fbpx
ದೇವರು

ಪಾಂಡವರು ಎಲ್ಲಾ ಸತ್ತೋದ್ರು , ಧರ್ಮರಾಯ ಮಾತ್ರ ಬದುಕಿದ್ದ ಅವನ ಜೊತೆಗೆ ಆ ನಾಯಿ ಇತ್ತಂತೆ ಯಾವುದಾ ನಾಯಿ?

ಪಾಂಡವರು ಎಲ್ಲರು ಸತ್ತರು ಉಳಿದವನು ಧರ್ಮರಾಜ ಮಾತ್ರ 

ಧರ್ಮರಾಜನು ಒಂಟಿಯಾಗಿ ಮುಂದುವರೆದಾಗಲೂ  ನಾಯಿ ಅನುಸರಿಸಿ ಬಂದಿತ್ತು.

ಇಂದ್ರನು ಬಂದು ಧರ್ಮರಾಜನನ್ನು ಸ್ವರ್ಗಕ್ಕೆ ಒಯ್ಯಲು ಸಿದ್ಧನಾದನು. ಆಗ ಧರ್ಮರಾಜನು  ದೇವೇಂದ್ರನೇ, ನನ್ನ ತಮ್ಮಂದಿರು ತಮ್ಮ ದೋಷಗಳಿಂದಾಗಿ ಮರಣ ಹೊಂದಿದರು. ಅವರನ್ನು ಬದುಕಿಸುವುದು ಸಹ ಸಾಧ್ಯವಿರಲಿಲ್ಲ.ಅವರೆಲ್ಲರಿಗಿಂತ ಹೆಚ್ಚು ಗುಣವನ್ನು ಹೊಂದಿದ ಈ ನಾಯಿ ನನ್ನೊಂದಿಗೆ ಬರುತ್ತಿದೆ.ಅದನ್ನು ಬಿಟ್ಟು ನಾನು ಹೇಗೆ ಸ್ವರ್ಗಕ್ಕೆ ಬರಲಿ ? ಎಂದು ಕೇಳಿದನು.

ಈ ನಾಯಿಯ ಬಗ್ಗೆ ಇಷ್ಟೇಕೆ ವ್ಯಥೆ  ಪಡುವೆ ? ಅದರಷ್ಟಕ್ಕೆ ಅದು ಹೋಗಲಿ ಎಂದು ದೇವೇಂದ್ರನು ತಿಳಿಸಿದಾಗ.  ಈ ನಾಯಿಯನ್ನು ಬಿಟ್ಟು ಬರಲಾರೆ ಎಂದನು ಧರ್ಮರಾಜ.

ಆಗ ನಾಯಿಯ ರೂಪದಲ್ಲಿದ್ದ ಯಮಧರ್ಮನು ಪ್ರತ್ಯಕ್ಷನಾದನು. ಮಗನೇ ನಿನ್ನ ಉತ್ತಮ ಗುಣವನ್ನು ಮತ್ತೊಮ್ಮೆ ಪರೀಕ್ಷೆ ಮಾಡಿದೆ ಎಂದು ಧರ್ಮರಾಜನನ್ನು ಇಂದ್ರನ ರಥಕ್ಕೆ ಹತ್ತಿಸಿ ಸ್ವರ್ಗಕ್ಕೆ ಸೇರಿಸಿದನು.

ಸ್ವರ್ಗವನ್ನು ಸೇರಿದ ಬಳಿಕ ಧರ್ಮರಾಜನು ಮಡಿದವರೆಲ್ಲ ಎಲ್ಲಿದ್ದಾರೆ ? ಹೇಗಿದ್ದಾರೆ ಎಂದು ಕೇಳಿದನು.

ಸ್ವರ್ಗದಲ್ಲಿಯೇ ದುರ್ಯೋಧನನನ್ನು ಸಹ ಕಂಡು ಆಶ್ಚರ್ಯವನ್ನು ಸೂಚಿಸಿದನು.ದುರ್ಯೋಧನನು ವೀರ ಮರಣ ಹೊಂದಿದ್ದಾನೆ. ಆದುದರಿಂದ ಅವನು ಸುಮಂತ ಪಂಚಕದ ಬಳಿ ಸತ್ತಿದ್ದರಿಂದ ಹಾಗೂ ಗಾಂಧಾರಿಯ ಪುಣ್ಯ ಗಳಿಸಿ ಈ ಲೋಕದಲ್ಲಿದ್ದಾನೆ ಎಂದನು ಇಂದ್ರ.

