fbpx
ಆರೋಗ್ಯ

ಮಲೆನಾಡಿನವರು ಇಷ್ಟ ಪಟ್ಟು ಜಿಗಣೆ ಕೈಯಲ್ಲಿ ಯಾಕೆ ಕಚ್ಚಿಸ್ಕೊಳ್ತಾರೆ ಗೊತ್ತಾ ? ಈ ವಿಷ್ಯ ನೀವೆಲ್ಲಾ ತಿಳ್ಕೊಳ್ಳೆಬೇಕು..

ಮಲೆನಾಡಿನವರು ಇಷ್ಟ ಪಟ್ಟು ಜಿಗಣೆ ಕೈಯಲ್ಲಿ ಯಾಕೆ ಕಚ್ಚಿಸ್ಕೊಳ್ತಾರೆ ಗೊತ್ತಾ ? ಈ ವಿಷ್ಯ ನೀವೆಲ್ಲಾ ತಿಳ್ಕೊಳ್ಳೆಬೇಕು..


ಜಿಗಣೆ ಕಚ್ಚಿದರೆ ಸಾಯ್ತಾರೆ ಅನ್ನೋ ಕಲ್ಪನೆ ಎಷ್ಟೋ ಜನರಿಗೆ ಇದ್ದೆ ಇದೆ ಆದರೆ ಮಲೆನಾಡಿನಲ್ಲಿ ಇವುಗಳು ಅತಿಥಿಗಳು ಇದ್ದಹಾಗೆ , ತೋಟಕ್ಕೆ ಯಾಕೆ ರಸ್ತೆ ಬದಿಯಲ್ಲೂ ಬಿದ್ದು ಹೊರಳಾಡುತ್ತಾ ಇರುತ್ತವೆ , ನಮ್ಮ ಬಯಲು ನಾಡಿನ ಹುಡುಗರು ಟ್ರೆಕಿಂಗ್ ಅಥವಾ ಚಾರಣಕ್ಕೆ ಹೋದಾಗ ಇವುಗಳ ಕಡಿತಕ್ಕೆ ಒಳಗಾಗುವುದು ಇದೆ , ಅಯ್ಯೋ ಅಂತ ಬೊಬ್ಬೆ ಹೊಡೆದದ್ದು ಇದೆ.

ನಿಮ್ಮ ಸಾಕ್ಸ್ ಅಥವಾ ಶೂ ಸಂದಿಯಲ್ಲಿ ಮೆತ್ತಗೆ ಸೇರಿಕೊಂಡು ರಕ್ತ ಹೀರುತ್ತಾ ಇರುತ್ತದೆ , ಜಿಗಣೆ ಕಚ್ಚಿ ಸಾಯುವುದಾದರೆ ಇಡೀ ಮಳೆ ನಾಡೇ ಇರುತ್ತಿರಲಿಲ್ಲ ಎಂದು ಹೇಳಬಹುದು ಯಾಕೆಂದರೆ ಮಲೆನಾಡ ಸಾಮಾನ್ಯ ಪ್ರಜೆ ಈ ಜಿಗಣೆ , ಸಾಮಾನ್ಯವಾಗಿ ಜಿಗಣೆ ಕಚ್ಚಿದರೆ ಲಂಟಾನ ಗಿಡದ ಸೊಪ್ಪನ್ನು ಗಾಯವಾದಲ್ಲಿಗೆ ಉಜ್ಜಿ ವಾಸಿ ಮಾಡಿಕೊಳ್ಳುತ್ತಾರೆ ಅಥವಾ ಉಳಿ ಸೊಪ್ಪನ್ನು ಉಜ್ಜಿ ಜಿಗಣೆ ಕಚ್ಚದ ಹಾಗೆ ಮಾಡಿಕೊಳ್ಳುತ್ತಾರೆ ,

ಇಷ್ಟೆಲ್ಲ ಪೀಠಿಕೆ ಯಾಕೆ ಅಂತ ಆಶ್ಚರ್ಯವಾಗಿರಬಹುದು ಅಲ್ವಾ ಜಿಗಣೆ ಕಚ್ಚುವುದರಿಂದ ಆರೋಗ್ಯಕ್ಕೆ ಬಹಳ ಪ್ರಯೋಜನಗಳು ಇವೆ.

ಹಿಂದಿನ ಕಾಲದಿಂದಲೂ ಕೆಟ್ಟ ರಕ್ತವನ್ನು ಜಿಗಣೆ ಹೀರುತ್ತದೆ ಎಂದು ಹೇಳಲಾಗುತ್ತದೆ

ಹೃದಯ ನಾಳದ ಕಾಯಿಲೆಗೆ ಚಿಕಿತ್ಸೆ ನೀಡುವುದು

ಇದು ಕಾಯಿಲೆಗಳನ್ನು ಗುಣಪಡಿಸುವ ಅಥವಾ ತಡೆಯಲು ಶಕ್ತಿ ಜಿಗಣೆಯ ಲಾಲಾರಸದಲ್ಲಿದೆ. ಇದರ ಲಾಲಾರಸವು 100 ಕ್ಕೂ ಹೆಚ್ಚು ಬಯೋಆಕ್ಟೀವ್ ಪದಾರ್ಥಗಳನ್ನು ಹೊಂದಿದೆ ಇದು ತುಂಬಾ ಪ್ರಯೋಜನಕಾರಿಯಾಗಿದೆ. ಅಂತಹದ್ದೇ ಸಂಯುಕ್ತ ಹಿರುಡಿನ್ ದೇಹದ ಪ್ರತಿನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ,ಕ್ಯಾಲಿನ್ ರಕ್ತದ ಘನೀಕರಣವನ್ನು ತಪ್ಪಿಸುವ ಮತ್ತೊಂದು ಅಂಶವಾಗಿದೆ.

