ಪರಶುರಾಮನು ಯಾಕೆ ಅವರ ತಾಯಿಯನ್ನು ಕೊಂದ ?
ಪರಶುರಾಮರು ಶ್ರೀ ವಿಷ್ಣುವಿನ 6 ನೇ ಅವತಾರ. ಅವನು ಆರೋಪಿ ? , ತನ್ನ ಸ್ವಂತ ತಾಯಿಯನ್ನೇ ಕೊಂದ. ಅವನು ಯಾಕೆ ಹಾಗೆ ಮಾಡಿದ ? ಅಂತ ತಿಳಿಯೋಣ ಬನ್ನಿ.
ಒಂದು ಬಾರಿ ಪರಶುರಾಮನ ತಾಯಿ ನೀರು ತುಂಬಿಕೊಂಡು ತರಲು ನದಿಯ ಬಳಿ ಹೋದಳು.ನದಿಗೆ ಹೋಗುವ ಮಾರ್ಗದಲ್ಲಿ ಒಬ್ಬ ಸುಂದರವಾದ ರಾಜನಿಗೆ ಆಕರ್ಷಿತಳಾದಳು.ಅಲ್ಲಿ ಆ ರಾಜನು ಹೆಂಗಸರು ಮತ್ತು ಅವನ ಸಂಗಡಿಗರ ಜೊತೆ ನದಿಯ ನೀರಿನಲ್ಲಿ ಆಟವಾಡುತ್ತಿದ್ದ.ಆವಳು ಬೆರಗು ಗಣ್ಣಿನಿಂದ ಅವರನ್ನೇ ನೋಡುತ್ತಾ ನಿಂತಳು,ಸಮಯ ಹೋಗಿದ್ದೇ ಅವಳಿಗೆ ತಿಳಿಯಲಿಲ್ಲ.ಅವಳ ಗಂಡ ಅವಳಿಗೋಸ್ಕರ ಅವಳು ಬರುವ ದಾರಿಯನ್ನೇ ನೋಡುತ್ತಾ ಇದ್ದ.ಬೆಂಕಿಯನ್ನು ನಂದಿಸಲು ಅವಳು ನೀರು ತುಂಬಿ ತೆಗೆದುಕೊಂಡು ಬರುವ ದಾರಿಯನ್ನೇ ಎದುರು ನೋಡುತ್ತಿದ್ದ ಜಮದಗ್ನಿ ಋಷಿ.
ಕೊನೆಗೆ ಅವಳು ಬಂದಾಗ ಅವಳ ಗಂಡ ತನ್ನ ದ್ಯಾನ ಶಕ್ತಿಯ ಮೂಲಕ ಕುತೂಹಲದಿಂದ ಎಲ್ಲ ಸಂಗತಿಗಳನ್ನು ತಿಳಿದ. ಅವಳ ವ್ಯಭಿಚಾರದ ಆಲೋಚನೆಗಳನ್ನು ಮನಸ್ಸಿನಲ್ಲೇ ಆಲೋಚಿಸಿದನು.ಆದ್ದರಿಂದಲೇ ತನ್ನ ಮಗನಿಗೆ ತನ್ನ ತಾಯಿಯನ್ನು ಕೊಲ್ಲಲ್ಲು ಹೇಳಿದ.
ಮಗನಿಗೆ ಏನು ಮಾಡಬೇಕೆಂದು ತಿಳಿಯಲಿಲ್ಲ.ವೇದಗಳ ಸಂಸ್ಕೃತಿಯಲ್ಲಿ ಹೆಂಗಸರನ್ನು ಕೊಲೆ ಮಾಡುವುದು (ಇನ್ನೂ ಸ್ವಂತ ತಾಯಿಯ ಬಗ್ಗೆ ಏನು ಹೇಳುವುದು) ಭಯಾನಕ ಕರ್ಮವಾಗಿತ್ತು.ಇನ್ನೊಂದು ಕಡೆ ಅವರ ಹಿರಿಯರಾದ ಅವರ ತಂದೆಯ ಆಜ್ಞೆಯನ್ನು ಪಾಲಿಸಲಿಲ್ಲ ಎಂದಾಗುತ್ತದೆ. ಅದೂ ಕೂಡ ಮಹಾ ದೊಡ್ಡ ಅಪರಾಧವಿದ್ದಂತೆಯೇ.
