fbpx
ಆರೋಗ್ಯ

ಆಸ್ಪತೆಗಳಲ್ಲಿ ನಡೆಯುವ ಅಬಾರ್ಶನ್ (ಗರ್ಭಪಾತ) ದ ಬಗ್ಗೆ ನಿಮಗೆಷ್ಟು ಗೊತ್ತು ?

ಆಸ್ಪತೆಗಳಲ್ಲಿ ನಡೆಯುವ ಅಬಾರ್ಶನ್ (ಗರ್ಭಪಾತ) ದ ಬಗ್ಗೆ ನಿಮಗೆಷ್ಟು ಗೊತ್ತು ?

ಒಮ್ಮೊಮ್ಮೆ ಪ್ಲಾನ್ ಮಾಡಿರದೆ ಆಚಾತುರ್ಯ ನಡೆದು ಹೋಗುತ್ತದೆ ಅಂದರೆ ಯಾವುದೇ ಮುಂಜಾಗೃತಾ ಕ್ರಮಗಳನ್ನು ತೆಗೆದುಕೊಳ್ಳದೆ ಲೈಂಗಿಕ ಕ್ರಿಯೆ ನಡೆಸಿದರೆ ಗರ್ಭಿಣಿಯಾಗುವ ಸಾಧ್ಯತೆ ಇರುತ್ತದೆ ಅಲ್ಲದೆ ಕೆಲವೊಮ್ಮೆ ತೆಗೆದುಕೊಂಡ ಮುಂಜಾಗೃತಾ ಕ್ರಮಗಳಲ್ಲಿ ಲೋಪವಿದ್ದರೂ ಸಹ ಗರ್ಭ ಧರಿಸುವ ಸಾಧ್ಯತೆ ಹೆಚ್ಚು .

ಹಾಗಾದರೆ ಮುಂದೆ ಏನು ?

ಚಿಂತೆ ಮಾಡಬೇಕಾದ ಅವಶ್ಯಕತೆ ಇಲ್ಲ ಲೈಂಗಿಕ ಕ್ರಿಯೆ ನಡೆಸಿದ 32 ಗಂಟೆಗಳ ಒಳಗೆ ಗರ್ಭ ನಿರೋಧಕ ಮಾತ್ರೆಗಳನ್ನು ಸೇವನೆ ಮಾಡಿದರೆ ಒಳ್ಳೆಯದು

ಅಥವಾ ಆಸ್ಪತೆಗಳಲ್ಲಿ ನಡೆಯುವ ಅಬಾರ್ಶನ್ (ಗರ್ಭಪಾತ)ದ ಮೊರೆ ಹೋಗಬೇಕು ಇಲ್ಲಿ ಒಂದು ವಿಷ್ಯ ನೆನಪಿನಲ್ಲಿಡಬೇಕು , ನೀವು ಮಗುವಿನ ಅಧಿಕೃತ ತಂದೆ ತಾಯಿ ಯಾದರೆ ಮಾತ್ರ ನಿಮಗೆ ಈ ಕ್ರಿಯೆಗೆ ಕಾನೂನಿನಲ್ಲಿ ಅವಕಾಶವಿದೆ .

ಅಬಾರ್ಶನ್ ಹೇಗೆ ಕೆಲಸ ಮಾಡುತ್ತದೆ ?

ಗರ್ಭಧಾರಣೆಯನ್ನು ಸಕ್ಷನ್ ಟೆಕ್ನಿಕ್ ಬಳಸಿ ಹೊರಗೆ ತೆಗೆಯಲಾಗುತ್ತದೆ ವೈದ್ಯರು ಅಥವಾ ನರ್ಸ್ ನಿಮಗೆ ಯಾವ ಪ್ರಕಾರವು ಸೂಕ್ತವೆಂದು ತಿಳಿಸುತ್ತಾರೆ.

ಗರ್ಭಾಶಯವನ್ನು ಖಾಲಿ ಮಾಡಲು ಸೌಮ್ಯ ಹೀರುವಿಕೆ ಟೆಕ್ನಿಕ್ ಬಳಸಲಾಗುತ್ತದೆ . ನಿಮ್ಮ ಕೊನೆಯ ಋತು ಅವಧಿಯ ನಂತರ ಸುಮಾರು 14-16 ವಾರಗಳವರೆಗೆ ಸಾಮಾನ್ಯವಾಗಿ ಈ ವಿಧಾನ ಬಳಸಲಾಗುತ್ತದೆ.

ಡೈಲೇಷನ್ ಅಂಡ್ ಏವಾಕ್ಯುಏಶನ್ (D&E) ಟೆಕ್ನಿಕ್ ಅನ್ನು ನಿಮ್ಮ ಕೊನೆಯ ಋತು ಅವಧಿಯ ನಂತರ ಸುಮಾರು 16 ವಾರ ಮೇಲ್ಪಟ್ಟು ಗರ್ಭಧರಿಸಿದ್ದರೆ ಬಳಸುತ್ತಾರೆ.

ಅಬಾರ್ಶನ್ ಮಾಡಿಸಿಕೊಳ್ಳಲು ಎಷ್ಟು ದಿನ ಕಾಯಬೇಕು ?

ನಿಮ್ಮ ಕೊನೆಯ ಋತು ಅವಧಿಯ ನಂತರ ಸುಮಾರು 5-6 ವಾರಗಳ ತನಕ ಕಾಯಲು ವೈದ್ಯರು ಸಲಹೆ ನೀಡುತ್ತಾರೆ.

ಸಾಮಾನ್ಯವಾಗಿ 12ವಾರಗಳ ನಂತ್ರ ಅಬಾರ್ಶನ್ ಮಾಡಲು ವೈದ್ಯರು ಒಪ್ಪುವುದಿಲ್ಲ ಯಾಕೆಂದರೆ ಇದು ಮಹಿಳೆಯ ಆರೋಗ್ಯದ ಮೇಲೆ ಗಂಭೀರ ಪರಿಣಾಮವನ್ನು ಬೀರುತ್ತದೆ.

ಅಷ್ಟೇ ಅಲ್ಲದೆ ಕೆಲವೋಮ್ಮೆ ಐದರಿಂದ -ಹತ್ತು ನಿಮಿಷಗಳು ಅಬಾರ್ಶನ್ ಸಮಯ ತೆಗೆದುಕೊಂಡರೆ ಇನ್ನುಕೆಲಮೊಮ್ಮೆ ಒಂದು ದಿನದ ಮಟ್ಟಿಗೆ ಹೋಗಬಹುದು
ಇವೆಲ್ಲವೂ ಗರ್ಭಿಣಿಯ ದೇಹ ಸ್ಥಿತಿಯ ಮೇಲೆ ಆಧಾರವಾಗಿದೆ .

ಭ್ರೂಣವನ್ನು ಕತ್ತರಿಸಿ ಹೊರಗೆ ತೆಗೆಯಲಾಗುತ್ತದೆ ಆದ್ದರಿಂದ ಆದಷ್ಟು ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಿ ಅಬಾರ್ಶನ್ ಮೊರೆಗೆ ಹೋಗಬೇಡಿ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top