ನಿನ್ನ ತಮ್ಮಂದಿರು ನರಕ ದಲ್ಲಿದ್ದಾರೆ ದ್ರೌಪದಿಯು ಸಹ ಅಲ್ಲಿಯೇ ಇದ್ದಾಳೆಂದು ಇಂದ್ರನು ಹೇಳಿದನು.ಆಗ ನನ್ನ ತಮ್ಮಂದಿರು ನರಕದಲ್ಲಿರಲು ನಾನು ಸ್ವರ್ಗದಲ್ಲಿರಲು ಬಯಸುವುದಿಲ್ಲ. ನನ್ನನ್ನು ನರಕಕ್ಕೆ ಒಯ್ಯಿರಿ ಎಂದು ಕೇಳಿದನು ಧರ್ಮರಾಜ.ಅವರೆಲ್ಲರೂ ಶಿಕ್ಷೆ ಅನುಭವಿಸುತ್ತಿರುವಾಗ ನಾನು ಸಂತಸದಲ್ಲಿರಲು ಬಯಸುವುದಿಲ್ಲ ಎಂದಾಗ ಯಮಧರ್ಮನು  ಮೂರನೆಯ ಬಾರಿ ಪರೀಕ್ಷೆ ಮಾಡಿದ್ದನ್ನು ತಿಳಿಸಿದನು.

ಯಕ್ಷ ಪ್ರಶ್ನೆಯ ಪ್ರಸಂಗ,ನಾಯಿ ಪ್ರಸಂಗದಲ್ಲಿ ನೀನು ಧರ್ಮ ಮಾರ್ಗದಲ್ಲಿಯೇ ನಡೆದು ತೋರಿಸಿದೆ.

ಈಗ ನಿನ್ನ ಸಜ್ಜನಿಕೆಯನ್ನು ಮೆರೆದೆ ಎಂದು ಸಂತಸಪಟ್ಟನು.ನೀನು ನಿಜವಾಗಿಯೂ ಧರ್ಮರಾಯನೇ ಸರಿ ಎಂದನು.

ನಿನ್ನ ತಮ್ಮಂದಿರು ನರಕವನ್ನು ಅನುಭವಿಸಿ ಆಗಿದೆ.ಇನ್ನು ಅವರೂ ನಿನ್ನೊಂದಿಗೆ ಸ್ವರ್ಗಕ್ಕೆ ಬರುತ್ತಾರೆ ಎಂದ.

ಯಮನಿಗೆ ನಾನು ನರಕ ದರ್ಶನ  ಮಾಡಲು ಕಾರಣವೇನು? ಎಂದು ಧರ್ಮರಾಜನು ಕೇಳಿದಾಗ.

ಅಶ್ವತ್ಥಾಮನೆಂಬ ಆನೆ ಸತ್ತಿತ್ತು. ಎಂಬುದನ್ನು ತಿಳಿಸುವಾಗ ಅಶ್ವತ್ಥಾಮ ಹತನಾದ ಎಂಬಂತೆ ಹೇಳಿದ ತಪ್ಪಿಗೆ ನಿನಗೂ ನರಕ ದರ್ಶನವಾಯಿತು ಎಂದು ಯಮನು ವಿವರಿಸಿದನು.

ಇನ್ನು ನೀನು ಎಲ್ಲ ಸಹೋದರರೊಂದಿಗೆ ಸ್ವರ್ಗದಲ್ಲಿ ಇರಬಹುದೆಂದು ಹೇಳಿದಾಗ  ಧರ್ಮರಾಜನು ಹಿರಿಯರಾದ ಕುಂತಿ,ದೃತರಾಷ್ಟ್ರ, ಗಾಂಧಾರಿ, ಭೀಷ್ಮ, ದ್ರೋಣ ,ಕರ್ಣ, ಕೃಷ್ಣ, ವಿಧುರ, ದುರ್ಯೋಧನ ಇತ್ಯಾದಿ ಎಲ್ಲರನ್ನು ಸೇರಿಕೊಂಡನು. ಸಾವು ನೋವಿರದ ನಿಶ್ಚಿಂತವಾದ  ಆನಂದಮಯ ಲೋಕದಲ್ಲಿ ಶಾಂತಿ ಸಮಾಧಾನದಿಂದ ಉಳಿದನು.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top