ಗಂಡ ಸತ್ತು ಕೇವಲ ಎರಡೇ ತಿಂಗಳಾಗಿತ್ತು ಧೈರ್ಯಗೆಡಲಿಲ್ಲ ಇಂದು ಸಾವಿರಾರು ಹೆಣ್ಣು ಮಕ್ಕಳಿಗಾಗಿ ಕ್ಯಾಬ್ ಸೇವೆ ಕಲ್ಪಿಸಿದರು..
ಮುಂಬೈನ ರೇವತಿ ಕುಲಕರ್ಣಿ ರಾಯ್ ಮಹಿಳೆಯರಿಂದ ಮಹಿಳೆಯರಿಗಾಗಿ ಕ್ಯಾಬ್ ಸರ್ವಿಸ್ ನೀಡುತ್ತಿರುವ ಪ್ರತಿಮ ಮಹಿಳೆ
ಕ್ಯಾಬ್ ಸೇವೆಗಳು ಮತ್ತು ಕೊನೆಯ ಮೈಲಿ-ವಿತರಣಾ ಸೇವೆಗಳನ್ನು ಸ್ಥಾಪಿಸಿದ ಹೆಗ್ಗಳಿಕೆ ಇವರದ್ದು
70 ರ ದಶಕದಲ್ಲಿ 18 ನೇ ವಯಸ್ಸಿನಲ್ಲಿ ಡ್ರೈವಿಂಗ್ ಲೈಸೆನ್ಸ್ ಪಡೆದಾಗ, ಅದು ಸಮಾಜಕ್ಕೆ ಬಹಳ ಅಪರೂಪದ ಸಂಗತಿಯಾಗಿತ್ತು. ಆಕೆಯ ತಂದೆ ತಕ್ಷಣವೇ ತನ್ನ ಅಂಬಾಸಿಡರ್ ಕಾರನ್ನು ನೀಡಿದರು ಮತ್ತು ಅವಳ ಆತ್ಮಗಳನ್ನು ಹೆಚ್ಚಿಸಿದರು.
ತನ್ನ ಕಾಲೇಜು ಮುಗಿಸಿದ ನಂತರ ಅವರು 1980 ರ ದಶಕದ ಆರಂಭದಲ್ಲಿ ಕಾರ್ ಓಡಿಸುವ ಸ್ಪರ್ಧೆಯಲ್ಲಿ ಭಾಗವಹಿಸಲು ಶುರು ಮಾಡಿದ್ದರು , ಇದು ಎಲ್ಲರಿಗು ಅಚ್ಚರಿ ಉಂಟು ಮಾಡಿತ್ತು ಆಗಲೇ ಆಗೇ ನಿರ್ಧಾರ ಮಾಡಿದ್ದಳು ಮಹಿಳೆಯರು ಮುಂದೆ ಬರಬೇಕೆಂದರೆ ಇಂತಹ ವಿಷಯಗಳನ್ನು ನೇರವಾಗಿ ಎದುರಿಸಬೇಕು ಎಂದು .
ತಾನು ಭಾಗವಹಿಸಿದ ೭೦ ಸ್ಪರ್ಧೆಯಲ್ಲಿ ಆಕೆ ಸೋತದ್ದು ಕೇವಲ ೫ ರಲ್ಲಿ ಮಾತ್ರ !
2007 ರಲ್ಲಿ ಮಹಿಳೆಯರಿಗೆ ಮಾತ್ರ ‘ಫಾರ್ ಶಿ’ ಟ್ಯಾಕ್ಸಿ ಸೇವೆಯನ್ನು ಪ್ರಾರಂಭಿಸಿದರು.ಇದಕ್ಕೂ ಎರಡು ತಿಂಗಳ ಮುಂಚೆ ಆಕೆಯ ಪತಿ ಮರಣಹೊಂದಿದ್ದರು ಇಂತಹ ಕಠಿಣ ಸಮಯದಲ್ಲಿ ಸಹ ಸಂಸ್ಥೆಯನ್ನು ಚಲಾಯಿಸುವಲ್ಲಿ ಅವರು ಯಶಸ್ವಿಯಾದರು. 2010 ರಲ್ಲಿ ವೀರ ಎನ್ನುವ ಇನ್ನೊಂದು ಟ್ಯಾಕ್ಸಿ ಸಂಸ್ಥೆಯನ್ನು ಪ್ರಾರಂಭಿಸಿದರು, ಹೇ-ದೀದಿ ಎನ್ನುವ ಇನ್ನೊಂದು ಟ್ಯಾಕ್ಸಿ ಸರ್ವಿಸ್ ಸ್ಥಾಪನೆ ಮಾಡಿದರು.
ಮಧ್ಯಮ ವರ್ಗದ ಹೆಣ್ಣು ಮಕ್ಕಳಿಗೆ ೯೦ ದಿನಗಳ ತರಬೇತಿಯನ್ನು ನೀಡುತ್ತಾರೆಯಂತೆ ಹೀಗೆ ಸಾವಿರಾರು ಹೆಣ್ಣು ಮಕ್ಕಳು ಆರ್ಥಿಕ ನೆರವನ್ನು ಕುಟುಂಬಕ್ಕೆ ನೀಡುವ ಸಲುವಾಗಿ ಇವರ ಸಂಸ್ಥೆಯಲ್ಲಿ ಕೆಲಸಮಾಡುತ್ತಾರೆಯಂತೆ , ತಿಂಗಳಿಗೆ ರೂ 15,000 ರಿಂದ 20,000 ಸಾವಿರವನ್ನು ಸಂಪಾದಿಸುತ್ತಾರೆ
ಮಿನಾಟೋ, ಟೋಕಿಯೊ, ಮತ್ತು ಒಸಾಕಾ, ಜಪಾನ್ನಲ್ಲಿ ಪ್ರಧಾನ ಕಚೇರಿಯನ್ನು ‘ಫಾರ್ ಶಿ ‘ ಹೊಂದಿದೆ .
ಬೆಂಗಳೂರು , ಮುಂಬೈ ,ಪುಣೆ, ನಾಗಪುರ ಮತ್ತು ನಾಸಿಕ್ ನಂತಹ ಆರು ನಗರಗಳಲ್ಲಿ ಮಹಿಳೆಯರ ಬೈಕ್ ಸೇರಿವೆ ಸಹ ಸಧ್ಯದಲ್ಲೇ ಶುರು ಮಾಡುತ್ತಾರಂತೆ.
ಹೀಗೆ ನಾವು ಯಾರಿಗೂ ಕಮ್ಮಿ ಇಲ್ಲ ಏನು ಹೇಳುವ ಮಹಿಳೆಯರಿಗೆ ನಮ್ಮದೊಂದು ನಮನ.
ಈ ಕಥೆ ನಿಮಗೆ ಇಷ್ಟ ಆದ್ರೆ
fb.com/ Sakannadiga.com
ಲೈಕ್ ಮಾಡೋದು ಮರೆಯಬೇಡಿ ,ನಿಮ್ಮ ಲೈಕ್ ಗಳು ನಮಗೆ ಬಹಳ ಮುಖ್ಯ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
