fbpx
ಭವಿಷ್ಯ

ಮೇಷ ರಾಶಿಯಲ್ಲಿ ಹುಟ್ಟಿದ್ದೀರಾ ಹಾಗಾದ್ರೆ ಈ ವಿಷಯಗಳ ಬಗ್ಗೆ ನೀವು ತಿಳ್ಕೊಳ್ಳೆಬೇಕು..

ಮೇಷ ರಾಶಿಯ ಸಂಕ್ಷಿಪ್ತ ನೋಟ

ಭಚಕ್ರವನ್ನು 12 ಸಮಭಾಗಗಳನ್ನಾಗಿ ಮಾಡಿ ರಾಶಿಗಳೆ೦ದು ಕರೆದಿದ್ದೇವೆ. ಅವಕ್ಕೆ ಮೇಷ ದಿ೦ದ ಮೀನದ ವರೆಗೆ ಕೆಲವು ರೂಪಗಳನ್ನು ಅವುಗಳ ನೈಸರ್ಗಿಕ ಗುಣಧರ್ಮಕ್ಕನುಸರಿಸಿ, ಅವುಗಳಲ್ಲಿರುವ ನಕ್ಷತ್ರಗಳ ಆಧಾರದಲ್ಲಿ ರೂಪಿಸಿ ಹೆಸರಿಸಿದ್ದೇವೆ. ಈಗ ನಾವು ಒ೦ದೊ೦ದಾಗಿ ರಾಶಿಗಳನ್ನು ಅವುಗಳ ವರ್ಗೀಕರಣಕ್ಕನುಗುಣವಾಗಿ, ಅವುಗಳಲ್ಲಿರುವ ನಕ್ಷತ್ರಗಳ ಪ್ರಭಾವ ವನ್ನೂ ಪರಿಗಣಿಸಿ, ಅವುಗಳಲ್ಲಿ ಮೇಷ ರಾಶಿಯ ಗುಣಧರ್ಮ ಮತ್ತು ಪ್ರಭಾವ ವನ್ನು ಅಭ್ಯಸಿಸೋಣ.

ಮೇಷ

ಹೆಸರಿನ ಅರ್ಥ:ರಾಮ

ರಾಶಿಯ ಗ್ರಹ:ಮಂಗಳ

ರಾಶಿಯ ಗುರುತು:ಟಗರು

ರಾಶಿಯ ತತ್ವ:ಬೆಂಕಿ

ಪ್ರತಿ ರಾಶಿಗೂ ಅದರದ್ದೇ ಆದ ಮೂಲ ಗುಣಗಳಿವೆ. ಹಾಗಾಗಿ ಒಂದೊಂದು ರಾಶಿಯಲ್ಲಿ ಜನಿಸಿದವರೂ ಕೂಡಾ ಕೆಲವು ಮೂಲ ಗುಣಗಳನ್ನು ರಾಶಿ ಪ್ರಭಾವದಿಂದ ಪಡೆದಿರುತ್ತಾರೆ. ಮೇಷ ರಾಶಿಯಲ್ಲಿ ಜನಿಸಿದ ಪುರುಷ, ಮಹಿಳೆ ಹಾಗೂ ಮಕ್ಕಳೆಂಬ ಮೂರು ಗುಂಪುಗಳಲ್ಲಿ ಕೆಲವು ಮೂಲ ಗುಣಗಳನ್ನು ಇಲ್ಲಿ ನೀಡಲಾಗಿದೆ.

ಪುರುಷರು:

ಮೇಷ ರಾಶಿಯಲ್ಲಿ ಜನಿಸಿದ ಪುರುಷರು ಸ್ವಲ್ಪ ಅಹಂಕಾರಿಗಳು. ತಮ್ಮ ತಪ್ಪನ್ನು ಯಾವುದೇ ಕಾರಣಕ್ಕೂ ಒಪ್ಪಿಕೊಳ್ಳಲು ಸಿದ್ಧರಿರುವುದಿಲ್ಲ. ಆದರೆ ಇವರು ಉದಾರ ಮನಸ್ಸಿನವರು. ಜತೆಗೆ ಇವರನ್ನು ಹೊಗಳುತ್ತಿದ್ದರೆ ತುಂಬಾ ಖುಷಿ ಪಡುವ ಜಾಯಮಾನ ಇವರದ್ದು.

