fbpx
ಉಪಯುಕ್ತ ಮಾಹಿತಿ

ಹೆಣ್ಮಕ್ಕಳಿಗೆ ಕಣ್ಣೇ ಚಂದ ಆ ಕಣ್ಣು ಇನ್ನು ಚಂದಾಗಿ ಕಾಣೋಕೆ ಸ್ವಲ್ಪ ಮೇಕಪ್ ಮಾಡ್ಕೊಳ್ಳಿ ..

ಕಣ್ಣಿನ ಸೌಂದರ್ಯವನ್ನು ಹೆಚ್ಚಿಸಲು ಕಣ್ಣಿಗೆ ಮೇಕಪ್.

ಕಣ್ಣಿಗೆ ಮೇಕಪ್ ಮಾಡಿದರೆ ಕಣ್ಣಿನ ಸೌಂದರ್ಯ ಹೆಚ್ಚುತ್ತದೆ.ಕಣ್ಣು ಅಂದವಾಗಿ ಕಾಣುತ್ತದೆ ಮತ್ತು  ನಮ್ಮ ಮಖದ ಸೌಂದರ್ಯವು ಸಹ ಹೆಚ್ಚುತ್ತದೆ.ಕಣ್ಣು ಅಂದವಾಗಿ ಕಾಣಬೇಕೆಂದು ಎಲ್ಲರೂ ಬಯಸುತ್ತಾರೆ. ಆದರೆ ಹೇಗೆ ಮೇಕಪ್ ಮಾಡಿಕೊಳ್ಳುವುದು ಎಂದು ಗೊತ್ತಿರುವುದಿಲ್ಲ.ಯಾವ ಸಾಧನಗಳನ್ನು ಬಳಸಬೇಕು.ಎಲ್ಲಿಗೆ ಯಾವುದನ್ನು ಹೇಗೆ ಹಚ್ಚಬೇಕು ಹೀಗೆ ಅನೇಕ ಅನುಮಾನಗಳು ಕಾಡುತ್ತವೆ. ಹಾಗಾಗಿ ಈ ಸಲಹೆಗಳು ನಿಮಗೆ ಕಣ್ಣಿನ ಮೇಕಪ್ ಮಾಡಲು ಸಹಾಯವಾಗಬಹುದು.ತಿಳಿದುಕೊಳ್ಳಿ…

1.ಕಾಡಿಗೆ:- ಕಾಡಿಗೆಯನ್ನು ಕಣ್ಣಿನ ಅಂಚುಗಳಿಗೆ ಒಂದು ನಿರ್ದಿಷ್ಟ ಮತ್ತು ಸುಂದರ ಆಕಾರವನ್ನು ತಂದುಕೊಡಲು ಬಳಸಲಾಗುತ್ತದೆ. ಕಪ್ಪು ವರ್ಣದ ಕಾಡಿಗೆ ಕಣ್ಣಿಗೆ ಹೆಚ್ಚು ಸೊಬಗನ್ನು ತಂದು ಕೊಡುತ್ತದೆ.

2.ಐ ಪೆನ್ಸಿಲ್:- ಇವು ಕಪ್ಪು,ನೀಲಿ,ಕಂದು, ಬೂದು ವರ್ಣಗಳಲ್ಲಿ ದೊರೆಯುತ್ತವೆ.ಈ ಪೆನ್ಸಿಲ್ ಗಳು ಕಣ್ಣುಗಳ ಆಕಾರವನ್ನು ಎದ್ದು ಕಾಣುವಂತೆ ಮಾಡುತ್ತವೆ.

3.ಕನ್ಸಿಲರ್ಸ್ಗಳು (concealers):- ಕನ್ಸಿಲರ್ಸ್ಗಳು ಮೇಕಪ್ ಕಲೆಗೆ ಕೊಟ್ಟ ಅಪೂರ್ವ ಕೊಡುಗೆಯೆನ್ನಬಹುದು. ಇದರ ಲೇಪನ ಕಣ್ಣ ಕೆಳಗಿನ ಕಪ್ಪು ವೃತ್ತಗಳನ್ನು  ಮುಖದ ಮೇಲಿನ ಕಂದು ಕಲೆಗಳನ್ನು ಕಾಣದಂತೆ ಮಾಡುತ್ತದೆ.

4.ಮಸ್ಕರಾ:- ಮಸ್ಕರಾ ಕಣ್ಣಿನ ರೆಪ್ಪೆಗಳು ಉದ್ದವಾಗಿ,ದಟ್ಟವಾಗಿ ಕಾಣುವಂತೆ ಮಾಡುತ್ತದೆ.ಇದು ದ್ರವ ಹಾಗೂ ಕೇಕ್ ರೂಪದಲ್ಲಿ ದೊರೆಯುತ್ತದೆ. ಮಸ್ಕರಾದೊಂದಿಗೆ ಅದನ್ನು ಹಚ್ಚುವ ಉಪಕರಣವೂ ದೊರೆಯುತ್ತದೆ.

5.ಐ ಶಾಡೋ:- ಐ ಶಾಡೋ ಉಪಯೋಗಿಸಿ ,ಕಣ್ಣ  ಗೂಡಿಗೆ ಬಣ್ಣ ಮತ್ತು ಆಕಾರ ಕೊಡಬಹುದು.ಐ ಶಾಡೋ ಕ್ರೀಮ್ ಮತ್ತು ಪೌಡರ್ ರೂಪದಲ್ಲಿ ದೊರೆಯುತ್ತದೆ.

6.ಐ ಶಾಡೋ ಬ್ರಷ್:- ಉತ್ತಮ ಐ ಶಾಡೋ ಬ್ರಷ್ ಕೋನಾಕಾರದಲ್ಲಿದ್ದು ಐ ಶಾಡೋವನ್ನು ಕಣ್ರೆಪ್ಪೆ ಹಾಗೂ ಕಣ್ಣ ಒಳ ಭಾಗಕ್ಕೆ ಹಚ್ಚಲು ಸಹಾಯಕವಾಗಿದೆ.

7.ಫೇಸ್ ಪೌಡರ್:- ಪಾರದರ್ಶಕ ತಡೆಯುಳ್ಳ ಹಗುರವಾದ ಪುಡಿಯಾಗಿದ್ದು ಫೌಂಡೇಶನ್ ಗೆ ಅನುವುಗೊಳಿಸಲು ಬಳಸಲಾಗುತ್ತದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top