fbpx
ಆರೋಗ್ಯ

ಈ ರೀತಿ ಕೋಳಿ ಚರ್ಮ ನಿಮಗೂ ಇದ್ಯಾ ? ಇದು ಯಾಕೆ ಬರುತ್ತೆ ಅಂತ ಗೊತ್ತಾ ? ನಿರ್ಲಕ್ಷ ಮಾಡ್ಬೇಡಿ..

ಅಂಟು ಅಸಿಷ್ಣುತೆ ರೋಗ  (gluten intolerance) ಇದನ್ನು ನೀವು ಈ 7  ಲಕ್ಷಣಗಳ ಮೂಲಕ ನಿಮಗೂ ಈ ಖಾಯಿಲೆ ಇದೆಯೋ ? ಇಲ್ಲವೋ ?  ಎಂದು  ತಿಳಿದುಕೊಳ್ಳಬಹುದು.

ಅಂಟು ಇದರ  ಬಗ್ಗೆ  ಅಗಾಗ್ಗೆ ಜನರು ಮಾತನಾಡಿಕೊಳ್ಳುತ್ತಿರುತ್ತಾರೆ. ಆದರೆ ನಿಜ ಹೇಳಬೇಕೆಂದರೆ ಅಂಟು  ನಮ್ಮ ಆರೋಗ್ಯಕ್ಕೆ ಕೆಟ್ಟದ್ದು.ಈ ಪ್ರಶ್ನೆಗೆ ಉತ್ತರ ಅಷ್ಟು ಸುಲಭವಾಗಿಲ್ಲ. ಯಾಕೆಂದರೆ ಅದು ತುಂಬಾ ವೈಯಕ್ತಿಕ ವಿಷಯವು ಮತ್ತು ನಿಮ್ಮ ದೇಹಕ್ಕೆ  ಅಂಟು ಹೊಂದಿರುವ ಪದಾರ್ಥಗಳನ್ನು ಸಹಿಸಿಕೊಳ್ಳುವ ಶಕ್ತಿ ಇದೆಯೋ ? ಇಲ್ಲವೋ ? ಎಂದು ಮೊದಲು ತಿಳಿದುಕೊಳ್ಳಬೇಕು.  ಬಹಳ ವರ್ಷಗಳ ಹಿಂದೆ ಇದು  ಕೆಟ್ಟ ಪರಿಣಾಮವನ್ನು ಬೀರಿದೆ ಎಂಬ ಅಪ ಖ್ಯಾತಿಯನ್ನು ಹೊಂದಿದೆ.ಅಂಟು ಅಸಿಷ್ಣುತೆಯು ವಾಸ್ತವವಾಗಿ ಎದುರಿಸಲು ತುಂಬಾ  ಶೋಚನೀಯವಾಗಿದೆ ಎಂಬ ವಿಷಯ ನಿಶ್ಚಯವಾಗಿದೆ.ಆದರೆ ಅಂಟು ರೋಗ ಇದೆ ಎಂದು ಹೇಳುವ ಮೊದಲೇ  ಸೂಕ್ಷ್ಮವಾದ ಶರೀರವನ್ನು  ಹೊಂದಿರುವವರಿಗೆ ಕೆಲವು ಅಪಾಯದ ಚಿಹ್ನೆಗಳು ಕಾಣಿಸಿಕೊಳ್ಳುತ್ತವೆ.ಆದ್ದರಿಂದ ಈ ಅಂಟು ರೋಗದ ಬಗ್ಗೆ ಮೂಲಭೂತ ಮಾಹಿತಿಯನ್ನು ನೀವು ತಿಳಿದುಕೊಳ್ಳಲೇಬೇಕು.

