fbpx
ದೇವರು

ಬೆಳಗಿನ ಜಾವ ಮಾಡ್ಕೊಳ್ಳೋ ಈ ಸಣ್ಣ ಬದಲಾವಣೆ ರಾತ್ರಿಯ ಹೊತ್ತು ಕೆಟ್ಟ ಕನಸು ಬೀಳದ ಹಾಗೆ ಮಾಡುತ್ತೆ..

ಬೆಳಗಿನ ಜಾವ ಮಾಡ್ಕೊಳ್ಳೋ ಈ ಸಣ್ಣ ಬದಲಾವಣೆ ರಾತ್ರಿಯ ಹೊತ್ತು ಕೆಟ್ಟ ಕನಸು ಬೀಳದ ಹಾಗೆ ಮಾಡುತ್ತೆ..

ನೀವು ಪ್ರತೀದಿನ  ಬೆಳಗಿನ ಜಾವದಲ್ಲಿ ಒಂದು ಸಣ್ಣ ಬದಲಾವಣೆಯನ್ನು ಮಾಡಿಕೊಂಡರೆ, ಅದು ನಿಮ್ಮ ಎಲ್ಲ ದುರಾದೃಷ್ಟವನ್ನು, ರಾತ್ರಿಯ ಹೊತ್ತು ಕನಸಿನಲ್ಲಿ ಬೀಳುವ ದುಃಸ್ವಪ್ನಗಳನ್ನು ನಿಮ್ಮಿಂದ ದೂರಗೊಳಿಸುತ್ತದೆ.

ದೇವರನ್ನು ಪೂಜಿಸಬೇಕಾದರೆ ನಿಮ್ಮ ಮನಸ್ಸು ಮತ್ತು ದೇಹ ಎರಡನ್ನೂ ಸ್ವಚ್ಛವಾಗಿಟ್ಟುಕೊಳ್ಳಬೇಕು.18 ಮಹಾ ಪುರಾಣಗಳಲ್ಲಿ ಒಂದಾದ ಕೂರ್ಮ ಪುರಾಣದ ಪ್ರಕಾರ (ವಿಷ್ಣುವು  ಆಮೆಯ ಅವತಾರವನ್ನು ತಾಳಿದ ನಂತರ ಕೂರ್ಮಾ ಎಂಬ ಹೆಸರು ಬಂತು). ಅದರಲ್ಲಿ  ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಒಂದು ಅಭ್ಯಾಸದ ಬಗ್ಗೆ ಹೇಳಿಲಾಗಿದೆ ಅದು ನಿಮ್ಮನ್ನು ಸಂತೋಷವಾಗಿರುವಂತೆ ಮಾಡುತ್ತದೆ.

ಯಾಕೆ ಬೆಳಗಿನ ಸಮಯದಲ್ಲೇ ಸ್ನಾನ ಮಾಡುವುದು ಒಳ್ಳೆಯದು ?

ಶಾಸ್ತ್ರಗಳ ಪ್ರಕಾರ,ಮುಂಜಾನೆಯ ಸಮಯದಲ್ಲಿ ಅಥವಾ ಸೂರ್ಯ ಉದಯಿಸಿವುದಕ್ಕಿಂತ ಮುಂಚೆ,ಅಕಾಶವು ಕೆಂಪು ವರ್ಣದ ತರಂಗಾಂತರಗಳನ್ನು ಹೊರ ಸೂಸುತ್ತದೆ. ಅವುಗಳನ್ನು ನಮ್ಮ ದೇಹವು ಸ್ನಾನದ ಸಮಯದಲ್ಲಿ ಹೀರಿಕೊಳ್ಳುತ್ತದೆ.ಈ ಕೆಂಪು ವರ್ಣಗಳು  ನಮ್ಮ ದೇಹಕ್ಕೆ ವಿಕಿರಣಾ ಶಕ್ತಿ ಮತ್ತು ಮನಸ್ಸಿನಲ್ಲಿ  ಧನಾತ್ಮಕತೆಯನ್ನು ತುಂಬಿ ಪರಿವರ್ತನೆ ಗೊಳಿಸುತ್ತವೆ.

ನೆನಪಿಡಿ ಮುಂಚೆ ಹಿಂದಿನ ಕಾಲದಲ್ಲಿ ನಮ್ಮ ಹಿರಿಯರು  ಸ್ನಾನವನ್ನು  ಕೆರೆ,ಕಟ್ಟೆ,ಬಾವಿ ಮತ್ತು ನದಿಯ ತಟದಲ್ಲಿ ಮಾಡುತ್ತಿದ್ದರೆ ಹೊರತು  (ಸ್ನಾನದ ಕೋಣೆ ಅಥವಾ ಬಚ್ಚಲು )  ಮನೆಯಲ್ಲಿ ಅಲ್ಲ.

ಶಾಸ್ತ್ರಗಳು   ಸ್ನಾನದ ಬಗ್ಗೆ ಏನು ಹೇಳುತ್ತವೆ ?

