ಕೂಲಿಕಾರನು 2500ಕೋಟಿ ರುಪಾಯಿಗೆ ಒಡೆಯನಾದ ರೋಚಕ ಕಥೆ
ಈ ಕಥೆಯು ತಮಿಳುನಾಡಿನ ಒಂದು ಚಿಕ್ಕ ಹಳ್ಳಿಯ ಒಂದು ಬಡ ಕುಟುಂಬದ ಕೊಳಕು ಮನೆಯಲ್ಲಿ ಹುಟ್ಟಿದ ಒಬ್ಬ ಪ್ರಭಾವಶಾಲಿ ಉದ್ಯಮಿಯ ಕಥೆಯಾಗಿದೆ.ಬಾಲ್ಯದಲ್ಲಿ ಇವರಿಗೆ ಶಾಲೆಗೆ ಹೋಗುವುದು ಒಂದು ಕನಸಿನಮಾತಾಗಿತ್ತು.ಯಾವುದೇ ಶೈಕ್ಷಣಿಕ ಹಿನ್ನಲೆ ಇಲ್ಲದೆ ಅವರ ಸತ್ಯ,ಕಠಿಣ ಪರಿಶ್ರಮ,ದೂರದೃಷ್ಟಿ,ಸರಳತೆಯಿಂದಲೇ ಎಲ್ಲವನ್ನು ಸಾಧಿಸಿದ ಸ್ಪೂರ್ತಿದಾಯಕ.ಅವರ ಹೆಸರು ಎಂ.ಜಿ.ಮುತ್ತು ಇವರು MGM ಗ್ರೂಪ್ ನ ಸಂಸ್ಥಾಪಕ.ಆರಂಭದಲ್ಲಿ ಇವರು ಹಡಗಿನಿಂದ ಸಾಗಿಬರುತ್ತಿದ್ದ ತೂಕದ ಮೂಟೆಗಳನ್ನು ಹೊರುವ ಕೂಲಿಕಾರನಾಗಿ ಕೆಲಸ ಮಾಡುತ್ತಿದ್ದರು.
ಇವರ ತಂದೆ ಜಮೀನ್ದಾರರ ಮನೆಯಲ್ಲಿ ಜೀತ ಮಾಡುತ್ತಿದ್ದರು.ಆ ದಿನಗಳಲ್ಲಿ ಅವರಿಗೆ ಒಂದೊತ್ತಿನ ಊಟಕ್ಕೂ ಸಹ ತುಂಬಾ ಕಷ್ಟ ಪಡುತ್ತಿದ್ದರು.ಇವರು ಎಷ್ಟೋ ಬಾರಿ ಖಾಲಿ ಹೊಟ್ಟೆಯಲ್ಲಿ ಮಲಗುತ್ತಿದ್ದುದ್ದೂ ಉಂಟು.ಇವರ ಹತ್ತನೇ ವರ್ಷದ ವಯಸ್ಸಿನಲ್ಲಿ ಇವರ ಗ್ರಾಮದ ಕೆಲವು ಮಕ್ಕಳ ಜೊತೆಯಲ್ಲಿ ಶಾಲೆಗೆ ಸೇರಿಕೊಂಡರು.ಆದರೆ ಶಾಲೆಗೇ ಸೇರಿಕೊಂಡ ಕೆಲವೇ ದಿನಗಳಲ್ಲಿ ಹಸಿವಿನ ನೋವಿಂದ ಓಡಾಡಲು ಆಗದೆ ಶಾಲೆಗೆ ಹೋಗುವುದನ್ನು ನಿಲ್ಲಿಸಿದರು.
