fbpx
ಸಾಧನೆ

ಅವಳಿಗೆ 19 ವರ್ಷ ತನ್ನ ಸ್ವಂತ ಗಂಡನಿಂದಲೇ ರೇಪ್ ಗೆ ಒಳಗಾದಳು ಕಷ್ಟವನ್ನೆಲ್ಲ ಮೆಟ್ಟು ಇಂದು ಪ್ರಖ್ಯಾತ ಫೋಟೋಗ್ರಾಫರ್ ಆದಳು..

ಅವಳಿಗೆ 19 ವರ್ಷ ತನ್ನ ಸ್ವಂತ ಗಂಡನಿಂದಲೇ ರೇಪ್ ಗೆ ಒಳಗಾದಳು ಕಷ್ಟವನ್ನೆಲ್ಲ ಮೆಟ್ಟು ಇಂದು ಪ್ರಖ್ಯಾತ ಫೋಟೋಗ್ರಾಫರ್ ಆದಳು..

ಅವಳು ಕೇವಲ ಹತ್ತೊಂಬತ್ತು ವರ್ಷ ವಯಸ್ಸಿನವಳು ತನ್ನದೇ ಅಪಾರ್ಟ್ಮೆಂಟ್ ನಲ್ಲಿದ್ದ ಆ ಹುಡುಗ ಅವಳಿಗಿಂತ 7 ವರ್ಷ ದೊಡ್ಡವನು
ಇಷ್ಟಪಟ್ಟರು ಮದುವೆಯು ಆಯ್ತು ಹನಿ ಮುಗಿದ ಮೇಲೆನೇ ಗೊತ್ತಾಗಿದ್ದು ಅವನೆಂತಹ ಕ್ರೂರಿ ಅಂತ , ಹೀಗೆ ಒಂದಲ್ಲ ಎರಡಲ್ಲ ಅವನಿಷ್ಟದ್ದೇ ಮನೆಯಲ್ಲಿ ನಡೆಯ ಬೇಕು ಊಟ ತಿಂಡಿ , ಸುತ್ತಾಟ ಓಡಾಟ ಎಲ್ಲವು ಅವನು ಹೇಳಿದ ಬಟ್ಟೆಯೇ ಅವಳು ತೊಡಬೇಕು , ಅವನಿಗೆ ಇಷ್ಟವಿಲ್ಲದ ಜಾಗಕ್ಕೆ ಹೋಗಬಾರದು
ಹೀಗೆ ಜೀವನದಲ್ಲಿ ನರಕವೆಂದರೆ ಏನು ಅಂದು ಆಕೆ ಕಂಡದ್ದೇ ಆಗ .

ಚಳಿ ಇದ್ದರು ಜಾಕೆಟ್ ತೊಡುವಂತಿಲ್ಲ ಅವನ ಹಿಂಸೆ ಅತಿರೇಕಕ್ಕೆ ಹೋಗಿತ್ತು , ಆಕೆ ಎದುರು ಮಾತಾಡಿದರೆ ತನ್ನ ಕಾರ್ ಅನ್ನು ವೇಗವಾಗಿ ಡ್ರೈವ್ ಮಾಡಿ ಆಕೆಯನ್ನು ಹೊರಗೆ ದಬ್ಬುವುದಾಗಿ ಹೆದರಿಸುತ್ತಿದ್ದ , ಆಕೆಗೆ ಸಾಕಾಗಿ ಹೋಗಿತ್ತು , ದುಬೈಗೆ ವಾಸಿಸಲು ಶುರು ಮಾಡಿದರು ಆಗಲು ಅವನು ಬದಲಾಗಲಿಲ್ಲ ,
ಅವಳನ್ನು ಮಾನಸಿಕವಾಗಿ ಹಿಂಸೆಪಡಿಸಿ ಬಲಾತ್ಕಾರ ಮಾಡಿದ ಇದರ ಫಲವಾಗಿ ಆಕೆ ಗರ್ಭಿಣಿಯಾದಳು .

ಆಕೆ ಆರು ತಿಂಗಳ ಗರ್ಭಿಣಿ ಮಾತ್ರೆಗಳನ್ನು ಮುಚ್ಚಿಟ್ಟು ಬಿಟ್ಟಿದ್ದ ಆಕೆ ಗೋಳಾಡಿದಳು ಆಸ್ಪತ್ರೆಗೆ ಕರೆದುಕೊಂಡು ಹೋಗಲಿಲ್ಲ , ಕೊನೆಗೆ ಇನ್ನೇನು ಆಕೆ ನಿಲ್ಲಲು ಸಹ ಅಸ್ವಸ್ಥವಾದಳು ಆಗ ಕೊನೆಗೂ ಆಸ್ಪತ್ರೆಗೆ ಕರೆದುಕೊಂಡು ಹೋದ !
ಆಸ್ಪತ್ರೆಯಿಂದ ಮನೆಗೆ ಮರಳಿದರು ಮತ್ತದೇ ರಗಳೆ ಮೂರು ದಿನದ ನಂತ್ರ ಗೋಡೆಗೆ ತಳ್ಳಿಬಿಟ್ಟಿದ್ದ ಆಕೆಗೆ ರಕ್ತ ಸ್ರಾವ ಆಗತೊಡಗಿತ್ತು , ಆಕೆ ಮತ್ತೆ ಅಸ್ವಸ್ಥವಾದಳು ಆಗ ಆಸ್ಪತ್ರೆಗೆ ಸೇರಿಸಿದ

