ಜೀವನದಲ್ಲಿ ಯಶಸ್ಸಿಗೆ ಚಾಣಾಕ್ಯನ ಏಳು ತತ್ವಗಳು
ಭಾರತ ಅತ್ಯುತ್ತಮ ಗ್ರಂಥಗಳಲ್ಲಿ ಒಂದಾದ ‘ಅರ್ಥಶಾಸ್ತ್ರ’ಎಂಬ ಗ್ರಂಥದ ರಚನಾಕಾರರಾದ ಚಾಣಾಕ್ಯನು ಸಕಲ ವೇದಾಧ್ಯಯನಗಳನ್ನು ಮಾಡಿ ಮಹಾನ್ ಮೇಧಾವಿಯಾಗಿದ್ದನು.ಇವರು ನಮಗೆ ಜೀವನಲ್ಲಿ ಯಶಸ್ಸನ್ನು ಕಾಣಲು ಅನೇಕ ಸೂತ್ರಗಳನ್ನು ನೀಡಿದ್ದಾರೆ ಅವುಗಳಲ್ಲಿ ಪ್ರಮುಖವಾದವು ಈ ಕೆಳಗಿನಂತಿವೆ.
* ಬೆಂಕಿಯು ನಿಜವಾಗಿಯೂ ಎಷ್ಟು ಬಿಸಿಯಾಗಿತ್ತೆಂದು ನೋಡಲು ಬೆಂಕಿಯನ್ನು ಮುಟ್ಟಿನೋಡುವ ಅವಶ್ಯಕತೆ ಇಲ್ಲ ಬೆಂಕಿಯನ್ನು ನೋಡಿದರೆ ಸಾಕು ಅದರ ಶಾಖದ ಪರಿವಾಗುತ್ತದೆ ಹಾಗೆಯೇ ನಮ್ಮ ಜೀವನಲ್ಲಿ ಕಷ್ಟಗಳು ಅನುಭವಾಗುವ ಮುನ್ನ ಇತರರ ತಪ್ಪುಗಳಿಂದ ನೀವು ಆ ತಪ್ಪುಗಳನ್ನು ಮಾಡದಹಾಗೆ ಕಲಿತುಕೊಳ್ಳಬೇಕು.
*ಅತಿಯಾದ ಪ್ರಾಮಾಣಿಕತೆಯು ಯಾವಾಗಲೂ ಉತ್ತಮ ಕಾರ್ಯತಂತ್ರವಲ್ಲ ಕೆಲವೊಮ್ಮೆ ಇದು ಮಾರಕವಾಗಬಹುದು.
*ಕೆಲವೊಮ್ಮೆ ನೀವು ನಟಿಸಬೇಕು:ನಿಮ್ಮಲ್ಲಿ ಶಕ್ತಿ ಇಲ್ಲದಿದ್ದರೂ ಶಕ್ತಿ ಇರುವ ಹಾಗೆ ನಟಿಸಬೇಕು. ಹಲ್ಲು ಕಿತ್ತ ಹಾವು ವಿಷಪೂರಿತವಲ್ಲದಿದ್ದರೂ ಹೇಗೆ ನಾನು ವಿಷಪೂರಿತ ಎಂದು ನಟಿಸುತ್ತದೆಯೋ ಹಾಗೆ.
*ಜೀವನದಲ್ಲಿ ನೀವು ಯಾವುದೋ ಒಂದು ವಿಷಯಕ್ಕೆ ಮಾತ್ರ ಸೀಮಿತವಾಗಿದ್ದರೆ ಅಂತವರು ಜೀವನದಲ್ಲಿ ಬಾವಿಕಪ್ಪೆಗಳಾಗುತ್ತಾರೆ .
*ಒಳ್ಳೆಯವರಾಗಿರಿ ಮತ್ತು ಯಾವಾಗಲೂ ಒಳ್ಳೆಯದನ್ನೇ ಮಾಡಿ ಆಗ ಯಶಸ್ಸು ನಿಮ್ಮ ಹೆಗಲೇರುತ್ತದೆ.
*ನೀವು ನಿಮ್ಮ ಜೀವನದಲ್ಲಿ ಏನನ್ನಾದರೂ ಪ್ರಾರಂಭಿಸಿದ ನಂತರ ಎಷ್ಟೇ ಕಷ್ಟ ಆದರೂ ಅದನ್ನು ನಿಲ್ಲಿಸಬೇಡಿ ಛಲಬಿಡದೆ ಹಿಡಿದ ಕೆಲಸವನ್ನು ಸಾಧಿಸಿ ತೋರಿಸಿ .
*ನಿಮ್ಮೊಳಗಿರುವ ಭಯವನ್ನು ಹೊಡೆದೋಡಿಸಿ ಧೈರ್ಯ ಎಂಬ ಕುದುರೆಯ ಹೆಗಲನ್ನು ಏರಿ .
*ಮಾಡಬೇಕೆಂದಿರುವ ಯಾವುದೇ ಕೆಲಸವನ್ನು ಯೋಚಿಸಿ, ಯೋಜನೆ ಮಾಡಿ ಮತ್ತು ಕಾರ್ಯಗತಗೊಳಿಸಿ …
* ಯಾವುದೇ ಒಂದು ವಿಷಯ ಮೇಲೆ ಭಾವನಾತ್ಮಕ ಮೂರ್ಖರಾಗಿರಬಾರದು. ಅದು ನಿಮ್ಮನ್ನು ಸಂಪೂರ್ಣವಾಗಿ ನಾಶಪಡಿಸುತ್ತದೆ!
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