1.ಕೂರ್ಮ ಪುರಾಣದ ಪ್ರಕಾರ:-

ವಿಷ್ಣುವಿನ ಎರಡನೇ ಅವತಾರವಾದ ನಾರದ ಮುನಿಗಳು ಭೋದನೆಯಲ್ಲಿ ಈ ರೀತಿ ಹೇಳಿದ್ದಾರೆ,  ಒಬ್ಬ ವ್ಯಕ್ತಿಯು ತನ್ನ ದಿನವನ್ನು ಯಾವಾಗಲೂ ಸ್ನಾನದಿಂದಲೇ  ಶುರು ಮಾಡುವುದರಿಂದ ,ಆಗ ಅದು ರಜೋ, ತಮೋಗುಣಗಳನ್ನು ನಮ್ಮ ದೇಹದಲ್ಲಿ ಕಡಿಮೆ ಗೊಳಿಸುತ್ತದೆ.ಅದ್ದರಿಂದ ನಮ್ಮ ದೇಹದ ಪ್ರತೀ ಕಣ ಕಣವು ಚೈತನ್ಯ ಮತ್ತು ಧನಾತ್ಮಕತೆಯ ಶಕ್ತಿಯನ್ನು ಹೀರಿಕೊಳ್ಳುತ್ತವೆ.

2.ಸ್ಕಂದ ಪುರಾಣದ ಪ್ರಕಾರ:-

ಸ್ನಾನವು ಬರೀ ನೀರಿನಲ್ಲಿ ಮುಳುಗಿ ಮೇಲೆದ್ದು ಬರುವುದಲ್ಲ ಅಥವಾ ಮಳೆ ನೀರಿನಲ್ಲಿ  ದೇಹವನ್ನು ಮಾತ್ರ ಸಾಬೂನು ಬಳಸಿ ಸ್ವಚ್ಛಗೊಳಿಸುವುದಲ್ಲ.  ನೀವು ನಿಮ್ಮ ಮನಸ್ಸನ್ನು  ಮತ್ತು ದೇಹದ  ಜೊತೆಗೆ ಇಂದ್ರಿಯಗಳನ್ನು ಸ್ವಚ್ಛಗೊಳಿಸಬೇಕು. ಇದಕ್ಕೋಸ್ಕರ ಮಂತ್ರವನ್ನು ಪಠಿಸಬೇಕು  ಅಥವಾ ಧನಾತ್ಮಕ ಯೋಚನೆಯನ್ನು ಮಾಡ್ಬೇಕು.

ಸ್ನಾನ ಮಾಡುವಾಗ ಹೇಳುವ ಮಂತ್ರ.

“ಗಂಗೇಚ ಯಮುನಾ ಚೈವ ಗೋಧಾವರಿ ಸರಸ್ವತಿ ನರ್ಮದಾ ಸಿಂಧು ಕಾವೇರಿ ಜಲೆಸ್ಮೈನ ಸನ್ನಿದಿಂ ಕುರು”

3.ವಿಶ್ವಾಮ್ರಿತ  ಸ್ಮೃತಿಯ ಪ್ರಕಾರ:-

ಪ್ರತಿನಿತ್ಯ ಸ್ನಾನ ಮಾಡುವುದು ದೇಹದಲ್ಲಿರುವ ನಕಾರಾತ್ಮಕ ಶಕ್ತಿಯನ್ನು ಸ್ವಚ್ಛಗೊಳಿಸುತ್ತದೆ ಮತ್ತು ಮನುಷ್ಯರಿಗೆ ಕೆಟ್ಟ ಕನಸುಗಳು ಅಂದರೆ ದುಸ್ವಪ್ನಗಳು ಬೀಳದಂತೆ ,  ಯಾವುದೇ ಖಾಯಿಲೆಗಳು , ತೊಂದರೆಗಳು ಬರದಂತೆ ತಡೆಗಟ್ಟುತ್ತದೆ.

4.ಭಗವತ್ಗೀತೆಯಲ್ಲಿ ಹೇಳಿರುವ ಪ್ರಕಾರ:-

ಸ್ನಾನವು ನಮ್ಮ ದೇಹದಲ್ಲಿರುವ  ಅನೇಕ ರಂಧ್ರಗಳಿಂದ  ಬಿಡುಗಡೆಯಾದ  ಕಲ್ಮಶಗಳನ್ನು ಹೊರದೂಡಿ ಸ್ವಚ್ಛಗೊಳಿಸುತ್ತದೆ.ಆದ್ದರಿಂದಲೇ ಯಾರೊಬ್ಬರಾದರೂ ಸರಿ  ಪೂಜೆ ಮಾಡುವುದಕ್ಕೆ ಮುನ್ನ ಸ್ನಾನ ಮಾಡಿದ ನಂತರವೇ ದೇವರ ಮನೆಯ ಒಳಗೆ ಹೋಗುವುದು ಓಳ್ಳೆಯದು.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top