ನಟ ಯಶ್ ಕುರಿತು ವಿವಾದಾತ್ಮಕ ಹೇಳಿಕೆ ಕೊಟ್ಟ ಕಿರಿಕ್ ಹುಡುಗಿ.
ಕಿರೀಟ್ ಪಾರ್ಟಿ ಚಿತ್ರವು ಯಶಶ್ವಿಯಾದ ಬಳಿಕ ಭಾರಿ ಸುದ್ದಿಯಲ್ಲಿರುವ ನಟಿ ರಶ್ಮಿಕಾ ಮಂದಣ್ಣ ರವರು ನಟ ಯಶ್ ರನ್ನ ಕುರಿತು ಒಂದು ವಿವಾದಾತ್ಮಕವಾದ ಹೇಳಿಕೆಯನ್ನು ನೀಡಿದ್ದಾರೆ.ಹೌದು ಇತ್ತೀಗಷ್ಟೇ ಕನ್ನಡದ ಸ್ಟಾರ್ ಸುವರ್ಣವಾಹಿನಿಯಲ್ಲಿ ಪ್ರಸಾರವಾಗುವ ‘ಮಾತುಕತೆ ವಿನಯ್ ಜೊತೆ’ಎಂಬ ಕಾರ್ಯಕ್ರಮಕ್ಕೆ ತಮ್ಮ ಭಾವಿಪತಿ ರಕ್ಷಿತ್ ಶೆಟ್ಟಿಯವರೊಂದಿಗೆ ಅತಿಥಿಗಳಾಗಿ ಹೋಗಿದ್ದ ಇವರು.ಈ ಕಾರ್ಯಕ್ರಮದಲ್ಲಿ ಸ್ವಲ್ಪ ಮಾತುಕತೆ ಹರಟೆ ಮಾಡಿ ಕಾಲ ಕಳೆಯುತ್ತಾರೆ.
ಈ ಕಾರ್ಯಕ್ರಮದ ಕೊನೆಯಲ್ಲಿ ನಿರೂಪಕನು ಕೇಳುವ ಯಾವುದೇ ಪ್ರಶ್ನೆಗೆ ಅವರು ಉತ್ತರವನ್ನು ಕೊಡಬೇಕು. ಹೀಗೆ ಪ್ರಶ್ನೆಗಳನ್ನು ಕೇಳುತ್ತಿದ್ದಾಗ ಕನ್ನಡದ ನಟರ ಕುರಿತಾಗಿ ಪ್ರಶ್ನೆಯನ್ನು ಕೇಳುತ್ತಾರೆ.
ವಿನಯ್ ರವರು ಕೆಲವು ಬಿರುದುಗಳ ಹೆಸರುಗಳನ್ನು ಹೇಳುತ್ತಾರೆ, ಮತ್ತು ಅವನ್ನು ಕೊಡಬೇಕೆಂದರೆ ಕನ್ನಡದ ಯಾವ ಕಲಾವಿದರಿಗೆ ಕೊಡುತ್ತೀರಾ ಎಂದು ರಶ್ಮಿಕಾರವರಿಗೆ ಕೇಳುತ್ತಾರೆ.
ನಂತರ ರಶ್ಮಿಕಾರವರು Mr Passionate (ಮನೋಜ್ಞ ನಟನೆಗಾರ) ಎಂಬ ಬಿರುದನ್ನು ಕಿಚ್ಚಸುದೀಪ್ ರವರಿಗೆ ಮತ್ತು Miss Beautiful(ಅತಿ ಸುಂದರಿ) ಬಿರುದನ್ನು ಕೃತಿಕರಬಂದ ರವರಿಗೆ, ಹಾಗು Mr.well behave(ಉತ್ತಮ ನಡತೆಯವ) ನ್ನು ಪುನೀತ್ ಅವರಿಗೆ ಕೊಡುತ್ತೇನೆ ಎಂದು ಹೇಳುತ್ತಾರೆ
ನಂತರ ಕೊನೆಯಲ್ಲಿ Mr.show off(ಬಡಾಯಿ ಕೊಚ್ಚಿಕೊಳ್ಳುವವ) ಬಿರುದನ್ನು ಯಾರಿಗೆ ಕೊಡುತ್ತೀರಾ ಎಂದು ಹೇಳಿದಾಗ ರಶ್ಮಿಕಾರವರು ಈ ಪ್ರಶ್ನೆಗೆ ನಾನು ಉತ್ತರ ಕೊಡಬಾರದು ಕೊಟ್ಟರೆ ಅದು ವಿವಾದವಾಗುತ್ತದೆ ಎಂದು ಹೇಳುತ್ತಾರೆ.
ಮಾಹಿತಿಗೆ ಈ ವಿಡಿಯೋ ನೋಡಿ ..
ಕಾರ್ಯಕ್ರಮದ ನಿರೂಪಕ ಉತ್ತರಿಸಲು ಒತ್ತಾಯಿಸಿದಾಗ ಅವರು ಯಶ್ ಅವರಿಗೆ ಕೊಡುತ್ತೇನೆ ಎಂದು ಒಲ್ಲದ ಮನಸಿನಿಂದ ಹೇಳುತ್ತಾರೆ. ಈ ಕಾರ್ಯಕ್ರಮದಲ್ಲಿ ಕೊಟ್ಟಿರುವ ಈ ಹೇಳಿಕೆಯು ಯಶ್ ರ ಅಭಿಮಾನಿಗಳ ವಲಯದಲ್ಲಿ ವಿವಾದಕ್ಕೆ ಕಾರಣವಾಗಿದೆ ಕಿರಿಕ್ ಹುಡುಗಿಯ ಮೇಲಿನ ಕೋಪಕ್ಕೂ ಸಹ ಕಾರಣವಾಗಿದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
