ಮಹಾಭಾರತದಲ್ಲಿ ಯುಧಿಷ್ಠಿರನನ್ನು ಅತೀ ಎತ್ತರದ,ಗಟ್ಟಿಮುಟ್ಟಾದ, ರಾಜ. ಅವನು ಇತರ ನಾಗರೀಕರಂತೆ ವಿನಮ್ರತೆಯಿಂದ ಇರುತ್ತಿದ್ದ ಎಂದು ವ್ಯಾಸ ಮಹರ್ಷಿಗಳು ಮತ್ತು ಕೃಷ್ಣನು ಸೇರಿ ಈ ರೀತಿ ವಿವರಿಸಿದ್ದಾರೆ.
ಯುಧಿಷ್ಠಿರನ ಮತ್ತೊಂದು ಹೆಸರೇ ಧರ್ಮರಾಜ,ಧರ್ಮರಾಯ.
1.ಪುರಾಣಗಳಲ್ಲಿ ಇಂದ್ರಪ್ರಸ್ತದ ರಾಜ ಮತ್ತು ಹಸ್ತಿನಾಪುರದ ರಾಜನಾದ ಯುಧಿಷ್ಠಿರನನ್ನು, ಉತ್ಕಟ,ಧರ್ಮವನ್ನು ಪಾಲಿಸುತ್ತಿದ್ದವನು. ಅವನ ಹೃದಯವೂ ಮೂಲರೂಪವಾದದ್ದು. ಎಂದಿಗೂ ಕೂಡ ಲೌಕಿಕತೆಯಿಂದ (ಜನಗಳ ಮಾತುಗಳಿಗೆ ) ಉತ್ತೇಜನಕ್ಕೆ ಒಳ ಪಟ್ಟಿರಲಿಲ್ಲ ಎಂದು ಚಿತ್ರಿಸಲಾಗಿದೆ.
ಈ ಕೆಳಗಿನ ಆಯ್ದ ಭಾಗಗಳು ಮಹಾಪ್ರಸ್ತಾನಿಕ ಪರ್ವವೂ ಅನೇಕ ಒಳ್ಳೆಯ ಗುಣಗಳಿಗೆ ಸಾಕ್ಷಿಯಾಗಿದೆ. ಸರಳ, ಸತ್ಯವಾದ ,ದಯಾ ಮನಸುಳ್ಳ , ಎಲ್ಲರಿಗೂ ಹೊಂದಿಕೊಳ್ಳಬಲ್ಲ ಮತ್ತು ತಾಳ್ಮೆಯ ರಾಜನಾಗಿದ್ದ ಯುಧಿಷ್ಠಿರ ಎಂದು ಹೇಳುತ್ತದೆ.
2 .ಕುರುಕ್ಷೇತ್ರ ಯುದ್ಧ ಮುಗಿಸಿ ಯಶಸ್ಸನ್ನು ಗಳಿಸಿದ ಅದೆಷ್ಟೋ ವರ್ಷಗಳ ಬಳಿಕ ಪಾಂಡವರಿಗೆ ವ್ಯಾಸ ಮಹರ್ಷಿಗಳ ಸಲಹೆಯಂತೆ ಅವರು ರಾಜ್ಯದಿಂದ ನಿವೃತ್ತಿ ಹೊಂದಲು ತೀರ್ಮಾನಿಸಿದರು.
ಶುಭಮುಹೂರ್ತವನ್ನು ನೋಡಿ ಪಾಂಡವರು ಅರ್ಜುನನ ಮಗ ಅಭಿಮನ್ಯುವಿನ ಪುತ್ರ ಪರೀಕ್ಷಿತನಿಗೆ ಪಟ್ಟ ಕಟ್ಟಿದರು.ದೌಮ್ಯ ಮಹರ್ಷಿಗಳು ಕುಲ ಪುರೋಹಿತರಾಗಬೇಕು.ಕೌರವರಲ್ಲಿ ಉಳಿದ ಯುಯುತ್ಸು ಪಾಲಕನಾಗಿರಬೇಕು.ಕೃಪರು ಮಾರ್ಗದರ್ಶಕರಾಗಿರಬೇಕೆಂದು ಕೇಳಿ ಕೊಂಡರು.ಪಾಂಡವರು ನಾರುಬಟ್ಟೆಯನ್ನುಟ್ಟು ಹೊರಟರು. ಪಾರ್ಥನು ಗಾಂಡೀವವನ್ನು ಹಿಡಿದೇ ಹೊರಟನು.ಪ್ರಜಾ ಜನರು ಕಣ್ಣೀರಿಡುತ್ತಾ ಬಂದು ಬೀಳ್ಕೊಟ್ಟರು. ಪಾಂಡವರಿಗೆ ಹಿಂದೆ ಹಸ್ತಿನಾವತಿಯಿಂದ ದ್ಯುತದಲ್ಲಿ ಸೋತು ಅಡವಿಗೆ ತೆರಳಿದ್ದು ನೆನಪಾಯಿತು. ಆಗ ರಾಜ್ಯ ಬೇಕೆಂಬ ಆಸೆಯಿತ್ತು. ಆದರೆ ಈಗ ಸಿಕ್ಕ ರಾಜ್ಯಬೇಡವೆಂದು ಹೊರಟ್ಟಿದ್ದರು.