ಹಿರಿಯ ಮಗ ತನ್ನ ತಂದೆಯ ಆಜ್ಞೆಯನ್ನು ಪಾಲಿಸಲು ನಿರಾಕರಿಸಿದನು.ಆದ್ದರಿಂದ ಋಷಿಗಳು ಗೊಂದಲಕ್ಕೀಡಾದರು. ಋಷಿಮುನಿಗಳು ತನ್ನ ಚಿಕ್ಕ ಮಗನಾದ ಪರಶುರಾಮನಿಗೆ ಈ ಕಾರ್ಯವನ್ನು ಅದೇಶಿಸಿದನು.ವಿಶ್ವಾಸದ್ರೋಹ ಎಸಗಿದ ತಾಯಿಯನ್ನು ಮತ್ತು ಅವಿಧೇಯಕ ಅಣ್ಣನನ್ನು ಕೊಲ್ಲಲ್ಲು ಅಜ್ಞಾಪಿಸಿದನು.
ಪರಶುರಾಮನಿಗೆ ಅವನ ತಂದೆಯ ಶಕ್ತಿಯ ಬಗ್ಗೆ ಅರಿವಿದ್ದ ಕಾರಣ, ತಂದೆಯ ಆಜ್ಞೆಯನ್ನು ಕೈಗೊಳ್ಳಲು ನಿರಾಕರಿಸಿದರೆ,ತಂದೆಯು ತನ್ನನ್ನು ಶಾಪಗ್ರಸ್ತನಾಗಿಸುತ್ತಾನೆ ಎಂದು ತಿಳಿದು.ಈ ಆಜ್ಞೆಯನ್ನು ಪಾಲಿಸಿದರೆ ತಂದೆಗೆ ತೃಪ್ತಿಯಾಗುತ್ತದೆ. ತನ್ನ ತಂದೆಯ ಆಶೀರ್ವಾದದಿಂದ ತಾಯಿ ಮತ್ತು ಅಣ್ಣನನ್ನು ಮತ್ತೆ ನಮ್ಮ ಜೀವನಕ್ಕೆ ಪುನ್ಹ ಕರೆತರಬಹುದು ಎಂದು ಆಲೋಚಿಸಿ ಆಜ್ಞೆಯನ್ನು ಪಾಲಿಸುವುದಾಗಿ ಒಪ್ಪಿಕೊಂಡನು. ನಂತರ ಪರಶುರಾಮನು ತನ್ನ ಸ್ವಂತ ತಾಯಿ ಮತ್ತು ಅಣ್ಣನನ್ನು ಕೊಂದನು.
ಈ ಕಾರ್ಯವು ಪರಶುರಾಮನ ತಂದೆ ಜಮದಗ್ನಿಗೆ ಬಹಳ ತೃಪ್ತಿಯನ್ನು ತಂದುಕೊಡುತ್ತದೆ.ಈ ಕಾರ್ಯದ ನಂತರ ಒಂದು ವರವನ್ನು ಆಶೀರ್ವಾದವಾಗಿ ನೀಡುವುದಾಗಿ ಕೇಳಿಕೊಳ್ಳಲು ಅರ್ಹನಾಗುವೆ ಎಂದು ತಿಳಿದನು.ಪರಶುರಾಮನು ವಿನಂತಿಸಿಕೊಂಡ ತನ್ನ ತಾಯಿ ಮತ್ತು ಅಣ್ಣನನ್ನು ಮತ್ತೆ ಜೀವನಕ್ಕೆ ಮರಳಿ ಕರೆತರಬೇಕು (ಜೀವಂತವಾಗಿಸಬೇಕು) .ಆದರೆ ಅವರಿಗೆ ತಾನು ಕೊಂದೆ ಎನ್ನುವ ವಿಷಯ ಅವರ ನೆನಪಿನಲ್ಲಿ ಇರಬಾರದು ಎಂದು ವಿನಂತಿಸಿಕೊಂಡ.ಈ ಘಟನೆಯಾದ ಕೆಲವೇ ಕ್ಷಣಗಳಲ್ಲಿ ತಾಯಿ ಮತ್ತು ಅಣ್ಣ ಇಬ್ಬರು ಗಾಢ ನಿದ್ರೆಯಿಂದ ಎಚ್ಚರಗೊಂಡರು.ಪರಶುರಾಮನಿಗೆ ತನ್ನ ತಂದೆಯ ಶಕ್ತಿಯ ಮತ್ತು ಸಂಯಮದ ಬಗ್ಗೆ ಅರಿವಿತ್ತು ಆದ್ದರಿಂದಲೇ ಅವನು ಈ ಕಾರ್ಯವನ್ನು ಕೈಗೊಳ್ಳಲು ನಿರ್ಧರಿಸಿದ.