ಈ ಅಂಟು ಒಂದು ಪ್ರೊಟೀನ್ ಪದಾರ್ಥವಾಗಿದ್ದು ಇದು ಸಾಮಾನ್ಯವಾಗಿ ಗೋದಿ, ಒಟ್ಸ್, ರೈ,ಬಾರ್ಲಿ ಇವುಗಳಲ್ಲಿ  ಇರುತ್ತದೆ.ಇವುಗಳನ್ನು  ಬೇಯಿಸುವಾಗ ಹೊರಬರುವ ಪದಾರ್ಥವಾಗಿದೆ.ಆ ಹಿಟ್ಟುಗಳಿಂದ ಹೆಚ್ಛಾಗಿ ಆಹಾರ ಪದಾರ್ಥಗಳಾದ ಬ್ರೆಡ್ ಮತ್ತು ಇನ್ನಿತರೆ ಭಕ್ಷ್ಯಗಳನ್ನು, ಮೃದುವಾಗಿ, ನಯವಾಗಿ  ವಿವಿಧ  ವಿನ್ಯಾಸಗಳಲ್ಲಿ  ತಯಾರಿಸಲಾಗುತ್ತದೆ.

ಈ ಅಂಟು ಮನುಷ್ಯರ ಶರೀರದೊಳಗೆ ಸೇರಿ, ಯಾವ ವ್ಯಕ್ತಿಯು  ಹೊಟ್ಟೆಯ ಖಾಯಿಲೆ ಅಥವಾ  ಬೇರೆ ಹೊಟ್ಟೆಗೆ ಸಂಬಂಧಪಟ್ಟ ಸಮಸ್ಯೆಗಳಿಂದ    ಬಳಲುತ್ತಿರುತ್ತಾರೋ, ಅಂತವರ ಶರೀರಕ್ಕೆ ಈ ಅಂಟನ್ನು ಸಹಿಸಿಕೊಳ್ಳುವ ಸಾಮರ್ಥ್ಯ ಇರುವುದಿಲ್ಲ.ಅವರ ರೋಗ ನಿರೋಧಕ ಶಕ್ತಿಯ (immune system)  ವ್ಯವಸ್ಥೆ ತುಂಬಾ ಕೆಟ್ಟ ಪರಿಣಾಮವನ್ನು ಬೀರುತ್ತದೆ ಮತ್ತು ಅಂಟು ಇರುವ ಪದಾರ್ಥಗಳನ್ನು ತಿಂದಾಗ ದೇಹದಲ್ಲಿ ಉರಿಯೂತ ಉಂಟಾಗುತ್ತದೆ.

ಈ ದೀರ್ಘ ರೀತಿಯಾದ ಉರಿಯೂತವು  ಸಣ್ಣ ಕರುಳಿನ ಪದರವನ್ನು ಹಾಳು ಮಾಡಿ ಮತ್ತು ಶರೀರದಲ್ಲಿ ಪೋಷಕಾಂಶಗಳನ್ನು ಹೀರಿಕೊಳ್ಳುವ ಕ್ರಿಯೆಯನ್ನು ಹಾಳುಮಾಡುತ್ತದೆ,ಕ್ರಿಯೆಯು ಸರಿಯಾಗಿ ನೆಡೆಯುವುದಿಲ್ಲ. ರಕ್ತಹೀನತೆ  ಮತ್ತು ಸಂಧಿವಾತ ದಂತಹ ಅನೇಕ ಆರೋಗ್ಯ  ಸಮಸ್ಯೆಗಳು ಶುರುವಾಗುತ್ತವೆ. ಆದ್ದರಿಂದಲೇ ಇದು ಬಹಳ ಮುಖ್ಯ ಅಂಟು ಆಸಹಿಷ್ಮುವಿಕೆಯನ್ನು ಹೊಂದಿರುವ ಜನಗಳು ಅಂಟು ಇರುವ ಪದಾರ್ಥಗಳನ್ನು  ತಿನ್ನದೇ ಇರುವುದು ಅವರ ಆರೋಗ್ಯಕ್ಕೆ ಒಳ್ಳೆಯದು.