ಜಿಗಣೆ ರಕ್ತ ಹೀರಿದಷ್ಟೂ ಮನುಷ್ಯ ಆರೋಗ್ಯವಂತನಾಗಿರುತ್ತಾನೆ ಅಂತಾ ಹೇಳುತ್ತಾರೆ. ಇದೀಗ ಸೋರಿಯಾಸಿಸ್ ಕಾಯಿಲೆಗೆ ಜಿಗಣೆಯನ್ನೇ ಮದ್ದಾಗಿ ಬಳಸಲಾಗುತ್ತಿದೆ.

ಅಲೋಪೆಸಿಯಾ

ಶಿಲೀಂಧ್ರ ಸೋಂಕುಗಳು ಅಥವಾ ತಲೆಹೊಟ್ಟು ಸಮಸ್ಯೆಯಿಂದ ಉಂಟಾಗಿರುವ ತಲೆ ಕೂದಲು ಉದುರುವ ಸಮಸ್ಯೆಯನ್ನು ತಡೆಯಬಹುದು , ಲಾಲಾರಸದಲ್ಲಿನ ಆಂಟಿ ಬ್ಯಾಕ್ಟೀರಿಯಾದ ಅಂಶವು ಈ ಸಮಸ್ಯೆಯನ್ನು ತಡೆಯುತ್ತದೆ.

ಬೊಕ್ಕ ತಲೆಯ ಸಮಸ್ಯೆ ನಿವಾರಿಸಲು

ಲೀಚ್ ಚಿಕಿತ್ಸೆಯು ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ, ಕೂದಲು ತೆಳುವಾಗುವಿಕೆ ಅಥವಾ ಬೋಳು ಪ್ರದೇಶಗಳಿಗೆ ರಕ್ತದ ಪರಿಚಲನೆ ಹೆಚ್ಚಿಸಿ , ಕೂದಲಿನ ಕೋಶಗಳನ್ನು ಬಲಪಡಿಸುವಲ್ಲಿ ಮತ್ತು ಪೋಷಕಾಂಶಗಳ ಸಾಂದ್ರತೆ ಮತ್ತು ವಿತರಣೆಯನ್ನು ಹೆಚ್ಚಿಸುತ್ತದೆ, ಇದರಿಂದಾಗಿ ಕೂದಲು ಬೆಳವಣಿಗೆ ಚೆನ್ನಾಗಿ ಆಗುತ್ತದೆ.

ಕೀಲು ನೋವು

ಲೀಚ್ ಸೋಂಕಿತ ರಕ್ತವನ್ನು ತೆಗೆದುಹಾಕುವ ಒಂದು ನೈಸರ್ಗಿಕ ಪ್ರಕ್ರಿಯೆಯನ್ನು ಹೊಂದಿದೆ ಅದೇ ಸಮಯದಲ್ಲಿ ಕಿಣ್ವಗಳು ಲಾಲಾರಸ ಬಿಡುಗಡೆ ಮಾಡುತ್ತದೆ ಇದು ಉರಿಯೂತ ಮತ್ತು ಕೀಲು ನೋವನ್ನು ಕಡಿಮೆ ಮಾಡುತ್ತದೆ.

ಸಕ್ಕರೆ ಖಾಯಿಲೆ

ರಕ್ತದ ಹೆಪ್ಪುಗಟ್ಟುವಿಕೆಯನ್ನು ತಡೆಯುವ ಹಿರುದಿನ್ ಅಂಶವು ಹಚ್ಚಾಗಿದ್ದು ಇದು ಹೆಪ್ಪು ತಡೆದು ಹೃದಯದ ಮತ್ತು ರಕ್ತನಾಳಗಳ ಮೇಲೆ ಒತ್ತಡವನ್ನು ನಿವಾರಿಸಲು ಸಹಾಯ ಮಾಡುತ್ತದೆ.

ಕಿವಿ ಸಮಸ್ಯೆ ಹಾಗು ಸೋಂಕು

ಕಿವಿ ಸಮಸ್ಯೆ ಹಾಗು ಸೋಂಕು ಕಾಯಿಲೆಗಳಿಂದ ಬಳಲುತ್ತಿರುವ ಜನರಿಗೆ ಜಿಗಣೆ ಚಿಕಿತ್ಸೆಯಿಂದ ಪ್ರಯೋಜನವಾಗಬಹುದು, ವಿಶೇಷವಾಗಿ ಕಿವಿ ಸೋಂಕು ಅಥವಾ ಕಿವಿ ನಾಳೀಯ ಸಮಸ್ಯೆ ಉಂಟಾದವರಿಗೆ ಉಪಯೋಗವಾಗುತ್ತದೆ.

ಕಣ್ಣಿನ ತೊಂದರೆ :

ಕಣ್ಣಿನ ಸಮಸ್ಯೆಗಳಾದ ಗ್ಲುಕೋಮಾ , ಊತ ಮತ್ತು ಇನ್ನಿತರ ಸೋಂಕುಗಳ ನಿವಾರಣೆಗೆ ಸಹಾಯ ಮಾಡುತ್ತದೆ

ಕಿಡ್ನಿ ತೊಂದರೆಗಳು :

ರಕ್ತ ಹೆಪ್ಪುಗಟ್ಟಿ ಕಿಡ್ನಿ ಕೆಲಸಕಾರ್ಯಗಳು ಸ್ಥಗಿತವಾಗಿದ್ದರೆ ಲೀಚ್ ನ ಸಹಾಯ ಪಡೆದು ಪರಿಹಾರ ಮಾಡಿಕೊಳ್ಳಬಹುದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top