ಸೇನೆ, ಪೊಲೀಸ್ ಮತ್ತಿತರ ಉದ್ಯೋಗಗಳಿಗೆ ಇವರು ಸೂಕ್ತ. ರಕ್ತವಪಾತ ಅಥವಾ ಪಿತ್ತಕ್ಕೆ ಸಂಬಂಧಿಸಿದ ರೋಗಗಳಿಂದ ಇವರಿಗೆ ಸ್ವಲ್ಪ ತೊಂದರೆಯಾಗುತ್ತದೆ.

ಇವರು ತಮ್ಮ ಪತ್ನಿ ಪ್ರಿಯರು. ಪತ್ನಿಯ ಸೇವೆ ಮಾಡಲೂ ಕೂಡಾ ಇವರು ಸಿದ್ಧರಾಗಿರುತ್ತಾರೆ. ಇವರಿಗೆ ಎಲ್ಲರೂ ಹೊಗಳುತ್ತಲೇ ಇದ್ದರೆ ಸಂತೋಷ.

ಸ್ತ್ರೀಯರು:

ಮೇಷ ರಾಶಿಯಲ್ಲಿ ಜನಿಸಿದ ಮಹಿಳೆ ಸಾಮಾನ್ಯಳಾಗಿರುತ್ತಾಳೆ. ಕುಟುಂಬಕ್ಕೆ ಸಂಭದಿಸಿದ ನಿರ್ಣಯಗಳನ್ನು ಸ್ವಯಂ ತೆಗೆದುಕೊಳ್ಳುವ ಧೈರ್ಯ, ತನ್ನ ಪತಿಯನ್ನು ತನ್ನ ಕಿರುಬೆರಳಲ್ಲೇ ನಿಯಂತ್ರಿಸುವ ಚಾಲಾಕಿತನ ಇವರಿಗಿರುತ್ತದೆ.

ಮನೆ ಸಂಬಂಧೀ ಎಲ್ಲ ವಿಚಾರಗಳಲ್ಲೂ ಇವರು ಚೆನ್ನಾಗಿರುತ್ತಾನೆ. ಮನೆಯನ್ನು ಒಪ್ಪವಾಗಿಡುತ್ತಾರೆ. ಧನಾರ್ಜನೆಯಲ್ಲೂ ಇವರಿಗೆ ರುಚಿಯಿರುತ್ತದೆ. ಚೆನ್ನಾಗಿ ತಿನ್ನುವುದು, ಉತ್ತಮ ಬಟ್ಟೆ ತೊಡುವುದು ಇಂತಹ ಆಸೆಗಳು ಇವರಿಗೆ ಇರುತ್ತದೆ.

ಮಕ್ಕಳು:

ಈ ರಾಶಿಯಲ್ಲಿ ಜನಿಸಿದ ಮಕ್ಕಳು ಚಂಚಲರು, ತುಂಟರು ಹಾಗೂ ಕಿಲಾಡಿಗಳು. ಒಂದು ಜಾಗದಲ್ಲಿ ಒಂದು ನಿಮಿಷವೂ ನಿಲ್ಲುವ ಸ್ವಭಾವ ಇವರಿಗಿಲ್ಲ. ಏನಾದರೊಂದು ಮಾಡುತ್ತಲೇ ಇರುತ್ತಾರೆ.

ಇವರ ತುಂಟತನದಿಂದಾಗಿ ಇವರು ಆಗಾಗ ಬೀಳುವುದು, ಏಳುವುದು ಇದ್ದದ್ದೇ. ಸಣ್ಣ ಪುಟ್ಟ ಗಾಯಗಳು ಇವರಿಗೆ ಯಾವಾಗಲೂ ಇದ್ದೇ ಇರುತ್ತದೆ. ಇವರು ಉತ್ತಮ ಬುದ್ಧಿ ಶಕ್ತಿ ಹೊಂದಿರುತ್ತಾರೆ. ಆದರೆ ತಲೆಗೆ ಪೆಟ್ಟಾಗುವುದನ್ನು ಮಾತ್ರ ಸ್ವಲ್ಪ ಪೋಷಕರು ನಿಯಂತ್ರಿಸಬೇಕು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top