ಅಂಟು ಪದಾರ್ಥಗಳಿಗೆ ನಿಮ್ಮ ದೇಹವು ಹೊಂದಾಣಿಕೆ ಯಾಗುವುದಿಲ್ಲ ಎಂದು ತಿಳಿದಿರಲಿ.ಸಾಮಾನ್ಯವಾಗಿ ಕೆಲವು ದೈಹಿಕ ಚಿಹ್ನೆ ಮತ್ತು ಲಕ್ಷಣಗಳನ್ನು ಈ ಕೆಳಗೆ ಪಟ್ಟಿ ಮಾಡಲಾಗಿದೆ.ನೀವು ಅವುಗಳ ಕಾರಣವೇನೆಂದು ತಿಳಿಯಲು  ವೈದ್ಯರನ್ನು ಸಂಪರ್ಕಿಸಿ.ಈ ಕೆಳಗಿನವುಗಳಲ್ಲಿ  ಯಾವುದಾದರೂ ಒಂದು ಚಿಹ್ನೆ ಮತ್ತು ಲಕ್ಷಣಗಳು ನಿಮ್ಮಲ್ಲಿ ಕಂಡು ಬಂದರೆ ಕೂಡಲೇ ವೈದ್ಯರನ್ನು ಸಂಪರ್ಕಿಸಿ ಸಲಹೆಯನ್ನು ತೆಗೆದುಕೊಳ್ಳುವುದು ಉತ್ತಮ.

1.ದೀರ್ಘ ಕಾಲದ ಆಯಾಸ.

ನಿಮಗೆ ತುಂಬಾ ಸುಸ್ತಾಗಿದ್ದರೆ,ದೇಹದಲ್ಲಿ ಶಕ್ತಿ ಇಲ್ಲ ಎಂದಾದರೆ, ನೀವು ಎಷ್ಟೇ ನಿದ್ದೆ ಮಾಡಿದರು ವಿಶ್ರಾಂತಿ ತೆಗೆದುಕೊಂಡಿದ್ದರು,ನಿಮ್ಮ ದೇಹದಲ್ಲಿ ಆಯಾಸದ ಅನುಭವ ಹಾಗೆಯೇ ಉಳಿಯುತ್ತದೆ. ಇದಕ್ಕೆ ಕಾರಣ ನೀವು ಪಾಲಿಸುತ್ತಿರುವ  ಆಹಾರ ಪದ್ಧತಿ. ಅಂಟು ನಿಮ್ಮ ದೇಹವನ್ನು ಸತತವಾಗಿ  ಉರಿಯೂತಕ್ಕೆ ಒಳಗಾಗುವಂತೆ ಮಾಡುತ್ತದೆ. ದೇಹದ ರೋಗ ನಿರೋಧಕ ಶಕ್ತಿಯು  ಯಾರೋ ಬಂದು ದಾಳಿ ಮಾಡಿರುವ ಹಾಗೆ ವರ್ತಿಸುತ್ತದೆ ಮತ್ತು ಅದರಿಂದ ರಕ್ಷಿಸಿಕೊಳ್ಳಲು ಟನ್ ಗಟ್ಟಲೇ ಶಕ್ತಿಯನ್ನು ವ್ಯರ್ಥ ಮಾಡುತ್ತದೆ.ಈ ಕಾರಣದಿಂದಲೇ ಅಂಟು ದೇಹಕ್ಕೆ ಒಗ್ಗದೇ ಇರುವ ವ್ಯಕ್ತಿಗಳಲ್ಲಿ ತುಂಬಾ ದಣಿದ ಮತ್ತು ಶಕ್ತಿಯೇ ಇಲ್ಲದ ರೀತಿಯಲ್ಲಿ ವರ್ತಿಸುತ್ತದೆ.ಇದು ದಿನದಿಂದ ದಿನಕ್ಕೆ ಇನ್ನೂ ವಿಪರೀತವಾಗಿ. ಅಂತಿಮವಾಗಿ ದೀರ್ಘಕಾಲದ ಆಯಾಸ ಮತ್ತು ಒತ್ತಡಕ್ಕೆ ತುತ್ತಾಗಬೇಕಾಗುತ್ತದೆ.

2.ಫೈಬ್ರೋಮಯಾಲ್ಜಿಯ.

