fbpx
ಸಣ್ಣ ಕಥೆ

ತೆನಾಲಿರಾಮ ಅಷ್ಟು ಬುದ್ದ್ವಂತ ಆಗಿದ್ಹೊತ್ತಗೆ ಬೆಟ್ಟದಂಗೆ ಬಂದ ಆ ಕಷ್ಟಾನಾ ಗುಡ್ಡದಂಗೆ ಕರಗಿಸಿದ್ದ.

ತೆನಾಲಿರಾಮ ಜಾಣತನ

ಒಂದು ದಿನ ಕೃಷ್ಣದೇವರಾಯನಿಗೆ ತೆನಾಲಿ ರಾಮಕೃಷ್ಣನ ಮೇಲೆ ಯಾವುದೂ ತುಂಬಾ ಕೋಪ ಬಂದಿತ್ತು ಆಗ
ರಾಜನು ,”ತೆನಾಲಿ ರಾಮನನ್ನು ಕುತ್ತಿಗೆಯವರೆಗೂ ಹೂತು ಅವನ ತಲೆಯನ್ನು ಆನೆಯಿಂದ ತುಳಿಸಿಬಿಡಿ” ಎಂದು ಆದೇಶಿಸಿದನು.


ಆಗ ರಾಜಸೇವಕರುಗಳು ತೆನಾಲಿ ರಾಮಕೃಷ್ಣನನ್ನು ಕರೆದುಕೊಂಡು ಹೋಗಿ ಒಂದು ಮೈದಾನದಲ್ಲಿ ಗುಂಡಿಯನ್ನು ತೋಡಲಾರಂಭಿಸಿದರು.ತೆನಾಲಿ ರಾಮನು ಸಹ ಅವರಿಗೆ ಗುಂಡಿ ಹಗೆಯುವ ಕೆಲಸದಲ್ಲಿ ಅಹಾಯ ಮಾಡಿದನು.

ಇವನು ಗುಂಡಿ ತೆಗೆಯುದನ್ನು ನೋಡಿದ ಸೇವಕರಿಗೆ ಆಶ್ಚರ್ಯವಾಯಿತು.
ಗುಂಡಿಯನ್ನು ಅಗೆದು ಮುಗಿದಾದ ನಂತರ ರಾಮಕೃಷ್ಣ ಗುಂಡಿಯೊಳಗೆ ಇಳಿದು ಕುತ್ತಿಗೆಯವರೆಗೂ ಮಣ್ಣು ಹಾಕಿಕೊಂಡ. ಅನಂತರ “ಭಟರೇ,ಇನ್ನು ಹೋಗಿ ಒಂದು ಒಳ್ಳೆಯ ಆನೆಯನ್ನು ತೆಗೆದುಕೊಂಡು ಬನ್ನಿ” ಎಂದು ರಾಜ ಭಟರಿಗೆ ಹೇಳಿದನು.

ಭಟರು ಆನೆಯನ್ನು ತರುವುದಕ್ಕಾಗಿ ಪಟ್ಟಣದೊಳಗೆ ಹೋದರು.
ಇತ್ತ ಗೂನುಬೆನ್ನಿನ ಅಗಸನೊಬ್ಬನು ಒಗೆದು ಬಟ್ಟೆಗಳನ್ನು ಹೊತ್ತುಕೊಂಡು ರಾಮಕೃಷ್ಣನಿದ್ದ ಜಾಗಕ್ಕೆ ಬಂದನು.

ಆ ಅಗಸನು “ಅಯ್ಯಾ, ಇದ್ಯಾಕೆ ಹೀಗೆ ಕೂತಿದೀಯಾ?”ಎಂದು ರಾಮಕೃಷ್ಣನನ್ನು ಕೇಳಿದ.

ಅದಕ್ಕೆ ರಾಮಕೃಷ್ಣನು “ಅಗಸಪ್ಪಾ, ನಾನೂ ನಿನ್ನ ಹಾಗೆಯೇ ಒಬ್ಬ ಅಗಸ. ಬಟ್ಟೆ ಹೊತ್ತು ಹೊತ್ತು ನನ್ನ ಬೆನ್ನು ಗೂನಾಗಿತ್ತು. ಈ ರೀತಿ ಗುಂಡಿಯೊಳಗೆ ಒಂದೆರಡು ಗಂಟೆ ಕೂತರೆ ಗೂನುಬೆನ್ನು ನೆಟ್ಟಗಾಗುತ್ತದೆ ಎಂದು ಸನ್ಯಾಸಿಯೊಬ್ಬ ಹೇಳಿದ. ಅದಕ್ಕೆ ಈ ರೀತಿ ಕೂತಿದ್ದೇನೆ”ಎಂದು ಹೇಳಿದನು.

ಆಗ ಅಗಸ ಆಸೆಯಿಂದ “ಹಾಗಾದರೆ ನಿನ್ನ ಗೂನುಬೆನ್ನು ನೆಟ್ಟಗಾಗಿದೆಯೇ?”ಎಂದು ಕೇಳಿದ.