3.ಪಾಂಡವರು ಉತ್ತರ ದಿಕ್ಕಿಗೆ ಪಯಣವನ್ನು ಆರಂಭಿಸಿದರು.ದಾರಿ ಮಾರ್ಗದಲ್ಲಿ ತಕ್ಷಣ ಒಂದು ನಾಯಿ ಅವರನ್ನು ಅನುಸರಿಸಿ ಸ್ನೇಹಿತರಂತೆ ಜೊತೆಯಲ್ಲೇ ಹಿಂಬಾಲಿಸ ತೊಡಗಿತು.
ಮೊದಲು ಸಮುದ್ರದಲ್ಲಿ ಮುಳುಗಿದ್ದ ದ್ವಾರಕಾ ಪಟ್ಟಣಕ್ಕೆ ಬಂದರು.ಪರಲೋಕ ಸೇರಿದ ಶ್ರೀ ಕೃಷ್ಣನನ್ನು ನೆನಪಿಸುತ್ತ ಅವರು ಮುಂದೆ ಸಾಗಿದಾಗ. ಅಗ್ನಿದೇವನು ಪ್ರತ್ಯಕ್ಷನಾದನು. ಆಗ ಅರ್ಜುನನಿಗೆ ಗಾಂಡೀವ ಧನಸ್ಸನ್ನು ಹಿಂತಿರುಗಿಸಲು ಕೇಳಿದನು.ಹಿಂದೆ ಖಾಂಡವವನ ದಹನ ಪ್ರಸಂಗದಲ್ಲಿ ಈ ಧನಸ್ಸು ಅಗ್ನಿಯಿಂದ ಅರ್ಜುನನಿಗೆ ಸಿಕ್ಕಿತ್ತು.
ಅಗ್ನಿಯೂ ವರುಣನಿಗೆ ಕೊಡು ಎಂದಾಗ ಗಾಂಡೀವವನ್ನು ಅರ್ಜುನ ನೀರಿಗೆ ಹಾಕಿದನು.ಅರ್ಜುನನು ಅಚೇತನನಾದನು. ಅವನ ಹೃದಯವನ್ನೇ ಕಸಿದಂತಾಯಿತು. ಅರ್ಜುನನ ನೆಲಕ್ಕೆ ಬಿದ್ದಾಗ ಅವನನ್ನು ನೀರು ಸಿಂಪಡಿಸಿ ಉಪಚರಿಸಿದರು.
4. ಈ ಪಯಣದಲ್ಲಿ ಒಬ್ಬರ ನಂತರ ಒಬ್ಬರು ,ಅವರವರ ದೌರ್ಬಲ್ಯ ಗಳಿಗನುಸಾರವಾಗಿ ಸಾವನ್ನಪ್ಪಿದ್ದರು.
ಮತ್ತೆ ಪ್ರಯಾಣವು ಆರಂಭವಾಯಿತು. ಹಿಮಾಲಯವನ್ನು ತಲುಪಿದರು. ಪರಮೇಶ್ವರನನ್ನು ನೆನಪಿಸುತ್ತಾ ಅವರು ಮುಂದುವರೆದಾಗ ಮೊದಲು ದ್ರೌಪದಿಯು ನೆಲಕ್ಕೆ ಕುಸಿದಳು.
ಅವಳು ಅಲ್ಲಿಯೇ ಪ್ರಾಣಬಿಟ್ಟಳು.ಎಲ್ಲರೂ ಅಲ್ಲಿಯೇ ನಿಂತರು.ಆಗ ಭೀಮಸೇನನು ಧರ್ಮರಾಜನಿಗೆ ದ್ರೌಪದಿ ಸತ್ತು ಹೋದಳು ಎಂದು ಹೇಳಿದಾಗ. ಧರ್ಮರಾಜನು ದ್ರೌಪದಿಯು ಒಳ್ಳೆಯ ಗುಣಹೊಂದಿದ್ದರೂ ಅವಳ ಮನಸ್ಸಿನಲ್ಲಿ ದೋಷವನ್ನು ಹೊಂದಿದ್ದಳು.ಎಲ್ಲ ಗಂಡಂದಿರನ್ನು ಸಮಾನವಾಗಿ ನೋಡದಿರುವುದು ಅವಳು ಸಾಯುವುದಕ್ಕೆ ಕಾರಣವಾಯಿತು. ಅರ್ಜುನನನ್ನು ವಿಶೇಷವಾಗಿ ಪ್ರೀತಿಸಿದ್ದರಿಂದ ಈ ತಪ್ಪಿನಿಂದಾಗಿ ಅವಳು ಸಶರೀರವಾಗಿ ಸ್ವರ್ಗ ಸೇರದಂತಾದಳು ಎಂದನು ಧರ್ಮರಾಜ.
