fbpx
ಸಣ್ಣ ಕಥೆ

ಒಂದು ಬೀದಿ ನಾಯಿಯಿಂದ ಇಡೀ ಸಂಸಾರದ ಜೀವ ಉಳಿದ ಕಥೆ..

 ಒಂದು ಬೀದಿ ನಾಯಿ ಮನೆಯವರೆಲ್ಲರ ಜೀವ ಉಳಿಸಿತು.

ಒಂದು ಬೀದಿ ನಾಯಿ ಮನೆಯವರೆಲ್ಲರ ಜೀವ ಉಳಿಸಿತು ಆದ್ದರಿಂದ ಅದನ್ನು ಮನೆಗೆ  ಕರೆತಂದು ಭರ್ಜರಿ ಊಟಹಾಕಿದರು.

ನಮಗೆಲ್ಲ ಗೊತ್ತು! ಸಾಮಾನ್ಯವಾಗಿ ಬೀದಿ ನಾಯಿಗಳಿಗೆ ತಂಗಳು ತಿಂಡಿಯೋ,ಹಸಿದ ಅನ್ನವೋ ಸಿಕ್ಕರೆ,ಆ ದಿನವನ್ನು ಬೀದಿ ನಾಯಿಗಳು ಮಹತ್ತರವಾದ ದಿನವೆಂದು  ಭಾವಿಸುತ್ತವೆ ಅಲ್ಲವೇ ?  ಆದರೆ ಬೀದಿ ನಾಯಿಯೊಂದನ್ನು ಮನೆಗೆ ಕರೆದುಕೊಂಡು ಬಂದು, ಒಂದು ದಿನ  ಭರ್ಜರಿ ಆಹಾರ ನೀಡಿದ ಘಟನೆಯೊಂದು ಇಲ್ಲಿದೆ.1910 ರ ಸುಮಾರಿನಲ್ಲಿ  ನೆಡೆದ ಘಟನೆ ಇದು.ಇಂಗ್ಲೆಂಡಿನಲ್ಲಿದ್ದ ಕ್ಲಾರ್ಕ್ ಎನ್ನುವ ಪುಟ್ಟ  ಕುಟುಂಬವೊಂದಕ್ಕೆ ಅಮೆರಿಕಕ್ಕೆ ಪ್ರವಾಸ ಹೋಗಿ ಬರುವ ಆಸೆಯಿತ್ತು.

ಆದರೆ ಒಮ್ಮೆಲೆ ಅಷ್ಟು ಹಣ ಖರ್ಚು ಮಾಡುವಷ್ಟು ಶಕ್ತಿ ಅವರಿಗಿರಲಿಲ್ಲ.ಅವರು ಮನೆಯ ಖರ್ಚನ್ನು ಸಾಕಷ್ಟು ಕಡಿಮೆ  ಮಾಡಿ ಹಣ ಉಳಿಸಿದರು.ಅನಂತರ ಸೌಥಅಂಟನ್ ನಗರದ ಬಂದರಿನಿಂದ ನ್ಯೂಯಾರ್ಕ್ ಗೆ ಹೋಗುತ್ತಿದ್ದ ಹಡಗೊಂದರಲ್ಲಿ ಅಮೆರಿಕ ಪ್ರವಾಸಕ್ಕೆ ಟಿಕೆಟ್ ಕೊಂಡುಕೊಂಡರು.ಕುಟುಂಭದವರಿಗೆಲ್ಲ  ಉತ್ಸಾಹವೋ ಉತ್ಸಾಹ.ತಮ್ಮ ಸೂಟಕೇಸಗಳನ್ನೆಲ್ಲ ಸಿದ್ಧಪಡಿಸಿಕೊಂಡು.ಹಡಗು ಹೊರಡುವ ದಿನವನ್ನೇ ಎದುರು ನೋಡುತ್ತಿದ್ದರು.