ಜಮದಗ್ನಿಯು ತನ್ನ ಕಠಿಣತೆಯಿಂದಾಗಿ,ಖಂಡಿತವಾಗಿಯೂ ಅತ್ಯಂತ ಸಂಯಮದ ಶಕ್ತಿಯುಳ್ಳವನಾಗಿದ್ದನು. ಆದರೆ ಒಂದು ಸಣ್ಣ ಅಪರಾಧದಿಂದ ಅವಳ ಬಡ ಹೆಂಡತಿ ರೇಣುಕಾ ದೇವಿಯಿಂದಾಗಿ ಅವನು ಕೊಲ್ಲಲ್ಲು ಆಜ್ಞೆ ಮಾಡಿದ.
ಇದು ನಿಸ್ಸಂಶಯವಾಗಿ ಕರ್ಮ ಮತ್ತು ಪಾಪದ ಕ್ರಿಯೆಯೇ.ಆದ್ದರಿಂದಲೇ ಹಾಗಾಗಿ ಅವನ ಕಾರ್ಯಗಳ ಪರಿಣಾಮಗಳನ್ನು ಅವರು ಎದುರಿಸಲು ವೇದಿಕೆಯನ್ನು ಸಿದ್ಧಪಡಿಸಲಾಯಿತು. ಅವರ ಕರ್ಮಕ್ಕನುಸಾರವಾಗಿ ಋಷಿಗಳ ಹೆಂಡತಿ ಮಗನನ್ನು ಕೊಂದರು.
ಪ್ರಾಚೀನ ಕಾಲದಲ್ಲಿ ದೇವರು ತನ್ನ ಭಕ್ತಾದಿಗಳಲ್ಲಿ ಅವನ ಅವತಾರಗಳನ್ನು ವಿವಿಧ ರೀತಿಯಲ್ಲಿ ಪ್ರದರ್ಶಿಸುತ್ತಿದ್ದ ಮತ್ತು ಅತೀಂದ್ರೀಯ ವ್ಯವಹಾರಗಳನ್ನು ನೆಡೆಸುತ್ತಿದ್ದನು. ಈ ಕಾಲದಲ್ಲಿ ಅವುಗಳನ್ನು ನಾವು ಅನುಕರಿಸಲು ಸಾಧ್ಯವಿಲ್ಲ. ಆದರೂ ಶ್ರೀ ಪರಶುರಾಮರ ಸಂಸಾರದ ಕಥೆಯು ನಮ್ಮ ಕಾಮ ಮತ್ತು ಕ್ರೋಧದ ಬಗ್ಗೆ ಎಚ್ಚರದಿಂದರಿಲೂ ಕಲಿಸುತ್ತದೆ. ಶ್ರೀ ಪರಶುರಾಮನನ್ನು ಹೆತ್ತವರೇ ಅಂತಹ ಮಹಾನ ಆತ್ಮಗಳ ಜೀವನವನ್ನೇ ಅಲ್ಲಾಡಿಸಿದವು. ಕಾಮ ಮತ್ತು ಕ್ರೋಧಗಳಿಗೆ ಇನ್ನೂ ಈ ಸಾಮಾನ್ಯ ಮನುಷ್ಯರು ಯಾವ ಲೆಕ್ಕ.ಅಲ್ಲವೇ ?
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