ಅನಂತರ ಅವರು ಮುಂದೆ ಸಾಗಿದಾಗ ಸಹದೇವನು ಮಡಿದನು.ಆಗ ಧರ್ಮರಾಜನು ಸಹದೇವನು ಮರಣ ಹೊಂದಿದ್ದಕ್ಕೆ ಕಾರಣವನ್ನು ತಿಳಿಸಿದನು. ಸಹದೇವನಿಗೆ ತನ್ನ ಜ್ಞಾನದ ಬಗ್ಗೆ ಬಹಳ ಅಭಿಮಾನವಿತ್ತು. ಆದುದರಿಂದಲೇ ಅವನು ಸತ್ತನು ಎಂದು ವಿವರಿಸಿದಾಗ ಅವನ ಶರೀರವನ್ನು ಅಲ್ಲಿಯೇ ಬಿಟ್ಟು ಉಳಿದವರು ಮುನ್ನೆಡೆದರು.
5.ಅನಂತರದಲ್ಲಿ ನಕುಲನು ಮಡಿದನು. ಎಲ್ಲರೂ ಸಹ ಅವನು ಮರಣ ಹೊಂದಿದ ಬಗೆಗೆ ಕಾರಣವನ್ನು ಕೇಳಿದರು.
ಧರ್ಮರಾಜನು ನಕುಲನು ತಾನೇ ಸುಂದರನೆಂದು ಭಾವಿಸಿದ್ದನು.ಈ ಅಹಂಕಾರದಿಂದಾಗಿ ಮರಣ ಹೊಂದಿದನು ಎಂದು ತಿಳಿಸಿದನು.
ಮುಂದೆ ಅವರಲ್ಲಿ ಮೂವರೇ ಉಳಿದರು.ಅರ್ಜುನನು ಸ್ವಲ್ಪ ದೂರ ಹೋದಾಗಲೇ ಮರಣ ಹೊಂದಿದನು.ಆಗ ಧರ್ಮರಾಜನು ಭೀಮನಿಗೆ ಅರ್ಜುನನಲ್ಲಿರುವ ದೋಷದ ಬಗ್ಗೆ ತಿಳಿಸಿದನು. ಅರ್ಜುನನು ತಾನೇ ವೀರನೆಂದು, ಪರಾಕ್ರಮಿಯೆಂದು, ತಿಳಿದಿದ್ದನು. ಆದುದರಿಂದ ಮಡಿದನು ಎಂದು ವಿವರಿಸಿದನು.
ಕೊನೆಗೆ ಭೀಮನೊಂದಿಗೆ ಧರ್ಮರಾಜನು ಮುಂದೆ ಸಾಗಿದಾಗಲೂ ನಾಯಿಯೂ ಅನುಸರಿಸಿ ಬಂದಿತ್ತು.ಹಿಂದೆ ಬೀಳುತ್ತಿದ್ದ ಭೀಮನು ನಾನೂ ಸಾಯುತ್ತಿದ್ದೇನೆ ಎಂದು ಕೂಗಿ ಕೊಂಡಾಗ ಧರ್ಮರಾಜನು ಹಿಂತುರಿಗಿ ಬಂದು ನೀನು ಯಾವಾಗಲೂ ನಿನ್ನ ಪ್ರತಾಪವನ್ನೇ ಹೇಳಿಕೊಳ್ಳುತ್ತಿದ್ದೆ ಹೊಟ್ಟೆಬಾಕನಂತೆ ಇತರರ ಆಹಾರವನ್ನು ಸಹ ತಿನ್ನುತ್ತಿದ್ದೆ.ಅದೇ ದೋಷ ನಿನ್ನನ್ನು ಭಾಧಿಸುವುದು ಎಂದನು.ಆಗಲೇ ಭೀಮಸೇನನು ಮರಣ ಹೊಂದಿದನು.
6.ಧರ್ಮರಾಜನು ಒಂಟಿಯಾಗಿ ಮುಂದುವರೆದಾಗಲೂ ನಾಯಿ ಅನುಸರಿಸಿ ಬಂದಿತ್ತು.
ಇಂದ್ರನು ಬಂದು ಧರ್ಮರಾಜನನ್ನು ಸ್ವರ್ಗಕ್ಕೆ ಒಯ್ಯಲು ಸಿದ್ಧನಾದನು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
