ಸೈನಸೈಟಿಸ್ ಸಮಸ್ಯೆಗೆ ಆಯುರ್ವೇದದ 5 ವಿಶೇಷವಾದ ಮನೆಮದ್ದುಗಳು ..
ಮೂಗು ಹಾಗು ಹಣೆಯ ಭಾಗದ ಒಳ ಪದರದ ಊತಕ್ಕೆ ಸೈನಸೈಟಿಸ್ ಎಂದು ಕರೆಯುತ್ತಾರೆ .
ಇದಕ್ಕೆ ಮುಖ್ಯ ಕಾರಣಗಳು ಸೋಂಕು , ಮಲಿನಯುಕ್ತ ಗಾಳಿಯ ಸೇವನೆ , ಶೀತ , ತಂಪಾದ ನೀರನ್ನು ಕುಡಿಯುವುದು , ತೀಕ್ಷ್ಣ ವಾಸನೆಯ ಹೂವನ್ನು ಮೂಸಿ ನೋಡುವುದು ಆಗಿದೆ .
ಲಕ್ಷಣಗಳು ಬಂದು ತಲೆ ಭಾರ , ನೆಗಡಿ , ಮೂಗು ಕಟ್ಟುವುದು , ಅತಿಯಾದ ಸೀನು , ಕಣ್ಣು ಹಾಗು ಹಣೆಯ ಪಕ್ಕದಲ್ಲಿ ನೋವು , ಮೂಗಿನಿಂದ ದುರ್ವಾಸನೆಯುಳ್ಳ ದ್ರವ ಹೊರಗೆ ಬರುವುದು .
ಸೈನಸೈಟಿಸ್ ಸಮಸ್ಯೆಗೆ ಆಯುರ್ವೇದದ 5 ವಿಶೇಷವಾದ ಮನೆಮದ್ದುಗಳು :
ತುಳಸಿ , ಶುಂಠಿ , ಏಲಕ್ಕಿ ,ಕರಿಮೆಣಸು ಮತ್ತು ನುಗ್ಗೆ ಸೊಪ್ಪಿನ ಕಷಾಯ ಕುಡಿಯುವುದು .
ಎಳ್ಳೆಣ್ಣೆಯನ್ನು ,ಲಕ್ಕಿ ಸೊಪ್ಪಿನ ರಸವನ್ನು ರಸವನ್ನು ಸಮಾನ ಪ್ರಮಾಣದಲ್ಲಿ ಬೆರೆಸಿ ಮತ್ತು ಈರುಳ್ಳಿ ಕಲ್ಕವನ್ನು ಹಾಕಿ ಕುದಿಸಿ , ಈ ಎಣ್ಣೆಯನ್ನು ಪ್ರತಿದಿನ ತಲೆಗೆ ಹಚ್ಚುವುದು .
ಈರುಳ್ಳಿ ರಸದ ಎರಡು ಹನಿಯು ಪ್ರತಿ ನಿತ್ಯ ಮೂಗಿನ ಹೊಳ್ಳೆಗಳಲ್ಲಿ ಹಾಕುವುದು.
ಕಾಮ ಕಸ್ತೂರಿ ಎಲೆಯ ರಸಕ್ಕೆ ತುಸು ಪಚ್ಚ ಕರ್ಪೂರ ಸೇರಿಸಿ ನಿತ್ಯ ಮೂಗಿನ ಹೊಳ್ಳೆಯಲ್ಲಿ ಹಾಕುತ್ತಿರಬೇಕು ರಕ್ತ ಸೋರುವುದು ಹಾಗು ದುರ್ವಾಸನೆ ಬರುವುದು ಕಡಿಮೆಯಾಗುತ್ತದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