ಹಡಗು ಏಪ್ರಿಲ್ 10 ರಂದು ಹೊರಡುವುದರಲ್ಲಿತ್ತು. ಆದರೆ ಅದಕ್ಕೆ ಎರಡು ದಿನ ಮುಂಚೆ,ಆ ಕುಟುಂಬದ ಪುಟ್ಟ ಹುಡುಗ ಬೀದಿಯಲ್ಲಿ ಆಟವಾಡುತ್ತಿದ್ದಾಗ  ಬೀದಿ ನಾಯಿಯೊಂದು ಆತನನ್ನು ಕಚ್ಚಿಬಿಟ್ಟಿತು. ವೈದ್ಯರು  ಹುಡುಗನನ್ನು ಪರೀಕ್ಷಿಸಿ ನಾಯಿ ಈತನನ್ನು ಗಟ್ಟಿಯಾಗಿಯೇ ಕಚ್ಚಿದೆ. ಈತನನ್ನು ಕಚ್ಚಿರುವ ನಾಯಿ ಸಾಮಾನ್ಯದ್ದೋ ಅಥವಾ ಹುಚ್ಚು ನಾಯಿಯೋ  ಗೊತ್ತಿಲ್ಲ.

ಹಾಗಾಗಿ ಈತನನ್ನು 14 ದಿನ ಕೋಣೆಯೊಂದರಲ್ಲಿ ಒಬ್ಬಂಟಿಯಾಗಿ ಇರಿಸಬೇಕು.ಪ್ರತಿನಿತ್ಯವೂ ಮದ್ದು ಕೊಡಬೇಕು.ಈ  ಅವಧಿಯಲ್ಲಿ ಆತ ಎಲ್ಲಿಗೂ ಹೋಗಬಾರದು ,ಆತನೊಂದಿಗೆ ಯಾರೂ ಬೆರೆಯಬಾರದು ಎಂದು ಹೇಳಿಬಿಟ್ಟರು.ಇನ್ನೆರಡು ದಿನದಲ್ಲಿ  ಹಡಗಿನಲ್ಲಿ ಪ್ರವಾಸ ಹೋಗಬೇಕಿದ್ದ ಕುಟುಂಬದ ಕನಸು ನುಚ್ಚು ನೂರಾಯಿತು.ಮನೆಯವರಿಗೆಲ್ಲ ನಿರಾಸೆಯೋ ನಿರಾಸೆ.ಅವರೆಲ್ಲ ಹುಡುಗನನ್ನೂ, ಬೀದಿ ನಾಯಿಯನ್ನು ಮತ್ತು ಅದೃಷ್ಟವನ್ನು  ಬೈದುಕೊಂಡರು.

ಹಡಗು ಹೊರಡುವ ದಿನ  ಅಂದರೆ.ಏಪ್ರಿಲ್ 10 ನೇ ತಾರೀಖು  ಹುಡುಗನನ್ನು ಒಂಟಿಯಾಗಿ ಮನೆಯಲ್ಲಿಯೇ ಬಿಟ್ಟು ಮನೆಯವರೆಲ್ಲ ಬಂದರಿಗೆ ಹೋದರು.ಅಮೆರಿಕಕ್ಕೆ ಹೊರಟಿದ್ದ ಹಡಗನ್ನು ನೋಡಿದರು.ತಮ್ಮ ದುರಾದೃಷ್ಟವನ್ನು ಮತ್ತೊಮ್ಮೆ  ಬೈದುಕೊಂಡರು. ಹಡಗು ಹೊರಟ ನಂತರ ಇವರೆಲ್ಲ ಮನೆಗೆ ಬಂದರು.ಕುಟುಂಬದ ಬಂದು ಮಿತ್ರರಿಗೆಲ್ಲ ತಮ್ಮ ಅಮೆರಿಕದ ಪ್ರವಾಸ ಭಗ್ನಗೊಂಡಿದ್ದನ್ನು ಹೇಳಿಕೊಂಡು ಕಣ್ಣೀರು ಸುರಿಸಿದರು.