ನೀವು ಅಂಟು ಅಸಿಷ್ಣುವಿಕೆಯ ಖಾಯಿಲೆಯಿಂದ  ಬಳಲುತ್ತಿದ್ದರೆ  ಬೇರೆ ಸಂಗತಿಗಳಾದ ದೌರ್ಬಲ್ಯ, ನಿದ್ರೆಗೆ ಸಂಭಂಧಪಟ್ಟ  ಸಮಸ್ಯೆಗಳು,ಸ್ನಾಯುಗಳ ಸೆಳೆತ ಮತ್ತು ಶರೀರದಲ್ಲಿ ನೋವು,ಇವೆಲ್ಲವುಗಳಿಂದ ಯಾತನೆ ಪಡಬೇಕಾಗುತ್ತದೆ.ದೀರ್ಘ ಕಾಲದವರೆಗೆ ಸುಸ್ತು  ಮತ್ತು ಆಯಾಸ ಇದರ ಜೊತೆಗೆ ಇತರೆ ತೊಂದರೆಗಳನ್ನು ನೀವು ಅನುಭವಿಸುತ್ತಿರುತ್ತೀರ.

3.ಹೊಟ್ಟೆ ನೋವು.

ಇದರ ಲಕ್ಷಣಗಳಾದ ಹೊಟ್ಟೆ ಹುಬ್ಬುವುದು,ಭೇದಿ, ಗ್ಯಾಸ್ಟ್ರಿಕ್ ಸಮಸ್ಯೆ ಮತ್ತು ಮಲಬದ್ಧತೆ ಇವೆಲ್ಲವೂ ಮುಖ್ಯ ಚಿಹ್ನೆಗಳಾಗಿದ್ದು.ಸತತವಾಗಿ ಹೊಟ್ಟೆನೋವು ಮತ್ತು ಈ ಎಲ್ಲ ಸಮಸ್ಯೆಗಳು ಕಂಡು ಬರುತ್ತವೆ.ಈ ಚಿಹ್ನೆಗಳು  ಬಹಳ ದಿನಗಳ ವರೆಗೆ ಕಂಡು ಬಂದರೆ  ವೈದ್ಯರ ಸಲಹೆ ತೆಗೆದುಕೊಳ್ಳುವುದು ಉತ್ತಮ.ಈ ಅಂಟು ಬಂದಿರುವ ಪದಾರ್ಥಗಳು ಹೊಟ್ಟೆಯೊಳಗೆ ಸೇರಿಕೊಂಡು ಇದರ ಜೊತೆಗೆ ಸಣ್ಣ ಕರುಳಿನಲ್ಲಿ ಉರಿಯೂತ  ಉಂಟುಮಾಡುತ್ತದೆ. ಜೀರ್ಣ ಕ್ರಿಯೆಗೆ ಸಂಬಂಧಪಟ್ಟ ರೋಗಗಳು ಕಾಣಿಸಿಕೊಳ್ಳುತ್ತವೆ.

4.ಕೋಳಿ ಚರ್ಮ.

ನಿಮ್ಮ ಚರ್ಮವು ಕೋಳಿ ಚರ್ಮದ ಮಾದರಿಯಲ್ಲಿ ಕಾಣಿಸಿಕೊಳ್ಳುತ್ತದೆ. ಹೇಗೆಂದರೆ ರೆಕ್ಕೆ ಪುಕ್ಕ ತೆಗೆದ ಕೋಳಿಯ ಚರ್ಮವೂ  ಹೇಗೆ ಕಾಣಿಸುತ್ತದೋ ಹಾಗೆ  ನಮ್ಮ ಚರ್ಮ ಗೋಚರಿಸುತ್ತದೆ.ಅವು ಸಣ್ಣ,ಗಟ್ಟಿ,ಬಿಳಿ, ಅಥವಾ ಗುಲಾಬಿ ಬಣ್ಣದ ಕೆಂಪು ಉಬ್ಬುಗಳು ರೀತಿಯಲ್ಲಿ ದದ್ದುಗಳಾಗಿ ಕಂಡು ಬರುತ್ತವೆ.ಈ ಸ್ಸ್ಥಿತಿಯು ಯತ್ತೆಚ್ಛವಾಗಿ ಆಗಾಗ್ಗೆ ಮೊಣಕೈ ಮತ್ತು ಅಂಗೈನ ಹಿಂಬಾಗದಲ್ಲಿ ಕಾಣಿಸಿಕೊಳ್ಳುತ್ತವೆ. ವೈದ್ಯಕೀಯ ಪದದಲ್ಲಿ  ಕೋಳಿ ಚರ್ಮವನ್ನು  ‘ಕೆರಟೋಸಿಸ್ ಪಿಲಾರಿಸ್’ ಎಂದು ಕರೆಯಲಾಗುತ್ತದೆ. ಈ ಹೆಸರು ಕೇರಾಟನಿಕರಣದಿಂದ  ಬಂದಿದ್ದು.