ನೋವಿನಿಂದಲೇ ತನ್ನ ಹೆರಿಗೆಗೆ ಆಕೆ ಭಾರತಕ್ಕೆ ಮರಳಿದಳು , ಮಗುವು ಹುಟ್ಟಿತ್ತು ಅವನ ಕ್ರೌರ್ಯ ಬದಲಾಗಲಿಲ್ಲ , ಆಕೆ ವಿಚ್ಚೇಧನ ನೀಡುವ ನಿರ್ಧಾರಕ್ಕೆ ಬಂದುಬಿಟ್ಟಳು .
ಹುಟ್ಟಿದ ಮಗುವನ್ನು ತನಗೆ ನೀಡುವಂತೆ ಕೇಸ್ ಜಡಿದ ಪುಣ್ಯಾತ್ಮ , ನಿರಂತರ ವಾದ ವಿವಾದಗಳ ನಂತ್ರ ಮಗು ಆಕೆಗೆ ಸೇರಿತು .

ತನ್ನ ಬದುಕಿಗೆ ಸಿಕ್ಕ ತಿರುವು

ನೀವು ಇಷ್ಟೋತ್ತು ಕೇಳಿದ ಕಥೆ ಝರಿಯಾ ಪಟ್ನಿ ಎಂಬ ಹುಡುಗಿಯದ್ದು , ತನ್ನ ಕುಟುಂಬದ ಉದ್ದಿಮೆಯಾದ ಟ್ರಕ್ಸ್ ಹಾಗು ತನಗೆ ಇಷ್ಟವಾದ ಫೋಟೋಗ್ರಫಿ ಬಗ್ಗೆ ಹೆಚ್ಚು ಗೀಳು ಬೆಳೆಸಿಕೊಂಡಳು
ಇದರ ಸಲುವಾಗಿ ವೆರೋ ಮೊಡಾ, ಗ್ಯಾಪ್, ಗೌರವ್ ಗುಪ್ತಾ ಮತ್ತು ಮ್ಯಾಡಿಸನ್ ಪ್ರೆರ್ಟೋ ಮುಂತಾದ ಬ್ರಾಂಡ್ಗಳಿಗೆ ಚಿತ್ರೀಕರಣ ಮಾಡಲು ಅವಳಿಗೆ ಅವಕಾಶಗಳು ದೊರೆತವು ಆದರೆ ಮಗು ಸಣ್ಣದಿದ್ದ ಕಾರಣ ಆಕೆಗೆ ಎಲ್ಲೂ ಹೋಗಲು ಸಾಧ್ಯವಾಗಲಿಲ್ಲ ,
ಮಗುವಿನ ವೀಸಾಗಾಗಿ ಅರ್ಜಿ ಹಾಕಿದಲು ಅಲ್ಲೂ ಕಚೇರಿ ಅಳೆದು ಅಳೆದು ಸುಸ್ತಾದಳು ಯಾಕೆಂದರೆ ಮಗುವಿನ ವೀಸಾ ಗೆ ತಂದೆಯ ಸಹಿಯು ಸಹ ಬೇಕಾಗಿತ್ತು .

ಕೊನೆಗೆ change .org ಯಲ್ಲಿ ಪಿಟಿಷನ್ ಶುರು ಮಾಡಿ 96 ,000 ಹೆಚ್ಚು ಜನರ ಬೆಂಬಲ ಪಡೆದುಕೊಂಡಳು ಆನಂತರ ಸುಷ್ಮಾ ಸ್ವರಾಜ್ ರವರಿಗೆ ಈ ವಿಷ್ಯದ ಬಗ್ಗೆ ತಿಳಿಸಿದಳು ಪಾಸ್ಪೋರ್ಟ್ ವ್ಯವಸ್ಥೆಯಲ್ಲಿನ ಈ ಸಣ್ಣ ಲೋಪವನ್ನು ಅಂದರೆ ಒಬ್ಬ ಪೋಷಕರು ಅಂದರೆ ತಂದೆ ಅಥವಾ ತಾಯಿ ಮಗುವಿನ ಅಧಿಕೃತ ಪೋಷಕರಂತೆ ಮಾನ್ಯತೆ ಪಡೆಯಬಹುದು ಎಂಬುದನ್ನು ಬದಲಿಸಿದರು,

ಇದರಿಂದ ಬಹಳ ಜನರಿಗೆ ಸಹಾಯವಾಯಿತು , ಹೀಗೆ ಜೀವನದ ಕಷ್ಟಗಳನ್ನು ಮೆಟ್ಟು ನಿಂತ ಈ ಹುಡುಗಿ ಇನ್ನು ಹೆಚ್ಚು ಸಾಧನೆ ಮಾಡಲಿ ಎಂದು ನಾವು ಆಶಿಸೋಣ .

ನಿಮಗೆ ಈ ಕಥೆ ಇಷ್ಟವಾದರೆ ನಮ್ಮ ಫೇಸ್ಬುಕ್ ಪುಟ

fb.com/Aralikattez ಲೈಕ್ ಮಾಡೋಕೆ ಮರೆಯಬೇಡಿ ನಿಮ್ಮ ಲೈಕ್ ನಮಗೆ ಬಹಳ ಮುಖ್ಯ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top