ಯೌವ್ವನದಲ್ಲಿ ಇವರು ಇವರ ತಂದೆಯವರ ಜೊತೆ ಚೀಲಗಳನ್ನು ಹೊರುವ ಕೂಲಿ ಕೆಲಸಕ್ಕೆ ಹೋಗಿ ದಿನದ ಊಟಕ್ಕಾಗಿ ದುಡಿಯುತ್ತಿದ್ದರು. 1957ರಲ್ಲಿ ಮದ್ರಾಸಿನ ಬಂದರಿನಲ್ಲಿ ಕೂಲಿ ಕೆಲಸಗಾರನಾಗಿ ಸೇರಿಕೊಂಡರು.ಅಲ್ಲಿಂದ ಅವರು ತಮಗೆ ಬರುತ್ತಿದ್ದ ಕೂಲಿಯ ಹಣದಲ್ಲಿ ಸ್ವಲ್ಪ ಪ್ರಮಾಣದಲ್ಲಿ ಉಳಿತಾಯ ಮಾಡಲು ಆರಂಭಿಸಿದರು.ಈ ವಲಯದಲ್ಲಿ ಹೆಸರು ಮಾಡಿದ್ದ ಪ್ರಮುಖ ವ್ಯಕ್ತಿಗಳೊಂದಿಗೆ ಉತ್ತಮ ಸ್ನೇಹವನ್ನು ಹೊಂದಿದ್ದ ಮುತ್ತುರವರು ಈ ವ್ಯಕ್ತಿಗಳ ಸಲಹೆಯನ್ನು ಪಡೆದು ಸೈನಿಕದಳಗಳನ್ನು,ಸಾಮಾನು,ಸರಕುಗಳನ್ನು ಸ್ಥಳದಿಂದ ಸ್ಥಳಕ್ಕೆ ಸಾಗಿಸುವ ಒಂದು ಸಣ್ಣ ವ್ಯವಹಾರವನ್ನು ಆರಂಭಿಸಿದರು.
ಕೇವಲ ಶ್ರೀಮಂತರೇ ಮಾಡುತ್ತಿದ್ದ ಈ ವ್ಯವಹಾರವನ್ನು ಒಬ್ಬ ಕೂಲಿಕಾರನು ಮಾಡಿದನು ಎಂದು ಎಲ್ಲರು ಇವರನ್ನು ಶ್ಲಾಘನೆ ಮಾಡಿದರು.
ಮುಂದೆ ಇವರು ಯಾವುದೇ ಒಬ್ಬ ಗ್ರಾಹಕನನ್ನೂ ಸಹ ಕಳೆದುಕೊಳ್ಳದೇ ಅವರ ಸಮಯಕ್ಕೆ ಸರಿಯಾಗಿ ಮತ್ತು ಅವರ ಅವಶ್ಯಕತೆಗೆ ಅನುಗುಣವಾಗಿ ಸೇವೆಯನ್ನು ನೀಡುತ್ತಾ ಹೋದರು.ಯಾವುದೇ ಒಬ್ಬ ಗ್ರಾಹಕನಿಂದನೂ ಸಹ ಒಂದೇ ಒಂದು ದೂರು ಸಹ ಬಾರದಹಾಗೆ ಸೇವೆಯನ್ನು ಕೊಟ್ಟು ಇವರ ಸಾಮ್ರಾಜ್ಯನ್ನು ಸ್ಥಾಪಿಸಿಕೊಂಡರು ಮತ್ತು ಅವರು ಸ್ಥಾಪಿಸಿದ ಆ ಸಾಮ್ರಾಜ್ಯಕ್ಕೆ ‘MGM ಗ್ರೂಪ್’ ಹೆಸರಿಟ್ಟರು.
ಸೈನಿಕದಳವನ್ನು ಸಾಗಿಸುವ ವ್ಯವಾರದಲ್ಲಿ ಯಶಸ್ಸನ್ನು ಕಂಡನಂತರ ಇವರು ತಮ್ಮ ‘MGM ಗ್ರೂಪ್’ನ ಮೂಲಕ ಖನಿಜಸಂಪತ್ತು ಹಾಗು ಕಲ್ಲಿದ್ದಲನ್ನು ಹೊರತೆಗೆಯುವ ಗಣಿಗಾರಿಕೆ ವ್ಯವಹಾರವನ್ನು ಆರಂಭಿಸಿದರು ಹಾಗು ಅಂತಾರಾಷ್ಟ್ರೀಯ ಹೋಟೆಲ್ ಗಳನ್ನೂ ಸಹ ಇವರು ತಮ್ಮ ಸಂಸ್ಥೆಯ ಮುಖಾಂತರ ಪ್ರಾಂರಂಭಿಸಿದರು.ಈ ವ್ಯವಹಾರಗಳಲ್ಲೂ ಸಹ ಇವರು ಅಭೂತಪೂರ್ವ ಯಶಸ್ಸನ್ನು ಕಂಡರು.