(Keratin) ಕೆರಟಿನ ಕೂದಲ ಬುಡ ಅಂದರೆ ಕಿರುಚೀಲದೊಳಗೆ ಚರ್ಮದಲ್ಲಿ ಸೇರಿಕೊಳ್ಳುತ್ತದೆ. ನಿಮ್ಮ ದೇಹವು ಅತ್ಯದಿಕವಾಗಿ ಕೆರಟಿನ ಅನ್ನು ಉತ್ಪತ್ತಿ ಮಾಡಿದಾಗ ಈ ರೀತಿಯಾಗುತ್ತದೆ.ಕೆರಟಿನ ಒಂದು ಪ್ರೊಟೀನ್ ಅಂಶವಾಗಿದ್ದು.ನಮ್ಮ ದೇಹದಲ್ಲಿ ಉತ್ಪತ್ತಿಯಾದ ಹೆಚ್ಚು ಕೆರಟಿನ ಅಂಶವು ಒಂದು ಕಡೆ ಗುಂಪು ಗೂಡಲು ಶುರುವಾಗುತ್ತದೆ.ಕೂದಲಿನ ಬುಡದಲ್ಲಿ ಉಬ್ಬುಗಳಾಗಿ ಪರಿವರ್ತನೆಗೊಳ್ಳುತ್ತದೆ.ಬಹಳ ಪ್ರಕರಣದಲ್ಲಿ  ಈ ಕೋಳಿ ಚರ್ಮದ ಕಾರಣದಿಂದ ಕೊಬ್ಬಿನ ಆಮ್ಲಗಳು ಮತ್ತು ವಿಟಮಿನ್ – ಎ ನ ಕೊರತೆಯು ನಮ್ಮ ದೇಹದಲ್ಲಿ ಉಂಟಾಗುತ್ತದೆ. ಇದರಿಂದ ಚರ್ಮದಲ್ಲಿ ನವೆ ಮತ್ತು ಪೋಷಕಾಂಶಗಳನ್ನು ಹೀರಿಕೊಳ್ಳುವ ಸಾಮರ್ಥ್ಯ ಕಡಿಮೆಯಾಗುತ್ತದೆ.

5.ಚರ್ಮದ ತುರಿಕೆ.

ಬಹಳ ಜನ ಅಂಟು ಸಹಿಷ್ಣುತೆ ರೋಗದಿಂದ ಬಳಲುತ್ತಿರುವವರು ಚರ್ಮದ ನವೆಯಿಂದ ಬಳಲುತ್ತಿರುತ್ತಾರೆ.ಈ ರೀತಿಯ ಚರ್ಮವು ಅಧಿಕವಾಗಿ ಉರಿ ಮತ್ತು ಊತವನ್ನು ಉಂಟುಮಾಡಿ ಸೋರಿಯಾಸೀಸ್ ಮತ್ತು ಎಕ್ಜಿಮ್ ದಂತಹ ಚರ್ಮದ ಖಾಯಿಲೆಗಳು ಬರುತ್ತವೆ.ಇದು ಅನಾನುಕೂಲತೆ ಮತ್ತು ನೋವನ್ನುಂಟು ಮಾಡುತ್ತದೆ ಮತ್ತು ಇದರಿಂದ ಗುಣ ಮುಖರಾಗಲು ಔಷಧಿಯನ್ನು ಬಳಸಬೇಕು.ಮನುಷ್ಯರ ಚರ್ಮವು ಬೇಗನೆ ಪ್ರಭಾವಿತವಾಗಿ ಭಾದಿತಗೊಳ್ಳುತ್ತದೆ.ಇಂತಹ ಚರ್ಮವನ್ನು ಹೊಂದಿರುವವರು ಏಕಾಏಕಿ ಉರಿಯೂತ ಮತ್ತು ನವೆಗೆ ಕಾರಣವಾಗುತ್ತದೆ.

