ತರಕಾರಿ ಬೆಳೆಗಳಲ್ಲಿ ಪ್ರಮುಖವಾದದ್ದು ಹಿರೇಕಾಯಿ. ಅಲ್ಪಾವಧಿ ಬೆಳೆಯಾದ ಇದಕ್ಕೆ ಸ್ಥಳೀಯ ಮಾರುಕಟ್ಟೆ ಇರುವುದರಿಂದ ಸಾಕಷ್ಟು ಲಾಭಕಾರಿಯೂ ಹೌದು. ಇದು ನಾವು ಬಳಸುವ ಪ್ರಮುಖ ತರಕಾರಿಗಳಲ್ಲಿ ಒಂದು. ಇದರಲ್ಲಿ ಅನೇಕ ಪೋಷಕಾಂಶಗಳು ಅಡಗಿರುವುದಲ್ಲದೆ ಹಲವಾರು ಔಷಧೀಯ ಗುಣಗಳೂ ಕೂಡ ಇವೆ.
ಹಿರೇಕಾಯಿ ಯಿಂದ ಮಾಡಿರುವ ಸಾರು ಅಥವಾ ಹುಳಿ ರೂಪಗಳಲ್ಲಿ ಉಪಯೋಗ ಮಾಡುವುದರಿಂದ ತೂಕ ಹೆಚ್ಚುವ ಭಯವಿಲ್ಲ.
ಮಧುಮೇಹಿ ರೋಗಿಗಳಿಗೆ ಇದೊಂದು ಒಳ್ಳೆಯ ಔಷಧ.
ಆಮಶಂಕೆ ಉಂಟಾದಾಗ ಬೀಜವನ್ನು ಮಜ್ಜಿಗೆಯೊಂದಿಗೆ ಬಳಸಬಹುದು.
ಹಿರೇಕಾಯಿ ಗಿಡದ ಎಲೆಯನ್ನು ಅರೆದು ಗಾಯಗಳಿಗೆ ಹಚ್ಚುವುದರಿಂದ ಗಾಯ ಮಾಯವಾಗುತ್ತದೆ.
ಹಿರೇಕಾಯಿ ಗಿಡದ ಬೇರನ್ನು ತೇದು ಮೂಲವ್ಯಾಧಿ ಮೊಳಕೆಗಳಿಗೆ ಹಚ್ಚಿದರೆ ಗುಣವಾಗುತ್ತದೆ. ಮತ್ತು ರಕ್ತಸ್ರಾವವನ್ನು ತಗ್ಗಿಸುತ್ತದೆ.
ಇಷ್ಟೆಲ್ಲ ಗುಣಗಳನ್ನು ಹೊಂದಿರುವ ಈ ಬೆಳೆಯನ್ನು ಮನೆಯಂಗಳದಲ್ಲಿಯೇ ಬೆಳೆಯಬಹುದು. ಕಾರಣ ಇದನ್ನು ನೀರಾವರಿ ಮತ್ತು ಮಳೆಯಾಶ್ರಿತವಾಗಿಯೂ ಬೆಳೆಯಬಹುದು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
