬೆಳಿಗ್ಗೆ ಕುಡಿಯಿರಿ, ಉಪ್ಪು ಬೆರೆಸಿದ ಬೆಚ್ಚನೆಯ ನೀರು
ಪುದೀನಾ ಎಲೆಗಳ ಜ್ಯೂಸ್
ಹೊಟ್ಟೆನೋವು, ವಾಕರಿಕೆ ಮತ್ತು ವಾಂತಿಗೆ ಪುದೀನಾ ಎಲೆಗಳ ರಸ ಉತ್ತಮ ಪರಿಹಾರವಾಗಿದೆ. ಇದಕ್ಕಾಗಿ ಒಂದು ಲೋಟ ನೀರಿಗೆ ಆರು ದೊಡ್ಡ ಪುದೀನಾ ಎಲೆಗಳ ಪ್ರಮಾಣದಲ್ಲಿ ಜ್ಯೂಸರ್‍ನಲ್ಲಿ ಅಗತ್ಯವಿದ್ದಷ್ಟು ರಸವನ್ನು ಸಿದ್ಧಪಡಿಸಿ.
ಈ ನೀರನ್ನು ಒಂದರಿಂದ ಮೂರು ಲೋಟಗಳವರೆಗೂ ಕುಡಿಯಬಹುದು. ಇನ್ನೂ ಉತ್ತಮ ಪರಿಣಾಮಕ್ಕಾಗಿ ಒಂದು ಬಾರಿಗೆ ಆರು ಎಲೆಗಳನ್ನು ಹಸಿಯಾಗಿ ಜಗಿದು ನೀರಿನೊಂದಿಗೆ ನುಂಗಬಹುದು. ಈ ರಸವನ್ನು ಊಟದ ಬಳಿಕ ಸೇವಿಸಬೇಕು.
ಏಲಕ್ಕಿ , ಜೀರಿಗೆ
ಅಜೀರ್ಣದ ಕಾರಣದಿಂದ ಹೊಟ್ಟೆನೋವಾಗಿದ್ದರೆ ಒಂದು ಲೋಟ ನೀರಿಗೆ ಸುಮಾರು ಐದರಿಂದ ಆರು ಏಲಕ್ಕಿಗಳ ಸಿಪ್ಪೆ ಸುಲಿದು ಕೇವಲ ಬೀಜಗಳನ್ನು ಮತ್ತು ಒಂದು ಚಿಕ್ಕ ಚಮಚ ಜೀರಿಗೆಯನ್ನು ಹಾಕಿ ಕುದಿಸಿ.
ಸುಮಾರು ಮೂರು ನಿಮಿಷ ಕುದಿದ ಬಳಿಕ ಒಲೆಯಿಂದಿಳಿಸಿ ತಣಿಯಲು ಬಿಡಿ. ಈ ನೀರನ್ನು ದಿನಕ್ಕೆ ಮೂರು ಬಾರಿ ಊಟದ ಬಳಿಕ ಕುಡಿಯಬಹುದು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