6.ಸತತವಾಗಿ ತಲೆನೋವು.

ತಲೆಸುತ್ತು ಮತ್ತು ತೀವ್ರವಾದ ತಲೆನೋವಿನಿಂದ ಬಳಲುತ್ತಿದ್ದರೆ, ವಿಶೇಷವಾಗಿ ತಿಂಡಿ,ಊಟ ಮಾಡಿದ 60 ನಿಮಿಷಗಳ ಬಳಿಕ ಈ ರೀತಿಯಾದರೆ ಇದಕ್ಕೆ ಮುಖ್ಯ ಕಾರಣ ನಿಮ್ಮ ಆಹಾರ ಕ್ರಮ. ಇದು ಆಹಾರಕ್ಕೆ ಸಂಬಂಧಪಟ್ಟ ವಿಷಯವೇ ಆಗಿರುತ್ತದೆ.ಜನರು ತಲೆಸುತ್ತು,ಕಣ್ಣಿನ ದೃಷ್ಟಿ ಮಂಜಾಗುವುದು,ತಲೆ ತಿರುಗುವುದು ಇವೆಲ್ಲವೂ ಸಹ ಅಂಟುರೋಗದ ಸೂಕ್ಷ್ಮತೆಗಳಾಗಿವೆ.

7.ತಲೆ ತಿರುಗುವಿಕೆ.

ತಲೆ ಹಗುರವಾಗಿ ಮತ್ತು ಆರೋಗ್ಯದಲ್ಲಿ ಸಮತೋಲನವಿಲ್ಲದ ಭಾವನೆಗಳು ಮೂಡುತ್ತವೆ.ಅಂಟು ಸಹಿಷ್ಣುತೆಯಿಂದ ಸಾಮಾನ್ಯವಾಗಿ  ಈ ಮೇಲೆ ಹೇಳಿದ ಎಲ್ಲಾ ಚಿಹ್ನೆ ಮತ್ತು ಲಕ್ಷಣಗಳು ಕಂಡು ಬರುತ್ತವೆ.ಅವ್ಯವಸ್ಥೆ ಮತ್ತು ಅಸಹಜವಾದ ಮಬ್ಬು ಭಾವನೆಗಳು ಆವರಿಸುತ್ತವೆ.ನೀವು ಅಂಟು ಇರುವ ಆಹಾರವನ್ನು  ತಿನ್ನುತ್ತಿದ್ದೀರ  ಎಂದು ನಿಮ್ಮ ದೇಹವು ಬೇಗನೆ ಚಿಹ್ನೆ ಮತ್ತು ಲಕ್ಷಣಗಳ ಮೂಲಕ ತಿಳಿಸುತ್ತದೆ.ಆದ್ದರಿಂದ ನೀವು ನಿಮ್ಮ ಆಹಾರದ ಕ್ರಮದ ಮೇಲೆ ಗಮನಹರಿಸಬೇಕು ಮತ್ತು  ಕನಿಷ್ಠ ಎರಡು ವಾರಗಳ ಮಟ್ಟಿಗಾದರೂ  ಕಟ್ಟುನಿಟ್ಟಾದ ಆಹಾರ ಕ್ರಮಗಳನ್ನು ಪಾಲಿಸಬೇಕು.ಈ ರೀತಿ ಮಾಡಿದರೆ ನೀವು ನಿಮ್ಮ ಶರೀರದಲ್ಲಿ ಆಗುವ ಬದಲಾವಣೆಗಳನ್ನು  ಸುಲಭವಾಗಿ ಅರ್ಥ ಮಾಡಿಕೊಳ್ಳಬಹುದು.ನಿಮ್ಮ ಮಬ್ಬು ಭಾವನೆಗಳು ತಲೆ ಸುತ್ತು,ತಲೆ ನೋವು ಚರ್ಮ ರೋಗ ಇವೆಲ್ಲವೂ  ದಿನದಿಂದ ದಿನಕ್ಕೆ ಕಣ್ಮರೆಯಾಗುತ್ತಾ ಹೋಗುತ್ತವೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

1 Comment

1 Comment

Leave a Reply

Your email address will not be published. Required fields are marked *

To Top