ಕಿಚ್ಚಸುದೀಪ್ ರವರ ನಂತರ ಮತ್ತೊಬ್ಬ ಸ್ಟಾರ್ ನಟನಿಗೆ ಆಕ್ಷನ್ ಕಟ್ ಹೇಳಲಿರುವ ಸಿಂಪಲ್ ಹುಡುಗ ರಕ್ಷಿತ್
ತಮ್ಮ ಅಭಿಮಾನಿಗಳಿಂದ ಸಿಂಪಲ್ ಸ್ಟಾರ್,ಕಿರಿಕ್ ಸ್ಟಾರ್ ಎಂತೆಲ್ಲಾ ಕರೆಸಿಕೊಳ್ಳುವ ರಕ್ಷಿತ್ ಶೆಟ್ಟಿರವರು ‘ಕಿರಿಕ್ ಪಾರ್ಟಿ’ಚಿತ್ರದ ಅಭೂತಪೂರ್ವ ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದಾರೆ.ಇದರ ಜೊತೆಯಲ್ಲಿ ಇದೆ ಚಿತ್ರದ ನಾಯಕಿಯಾದ ರಶ್ಮಿಕಾ ಅವರನ್ನು ತಮ್ಮ ಬಾಳ ಸಂಗಾತಿಯನ್ನಾಗಿ ಮಾಡಿಕೊಳ್ಳಲು ಸಜ್ಜಾಗಿದ್ದಾರೆ ಇವರಿಬ್ಬರು ಇದೆ ಜುಲೈ 03ರಂದು ನಿಶ್ಚಿತಾರ್ಥ ಮಾಡಿಕೊಳ್ಳುತ್ತಿದ್ದಾರೆ.
ಈ ಎಲ್ಲ ಸಂತಸದ ನಡುವೆ ರಕ್ಷಿತ್ ರವರು ತಮ್ಮ ನಟನೆಯ ಮುಂದಿನ ಚಿತ್ರವಾದ ‘ಅವನೇ ಶ್ರೀಮನ್ನಾರಾಯಣ’ಎಂಬ ಚಿತ್ರದಲ್ಲಿ ನಟಿಸುತ್ತಿದ್ದಾರೆ.ಇದರ ನಂತರ ರಕ್ಷಿತ್ ನಟ ಸುದೀಪ್ ರಿಗೆ’ತಗ್ಸ್ ಆಫ್ ಮಾಲ್ಗುಡಿ’ಎಂಬ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ ಎಂಬ ವಿಷಯ ಈಗ ಎಲ್ಲರಿಗೂ ಗೊತ್ತು ಆದ್ರೆ ಸುದೀಪ್ ರವರ ನಂತರ ರಕ್ಷಿತ್ ರವರು ಮತ್ಯಾರಿಗೆ ನಿರ್ದೇಶನ ಮಾಡುತ್ತಾರೆ ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡುವುದು ಸಹಜ.
ಈ ಪ್ರಶ್ನೆಗೆ ರಕ್ಷಿತ್ ರವರು ಪುನೀತ್ ರನ್ನು ಆಯ್ಕೆಮಾಡಿಕೊಳ್ಳುವ ಒಂದು ಸಣ್ಣ ಸುಳಿವನ್ನು ನೀಡಿದ್ದಾರೆ.
ಇತ್ತೀಚಿಗೆ ಸ್ಟಾರ್ ಸುವರ್ಣವಾಹಿನಿಯಲ್ಲಿ ಪ್ರಸಾರವಾಗುವ ‘ಮಾತುಕತೆ ವಿನಯ್ ಜೊತೆ’ ಎಂಬ ಕಾರ್ಯಕಮಕ್ಕೆ ತಮ್ಮ ಭಾವಿ ಪತ್ನಿ ರಶ್ಮಿಕ ರವರೊಂದಿಗೆ ಕಾರ್ಯಕ್ರಮದ ಅತಿಥಿಗಳಾಗಿ ಬಂದಿದ್ದರು. ಈ ಕಾರ್ಯಕ್ರಮಲ್ಲಿ ನಿರೂಪಕನು ರಕ್ಷಿತ್ ರವರಿಗೆ ನಿಮ್ಮ ಆಲ್ ಟೈಂ ಫೇವರಿಟ್ ನಟ ಯಾರು ಕೇಳಿದಾಗ ಅನಂತ್ ನಾಗ್ ಎಂದು ಮತ್ತು ಆಲ್ ಟೈಂ ಫೇವರಿಟ್ ನಟಿ ಯಾರು ಎಂದು ಕೇಳಿದಾಗ ಕಲ್ಪನಾ ಎಂದೂ ಉತ್ತರ ನೀಡುತ್ತಾರೆ.
ನಂತರ ನಿರೂಪಕನು ಕಿಚ್ಚ ಸುದೀಪ್ ರವರ ನಂತರ ಯಾವ ನಟನಿಗೆ ನಿರ್ದೇಶನ ಮಾಡುತ್ತೀರಿ ಎಂದು ಪ್ರಶ್ನಿಸಿದಾಗ ಪುನೀತ್ ರಿಗೆ ನಿರ್ದೇಶನ ಮಾಡುವ ಆಸೆ ಇದೆ ಎಂದು ಹೇಳುತ್ತಾರೆ.
ಒಂದುವೇಳೆ ರೀಮೇಕ್ ಮಾಡಬೇಕಾದರೆ ಯಾವ ಚಿತ್ರವನ್ನು ರಿಮೇಕ್ ಮಾಡುತ್ತೀರಿ ಎಂದು ಪ್ರಶ್ನೆ ಕೇಳುತ್ತಾರೆ.ಆಗ ಅವರು ಒಂದುವೇಳೆ ರೀಮೇಕ್ ಚಿತ್ರ ಮಾಡಲೇಬೇಕಾದ ಸನ್ನಿವೇಅಹ ಬಂದರೆ ಹಿಂದಿಯ ಸಲ್ಮಾನ್ ಖಾನ್ ರವರ ‘ಭಜರಂಗಿ ಭಾಯಿಜಾನ್’ ಚಿತ್ರವನ್ನು ರೀಮೇಕ್ ಮಾಡಿ ಆ ಚಿತ್ರಕ್ಕೆ ಪುನೀತ್ ರನ್ನೇ ನಾಯಕನನ್ನಾಗಿ ಮಾಡುತ್ತೇನೆ ಎಂದು ಹೇಳಿದರು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