ಅದಾದ ನಾಲ್ಕೈದು ದಿನಗಳ ನಂತರ  ಬಂಧು ಮಿತ್ರರಲ್ಲಿ ಅನೇಕರು ಕ್ಲಾರ್ಕ ಮನೆಗೆ ಬಂದು ಅವರ ಅದೃಷ್ಟವನ್ನು ಅಭಿನಂದಿಸಿದರು. ಏಕೆಂದು ಕೇಳಿದರೆ “ನೀವು ಪ್ರಯಾಣಿಸಬೇಕಿದ್ದ ಹಡಗು  ಸಮುದ್ರದ ಮದ್ಯ ಮಂಜಗಡ್ಡೆಗೆಯೊಂದಕ್ಕೆ ಡಿಕ್ಕಿ ಹೊಡೆದು ಅಪಘಾತಕ್ಕೆ ಈಡಾಗಿದೆ. ಹಡಗಿನಲ್ಲಿದ್ದ ಪ್ರಯಾಣಿಕರು ಹಾಗೂ ಸಿಬ್ಬಂದಿ ವರ್ಗದವರಲ್ಲಿ  ಬಹಳಷ್ಟು ಜನ ಸತ್ತು ಹೋಗಿದ್ದಾರೆ ,ಪ್ರಯಾಣ ಮಾಡದಿದ್ದರಿಂದ ನಿಮ್ಮ ಕುಟುಂಬ ಬದುಕಿ ಉಳಿದಿದೆ”.ಎಂದು ಅಭಿನಂದಿಸಿದರು.ಇದನ್ನೆಲ್ಲಾ ಕೇಳಿದ ಕ್ಲಾರ್ಕ್ ಕುಟುಂಬದವರು   ತಾವು ಟಿಕೆಟಗಾಗಿ ಕೊಟ್ಟಿದ್ದ ಹಣ ನಷ್ಟವಾದರೇನಂತೆ , ತಮ್ಮ ಕನಸು ನನಸಾಗದಿದ್ದರೇನಂತೆ ,ತಾವೆಲ್ಲ ಬದುಕಿ ಉಳಿದಿದ್ದೇವೆಂದು  ಸಂಭ್ರಮಪಟ್ಟರು.

ಕೆಲವೇ ದಿನಗಳ ಹಿಂದೆ ತಮ್ಮ ಕುಟುಂಬದ ಹುಡುಗನನ್ನು ಅವನಿಗೆ ಕಚ್ಚಿದ ಬೀದಿ  ನಾಯಿಯನ್ನು ತಮ್ಮ ಅದೃಷ್ಟವನ್ನೂ ಬೈದುಕೊಂಡಿದ್ದ ಕುಟುಂಬದವರೀಗ , ಆ ಹುಡುಗನಿಗೂ, ನಾಯಿಗೂ ತಮ್ಮ ಅದೃಷ್ಟಕ್ಕೆ ವಂದನೆಗಳನ್ನು  ಹೇಳಿದರು. ಕುಟುಂಭದವರು ಹುಡುಕಿಕೊಂಡು  ಹೋಗಿ ಬೀದಿ ನಾಯಿಯನ್ನು  ಮನೆಗೆ ಕರೆದುಕೊಂಡು ಬಂದು ಅದಕ್ಕೆ ಭರ್ಜರಿ ಔತಣವನ್ನೇ ಬಡಿಸಿದರು.

ಇಷ್ಟು ಹೊತ್ತಿಗೆ ನೀವು ಆ ಹಡಗಿನ ಹೆಸರನ್ನು ಊಹಿಸಿದ್ದರೆ, ಅದು ನಿಮ್ಮ ಊಹೆ  ನಿಜ!  ಆ ಹಡಗಿನ ಹೆಸರು  “ಟೈಟಾನಿಕ್”  ಅದದೆಲ್ಲಾ ಒಳಿತೇ ಆಯಿತು ಎಂಬ ದಾಸರ ಪದವನ್ನು  ನಾವೆಲ್ಲ ಕೇಳಿದ್ದೇವೆ.ನಮ್ಮ ಬದುಕಿನಲ್ಲೂ ಏನಾದರೂ ಕೆಟ್ಟದ್ದು ಎಂದುಕೊಳ್ಳುವುದು ಆದಾಗ, ಅದೇಕಾಯಿತು  ನಮಗೆ ಅರ್ಥವಾಗದೇ ಇರಬಹುದು.ಆದರೆ ಮುಂದೊಂದು ದಿನ ಹಾಗೆ ಅದದ್ದೇ ಒಳಿತಾಯಿತು ಎಂದು ನಾವು ಹೇಳಿಕೊಳ್ಳುತ್ತೇವಲ್ಲವೇ.

ಬದುಕಿನ ವಿಚಿತ್ರಗಳಲ್ಲಿ ಇದೂ ಒಂದಲ್ಲವೇ ? ನಮ್ಮ ಬದುಕಿನಲ್ಲೂ ಇಂತಹ ಪ್ರಸಂಗಗಳು ನೆಡೆದಿರಬಹುದಲ್ಲವೇ ? ಅಂದಿನ ನೆನಪಾದರೆ ಇಂದು ನಮಗೆ ನಗು ಬರುತ್ತದಲ್ಲವೇ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top