“ಹೌದೂಂತ ಕಾಣುತ್ತೆ. ಎಲ್ಲಿ ಸ್ವಲ್ಪ ಮಣ್ಣು ತೆಗಿ, ನೋಡೋಣ” ಎಂದು ರಾಮಕೃಷ್ಣನು ಆ ಅಗಸನಿಗೆ ಹೇಳಿದ.
ಅಗಸ ಮಣ್ಣು ತೆಗೆದ. ರಾಮಕೃಷ್ಣ ಹೊರಬಂದ. ನೆಟ್ಟಗಿದ್ದ ಅವನ ಬೆನ್ನನ್ನು ನೋಡಿ ಅಗಸನಿಗೂ ತನ್ನ ಗೂನು ಬೆನ್ನನ್ನು ನೇರಮಾಡಿಕೊಳ್ಳುವ ಆಸೆ ಉಂಟಾಯಿತು. ಆ ಅಗಸ ರಾಮಕೃಷ್ಣನ್ನು ಬೇಡಿಕೊಂಡ:

“ಅಯ್ಯಾ, ನೀನು ನನಗೊಂದು ಉಪಕಾರ ಮಾಡಬೇಕು. ನನ್ನನ್ನು ಈ ಗುಂಡಿಯೊಳಗೆ ಮಣ್ಣು ಹಾಕ್ತೀಯಾ?”ಎಂದು ರಾಮಕೃಷ್ಣನನ್ನು ಕೇಳಿಕೊಂಡನು

“ಅದಕ್ಕೇನು, ಆಗಲಿ” ಎಂದು ರಾಮಕೃಷ್ಣ ಅಗಸನನ್ನು ಗುಂಡಿಯೊಳಗಿಳಿಸಿ ಕುತ್ತಿಗೆಯವರೆಗೂ ಮಣ್ಣು ಹಾಕಿದ. ಆಗ ಅಗಸ “ಅಯ್ಯಾ ಪರೋಪಕಾರಿ, ರಾಜರ ಮನೆ ಬಟ್ಟೆಗಳನ್ನು ಒಗೆದು ತಂದಿದೀನಿ. ತಡವಾದರೆ ಅವರು ಸಿಟ್ಟಾಗ್ತಾರೆ. ದಯವಿಟ್ಟು ಈ ಬಟ್ಟೆಗಳನ್ನು ಅರಮನೆಗೆ ತಲುಪಿಸಿ ಬಾಪ್ಪಾ” ಎಂದ.

ತೆನಾಲಿ ರಾಮಕೃಷ್ಣ ಅಗಸನ ಪೇಟವನ್ನು ತಾನು ಹಾಕಿಕೊಂಡು ಬಟ್ಟೆಯ ಮೂಟೆಯನ್ನೆತ್ತಿಕೊಂಡು ಅರಮನೆಯ ಕಡೆಗೆ ಹೊರಟ. ದಾರಿಯಲ್ಲಿ ಆನೆಯೊಡನೆ ಬರುತ್ತಿದ್ದ ಸೈನಿಕರು ಸಿಕ್ಕಿದರು. ಆದರೆ ಅವರು ರಾಮಕೃಷ್ಣನ ಗುರುತು ಹಿಡಿಯಲಿಲ್ಲ.

ಆನೆಹತ್ತಿರವಾಗುತ್ತಿದ್ದುದನ್ನು ಕಂಡ ಅಗಸ “ಅಯ್ಯಯ್ಯೊಪ್ಪೋ” ಎಂದು ಕಿರುಚಲು ಆರಂಸಿದನು. ಸೈನಿಕರು ಹತ್ತಿರ ಬಂದು ನೋಡಲಾಗಿ ಅವನು ರಾಮಕೃಷ್ಣನಲ್ಲ, ಅಗಸ ಎಂಬುದು ತಿಳಿಯಿತು. ಅವರು ಅಗಸನನ್ನು ಮೇಲೆತ್ತಿ ಅರಸನಲ್ಲಿಗೆ ಕರೆದುಕೊಂಡು ಹೋದರು.

ರಾಮಕೃಷ್ಣ ಅರಮನೆ ತಲುಪುವ ಹೊತ್ತಿಗೆ ಅಗಸ ಅರಸನಲ್ಲಿ ತನ್ನ ಗೋಳನ್ನು ಹೇಳಿಕೊಂಡನು. ಅರಸ ನಗುತ್ತಾ “ತೆನಾಲಿರಾಮ, ಅಗಸನನ್ಯಾಕೆ ಗುಂಡಿಯಲ್ಲಿ ಕೂಡಿಸಿದೆ?” ಎಂದು ಕೇಳಿದ.

“ಮಹಾಪ್ರಭೂ, ಅವನಿಗೆ ಗೂನುಬೆನ್ನಿನ ಕಾಯಿಲೆ ಇತ್ತು, ಅದಕ್ಕೆ” ಎಂದು ರಾಮಕೃಷ್ಣ ಹೇಳಿದನು.

“ನಿನ್ನ ಬುದ್ಧಿಚತುರತೆಗೆ ಮೆಚ್ಚಿದೆ ರಾಮಕೃಷ್ಣ” ಎಂದು ಹೇಳಿ ಕೃಷ್ಣದೇವರಾಯನು ಹೇಳಿದನು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top