ಇತ್ತೀಚಿಗೆ ಇವರ ‘MGM ಗ್ರೂಪ್’ ಸಂಸ್ಥೆಯು ಆಂಧ್ರ ಮತ್ತು ತಮಿಳುನಾಡಿನ ಎರಡು ಮದ್ಯಪಾನೀಯ ಕಂಪನಿಗಳನ್ನೂ ತನ್ನಲ್ಲಿ ವಿಲೀನಗೊಳಿಸಿಕೊಂಡಿತು.ಇವರ ವ್ಯವಹಾರಗಳನ್ನು ಕರ್ನಾಟಕದ ಅನೇಕ ಭಾಗಗಳಲ್ಲೂ ವಿಸ್ತರಿಸುತ್ತಿದ್ದೆ.ಕೇವಲ ಇದು ಮಾತ್ರವಲ್ಲದೆ ಒಂದು ಕಾಲದಲ್ಲಿ ಕೂಲಿಕಾರನಾಗಿದ್ದ ಒಬ್ಬ ವ್ಯಕ್ತಿಯು ಈಗ ಮಲೇಷ್ಯಾದಲ್ಲಿ ಇರುವ ಮ್ಯಾರಿ ಬೌನ್ ಎಂಬ ಪ್ರಸಿದ್ಧ ಹೋಟೆಲಿನ ಭಾರತೀಯ ವ್ಯವಹಾರದ ಹಕ್ಕನ್ನು ಸಹ ಇವರು ಹೊಂದಿದ್ದಾರೆ.
ಈ ಕಥೆಯಿಂದ ನಮಗೆ ಅರ್ಥವಾದ ತತ್ವ ಎಂದರೆ “ಮನಸಿದ್ದರೆ ಮಾರ್ಗ”.ಎಲ್ಲಿ ಮಾಡುವ ಕೆಲಸದಲ್ಲಿ ಛಲವಿರುತ್ತದೆಯೋ ಅಲ್ಲಿ ತಾನಾಗಿಯೇ ಹಲವು ದಾರಿಗಳು ಹುಟ್ಟಿಕೊಳ್ಳುತ್ತವೆ ಹಾಗು ಜೀವನದಲ್ಲಿ ಇಂದಿಗೂ ನಾವು ಹಿಂದೆ ಸರಿಯಾ ಬಾರದು ಎಂದು ತಿಳಿಸುತ್ತದೆ.MG ಮುತ್ತುರವರ ಕಥೆಯು ಎಲ್ಲರಿಗು ಒಂದು ಸ್ಪೂರ್ತಿದಾಯಕವಾಗಿದೆ.ಅವರು ಪಟ್ಟ ಕಷ್ಟಗಳ ಮದ್ಯೆಯೂ ಸಹ ಹೇಗೆ ಅವರು ಬೆಳೆದು ನಿಂತರು ಎಂಬುದು ಜಗತ್ತಿಗೆ ಮಾದರಿಯಾಗಿದೆ.ಪ್ರತಿದಿನ ಎದುರಾಗುವ ಕಷ್ಟಗಳಿ ಎದೆಗುಂದದೆ ಸಾಧನೆಯ ಶಿಖರ ಹೇಗೆ ಏರಬೇಕು ಎಂಬುದಕ್ಕೆ ಒಂದು ಉತ್ತಮ ಉದಾಹರಣೆ ಯಾಗಿದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
